WPL 2023: ಪ್ಲೇ-ಆಫ್‌ ಸ್ಥಾನದ ಮೇಲೆ ಯು.ಪಿ. ವಾರಿಯರ್ಸ್‌ ಕಣ್ಣು

By Kannadaprabha NewsFirst Published Mar 20, 2023, 10:57 AM IST
Highlights

ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಂದು ಮಹತ್ವದ ಪಂದ್ಯ
ಪ್ಲೇ ಆಫ್‌ ಸ್ಥಾನದ ಮೇಲೆ ಕಣ್ಣಿಟ್ಟಿರುವ ಯುಪಿ ವಾರಿಯರ್ಸ್‌ ತಂಡ
ಯುಪಿ ವಾರಿಯರ್ಸ್‌ ತಂಡಕ್ಕಿಂದು ಗುಜರಾತ್ ಜೈಂಟ್ಸ್ ಸವಾಲು

ಮುಂಬೈ(ಮಾ.20): ಚೊಚ್ಚಲ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ನಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ಈಗಾಗಲೇ ಪ್ಲೇ-ಆಫ್‌ ಹಂತಕ್ಕೆ ಪ್ರವೇಶಿಸಿದ್ದು, 3ನೇ ಸ್ಥಾನಕ್ಕಾಗಿ ಉಳಿದ 3 ತಂಡಗಳ ನಡುವೆ ಪೈಪೋಟಿ ಇದೆ. 

ಸೋಮವಾರ ಯು.ಪಿ.ವಾರಿಯ​ರ್ಸ್‌ ತಂಡ ಗುಜರಾತ್‌ ಜೈಂಟ್ಸ್‌ ವಿರುದ್ಧ ಗೆಲುವು ಸಾಧಿಸಿದರೆ, ಪ್ಲೇ-ಆಫ್‌ನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳಲಿದೆ. ತಂಡ ಆಡಿರುವ 6 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 6 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಅಲೀಸಾ ಹೀಲಿ ನಾಯಕತ್ವದ ತಂಡಕ್ಕೆ 2 ಪಂದ್ಯ ಬಾಕಿ ಇದ್ದು, ಒಂದರಲ್ಲಿ ಗೆದ್ದರೆ ಸಾಕು ಪ್ಲೇ-ಆಫ್‌ ಪ್ರವೇಶಿಸಲಿದೆ. ಗುಜರಾತ್‌ ಕಳಪೆ ನೆಟ್‌ ರನ್‌ರೇಟ್‌ನೊಂದಿಗೆ ಕೊನೆಯ ಸ್ಥಾನದಲ್ಲಿದ್ದು, ಗುಂಪು ಹಂತದ ತನ್ನ ಕೊನೆ ಪಂದ್ಯದಲ್ಲಿ ಜಯಿಸಿದರೂ ಪ್ಲೇ-ಆಫ್‌ ಪ್ರವೇಶಿಸುವುದು ಕಷ್ಟ. 

ಸೋಮವಾರ ಮತ್ತೊಂದು ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ಸೆಣಸಲಿದ್ದು, ಮುಂಬೈ ಗೆದ್ದರೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದೊಂದಿಗೆ ನೇರವಾಗಿ ಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳಲಿದೆ. ಸದ್ಯ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಆಡಿರುವ 6 ಪಂದ್ಯಗಳ ಪೈಕಿ 5 ಗೆಲುವು ಹಾಗೂ ಒಂದು ಸೋಲು ಸಹಿತ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆಡಿರುವ 6 ಪಂದ್ಯಗಳ ಪೈಕಿ 4 ಗೆಲುವು ಎರಡು ಸೋಲುಗಳೊಂದಿಗೆ 8 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. 

ಇಂದಿನ ಪಂದ್ಯ: 
ಗುಜರಾತ್‌-ಯು.ಪಿ, ಮಧ್ಯಾಹ್ನ 3.30ಕ್ಕೆ
ಮುಂಬೈ-ಡೆಲ್ಲಿ, ಸಂಜೆ 7.30ಕ್ಕೆ

ಏಕದಿನ: ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದ ವಿಂಡೀಸ್‌

ಈಸ್ಟ್‌ ಲಂಡನ್‌: ನಾಯಕನಾಗಿ ನೇಮಕಗೊಂಡ ಬಳಿಕ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ ಶಾಯ್‌ ಹೋಪ್‌, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನದಲ್ಲಿ ವಿಂಡೀಸ್‌ 48 ರನ್‌ ಗೆಲುವು ಸಾಧಿಸಲು ನೆರವಾದರು. ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ 50 ಓವರಲ್ಲಿ 8 ವಿಕೆಟ್‌ಗೆ 335 ರನ್‌ ಕಲೆಹಾಕಿತು. ಹೋಪ್‌ ಔಟಾಗದೆ 128 ರನ್‌ ಗಳಿಸಿದರು. 

IPL ಹಣದಿಂದ ಯಾವ ಕಾರು ಖರೀದಿಸಬೇಕೆಂದು ಯೋಚಿಸುತ್ತಿದ್ದೆ: ರೋಹಿತ್‌ ಶರ್ಮಾ!

ದೊಡ್ಡ ಗುರಿ ಬೆನ್ನತ್ತಿದ ಆತಿಥೇಯ ತಂಡದ ಪರ ನಾಯಕ ತೆಂಬ ಬವುಮಾ 118 ಎಸೆತದಲ್ಲಿ 144 ರನ್‌ ಗಳಿಸಿದರೂ, ತಂಡ 41.4 ಓವರಲ್ಲಿ 287 ರನ್‌ಗೆ ಆಲೌಟ್‌ ಆಯಿತು. 3 ಪಂದ್ಯಗಳ ಸರಣಿಯಲ್ಲಿ ವಿಂಡೀಸ್‌ 1-0 ಮುನ್ನಡೆ ಪಡೆದಿದೆ.

ಟೆಸ್ಟ್‌: ಇನ್ನಿಂಗ್ಸ್‌ ಸೋಲಿನ ಭೀತಿಯಲ್ಲಿ ಶ್ರೀಲಂಕಾ

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್‌ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಶ್ರೀಲಂಕಾ ಇನ್ನಿಂಗ್‌್ಸ ಸೋಲಿನ ಭೀತಿಯಲ್ಲಿದೆ. ಕಿವೀಸ್‌ನ 580 ರನ್‌ಗೆ ಉತ್ತರವಾಗಿ ಮೊದಲ ಇನ್ನಿಂಗ್‌್ಸನಲ್ಲಿ ಲಂಕಾ ಕೇವಲ 164 ರನ್‌ಗೆ ಆಲೌಟ್‌ ಆಗಿ ಫಾಲೋ ಆನ್‌ಗೆ ಒಳಗಾಯಿತು. 2ನೇ ಇನ್ನಿಂಗ್‌್ಸ ಆರಂಭಿಸಿರುವ ಲಂಕಾ 3ನೇ ದಿನದಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 113 ರನ್‌ ಗಳಿಸಿದ್ದು, ಇನ್ನೂ 303 ರನ್‌ ಹಿನ್ನಡೆಯಲ್ಲಿದೆ. ಮೊದಲ ಪಂದ್ಯವನ್ನು ಕೊನೆ ಎಸೆತದಲ್ಲಿ ಗೆದ್ದಿದ್ದ ಕಿವೀಸ್‌, ಈ ಪಂದ್ಯವನ್ನೂ ಗೆದ್ದು ಸರಣಿ ಕ್ಲೀನ್‌ ಸ್ವೀಪ್‌ ಮಾಡುವ ನಿರೀಕ್ಷೆಯಲ್ಲಿದೆ.

click me!