
ಮುಂಬೈ(ಮಾ.07) ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮತ್ತೊಂದು ಸೋಲು. ಆದರೆ ಕಳೆದೆರಡು ಪಂದ್ಯದಂತ ಹೀನಾಯ ಸೋಲಲ್ಲ. ಈ ಬಾರಿ ಕೆಚ್ಚೆದೆಯ ಹೋರಾಟ ನೀಡಿ ಕೇವಲ 11 ರನ್‌ಗಳಿಂದ ಆರ್‌ಸಿಬಿ ವುಮೆನ್ಸ್ ಸೋಲು ಅನುಭವಿಸಿದ್ದಾರೆ. ಗುಜರಾತ್ ಜೈಂಟ್ಸ್ ನೀಡಿದ 202 ರನ್ ಟಾರ್ಗೆಟ್ ಚೇಸ್ ಮಾಡಿದ ಬೆಂಗಳೂರು ಮಹಿಳೆಯರು, 6 ವಿಕೆಟ್ ನಷ್ಟಕ್ಕೆ 190 ರನನ್ ಸಿಡಿಸಿತು. ಇದರೊಂದಿಗೆ ಗುಜರಾತ್ ಜೈಂಟ್ಸ್ ಗೆಲುವಿನ ಸಿಹಿ ಕಂಡಿದೆ. ಆದರೆ ಆರ್‌ಸಿಬಿ ಸತತ 3ನೇ ಸೋಲಿಗೆ ಗುರಿಯಾಗಿದೆ. ಅಂಕಪಟ್ಟಿಯಲ್ಲಿ ಆರ್‌ಸಿಬಿ ಕೊನೆಯ ಸ್ಥಾನಕ್ಕೆ ಜಾರಿದೆ.
ಅದೃಷ್ಠ ಪರೀಕ್ಷೆ ಪಂದ್ಯದಲ್ಲಿ ಆರ್‌ಸಿಬಿ ವುಮೆನ್ಸ್ ಲಕ್ ಬದಲಾಗಲಿಲ್ಲ. ಗುಜರಾತ್ ಜೈಂಟ್ಸ್ ನೀಡಿದ 202 ರನ್ ಟಾರ್ಗೆಟ್ ಆರ್‌ಸಿಬಿಗೆ ಕಠಿಣ ಸವಾಲು ಒಡ್ಡಿತು. ಇದಕ್ಕುತ್ತರವಾಗಿ ಆರ್‌ಸಿಬಿ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿತು. ಮೊದಲ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನೀಡಿತು. ನಾಯಕಿ ಸ್ಮೃತಿ ಮಂಧನಾ ಹಾಗೂ ಸೋಫಿಯಾ ಡಿವೈನ್ ಜೊತೆಯಾಟದಿಂದ ಉತ್ತಮ ಆರಂಭ ಪಡೆಯಿತು. ಆದರೆ ಮಂಧನಾ 18 ರನ್ ಸಿಡಿಸಿ ನಿರ್ಗಮಿದರು.
'ಹೋಳಿ ಬಣ್ಣ ಹೋಗೋದಿಲ್ವಾ..' ಎಂದು ಅಭಿಮಾನಿಗಳನ್ನು ಕೇಳಿದ ಆರ್‌ಸಿಬಿ ಸ್ಟಾರ್ ಎಲ್ಲೀಸ್!
ಸೋಫಿಯಾ ಡಿವೈನ್ ಆರ್‌ಸಿಬಿ ವುಮೆನ್ಸ್ ತಂಡಕ್ಕೆ ಆಸರೆಯಾದರು. ಎಲ್ಲಿಸ್ ಪೆರಿ ಜೊತೆ ಸೇರಿ ಇನ್ನಿಂಗ್ಸ್ ಮುಂದುವರಿಸಿದರು. ದಿಟ್ಟ ಹೋರಾಟ ನೀಡಿದ ಡಿವೈನ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಇತ್ತ ಎಲ್ಲಿಸ್ ಪೆರಿ 32 ರನ್ ಸಿಡಿಸಿ ಔಟಾದರು. 97 ರನ್‌ಗೆ ಆರ್‌ಸಿಬಿ ವುಮೆನ್ಸ್ 2 ವಿಕೆಟ್ ಕಳೆದುಕೊಂಡಿತು. ಸೋಫಿಯಾ ಅಬ್ಬರ ಆಟ ಮುಂದುವರಿಯಿತು.
ರಿಚಾ ಘೋಷ್ 10 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಆಸರೆಯಾಗಿದ್ದ ಸೋಫಿಯಾ ಡಿವೈನ್ 66 ರನ್ ಸಿಡಿಸಿ ಔಟಾದರು . ಹೀಥರ್ ನೈಟ್ ಹೋರಾಟ ಆರಂಭಿಸಿದರೆ, ಇತ್ತ ಕಾನಿಕಾ ಅಹುಜಾ 10 ರನ್ ಸಿಡಿಸಿ ಔಟಾದರು. ಪೂನಮ್ ಕೆಮ್ನಾರ್ 2 ರನ್ ಸಿಡಿಸಿ ಔಟಾದರು. ಹೀಥರ್ ನೈಟ್ ಅಜೇಯ 30 ರನ್ ಸಿಡಿಸಿದರು. ಈ ಮೂಲಕ ಆರ್‌ಸಿಬಿ 6 ವಿಕೆಟ್ ಕಳೆದುಕೊಂಡು 190 ರನ್ ಸಿಡಿಸಿತು.
ಪುಷ್ಪಾ ಸಿನಿಮಾದ ಫೇಮಸ್ ಹಾಡಿಗೆ ಬಿಂದಾಸ್ ಸ್ಟೆಪ್ಸ್ ಹಾಕಿದ ಸಾನಿಯಾ, ಯುವರಾಜ್, ಪಠಾಣ್..! ವಿಡಿಯೋ ವೈರಲ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.