RCB ಹುಡುಗರು ಟ್ರೋಫಿ ಗೆಲ್ಲಲಿಲ್ಲ, ಹುಡುಗಿಯರಾದ್ರೂ ಗೆಲ್ತಾರಾ..?

By Suvarna NewsFirst Published Mar 17, 2024, 11:59 AM IST
Highlights

ಚೊಚ್ಚಲ ಆವೃತ್ತಿಯಲ್ಲಿ ಹುಡುಗರಂತೆ ಹುಡುಗಿಯರು ಲೀಗ್ನಿಂದ ನಿರ್ಗಮಿಸಿದ್ದರು. 2ನೇ ಆವೃತ್ತಿಯ ಐಪಿಎಲ್ನಲ್ಲಿ RCB ಬಾಯ್ಸ್, ಫೈನಲ್ ಪ್ರವೇಶಿಸಿದ್ರು. ಅದೇ ರೀತಿ 2ನೇ WPLನಲ್ಲಿ ಹುಡುಗಿಯರು ಫೈನಲ್ ಪ್ರವೇಶಿಸಿದ್ದಾರೆ. RCB ಬಾಯ್ಸ್, ಮೂರು ಸಲ ಫೈನಲ್ ಪ್ರವೇಶಿಸಿದ್ರೂ ಒಂದು ಬಾರಿಯೂ ಚಾಂಪಿಯನ್ ಆಗಿಲ್ಲ.

ಬೆಂಗಳೂರು(ಮಾ.17) ಇಂದು ವುಮೆನ್ಸ್ ಪ್ರೀಮಿಯರ್ ಲೀಗ್ ಫೈನಲ್ ಫೈಟ್. ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮಹಿಳೆಯರು, ಪ್ರಶಸ್ತಿಗಾಗಿ ಕಾದಾಡಲಿವೆ. ಯಾರೇ ಗೆದ್ದರೂ ಫಸ್ಟ್ ಟೈಮ್ ಟ್ರೋಫಿ ಗೆದ್ದ ಸಾಧನೆ ಮಾಡಲಿದ್ದಾರೆ. ಆರ್‌ಸಿಬಿ ಸೇಡು ತೀರಿಸಿಕೊಳ್ಳುತ್ತಾ..? ಡೆಲ್ಲಿ 2ನೇ ಬಾರಿಯಾದ್ರೂ ಪಶಸ್ತಿ ಗೆಲ್ಲುತ್ತಾ ಅನ್ನೋ ಕುತೂಹಲವಿದೆ. ಡೆಲ್ಲಿಯಲ್ಲಿ ಮ್ಯಾಚ್ ನಡೆಯುತ್ತಿದ್ದರೂ ಆರ್‌ಸಿಬಿಯೇ ಫೇವರಿಟ್.

ಆ 4 ಸೋಲಿನ ಸೇಡನ್ನ ತೀರಿಸಿಕೊಳ್ತಾರಾ RCB ಗರ್ಲ್ಸ್..?

ವುಮೆನ್ಸ್ ಪ್ರೀಮಿಯರ್ ಲೀಗ್ ಕೊನೆಯ ಹಂತಕ್ಕೆ ಬಂದು ನಿಂತಿದೆ. ಇಂದು ರಾಷ್ಟ್ರ ರಾಜಧಾನಿ ಡೆಲ್ಲಿಯಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್ 2ನೇ ಆವೃತ್ತಿಯಲ್ಲಿ ಫೈನಲ್ ಫೈಟ್. ಪ್ರಶಸ್ತಿಗಾಗಿ RCB ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಟ ನಡೆಸುತ್ತಿವೆ. ಕಳೆದ ಸಲ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿತ್ತು. ಈ ಸಲ ಯಾರೇ ಗೆದ್ದರೂ ಫಸ್ಟ್ ಟೈಮ್ ಟ್ರೋಫಿ ಗೆದ್ದ ಸಾಧನೆ ಮಾಡಲಿದ್ದಾರೆ. ಕಳೆದ ಸಲ ಮತ್ತು ಈ ಬಾರಿ ಲೀಗ್ನಲ್ಲಿ ಡೆಲ್ಲಿ ವಿರುದ್ಧ ಆಡಿದ ನಾಲ್ಕಕ್ಕೆ ನಾಲ್ಕೂ ಪಂದ್ಯಗಳನ್ನೂ ಸೋತಿರುವ RCB ಗರ್ಲ್ಸ್, ಇಂದು ಒಂದೇ ಪಂದ್ಯದಲ್ಲಿ ಆ ನಾಲ್ಕು ಸೇಡುಗಳನ್ನ ತೀರಿಸಿಕೊಳ್ಳಲು ಎದುರು ನೋಡ್ತಿದ್ದಾರೆ.

IPL 2024 ಕಿಚ್ಚ ಸುದೀಪ್ ಯಾಕೆ ಆ ಇಡ್ಲಿ ಬೇಡ ಅಂದ್ರು ಅರ್ಥ ಆಯ್ತಾ?

ಹುಡುಗರ ಹಾದಿಯಲ್ಲಿ RCB ಹುಡುಗಿಯರು

ಚೊಚ್ಚಲ ಆವೃತ್ತಿಯಲ್ಲಿ ಹುಡುಗರಂತೆ ಹುಡುಗಿಯರು ಲೀಗ್ನಿಂದ ನಿರ್ಗಮಿಸಿದ್ದರು. 2ನೇ ಆವೃತ್ತಿಯ ಐಪಿಎಲ್ನಲ್ಲಿ RCB ಬಾಯ್ಸ್, ಫೈನಲ್ ಪ್ರವೇಶಿಸಿದ್ರು. ಅದೇ ರೀತಿ 2ನೇ WPLನಲ್ಲಿ ಹುಡುಗಿಯರು ಫೈನಲ್ ಪ್ರವೇಶಿಸಿದ್ದಾರೆ. RCB ಬಾಯ್ಸ್, ಮೂರು ಸಲ ಫೈನಲ್ ಪ್ರವೇಶಿಸಿದ್ರೂ ಒಂದು ಬಾರಿಯೂ ಚಾಂಪಿಯನ್ ಆಗಿಲ್ಲ. ಹುಡುಗರು ಐಪಿಎಲ್ ಟ್ರೋಫಿ ಗೆದ್ದಿಲ್ಲ. ಹುಡುಗಿಯರಾದ್ರೂ WPL ಟ್ರೋಫಿ ಗೆಲ್ತಾರಾ ಅನ್ನೋ ಕುತೂಹಲ ಹುಟ್ಟಿಕೊಂಡಿದೆ. ಪಂದ್ಯ ಡೆಲ್ಲಿಯಲ್ಲಿ ನಡೆಯುತ್ತಿದ್ದರೂ, ಡೆಲ್ಲಿ ಕ್ಯಾಪಿಟಲ್ಸ್ ಲೋಕಲ್ ಟೀಮ್ ಆಗಿದ್ದರೂ RCB ಸಪೋಟರ್ಸ್ ಜಾಸ್ತಿ ಇದ್ದಾರೆ. ಇದು ಎಲಿಮಿನೇಟರ್ ಪಂದ್ಯದಲ್ಲಿ ಸಾಬೀತಾಗಿದೆ.

ಅದ್ಭುತ ಫಾರ್ಮ್ನಲ್ಲಿ RCB ಗರ್ಲ್ಸ್

ಹೌದು, RCB ಗರ್ಲ್ಸ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಲೀಗ್ನ 8 ಪಂದ್ಯಗಳ ಪೈಕಿ ನಾಲ್ಕು ಗೆದ್ದು ನಾಲ್ಕು ಸೋತು, ಎಲಿಮಿನೇಟರ್ಗೆ ಎಂಟ್ರಿ ಪಡೆದಿತ್ತು. ನಾಕೌಟ್ ಪಂದ್ಯದಲ್ಲಿ ಕಳೆದ ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸೋಲಿಸಿ, ಫೈನಲ್ ಪ್ರವೇಶಿಸಿದೆ. ಈಗ ಫೈನಲ್ನಲ್ಲಿ ಡೆಲ್ಲಿ ಎದುರಾಳಿ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ WPL ಇತಿಹಾಸದಲ್ಲಿ ಒಮ್ಮೆಯೂ RCB ಗೆದ್ದಿಲ್ಲ. ಇಂದು ಗೆದ್ದು ಇತಿಹಾಸ ನಿರ್ಮಿಸಲು ಕಾಯ್ತಿದೆ ರೆಡ್ ಆರ್ಮಿ ಪಡೆ.

IPL 2024: ಪ್ರತಿ ತಂಡದಲ್ಲಿರುವ ದುಬಾರಿ ಆಟಗಾರರಿವರು..!

ಬ್ಯಾಟಿಂಗ್, ಬೌಲಿಂಗ್ ಎರಡಲ್ಲೂ ಆರ್ಸಿಬಿ ಸ್ಟ್ರಾಂಗ್ ಆಗಿದೆ. ಆದ್ರೆ ಫೀಲ್ಡಿಂಗ್ನಲ್ಲಿ ಮಾತ್ರ ಯಾಕೋ ಮಂಕಾಗಿದೆ. ಫೀಲ್ಡಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ್ರೆ, ರೆಡ್ ಆರ್ಮಿ ಪಡೆ ಮತ್ತಷ್ಟು ಬಲಿಷ್ಠವಾಗಲಿದೆ. ಸ್ಮೃತಿ, ಪೆರ್ರಿ, ಸೋಫಿಯಾ, ರಿಚಾ ಘೋಶ್ ಅದ್ಭುತವಾಗಿ ಬ್ಯಾಟಿಂಗ್ ಮಾಡ್ತಿದ್ದಾರೆ. ಬೌಲರ್ಗಳಾದ ರೇಣುಕಾ ಸಿಂಗ್, ಶ್ರೇಯಾಂಕ ಪಾಟೀಲ್, ಜೊತೆ ಪೆರ್ರಿ, ಸೋಫಿಯಾಮ ಆಶಾ ಶೋಭನಾ ಸಹ ಉತ್ತಮ ಫಾರ್ಮ್ನಲ್ಲಿದ್ದಾರೆ. ಎಲಿಮಿನಟೇರ್ ಪಂದ್ಯದ ಗೆಲುವಿನ ರೂವಾರಿಗಳು ಪೆರ್ರಿ, ಶ್ರೇಯಾಂಕ ಮತ್ತು ಶೋಭನಾ. ಇಂದು ಸಹ ಈ ಮೂವರೇ ಟ್ರಂಪ್ ಕಾರ್ಡ್.

ಕಳೆದ ವರ್ಷ ಮಿಸ್ಸಾಗಿದ್ದ ಕಪ್, ಡೆಲ್ಲಿಗೆ ಈ ವರ್ಷ ಸಿಗುತ್ತಾ..?

ಡೆಲ್ಲಿ ಕ್ಯಾಪಿಟಲ್ಸ್ ಗರ್ಲ್ಸ್, ಲೀಗ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು, ಫೈನಲ್ ಪ್ರವೇಶಿಸಿದ್ದಾರೆ. ಲೀಗ್ನ 8 ಮ್ಯಾಚ್ನಲ್ಲಿ ಡೆಲ್ಲಿ 6 ಗೆದ್ದು ಕೇವಲ ಎರಡನ್ನ ಸೋತಿದೆ. ಇದರಲ್ಲೆ ಅರ್ಥವಾಗುತ್ತೆ ಕ್ಯಾಪಿಟಲ್ಸ್ ತಂಡ ಎಷ್ಟು ಬಲಿಷ್ಠ ಅಂತ. ಕಳೆದ ಸಲವೂ ಫೈನಲ್ ಪ್ರವೇಶಿಸಿದ್ದ ಡೆಲ್ಲಿ ಗರ್ಲ್ಸ್, ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಆದ್ರೆ ಈ ಸಲ ಮಾತ್ರ ಚಾಂಪಿಯನ್ ಆಗಲೇ ಬೇಕು ಅನ್ನೋ ಹಠಕ್ಕೆ ಬಿದ್ದಿದ್ದಾರೆ. ಫೈನಲ್ ಆಡ್ತಿರೋ ಎರಡು ಟೀಮ್ಸ್ ಈ ಸಲದ WPL ಪಂದ್ಯಗಳಿಗೆ ಆತಿಥ್ಯ ವಹಿಸಿದ್ದು, ವಿಶೇಷ. ಡೆಲ್ಲಿ ಲೋಕಲ್ ಟೀಮ್ ಆಗಿರೋದ್ರಿಂದ, ಉತ್ತಮ ಫಾರ್ನ್ನಲ್ಲಿ ಇರೋದ್ರಿಂದ ಇಂದಿನ ಫೇವರಿಟ್ ಆಗಿದೆ. ಆದ್ರೆ ರೆಡ್ ಆರ್ಮಿ ವೆರಿ ಡೇಂಜರಸ್ ಆಗಿರೋದ್ರಿಂದ ಬಿಗ್ ಫೈಟ್ ನಿರೀಕ್ಷಿಸಲಾಗಿದೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!