
ಮುಂಬೈ(ಮಾ.07): ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಅದೃಷ್ಠ ಕೈಕೊಟ್ಟಿರುವ ರಾಯಲ್ ಚಾಲೆಂಚರ್ಸ್ ಬೆಂಗಳೂರು ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದೆ. ಎರಡೂ ತಂಡ ಗೆಲುವಿನ ಸಿಹಿ ಕಂಡಿಲ್ಲ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ವುಮೆನ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆರ್‌ಸಿಬಿ ಮಹಿಳಾ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ದಿಶಾ ಬದಲು ಪೂನಮ್ ತಂಡ ಸೇರಿಕೊಂಡಿದ್ದಾರೆ.
ಆರ್‌ಸಿಬಿ ವುಮೆನ್ಸ್ ಪ್ಲೇಯಿಂಗ್ 11
ಸ್ಮೃತಿ ಮಂಧನಾ(ನಾಯಕಿ), ಸೋಫಿಯಾ ಡಿವೈನ್, ಎಲ್ಲಿಸ್ ಪೆರಿ, ಹೀಥರ್ ನೈಟ್, ರಿಚಾ ಘೋಷ್, ಪೂನ್ ಖೆಮ್ನಾರ್, ಕಾನಿಕಾ ಅಹುಜಾ, ಶ್ರೇಯಂಕಾ ಪಾಟೀಲ್, ಮೆಗನ್ ಸ್ಕಟ್, ರೇಣುಕ ಠಾಕೂರ್ ಸಿಂಗ್, ಪ್ರೀತ್ ಬೋಸ್
ಗುಜರಾತ್ ಜೈಂಟ್ಸ್ ಪ್ಲೇಯಿಂಗ್ 11
ಸಬ್ಬಿನೇನಿ ಮೆಘನಾ, ಸೋಫಿಯಾ ಡಂಕ್ಲಿ, ಹರ್ಲಿನ್ ಡಿಯೋಲ್, ಅನ್ನಾಬೆಲ್ ಸದರ್ಲೆಂಡ್, ಸುಶ್ಮಾ ವರ್ಮಾ, ಆಶ್ಲೇ ಗಾರ್ಡ್ನರ್, ಡೈಲನ್ ಹೇಮಲತಾ, ಸ್ನೆಹ ರಾಣಾ, ಕಿಮ್ ಗಾರ್ಥ್, ಮಾನ್ಸಿ ಜೋಶಿ, ತನುಜಾ ಕನ್ವಾರ್
'ಹೋಳಿ ಬಣ್ಣ ಹೋಗೋದಿಲ್ವಾ..' ಎಂದು ಅಭಿಮಾನಿಗಳನ್ನು ಕೇಳಿದ ಆರ್‌ಸಿಬಿ ಸ್ಟಾರ್ ಎಲ್ಲೀಸ್!
ಅಂಕಪಟ್ಟಿಯಲ್ಲಿ ಆರ್‌ಸಿಬಿ ವುಮೆನ್ಸ್ 3ನೇ ಸ್ಥಾನದಲ್ಲಿದ್ದರೆ, ಗುಜರಾತ್ ಜೈಂಟ್ಸ್ ಕೊನೆ ಹಾಗೂ 4ನೇ ಸ್ಥಾನದಲ್ಲಿದೆ. ಉಭಯ ತಂಡಗಳು ತಲಾ ಎರಡೆರಡು ಪಂದ್ಯ ಆಡಿದೆ. ಎರಡರಲ್ಲೂ ಸೋಲು ಕಂಡಿದೆ. ಹೀಗಾಗಿ ಇಂದಿನ ಪಂದ್ಯ ಒಂದು ತಂಡಕ್ಕೆ ಗೆಲುವಿನ ಅದೃಷ್ಠ ಒದಗಿಸುವ ಸಾಧ್ಯತೆ ಇದೆ. ಇತ್ತ ಆರ್‌ಸಿಬಿ ವುಮೆನ್ಸ್, ಐಪಿಎಲ್ ಟೂರ್ನಿಯ ಪುರುಷರ ಆರ್‌ಸಿಬಿ ತಂಡದ ಹಾದಿಯಲ್ಲಿ ಸಾಗುತ್ತಿದೆ ಅನ್ನೋ ಮಾತಗಳು ಕೇಳಿಬರುತ್ತಿದೆ. ಈ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡಿ ಗೆಲುವಿನ ಸಂಭ್ರಮ ಆಚರಿಸಲು ಸಜ್ಜಾಗಿದೆ.
ಮೊದಲ ಪಂದ್ಯದಲ್ಲಿ ಆರ್‌ಸಿಬಿ ವುಮೆನ್ಸ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೋರಾಟ ಮಾಡಿತ್ತು. ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ ಆರ್‌ಸಿಬಿ, 223 ರನ್ ಬಿಟ್ಟುಕೊಟ್ಟಿತು. ಬೃಹತ್ ಗುರಿ ಪಡೆದ ಬೆಂಗಳೂರು ಮಹಿಳೆಯರು ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಪಲರಾದರು. 163 ರನ್ ಸಿಡಿಸಿ ಸೋಲಿಗೆ ಶರಣಾಯಿತು. ಮೊದಲ ಪಂದ್ಯದಲ್ಲಿ ಆರ್‌ಸಿಬಿ 60 ರನ್ ಹೀನಾಯ ಸೋಲು ಕಂಡಿತು. ಎರಡನೇ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿನ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿತ್ತು. ಆದರೆ ಬಲಿಷ್ಠ ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ವಿರುದ್ಧ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮತ್ತೆ ಎಡವಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಮಹಿಳೆಯರು 18.4 ಓವರ್‌ಗಳಲ್ಲಿ 155 ರನ್‌ಗೆ ಆಲೌಟ್ ಆಯಿತು. ಈ ಗುರಿಯನ್ನು ಮುಂಬೈ ಇಂಡಿಯನ್ಸ್ ಯಾವುದೇ ಆತಂಕವಿಲ್ಲದೆ ಚೇಸ್ ಮಾಡಿತು. 14.2 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಮುಂಬೈ ಇಂಡಿಯನ್ಸ್ ಗುರಿ ತಲುುಪಿತು. ಎರಡನೇ ಪಂದ್ಯದಲ್ಲೂ ಆರ್‌ಸಿಬಿ 9 ವಿಕೆಟ್ ಹೀನಾಯ ಸೋಲು ಕಂಡಿತು.
WPL 2023: ಹೋಳಿ ಬಣ್ಣದಲ್ಲಿ ಮಿಂದೆದ್ದ ಆರ್‌ಸಿಬಿ ಮಹಿಳೆಯರು!
ಸತತ 2 ಸೋಲಿನಿಂದ ಕಂಗೆಟ್ಟಿರವ ಆರ್‌ಸಿಬಿ ಇಂದು ಗೆಲುವಿನ ವಿಶ್ವಾಸದಲ್ಲಿದೆ. ಇತ್ತ ಗುಜರಾತ್ ಜೈಂಟ್ಸ್ ತನ್ನ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಕೈಚೆಲ್ಲಿತು. ಎರಡನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನ ಎದುರಿಸಿತು. ಆದರೆ ಗೆಲುವು ಸಿಗಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.