ಅಂದು IPLನಲ್ಲಿ ಡಿವಿಲಿಯರ್ಸ್ ಇಂದು WPLನಲ್ಲಿ ಪೆರ್ರಿ..! ಕೊನೆಗೂ ಕನಸು ನನಸಾಗುತ್ತಾ?

By Suvarna NewsFirst Published Mar 17, 2024, 3:35 PM IST
Highlights

ಲೀಗ್ನಲ್ಲಿ ಈವರೆಗೂ 8 ಪಂದ್ಯಗಳನ್ನಾಡಿರೋ ಪೆರಿ ಬ್ಯಾಟಿಂಗ್ನಲ್ಲಿ 312 ರನ್‌ಗಳಿಸಿದ್ದಾರೆ.  ಇದ್ರೊಂದಿಗೆ ಅತಿಹೆಚ್ಚು ರನ್‌ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಅಲಂಕರಿಸಿದ್ದಾರೆ. ಬೌಲಿಂಗ್‌ನಲ್ಲಿ 7 ವಿಕೆಟ್ ಕಬಳಿಸಿದ್ದಾರೆ. ಈ ಅಂಕಿಅಂಶಗಳೇ ಪೆರಿ ಎಂತಹ ಗ್ರೇಟ್ ಅನ್ನೋದನ್ನ ಹೇಳುತ್ವೆ. 

ವುಮೆನ್ಸ್‌ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್‌ಗೆ ಎಂಟ್ರಿ ನೀಡಿದೆ. ಎಲಿಮಿನೇಟರ್ ಪಂದ್ಯದಲ್ಲಿ ಬಲಿಷ್ಠ ಮುಂಬೈಗೆ ಮಣ್ಣು ಮುಕ್ಕಿಸಿದೆ. ಆದ್ರೆ, ಮಂದಾನ ಪಡೆ ಫೈನಲ್ ತಲುಪಲು ತಂಡದ ಈ ಪ್ಲೇಯರ್ ಕಾರಣ..! ಅಂದು ಐಪಿಎಲ್‌ನಲ್ಲಿ  ಆರ್‌ಸಿಬಿ ಪರ ಆ ಆಟಗಾರ ಮಾಡಿದ್ದ ಕೆಲಸವನ್ನೇ, ಇಂದು ಈ ಪ್ಲೇಯರ್ WPLನಲ್ಲಿ ಮಾಡ್ತಿದ್ದಾರೆ. ಆ ಮೂಲಕ ತಂಡದ ಆಪತ್ಭಾಂಧವಿ ಆಗಿದ್ದಾರೆ.  

ಬ್ಯಾಟಿಂಗ್- ಬೌಲಿಂಗ್ ಎರಡರಲ್ಲೂ ಮಿಲ್ಕಿ ಬ್ಯೂಟಿ ಪೆರ್ರಿ ಅಬ್ಬರ..!

ಎಬಿ ಡಿವಿಲಿಯರ್ಸ್..! ಈ  ಹೆಸರು ಕೇಳಿದ್ರೇನೆ, ಕ್ರಿಕೆಟ್ ಅಭಿಮಾನಿಗಳ ಮೈ ಝುಂ ಅನ್ನುತ್ತೆ. ಅದಕ್ಕೆ ಕಾರಣ ಡಿವಿಲಿಯರ್ಸ್‌ ಅವರ ಅಸಾಮಾನ್ಯ ಬ್ಯಾಟಿಂಗ್. ಕ್ರಿಕೆಟ್‌ನಲ್ಲಿ 360 ಡಿಗ್ರಿ ಆ್ಯಂಗಲ್ ಬ್ಯಾಟಿಂಗ್ ಮಾಡಬಹುದು ಅಂತ ತೋರಿಸಿಕೊಟ್ಟಿದ್ದೇ ABD. 

ದಕ್ಷಿಣ ಆಫ್ರಿಕಾ ಪರ ABD, 3 ಫಾಮ್ಯಾಟ್ನಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ಹಲವು ದಾಖಲೆಗಳನ್ನ ಬರೆದಿದ್ದಾರೆ. ಹಲವು ಪಂದ್ಯಗಳನ್ನ ಗೆಲ್ಲಿಸಿ ಕೊಟ್ಟಿದ್ದಾರೆ. ಕೇವಲ ಇಂಟರ್ನ್ಯಾಷನಲ್ ಕ್ರಿಕೆಟ್ ಮಾತ್ರ ಅಲ್ಲ. T20 ಲೀಗ್ಗಳಲ್ಲೂ ಈ ಮಿಸ್ಟರ್ 360 ಅಬ್ಬರಿಸಿದ್ದಾರೆ. ಆದ್ರೆ, ಎಬಿಡಿಯ ಅಸಲಿ ತಾಕತ್ತು, ಸಾಮರ್ಥ್ಯ ದರ್ಶನವಾಗಿದ್ದು ಮಾತ್ರ IPL ನಲ್ಲಿ. IPLನಲ್ಲಿ ಆಪತ್ಭಾಂಧವ ಅನ್ನೋ ಪದಕ್ಕೆ ಮತ್ತೊಂದು  ಹೆಸರೇ ಡಿವಿಲಿಯರ್ಸ್ ಅಂದ್ರೆ ತಪ್ಪಿಲ್ಲ.

IPLನಲ್ಲಿ RCB ತಂಡ ಸಂಕಷ್ಟದಲ್ಲಿದ್ದ ಹಲವು ಬಾರಿ ಡಿವಿಲಿಯರ್ಸ್ ಅದ್ಭುತ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸೆರೆಯಾಗಿದ್ದಾರೆ. ಹಲವು ಪಂದ್ಯಗಳನ್ನ ಸಿಂಗಲ್ ಹ್ಯಾಂಡೆಂಡ್ಲಿ ಗೆದ್ದುಕೊಟ್ಟಿದ್ದಾರೆ. ಆದ್ರೆ, IPLನಲ್ಲಿ RCB ಪರ ಡಿವಿಲಿಯರ್ಸ್ ಮಾಡಿದ್ದ ಕೆಲಸವವನ್ನ WPLನಲ್ಲಿ ಮಿಲ್ಕಿ ಬ್ಯೂಟಿ ಎಲೈಸಿ ಪೆರಿ ಮಾಡ್ತಿದ್ದಾರೆ. 

ಯೆಸ್, ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ RCB ಫೈನಲ್‌ಗೆ ಎಂಟ್ರಿ ನೀಡಿದೆ. ಎಲಿಮಿನೇಟರ್ ಪಂದ್ಯದಲ್ಲಿ ಬಲಿಷ್ಠ ಮುಂಬೈಗೆ ಮಣ್ಣು ಮುಕ್ಕಿಸಿ ಈ ಸಾಧನೆ ಮಾಡಿದೆ. ಆದ್ರೆ, ಮಂದಾನ ಪಡೆ ಫೈನಲ್‌ಗೆ ಎಂಟ್ರಿ ಕೊಡಲು ಪ್ರಮುಖ ಕಾರಣ ಆಲ್ರೌಂಡರ್ ಎಲೈಸಿ ಪೆರಿ..! ಪೆರಿ ಇಲ್ಲದೇ ಇದ್ರೆ, ಇಷ್ಟೊತ್ತಿಗೆ RCB ಬ್ಯಾಗ್ ಪ್ಯಾಕ್ ಮಾಡಿಕೊಂಡು ಮನೆ ದಾರಿ ಹಿಡಿದಿರುತ್ತಿತ್ತು. 

ಡು ಆರ್ ಡೈ ಮ್ಯಾಚ್‌ಗಳಲ್ಲಿ ಎಲೈಸಿ ಪೆರ್ರಿ ಅದ್ಭುತ ಆಟ..!

ನಾಕೌಟ್ ಪಂದ್ಯದಲ್ಲಿ ಬೇರೆಲ್ಲಾ ಬ್ಯಾಟರ್ಸ್ ಪೆವಿಲಿಯನ್ ದಾರಿ ಹಿಡಿದ್ರೆ, ಪೆರ್ರಿ ಒಬ್ರೇ ಮುಂಬೈ ಇಂಡಿಯನ್ಸ್ ಬೌಲಿಂಗ್ ದಾಳಿಗೆ ಟಕ್ಕರ್ ಕೊಟ್ರು.  ಅರ್ಧಶತಕ ಸಿಡಿಸಿ  ಮಿಂಚಿದ್ರು. 50 ಎಸೆತಗಳನ್ನ ಎದುರಿಸಿದ ಪೆರ್ರಿ, ಎಂಟು ಬೌಂಡರಿ ಮತ್ತು 1 ಸಿಕ್ಸರ್ ಸಹಿತ 66 ರನ್ ಬಾರಿಸಿದ್ರು. ಇನ್ನು ಬೌಲಿಂಗ್ನಲ್ಲಿ 4 ಓವರ್ ಬೌಲಿಂಗ್ ಮಾಡಿ ಕೇವಲ 29 ರನ್ ನೀಡಿ, 1 ವಿಕೆಟ್ ಪಡೆದುಕೊಂಡ್ರು. 

ಇದೊಂದು ಪಂದ್ಯವಲ್ಲ, ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಡು ಆರ್ ಡೈ ಲೀಗ್ ಮ್ಯಾಚ್ನಲ್ಲೂ ಪೆರ್ರಿ ಅಬ್ಬರಿಸಿದ್ದರು. ಬೌಲಿಂಗ್ನಲ್ಲಿ 6 ವಿಕೆಟ್ ಬೇಟೆಯಾಡಿ, ಬ್ಯಾಟಿಂಗ್ನಲ್ಲಿ 40 ರನ್ ಬಾರಿಸಿದ್ರು. ಪೆರಿಯ ಖತರ್ನಾಕ್ ಆಟದಿಂದಾಗಿ RCB ಪ್ಲೇ ಆಫ್ ಹಂತ ತಲುಪಲು ಸಾಧ್ಯವಾಯ್ತು. 

ಲೀಗ್ನಲ್ಲಿ ಈವರೆಗೂ 8 ಪಂದ್ಯಗಳನ್ನಾಡಿರೋ ಪೆರಿ ಬ್ಯಾಟಿಂಗ್ನಲ್ಲಿ 312 ರನ್‌ಗಳಿಸಿದ್ದಾರೆ.  ಇದ್ರೊಂದಿಗೆ ಅತಿಹೆಚ್ಚು ರನ್‌ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಅಲಂಕರಿಸಿದ್ದಾರೆ. ಬೌಲಿಂಗ್‌ನಲ್ಲಿ 7 ವಿಕೆಟ್ ಕಬಳಿಸಿದ್ದಾರೆ. ಈ ಅಂಕಿಅಂಶಗಳೇ ಪೆರಿ ಎಂತಹ ಗ್ರೇಟ್ ಅನ್ನೋದನ್ನ ಹೇಳುತ್ವೆ. 

ಅದೇನೆ ಇರಲಿ, ಇಂದು ನಡೆಯೋ ಫೈನಲ್ ಫೈಟ್ನಲ್ಲೂ ಪೆರ್ರಿ ಬ್ಯಾಟಿಂಗ್- ಬೌಲಿಂಗ್ ಎರಡರಲ್ಲೂ ಧೂಳೆಬ್ಬಿಸಲಿ. RCBಗೆ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದುಕೊಡಲಿ ಅನ್ನೋದೆ ಕೋಟ್ಯಂತರ ಅಭಿಮಾನಿಗಳ ಆಶಯ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 
 

click me!