Latest Videos

WPL Auction ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ ಬೆನ್ನಲ್ಲೇ ಕನ್ನಡದಲ್ಲಿ ಸ್ಮೃತಿ ಮಂಧಾನ ಸಂದೇಶ!

By Suvarna NewsFirst Published Feb 13, 2023, 6:24 PM IST
Highlights

ಭಾರತ ಮಹಿಳಾ ತಂಡದ ಸ್ಫೋಟಕ ಬ್ಯಾಟರ್ ಸ್ಮೃತಿ ಮಂದನಾ ಆರ್‌ಸಿಬಿ ಸೇರಿಕೊಂಡಿದ್ದಾರೆ. ಗರಿಷ್ಠ ಮೊತ್ತಕ್ಕೆ ಹರಾಜಾಗುವ ಮೂಲಕ ದಾಖಲೆ ಬರೆದಿದ್ದಾರೆ. ಆರ್‌ಸಿಬಿ ತಂಡ ಸೇರಿದ ಬೆನ್ನಲ್ಲೇ ಸ್ಮೃತಿ ಮಂಧಾನ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.

ಬೆಂಗಳೂರು(ಫೆ.13): ಮಹಿಳಾ ಐಪಿಎಲ್ ಟೂರ್ನಿಗೆ ವೇದಿಕೆ ಸಜ್ಜಾಗಿದೆ. ಚೊಚ್ಚಲ ಬಾರಿಗೆ ನಡೆಯುತ್ತಿರುವ ಹರಾಜು ಪ್ರಕ್ರಿಯೆ ಹಲವು ವಿಶೇಷತಗಳಿಗೆ ಸಾಕ್ಷಿಯಾಗಿದೆ. ಭಾರತ, ಆಸ್ಟ್ರೇಲಿಯಾ,ನ್ಯೂಜಿಲೆಂಡ್ ಆಟಗಾರ್ತಿಯರಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಮಹಿಳಾ ಹರಾಜಿನಲ್ಲಿ ಇದುವರೆಗಿನ ಗರಿಷ್ಠ ಬಿಡ್ ಕೀರ್ತಿ ಸ್ಮೃತಿ ಮಂಧಾನಾ ಪಾಲಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ಫ್ರಾಂಚೈಸಿ 3.4 ಕೋಟಿ ರೂಪಾಯಿ ನೀಡಿ ಸ್ಮೃತಿ ಮಂಧಾನ ಖರೀದಿಸಿದೆ. ಆರ್‌ಸಿಬಿ ಸೇರಿಕೊಂಡ ಬೆನ್ನಲ್ಲೇ ಸ್ಮೃತಿ ಮಂಧಾನಾ  ನಮಸ್ಕಾರ ಬೆಂಗಳೂರು ಎಂದು ಟ್ವೀಟ್ ಮಾಡಿದ್ದಾರೆ. ಕನ್ನಡಿಗರಿಗೆ ಮಂಧಾನ ಮಾಡಿದ ಮೊದಲ ಟ್ವೀಟ್ ಇದೀಗ ಭಾರಿ ವೈರಲ್ ಆಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಧಿಕೃತ ಟ್ವಿಟರ್ ಖಾತೆ ಮೂಲಕ ಅದ್ಧೂರಿ ಸ್ವಾಗತ ಕೋರಿದೆ. ಈ ಟ್ವೀಟ್‌ ಪ್ರತಿಕ್ರಿಯೆ ನೀಡಿದ ಮಂಧಾನ, ನಮಸ್ಕಾರ ಬೆಂಗಳೂರು ಎಂದು ಟ್ವೀಟ್ ಮಾಡಿದ್ದಾರೆ. 

ಆರ್‌ಸಿಬಿ ತಂಡ ಅದ್ಧೂರಿಯಾಗಿ ಸ್ಮೃತಿ ಮಂಧಾನಗೆ ಸ್ವಾಗತ ನೀಡಿದೆ.  ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮಂಧಾನಾಗೆ ಕನ್ನಡಿಗರು ಸ್ವಾಗತ ಕೋರಿದ್ದಾರೆ. ಇದರ ಜೊತೆಗೆ ಆರ್‌ಸಿಬಿ ತಂಡ ಸೇರಿಕೊಂಡ ಮಂಧಾನಾಗೆ ಶುಭಕೋರಿದ್ದಾರೆ. ಬೆಂಗಳೂರು ತಂಡ ಸೇರಿದ ಬೆನ್ನಲ್ಲೇ ಮಂಧಾನ ಇಂಗ್ಲೀಷ್ ಪದಗಳ ಮೂಲಕ ಕನ್ನಡದಲ್ಲೇ ಟ್ವೀಟ್ ಮಾಡಿರುವುದು ಇದೀಗ ಆರ್‌ಸಿಬಿ ಅಭಿಮಾನಿಗಳ ಸಂತಸ ಡಬಲ್ ಮಾಡಿದೆ.

 

Namaskara Bengaluru 💛❤️

— Smriti Mandhana (@mandhana_smriti)

 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಗಮಿಸಿರುವ ಸ್ಮೃತಿ ಮಂಧಾನಗ ಮಹಿಳಾ ತಂಡದ ನಾಯಕತ್ವ ನೀಡುವ ಸಾಧ್ಯತೆ ಇದೆ. ಭಾರತ ಮಹಿಳಾ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಸ್ಮೃತಿ ಮಂಧಾನ ಇದೀಗ ಆರ್‌ಸಿಬಿ ಮಹಿಳಾ ತಂಡದ ನಾಯಕತ್ವ ವಹಿಸುವ ಎಲ್ಲಾ ಸಾಧ್ಯತೆ ಇದೆ. 

WPL Auction ಆರ್‌ಸಿಬಿ ಬಿಡ್ ಗೆಲ್ಲುತ್ತಿದ್ದಂತೆ ಸಂಭ್ರಮದಲ್ಲಿ ತೇಲಾಡಿದ ಮಂಧಾನಾ, ರೇಣುಕಾ ಸಿಂಗ್!

ಸ್ಮೃತಿ ಮಂಧಾನ  ಹಾಗೂ ಭಾರತ ಮಹಿಳಾ ತಂಡದ ಸದಸ್ಯರು ಮಹಿಳಾ ಐಪಿಎಲ್ ಹರಾಜು ಪ್ರಕ್ರಿಯ ನೇರಪ್ರಸಾರ ವೀಕ್ಷಿಸಿದ್ದಾರೆ. ಸ್ಮೃತಿ ಮಂಧಾನ ಬಿಡ್ಡಿಂಗ್ ಆರಂಭಗೊಳ್ಳುತ್ತಿದ್ದಂತೆ ಭಾರತ ಮಹಿಳಾ ತಂಡದಲ್ಲಿ ಸಂಭ್ರಮ ಹೆಚ್ಚಾಗಿದೆ. ಬಿಡ್ಡಿಂಗ್ 1,2, 3 ಕೋಟಿ ರೂಪಾಯಿ ದಾಟುತ್ತಿದ್ದಂತೆ ಸಹ ಆಟಗಾರರು ಮಂಧಾನಗೆ ಶುಭಕೋರಿದ್ದಾರೆ. ಇತ್ತ ಮಂಧಾನ ಖರೀದಿಸಲು ಮುಂಬೈ ಇಂಡಿಯನ್ಸ್, ಗುಜರಾತ್ ಜೈಂಟ್ಸ್ ಸೇರಿದಂತೆ ಇತರ ಫ್ರಾಂಚೈಸಿ ಪೈಪೋಟಿ ನಡೆಸಿತ್ತು. ಜಿದ್ದಾಜಿದ್ದಿನ ಬಿಡ್ಡಿಂಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಮೃತಿ ಮಂಧಾನಗೆ 3.4 ಕೋಟಿ ರೂಪಾಯಿ ನೀಡುವ ಮೂಲಕ ಖರೀದಿ ಮಾಡಿತು. ಈ ವೇಳೆ ಇಡೀ ತಂಡ ಮಂಧಾನಗೆ ಶುಭಕೋರಿ, ಸಂಭ್ರಮಿಸಿತು. 

ಐಪಿಎಲ್ ಚೊಚ್ಚಲ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೆ ಉತ್ತಮ ಆಯ್ಕೆ ಮಾಡಿದೆ. ಭಾರತದ ಜೊತೆಗೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಆಟಗಾರ್ತಿಯರನ್ನೂ ಖರೀದಿಸಿದೆ. ಆರ್‌ಸಿಬಿ ಆಯ್ಕೆ ಮಾಡಿದ ಐವರು ಆಟಗಾರ್ತಿಯರೂ ಅತ್ಯುತ್ತಮ ಕ್ರಿಕೆಟ್ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಹೀಗಾಗಿ ಆರ್‌ಸಿಬಿ ಬಲಿಷ್ಠ ಹಾಗೂ ಸಮತೋಲನ ತಂಡ ರಚಿಸವ ಸ್ಪಷ್ಟ ಸೂಚನೆ ನೀಡಿದೆ.

WPL Auction ಮತ್ತೆರಡು ಪ್ಲೇಯರ್ಸ್ ಖರೀದಿಸಿ ಆರ್‌ಸಿಬಿ, ಹರ್ಮನ್‌ಪ್ರೀತ್ 1.8 ಕೋಟಿ ರೂಗೆ ಮುಂಬೈ ಪಾಲು!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ಫ್ರಾಂಚೈಸಿ ಖರೀದಿಸಿದ ಆಟಗಾರ್ತಿಯರ ಪಟ್ಟಿ:
ಸ್ಮೃತಿ ಮಂಧಾನ: 3.4 ಕೋಟಿ ರೂಪಾಯಿ( ಆರ್‌ಸಿಬಿ)
ರಿಚಾ ಘೋಷ್: 1.9 ಕೋಟಿ ರೂಪಾಯಿ( ಆರ್‌ಸಿಬಿ
ರೇಣುಕಾ ಸಿಂಗ್: 1.5 ಕೋಟಿ ರೂಪಾಯಿ( ಆರ್‌ಸಿಬಿ
ಎಲ್ಲಿಸ್ ಪೆರಿ: 1.17 ಕೋಟಿ ರೂಪಾಯಿ( ಆರ್‌ಸಿಬಿ)
ಸೋಫಿ ಡಿವೈನ್: 50 ಲಕ್ಷ ರೂಪಾಯಿ( ಆರ್‌ಸಿಬಿ

click me!