
ಬೆಂಗಳೂರು(ಫೆ.13): ಮಹಿಳಾ ಐಪಿಎಲ್ ಹರಾಜು ಹಲವು ಅಚ್ಚರಿ ಹಾಗೂ ದಾಖಲೆಗಳಿಗೆ ಕಾರಣವಾಗಿದೆ. ಇದೇ ಮೊದಲ ಬಾರಿ ನಡೆಯುತ್ತಿರುವ ಮಹಿಳಾ ಐಪಿಎಲ್ ಹರಾಜಿನಲ್ಲಿ ಸ್ಮೃತಿ ಮಂದನಾ ಹಾಗೂ ರೇಣುಕಾ ಸಿಂಗ್ ಆರ್‌ಸಿಬಿ ಪಾಲಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ, ಅಳೆದು ತೂಗಿ ಆಟಗಾರ್ತಿಯರನ್ನು ಖರೀದಿಸುತ್ತಿದೆ.ಬಲಿಷ್ಠ ಹಾಗೂ ಜನಪ್ರಿಯ ತಂಡ ಕಟ್ಟಲು ಮುಂದಾಗಿದೆ. ಚೊಚ್ಚಲ ಮಹಿಳಾ ಹರಾಜಿನ ಆರಂಭದಂದಲೂ ಆರ್‌ಸಿಬಿ ಹೆಚ್ಚು ಆಕ್ರಮಣಕಾರಿಯಾಗಿ ಆಟಗಾರ್ತಿಯರನ್ನು ಖರೀದಿಸಿತು. ಇತ್ತ ಭಾರತ ಮಹಿಳಾ ತಂಡ ಖುದ್ದು ಹರಾಜು ನೇರಪ್ರಸಾರ ವೀಕ್ಷಿಸಿದೆ. ಈ ವೇಳೆ ಸ್ಮೃತಿ ಮಂದನಾ ಅವರನ್ನು ರಾಯಲ್ ಚಾಲೆಂಜರ್ಸ್ ತಂಡ ಅತೀ ಹೆಚ್ಚು ಮೊತ್ತಕ್ಕೆ ಖರೀದಿ ಮಾಡುತ್ತಿದ್ದಂತೆ ತಂಡದಲ್ಲಿ ಸಂಭ್ರಮ ಮನೆ ಮಾಡಿತ್ತು. ಖುದ್ದು ಸ್ಮೃತಿ ಮಂದನಾ ಅಚ್ಚರಿ ಜೊತೆ ಸಂಭ್ರಮಪಟ್ಟಿದ್ದಾರೆ. ಈ ವಿಡಿಯೋವನ್ನು ಆರ್‌ಸಿಬಿ ಪೋಸ್ಟ್ ಮಾಡಿದೆ.
ಸ್ಮೃತಿ ಮಂದನಾಗೆ ರಾಯಲ್ ಜಾಲೆಂಜರ್ಸ್ ಬೆಂಗಳೂರು ತಂಡ 3.4 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಇದುವರೆಗಿನ ಗರಿಷ್ಠ ಮೊತ್ತ ಕೂಡ ಇದಾಗಿದೆ. ಇಷ್ಟೇ ಅಲ್ಲ ಚೊಚ್ಚಲ ಹರಾಜಿನ ಮೊದಲ ಹರಾಜು ಗರಿಷ್ಠ ಮೊತ್ತದ ದಾಖಲೆ ಬರೆದಿದೆ. ಇತ್ತ ರೇಣುಕಾ ಸಿಂಗ್ ಬಿಡ್ಡಿಂಗ್ ವೇಳೆ ಭಾರತ ಮಹಿಳಾ ತಂಡ ತೀವ್ರ ಕುತೂಹಲದಿಂದ ನೇರಪ್ರಸಾರ ವೀಕ್ಷಿಸಿತ್ತು. ಫ್ರಾಂಚೈಸಿಗಳು ರೇಣುಕಾ ಸಿಂಗ್ ಖರೀದಿಸಲು ಮುಗಿ ಬಿದ್ದಿತ್ತು. ಹಂತ ಹಂತವಾಗಿ ಬಿಡ್ಡಿಂಗ್ ಮೊತ್ತ ಏರುತ್ತಿದ್ದಂತೆ ತಂಡದಲ್ಲಿ ಚಪ್ಪಾಳೆ, ಸಂಭ್ರಮ ಹೆಚ್ಚಾಗಿತ್ತು. ಕೊನೆಗೆ ರೇಣುಕಾ ಸಿಂಗ್ 1.5 ಕೋಟಿ ರೂಪಾಯಿ ನೀಡಿ ಆರ್‌ಸಿಬಿ ಪಾಲಾದರು. ಈ ವೇಳೆ ತಂಡದ ಸದಸ್ಯರು ರೇಣುಕಾ ಸಿಂಗ್ ಅಭಿನಂದಿಸಿದರು. ಈ ವಿಡಿಯೋವನ್ನು ಆರ್‌ಸಿಬಿ ಪೋಸ್ಟ್ ಮಾಡಿದೆ.
WPL Auction ಮತ್ತೆರಡು ಪ್ಲೇಯರ್ಸ್ ಖರೀದಿಸಿ ಆರ್‌ಸಿಬಿ, ಹರ್ಮನ್‌ಪ್ರೀತ್ 1.8 ಕೋಟಿ ರೂಗೆ ಮುಂಬೈ ಪಾಲು!
ಇದುವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ಫ್ರಾಂಚೈಸಿ ಖರೀದಿಸಿದ ಆಟಗಾರ್ತಿಯರ ಪಟ್ಟಿ:
ಸ್ಮೃತಿ ಮಂಧಾನ: 3.4 ಕೋಟಿ ರೂಪಾಯಿ( ಆರ್‌ಸಿಬಿ)
ರಿಚಾ ಘೋಷ್: 1.9 ಕೋಟಿ ರೂಪಾಯಿ( ಆರ್‌ಸಿಬಿ
ರೇಣುಕಾ ಸಿಂಗ್: 1.5 ಕೋಟಿ ರೂಪಾಯಿ( ಆರ್‌ಸಿಬಿ
ಎಲ್ಲಿಸ್ ಪೆರಿ: 1.17 ಕೋಟಿ ರೂಪಾಯಿ( ಆರ್‌ಸಿಬಿ)
ಸೋಫಿ ಡಿವೈನ್: 50 ಲಕ್ಷ ರೂಪಾಯಿ( ಆರ್‌ಸಿಬಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.