
ಮುಂಬೈ(ಮಾ.19): ಐಪಿಎಲ್ ಟೂರ್ನಿಗೆ ತಂಡಗಳು ಸಜ್ಜಾಗಿದೆ. ಇನ್ನು ಕೆಲವೇ ದಿನಗಳಲ್ಲಿ 2023ರ ಐಪಿಎಲ್ ಟೂರ್ನಿ ಆರಂಭಗೊಳ್ಳುತ್ತಿದೆ.ಇದರ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ನಾಯಕ ಐಪಿಎಲ್‌ನ ಹಳೇ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. 2008ರಲ್ಲಿ ಐಪಿಎಲ್ ಆರಂಭಗೊಂಡಿತು. ಇದಕ್ಕಾಗಿ ಮೊದಲ ಬಾರಿಗ ಭಾರತದ್ಲಿ ಕ್ರಿಕೆಟಿಗರ ಹರಾಜು ಪ್ರಕ್ರಿಯೆ ನಡೆದಿತ್ತು. ಈ ವೇಳೆ ರೋಹಿತ್ ಶರ್ಮಾ ಹೆಸರು ತಡವಾಗಿ ಬಂದರೂ, ಡೆಕ್ಕನ್ ಚಾರ್ಜಸ್ ತಂಡ 4.8 ಕೋಟಿಗೆ ಖರೀದಿ ಮಾಡಿತು. ಆದರೆ ರೋಹಿತ್ ಶರ್ಮಾ ಸೋಲ್ಡ್ ಔಟ್ ಎಂದು ಕೂಗುತ್ತಿದ್ದಂತೆ ಯಾವ ಕಾರು ಖರೀದಿಸಲಿ ಅನ್ನೋ ಯೋಚನೆ ಬಿಟ್ಟು ಬೇರೇನು ತಲೆಯಲ್ಲಿ ಇರಲಿಲ್ಲ ಎಂದು ಸ್ವತಃ ರೋಹಿತ್ ಶರ್ಮಾ ಹೇಳಿದ್ದಾರೆ.
ಐಪಿಎಲ್ ಟೂರ್ನಿ (IPL 2023) ಆರಂಭಕ್ಕೂ ಕೆಲ ದಿನಗಳಿರುವಾಗಲೇ ರೋಹಿತ್ ಶರ್ಮಾ ರೋಚಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಅಂದು ನನಗೆ 20 ವರ್ಷ. ಭಾರತದಲ್ಲಿ ಹರಾಜಿನ ಕುರಿತು ಬಹುತೇಕ ಕ್ರಿಕೆಟಿಗರಿಗೆ ತಿಳಿದಿಲ್ಲ. ನನಗೂ ಹೆಚ್ಚೂ ಗೊತ್ತಿಲ್ಲ. ಹರಾಜು ಆರಂಭಗೊಂಡಿತು. ನನ್ನ ಹೆಸರು ಕೊಂಚ ತಡವಾಗಿ ಬಂದಿತ್ತು. ಒಂದೂವರೆ ಗಂಟೆ ಬಳಿಕ ನನ್ನ ಹರಾಜು ನಡೆದಿತ್ತು. ತಂಡಗಳು ಖರೀದಿಗೆ ಹರಾಜು ನಡೆಸಿತ್ತು. ಹಣ ಹೆಚ್ಚಾಗುತ್ತಿದ್ದಂತೆ ನನ್ನ ತಲೆಯಲ್ಲಿ ಯಾವ ಕಾರು ಖರೀದಿಸಲಿ ಅನ್ನೋ ಯೋಚನೆ ಬಿಟ್ಟು ಬೇರೆ ಯಾವುದೇ ಯೋಚನೆ ತಲೆಯಲ್ಲಿ ಇರಲಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ವಿಲ್ ಯು ಮ್ಯಾರಿ ಮಿ, ಅಭಿಮಾನಿಗೆ ಗುಲಾಬಿ ನೀಡಿ ಪ್ರಪೋಸ್ ಮಾಡಿದ ರೋಹಿತ್ ಶರ್ಮಾ!
ಹರಾಜು ಅಂತಿಮವಾಗಿ ಡೆಕ್ಕನ್ ಚಾರ್ಜಸ್ ತಂಡ 75,000 ಅಮೆರಿಕನ್ ಡಾಲರ್‌ಗೆ ಖರೀದಿ ಮಾಡಿತು. ನನಗೆ 75,000 ಅಮೆರಿಕನ್ ಡಾಲರ್ ಭಾರತೀಯ ರೂಪಾಯಿಯಲ್ಲಿ ಎಷ್ಟಾಗಲಿದೆ ಅನ್ನೋದೇ ಗೊತ್ತಾಗಲಿಲ್ಲ. ಎಲ್ಲಾ ಕಳೆದು 3 ರಿಂದ 3.5 ಕೋಟಿ ರೂಪಾಯಿ ಸಿಗಲಿದೆ ಎಂದು ಕೆಲವರು ಹೇಳಿದರು. ನಾನು ಸಂಪೂರ್ಣ ಖುಷಿಯಾಗಿದ್ದೆ. ಕಾರಣ ಯಾವ ಕಾರು ಖರೀದಿಸಲಿ ಅನ್ನೋ ಯೋಚನೆಯಿಂದ ಉತ್ತಮ ಕಾರು ಖರೀದಿಸಬಹುದು ಅನ್ನೋ ಯೋಚನೆ ಬಂದಿತ್ತು ಎಂದಿದ್ದಾರೆ.
3 ವರ್ಷ ಡೆಕ್ಕನ್ ಚಾರ್ಜಸ್ ತಂಡಕ್ಕೆ ಆಡಿದ ರೋಹಿತ್ ಶರ್ಮಾ, 2011ರಲ್ಲಿ ಮುಂಬೈಇಂಡಿಯನ್ಸ್ ತಂಡ 13 ಕೋಟಿ ರೂಪಾಯಿಗೆ ಖರೀದಿ ಮಾಡಿತು. ಬಳಿಕ ನಡೆದಿದ್ದೆಲ್ಲಾ ಇತಿಹಾಸ. ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಅತ್ಯಂತ ಯಶಸ್ವಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಅಂದು ಮೊದಲ ಕಾರು ಖರೀದಿಸಲು ಚಿಂತಿಸಿದ್ದ ರೋಹಿತ್ ಬಳಿ ಇದೀಗ ಹಲವು ಬಳಿ ಐಷಾರಾಮಿ ಕಾರುಗಳಿವೆ.
ತಮ್ಮ ಭಾವನ ಮದುವೆಯಲ್ಲಿ ಬಿಂದಾಸ್ ಸ್ಟೆಪ್ಸ್ ಹಾಕಿದ ಕ್ಯಾಪ್ಟನ್ ರೋಹಿತ್ ಶರ್ಮಾ..!
ಮಾರ್ಚ್ 31 ರಿಂದ 2023ರ ಐಪಿಎಲ್ ಟೂರ್ನಿ ಆರಂಭಗೊಳ್ಳುತ್ತಿದೆ. 2013, 2015, 2017, 2019 ಹಾಗೂ 2020ರಲ್ಲಿ ಮುಂಬೈ ಇಂಡಿಯನ್ಸ್ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಈ ಎಲ್ಲಾ ಟ್ರೋಫಿ ರೋಹಿತ್ ಶರ್ಮಾ ನಾಯಕತ್ವದಲ್ಲೇ ಮುಂಬೈ ಇಂಡಿಯನ್ಸ್ ಗೆದ್ದುಕೊಂಡಿದೆ. ಕಳೆದೆರಡು ವರ್ಷದಿಂದ ಟ್ರೋಫಿ ಗೆಲ್ಲದ ಮುಂಬೈ ಇಂಡಿಯನ್ಸ್ ಈ ಬಾರಿ ಮತ್ತೆ ಟ್ರೋಫಿ ಮೇಲೆ ಕಣ್ಣಿಟ್ಟಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.