ಸೋಲಿನಿಂದ ಆರಂಭಿಸಿ ಸೋಲಿನೊಂದಿಗೆ ಆರ್‌ಸಿಬಿ ಜರ್ನಿ ಅಂತ್ಯ, ಡುಪ್ಲೆಸಿಸ್ ತಂಡದತ್ತ ಎಲ್ಲರ ಚಿತ್ತ!

Published : Mar 21, 2023, 08:53 PM IST
ಸೋಲಿನಿಂದ ಆರಂಭಿಸಿ ಸೋಲಿನೊಂದಿಗೆ ಆರ್‌ಸಿಬಿ ಜರ್ನಿ ಅಂತ್ಯ, ಡುಪ್ಲೆಸಿಸ್ ತಂಡದತ್ತ ಎಲ್ಲರ ಚಿತ್ತ!

ಸಾರಾಂಶ

ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ವುಮೆನ್ಸ್ ಜರ್ನಿ ಅಂತ್ಯಗೊಂಡಿದೆ. ಬೇಸರ ಎಂದರೆ ಸೋಲಿನೊಂದಿಗೆ ಟೂರ್ನಿ ಆರಂಭಿಸಿ ಇದೀಗ ಸೋಲಿನೊಂದಿಗೆ ಟೂರ್ನಿಗೆ ಗುಡ್ ಬೈ ಹೇಳಿದೆ. ಮಹಿಳೆಯ ಹೋರಾಟ ಮುಗಿದಿದೆ. ಇದೀಗ ಐಪಿಎಲ್ 2023ರಲ್ಲಿ ಆರ್‌ಸಿಬಿ ತಂಡದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಬಾರಿ ಆರ್‌ಸಿಬಿ ಟ್ರೋಫಿ ಗೆಲ್ಲಲು ಒಂದು ಅವಕಾಶವಿದೆ.

ಮುಂಬೈ(ಮಾ.21): ಇದೇ ಮೊದಲ ಬಾರಿಗೆ ಆಯೋಜನಗೊಂಡಿರುವ ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿ ರೋಚಕ ಘಟ್ಟ ತಲುಪಿದೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಹೋರಾಟ ಅಂತ್ಯಗೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಪಯಣ ಆರಂಭಿಸಿದ ಆರ್‌ಸಿಬಿ ವುಮೆನ್ಸ್, ಮುಂಬೈ ಇಂಡಿಯನ್ಸ್ ಸೋಲಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದೆ. ಟೂರ್ನಿಯಲ್ಲಿ ಕೇವಲ 2 ಗೆಲುವು ದಾಖಲಿಸಿ ನಿರಾಸೆ ಅನುಭವಿಸಿದೆ. ಇಂದು ನಡೆದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಆರ್‌ಸಿಬಿ, ಮುಂಬೈ ಇಂಡಿಯನ್ಸ್ ವಿರುದ್ದ ಮುಗ್ಗರಿಸಿದೆ. ಮಹಿಳಾ ಆರ್‌ಸಿಬಿ ಹೋರಾಟ ಮುಗಿದಿದೆ. ಹೀಗಾಗಿ ಇದೀಗ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. 

ಸತತ ಸೋಲಿನಿಂದ ಕಂಗೆಟ್ಟಿದ್ದ ಆರ್‌ಸಿಬಿ ವುಮೆನ್ಸ್ ಕೊನೆ ಹಂತದಲ್ಲಿ 2 ಗೆಲುವು ದಾಖಲಿಸಿತ್ತು. ಆದರೆ ಪ್ಲೇ ಆಫ್ ಹಂತಕ್ಕೇರಲು ಅದು ಸಾಕಾಗಲಿಲ್ಲ. ಇಂದು ಮುಂಬೈ ಇಂಡಿಯನ್ಸ್ ವಿರುದ್ದ ಗೆಲುವು ದಾಖಲಿಸಿ ಟೂರ್ನಿಗೆ ಗುಡ್ ಬೈ ಹೇಳುವ ಪ್ರಯತ್ನ ಕೂಡ ಕೈಗೂಡಲಿಲ್ಲ. ಇಂದು ಆರ್‌ಸಿಬಿಗೆ ಮತ್ತೆ ಬೌಲಿಂಗ್ ಹಾಗೂ ಬ್ಯಾಟಿಂಗ್ ಕೈಕೊಟ್ಟಿತು. ಇಂದೂ ಕೂಡ ಆರ್‌ಸಿಬಿಯ ಯಾರೂ ಅಬ್ಬರಿಸಲಿಲ್ಲ.

ರನ್ನಿಂಗ್ ಬಿಟ್ವೀನ್ ವಿಕೆಟ್‌ನಲ್ಲಿ ಧೋನಿ ಬೆಸ್ಟ್, ಪೂಜಾರ ಕಳಪೆ, ಕ್ರಿಕೆಟ್ ಸೀಕ್ರೆಟ್ ಬಿಚ್ಚಿಟ್ಟ ಕೊಹ್ಲಿ!

ನಾಯಕಿ ಸ್ಮೃತಿ ಮಂಧನಾ 24 ರನ್ ಸಿಡಿಸಿದರೆ, ಎಲ್ಲಿಸ್ ಪೆರಿ 29, ರಿಚಾ ಘೋಷ್ 29 ರನ್ ಕಾಣಿಕೆ ನೀಡಿದ್ದಾರೆ. ಇದು ತಂಡದ ಪರ ದಾಖಲಾದ ವೈಯುಕ್ತಿಕ ಗರಿಷ್ಠ ಮೊತ್ತ. ಇನ್ನುಳಿದವರಿಂದ ರನ್ ಹರಿದು ಬರಲಿಲ್ಲ. ಹೀಗಾಗಿ ಆರ್‌ಸಿಬಿ ವುಮೆನ್ಸ್ 9 ವಿಕೆಟ್ ನಷ್ಟಕ್ಕೆ 125 ರನ್ ಸಿಡಿಸಿತು. ಬಲಿಷ್ಠ ಮುಂಬೈ ವಿರುದ್ದ ಅಬ್ಬರಿಸಲು ಸಾಧ್ಯವಾಗದೆ ಸುಲಭ ಮೊತ್ತ ಟಾರ್ಗೆಟ್ ನೀಡಿತು.

ಕಡಿಮೆ ಮೊತ್ತ ಡಿಫೆಂಡ್ ಮಾಡಿಕೊಳ್ಳಲು ಆರ್‌ಸಿಬಿ ಇನ್ನಿಲ್ಲದ ಪ್ರಯತ್ನ ಮಾಡಿತು. ಮುಂಬೈ ಇಂಡಿಯನ್ಸ್ ತಂಡಕ್ಕೂ ಸುಲಭ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ. ಸುಲಭ ಗುರಿ ಚೇಸ್ ಮಾಡಲು ಮುಂಬೈ ಇಂಡಿಯನ್ಸ್ 16.3 ಓವರ್ ಬಳಸಿಕೊಂಡು 6 ವಿಕೆಟ್ ಕಳೆದುಕೊಂಡಿತು. 4 ವಿಕೆಟ್ ಗೆಲುವು ದಾಖಲಿಸಿದ ಮುಂಬೈ ಗೆಲುವಿನ ಸಂಭ್ರಮ ಆಚರಿಸಿತು.

8 ಲೀಗ್ ಪಂದ್ಯದಲ್ಲಿ ಆರ್‌ಸಿಬಿ ವುಮೆನ್ಸ್ 2 ಗೆಲುವು ಮಾತ್ರ ದಾಖಲಿಸಿದೆ. ಇನ್ನುಳಿದ 6 ಪಂದ್ಯದಲ್ಲಿ ಮುಗ್ಗರಿಸಿದೆ. ಆದರೆ ಅಂಕಪಟ್ಟಿಯಲ್ಲಿ ಗುಜರಾತ್ ಜೈಂಟ್ಸ್‌ಗಿಂತ ಮೇಲಿನ ಸ್ಥಾನ ಅಂದರೆ 4ನೇ ಸ್ಥಾನ ಪಡೆದುಕೊಂಡಿದೆ. ಗುಜರಾತ್ ಜೈಂಟ್ಸ್ ಕೂಡ 2 ಗೆಲುವು ದಾಖಲಿಸಿದೆ. ಆದರೆ ನೆಟ್ ರನ್‌ರೇಟ್‌ ಮೂಲಕ ಆರ್‌ಸಿಬಿ 4ನೇ ಸ್ಥಾನ ಪಡೆದಿದೆ.

IPL 2023: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಬಲಿಷ್ಠ ಆಡುವ ಹನ್ನೊಂದರ ಬಳಗ ಆಯ್ಕೆ ಮಾಡಿದ ಆರ್ ಅಶ್ವಿನ್..!

ಆರ್‌ಸಿಬಿ ವುಮೆನ್ಸ್ ಹೋರಾಟ ಅಂತ್ಯಗೊಂಡಿದೆ. ಇದೀಗ ಅಭಿಮಾನಿಗಳು ಐಪಿಎಲ್ 2023 ಟೂರ್ನಿಯತ್ತ ಚಿತ್ತ ಹರಿಸಿದ್ದಾರೆ. ಟ್ರೋಫಿ ಕೊರತೆಯನ್ನು ಈ ಬಾರಿ ನೀಗಿಸಿಕೊಳ್ಳಲಿದ್ದಾರೆ ಅನ್ನೋ ವಿಶ್ವಾಸ ಅಭಿಮಾನಿಗಳಲ್ಲಿದೆ.ಆರ್‌ಸಿಬಿ ತನ್ನ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಿದರೆ ಈ ಬಾರಿ ಟ್ರೋಫಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana
ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana