ಈ ಬಾರಿ ಟೂರ್ನಿಗೆ ಬೆಂಗಳೂರು, ಡೆಲ್ಲಿ ಆತಿಥ್ಯ ವಹಿಸಿದ್ದು, ಈ 2 ತಂಡಗಳೇ ಫೈನಲ್‌ಗೇರಿದ್ದು ನಗರಗಳ ವಿಶೇಷ. ಸ್ಮೃತಿ ಮಂಧನಾ ನಾಯಕತ್ವದ ಆರ್ ಸಿಬಿ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರಿದೆ. ಲೀಗ್ ಹಂತದಲ್ಲಿ ಆಡಿರುವ 8 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 4ರಲ್ಲಿ ಸೋತಿದ್ದ ತಂಡ ಎಲಿಮಿನೇಟರ್‌ನಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ 5 ರನ್ ರೋಚಕ ಗೆಲುವು ಸಾಧಿಸಿತ್ತು.
ನವದೆಹಲಿ: ಒಂದೆಡೆ 'ಈ ಸಲ ಕಪ್ ನಮ್ ಎನ್ನುತ್ತಿರುವ ಆರ್‌ಸಿಬಿ. ಮತ್ತೊಂದೆಡೆ ಕಳೆದ ಬಾರಿ ಫೈನಲ್‌ಗೇರಿ ಮಿಸ್ ಆಗಿದ್ದ ಟ್ರೋಫಿ ಈ ಬಾರಿ ಗೆದ್ದೇಬಿಡುತ್ತೇವೆ ಎಂಬ ಹುಮ್ಮಸ್ಸಿನಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್, ಉಭಯ ತಂಡಗಳು ಭಾನುವಾರ ನಡೆಯಲಿರುವ 2ನೇ ಆವೃತ್ತಿ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ನ ಫೈನಲ್‌ನಲ್ಲಿ ಪರಸ್ಪರ ಇತ್ತಂಡಗಳೂ ಚೊಚ್ಚಲ ಸೆಣಸಾಡಲಿವೆ.ಪ್ರಶಸ್ತಿ ಗೆಲ್ಲುವ ಕಾತರದಲ್ಲಿದ್ದು, ಪಂದ್ಯಕ್ಕೆ ಜೇಟ್ಲಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಈ ಬಾರಿ ಟೂರ್ನಿಗೆ ಬೆಂಗಳೂರು, ಡೆಲ್ಲಿ ಆತಿಥ್ಯ ವಹಿಸಿದ್ದು, ಈ 2 ತಂಡಗಳೇ ಫೈನಲ್‌ಗೇರಿದ್ದು ನಗರಗಳ ವಿಶೇಷ. ಸ್ಮೃತಿ ಮಂಧನಾ ನಾಯಕತ್ವದ ಆರ್ ಸಿಬಿ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರಿದೆ. ಲೀಗ್ ಹಂತದಲ್ಲಿ ಆಡಿರುವ 8 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 4ರಲ್ಲಿ ಸೋತಿದ್ದ ತಂಡ ಎಲಿಮಿನೇಟರ್‌ನಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ 5 ರನ್ ರೋಚಕ ಗೆಲುವು ಸಾಧಿಸಿತ್ತು.
undefined
IPL 2024: ಪ್ರತಿ ತಂಡದಲ್ಲಿರುವ ದುಬಾರಿ ಆಟಗಾರರಿವರು..!
ಪೆರಿಯೇ ಭರವಸೆ: ಟೂರ್ನಿಯ ಗರಿಷ್ಠ ಸ್ಕೋರರ್ ಎಲೈಸಿ ಪೆರ್ರಿ ಅಭೂತ ಪೂರ್ವ ಲಯದಲ್ಲಿದ್ದು, ತಂಡ ಫೈನಲ್‌ಗೇರಿ ದರ ಹಿಂದೆ ಪರಿ ಕೊಡುಗೆ ಮಹತ್ವದ್ದು. ಫೈನಲ್‌ನಲ್ಲೂ ಅವರ ಪ್ರದರ್ಶನವೇ ನಿರ್ಣಾಯಕ ಎನಿಸಿಕೊಳ್ಳಲಿದೆ. ಸ್ಮೃತಿ, ರಿಚ್ ಘೋಷ್ ಬ್ಯಾಟಿಂಗ್ ಆಧಾರಸ್ತಂಭಗಳಾಗಿದ್ದು, ಯುವ ಸ್ಟಾರ್ ಶ್ರೇಯಾಂಕ ಪಾಟೀಲ್, ಬೌಲಿಂಗ್‌ನಲ್ಲಿ ಮಿಂಚುತ್ತಿದ್ದಾರೆ.
ಡೆಲ್ಲಿ ಓಟಕ್ಕಿಲ್ಲ ಬ್ರೇಕ್: ಕಳೆದ ಬಾರಿ ರನ್ನರ್- ಅಪ್ ಡೆಲ್ಲಿ ಈ ಬಾರಿಯೂ ಸಂಘಟಿತ ಪ್ರದರ್ಶನ ತೋರಿದ್ದು, ಲೀಗ್ ಹಂತದಲ್ಲಿ ಆಡಿರುವ 8 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ನೇರವಾಗಿ ಫೈನಲ್ ಪ್ರವೇಶಿಸಿತ್ತು. ನಾಯಕಿ ಮೆಗ್ ಲ್ಯಾನಿಂಗ್ 8 ಪಂದ್ಯಗಳಲ್ಲಿ 308 ರನ್ ಕಲೆಹಾಕಿದ್ದು, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗ್ಸ್ ಕೂಡಾ ಅಬ್ಬರಿಸುತ್ತಿದ್ದಾರೆ. ಮರಿಯಾನೆ ಕಾಪ್, ಜೆಸ್ ಜೋನಾಸನ್, ಶಿಖಾ ಪಾಂಡೆ ಬೌಲಿಂಗ್‌ನಲ್ಲಿ ಎದುರಾಳಿ ಗಳನ್ನು ಇನ್ನಿಲ್ಲದಂತೆ ಕಾಡುತ್ತಿದ್ದಾರೆ.
ಆರ್‌ಸಿಬಿ ಚೆಲುವೆ ಪೆರ್ರಿಗೆ 'ಒಡೆದ ಕಾರು ಗಾಜಿನ' ಗಿಫ್ಟ್ ಕೊಟ್ಟ TATA ಮೋಟರ್ಸ್..!
ಐಪಿಎಲ್‌ನಲ್ಲೂ ಕಪ್ ಗೆಲ್ಲದ ಎರಡು ತಂಡಗಳು: ಐಪಿಎಲ್‌ನಲ್ಲೂ ಈ 2 ಫ್ರಾಂಚೈಸಿಗಳ ತಂಡಗಳು ಆಡುತಿದ್ದು, 2 ತಂಡಕ್ಕೂ ಈ ವರೆಗೆ ಪ್ರಶಸ್ತಿ ಗೆಲ್ಲಲಾಗಲಿಲ್ಲ. ಡೆಲ್ಲಿ 2022ರಲ್ಲಿ ಫೈನಲ್‌ಗೇರಿತ್ತು. ಆರ್‌ಸಿಬಿ 2009, 2011, 2016ರಲ್ಲಿ ಪ್ರಶಸ್ತಿ ಸುತ್ತಿಗೇರಿದ್ದರೂ ರನ್ನರ್- ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಈ ಬಾರಿ ಡಬ್ಲ್ಯುಪಿಎಲ್ 1 ತಂಡದ ಪ್ರಶಸ್ತಿ ಬರ ನೀಗಿಸಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದೇ ಇಲ್ಲ ಆರ್‌ಸಿಬಿ!
ಆರ್‌ಸಿಬಿ ಡಬ್ಲ್ಯುಪಿಎಲ್‌ನಲ್ಲಿ ಡೆಲ್ಲಿ ವಿರುದ್ಧ 4 ಪಂದ್ಯಗಳನ್ನಾಡಿದೆ. ಕಳೆದ ಆವೃತ್ತಿಯಲ್ಲಿ ಹಾಗೂ ಈ ಬಾರಿ ಲೀಗ್ ಹಂತದಲ್ಲಿ ತಲಾ 2 ಬಾರಿ ಆಡಿದೆ. ಆದರೆ ಎಲ್ಲಾ4 ಪಂದ್ಯಗಳಲ್ಲೂ ಆರ್‌ಸಿಬಿ ಸೋತಿದೆ. ಹೀಗಾಗಿ ಫೈನಲ್‌ನಲ್ಲಿ ಡೆಲ್ಲಿ ವಿರುದ್ಧ ಆರ್‌ಸಿಬಿ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬ ಕುತೂಹಲವಿದೆ.
ಪಂದ್ಯ ಆರಂಭ: ರಾತ್ರಿ 7.30ಕ್ಕೆ,
ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೋ ಸಿನಿಮಾ