2ನೇ ಆವೃತ್ತಿ ಡಬ್ಲ್ಯುಪಿಎಲ್‌ಗೆ ಮುಂಬೈ, ಬೆಂಗ್ಳೂರು ಆತಿಥ್ಯ?

By Kannadaprabha News  |  First Published Dec 7, 2023, 12:53 PM IST

ಮೊದಲ ಆವೃತ್ತಿಯ ಎಲ್ಲಾ ಪಂದ್ಯಗಳು ಮುಂಬೈನಲ್ಲೇ ನಡೆದಿದ್ದವು. ಆದರೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದ ಕಾರಣ ವಿವಿಧ ನಗರಗಳಿಗೂ ಟೂರ್ನಿ ಪರಿಚಯಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ‘ಈ ಬಾರಿ ಟೂರ್ನಿ ಮುಂಬೈ, ಬೆಂಗಳೂರಲ್ಲಿ ನಡೆಯುವ ಸಾಧ್ಯತೆ ಹೆಚ್ಚು. ಡಿ.9ರಂದು ಅಂತಿಮ ನಿರ್ಧಾರ ಪ್ರಕಟಗೊಳ್ಳಬಹುದು’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿಯಾಗಿದೆ.


ಬೆಂಗಳೂರು(ಡಿ.07): 2ನೇ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌) ಪಂದ್ಯಗಳನ್ನು ಒಂದೇ ನಗರಕ್ಕೆ ಸೀಮಿತಗೊಳಿಸದಿರುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದ್ದು, ಮುಂಬೈ ಜೊತೆ ಬೆಂಗಳೂರಲ್ಲೂ ಪಂದ್ಯಗಳು ನಡೆಯುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 

ಮೊದಲ ಆವೃತ್ತಿಯ ಎಲ್ಲಾ ಪಂದ್ಯಗಳು ಮುಂಬೈನಲ್ಲೇ ನಡೆದಿದ್ದವು. ಆದರೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದ ಕಾರಣ ವಿವಿಧ ನಗರಗಳಿಗೂ ಟೂರ್ನಿ ಪರಿಚಯಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ‘ಈ ಬಾರಿ ಟೂರ್ನಿ ಮುಂಬೈ, ಬೆಂಗಳೂರಲ್ಲಿ ನಡೆಯುವ ಸಾಧ್ಯತೆ ಹೆಚ್ಚು. ಡಿ.9ರಂದು ಅಂತಿಮ ನಿರ್ಧಾರ ಪ್ರಕಟಗೊಳ್ಳಬಹುದು’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿಯಾಗಿದೆ.

Latest Videos

undefined

ಭಾರತಕ್ಕೆ 38 ರನ್‌ ಸೋಲು

ಮುಂಬೈ: ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ 38 ರನ್‌ಗಳಿಂದ ಪರಾಭವಗೊಂಡಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿತು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್, ಭಾರತದ ಅನನುಭವಿ ಬೌಲಿಂಗ್ ವಿಭಾಗ ಹಾಗೂ ಕಳಪೆ ಫೀಲ್ಡಿಂಗ್‌ನ ಲಾಭವೆತ್ತಿ 6 ವಿಕೆಟ್‌ಗೆ 197 ರನ್ ಕಲೆಹಾಕಿತು. ಡ್ಯಾನಿ ವ್ಯಾಟ್ 47 ಎಸೆತಗಳಲ್ಲಿ 75 ರನ್ ಚಚ್ಚಿದರೆ, ನಥಾಲಿ ಸ್ಕೀವರ್ 53 ಎಸೆತಗಳಲ್ಲಿ 77 ರನ್ ಸಿಡಿಸಿದರು. ಇವರಿಬ್ಬರ ನಡುವೆ 3ನೇ ವಿಕೆಟ್‌ಗೆ 138 ರನ್ ಜೊತೆಯಾಟ ಮೂಡಿಬಂತು. ರೇಣುಕಾ ಸಿಂಗ್ 27ಕ್ಕೆ 3 ವಿಕೆಟ್ ಕಿತ್ತರು.

ಟಿ20 ರ್‍ಯಾಂಕಿಂಗ್‌: ಮುಂದುವರೆದ ಭಾರತದ ಪ್ರಾಬಲ್ಯ ರವಿ ಬಿಷ್ಣೋಯ್‌ ನಂ.1 ಬೌಲರ್‌!

ಬೃಹತ್ ಗುರಿಯನ್ನು ಬೆನ್ನತ್ತಿ ಭಾರತ 6 ವಿಕೆಟ್‌ಗೆ 159 ರನ್ ಗಳಿಸಲಷ್ಟೇ ಶಕ್ತವಾಯಿತು. ಶಫಾಲಿ ವರ್ಮಾ(42 ಎಸೆತಗಳಲ್ಲಿ 52 ರನ್) ಏಕಾಂಗಿ ಹೋರಾಟ ತಂಡದ ಗೆಲುವಿಗೆ ಸಾಕಾಗಲಿಲ್ಲ. ಮಾರಕ ದಾಳಿ ಸಂಘಟಿಸಿದ ತಾರಾ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್ 4 ಓವರಲ್ಲಿ ಕೇವಲ 15 ರನ್ ನೀಡಿ 3 ವಿಕೆಟ್ ಕಕಬಳಿಸಿದರು. 2ನೇ ಪಂದ್ಯ ಡಿ.9ರಂದು ನಡೆಯಲಿದೆ.

ಸ್ಕೋರ್: 
ಇಂಗ್ಲೆಂಡ್ 20 ಓವರಲ್ಲಿ 197/6 (ಸ್ಕೀವರ್ 77, ವ್ಯಾಟ್ 75, ರೇಣುಕಾ 3-27, ಶ್ರೇಯಾಂಕ 2-44)
ಭಾರತ 20 ಓವರಲ್ಲಿ 159/6 (ಶಫಾಲಿ ವರ್ಮಾ 52, ಹರ್ಮನ್‌ಪ್ರೀತ್ ಕೌರ್ 26, ಎಕ್ಲೆಸ್ಟೋನ್ 3-15)

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಫಾಫ್ ಡು ಪ್ಲೆಸಿಸ್ ವಾಪಾಸ್?

ಅಬುಧಾಬಿ: 2024ರ ಟಿ20 ವಿಶ್ವಕಪ್‌ಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು, ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸಾಗಲು ಚಿಂತನೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. 

ಎಲ್ಲಿಯವರೆಗೂ ನಡಿಯೋಕೆ ಆಗುತ್ತೋ ಅಲ್ಲಿಯವರೆಗೂ ಐಪಿಎಲ್ ಆಡ್ತೇನೆ: RCB ಫ್ಯಾನ್ಸ್‌ಗೆ ಜೋಶ್‌ ತುಂಬಿದ ಮ್ಯಾಕ್ಸ್‌ವೆಲ್

ಇಲ್ಲಿ ನಡೆಯುತ್ತಿರುವ ಅಬುಧಾಬಿ ಟಿ10 ಟೂರ್ನಿಯಲ್ಲಿ ಆಡುತ್ತಿರುವ ಡು ಪ್ಲೆಸಿ, ಟಿ20 ವಿಶ್ವಕಪ್ ನಲ್ಲಿ ಆಡುವ ಬಗ್ಗೆ ದ.ಆಫ್ರಿಕಾದ ಸೀಮಿತ ಓವರ್ ತಂಡಗಳ ಕೋಚ್ ರಾಬ್ ವಾಲ್ಟರ್ ಜೊತೆ ಚರ್ಚೆ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಡು ಪ್ಲೆಸಿ 2020ರಲ್ಲಿ ಕೊನೆಯ ಬಾರಿಗೆ ಅಂ.ರಾ. ಟಿ20ಯಲ್ಲಿ ಆಡಿದ್ದರು

click me!