WPL 2023 5 ಪಂದ್ಯ ಸೋತ ಆರ್‌ಸಿಬಿ ವುಮೆನ್ಸ್‌ಗಿದೆ ಪ್ಲೇ ಆಫ್ ಚಾನ್ಸ್, ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ!

Published : Mar 14, 2023, 04:57 PM IST
WPL 2023 5 ಪಂದ್ಯ ಸೋತ ಆರ್‌ಸಿಬಿ ವುಮೆನ್ಸ್‌ಗಿದೆ ಪ್ಲೇ ಆಫ್ ಚಾನ್ಸ್, ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ!

ಸಾರಾಂಶ

ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ವುಮೆನ್ಸ್  ಒಂದಲ್ಲ, ಎರಡಲ್ಲ ಸತತ 5 ಪಂದ್ಯದಲ್ಲಿ ಮುಗ್ಗರಿಸಿ ಹಿಗ್ಗಾ ಮುಗ್ಗಾ ಟ್ರೋಲ್ ಎದುರಿಸುತ್ತಿದೆ. ಆದರೆ ಅಭಿಮಾನಿಗಳು ಕೈಚೆಲ್ಲಿ ಕೂರಬೇಕಾದ ಪರಿಸ್ಥಿತಿ ಇಲ್ಲ. ಕಾರಣ 5 ಪಂದ್ಯ ಮುಗ್ಗರಿಸಿದರೂ ಪ್ಲೇ ಆಫ್ ಹಂತಕ್ಕೇರಲು ಆರ್‌ಸಿಬಿ ಮಹಿಳಾ ತಂಡಕ್ಕೆ ಅವಕಾಶವಿದೆ. ಅದು ಹೇಗೆ? 

ಮುಂಬೈ(ಮಾ.14): ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರಿಸ್ಥಿತಿ ಹೀನಾಯವಾಗಿದೆ. ಈಗಾಗಲೇ 5 ಪಂದ್ಯ ಆಡಿದರೂ ಒಂದೂ ಗೆಲುವು ದಾಖಲಿಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ವುಮೆನ್ಸ್ ಟ್ರೋಲ್ ಮಾಡಲಾಗುತ್ತಿದೆ. ಮೀಮ್ಸ್‌ಗಳು ಹರಿದಾಡುತ್ತಿದೆ. ಟೂರ್ನಿ ಅರ್ಧಭಾಗ ತಲುಪಿದರೂ ಆರ್‌ಸಿಬಿ ಇನ್ನೂ ಗೆಲುವಿನ ಸಿಹಿ ಕಂಡಿಲ್ಲ ಅನ್ನೋ ಕೊರಗು ಅಭಿಮಾನಿಗಳನ್ನು ಕಾಡುತ್ತಿದೆ. ಇದೀಗ ಆರ್‌ಸಿಬಿ ಅಭಿಮಾನಿಗಳಿಗೆ ಸಮಾಧಾನ ಪಟ್ಟುಕೊಳ್ಳುವ ಸುದ್ದಿ ಇದೆ. ಕಾರಣ 5 ಪಂದ್ಯ ಸೋತರೂ ಆರ್‌ಸಿಬಿ ಮಹಿಳಾ ತಂಡಕ್ಕೆ ಪ್ಲೇ ಆಫ್ ಹಂತಕ್ಕೇರುವ ಕೊನೆಯ ಅವಕಾಶವಿದೆ. ಆದರೆ ಈ ಪ್ರಯತ್ನಕ್ಕೆ ಆರ್‌ಸಿಬಿ ವುಮೆನ್ಸ್ ಮನಸ್ಸು ಮಾಡಬೇಕು. ಇತರ ತಂಡದ ಫಲಿಶಾಂಶ ಕೈಹಿಡಿಯಬೇಕು.

ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಒಟ್ಟು 5 ತಂಡಗಳಿವೆ. ಇದರಲ್ಲಿ ಅಗ್ರ 3 ಸ್ಥಾನ ಪಡೆಯುವ ತಂಡಗಳು ಪ್ಲೇ ಆಫ್ ಹಂತಕ್ಕೆ ಪ್ರವೇಶ ಪಡೆಯಲಿದೆ. ಸದ್ಯ ಮುಂಬೈ ಇಂಡಿಯನ್ಸ್ ಮೊದಲ ಸ್ಥಾನದಲ್ಲಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ 2ನೇ ಸ್ಥಾನದಲ್ಲಿದೆ. ಇನ್ನು ಯುಪಿ ವಾರಿಯರ್ಸ್ 3 ಮತ್ತು ಗುಜರಾತ್ ಜೈಂಟ್ಸ್ 4ನೇ ಸ್ಥಾನದಲ್ಲಿದೆ. ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಮೊದಲ ಸ್ಥಾನಕ್ಕೆ ತೀವ್ರ ಪೈಪೋಟಿ ಶುರುವಾಗಿದೆ. 

'ಬಂದವ್ರಲ್ಲಾ ಬಾರಿಸಿ ಹೋಗ್ತಿದ್ದಾರೆ, ಆರ್‌ಸಿಬಿ ಏನು ದೇವಸ್ಥಾನದ ಗಂಟೆನಾ..' ಮೀಮ್ಸ್‌ ಮೂಲಕ ಆರ್‌ಸಿಬಿ ಕೆಣಕಿದ ಫ್ಯಾನ್ಸ್‌!

ಆರ್‌ಸಿಬಿ ಪ್ಲೇ ಆಫ್ ಲೆಕ್ಕಾಚಾರ
ಆರ್‌ಸಿಬಿ ವುಮೆನ್ಸ್ ಪ್ಲೇಆಫ್ ಹಂತಕ್ಕೇರಲು ಹರಸಾವವನ್ನೇ ಮಾಡಬೇಕಿದೆ. ಆರ್‌ಸಿಬಿ ಇನ್ನುಳಿದ ಎಲ್ಲಾ ಮೂರು ಪಂದ್ಯಗಳನ್ನು ಗೆಲ್ಲಬೇಕು.ಕೇವಲ ಆರ್‌ಸಿಬಿ ಗೆದ್ದರೆ ಪ್ಲೇ ಆಫ್ ಅವಾಕಾಶ ಸಿಗುವುದಿಲ್ಲ. ಮೊದಲೆರಡು ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು, 3 ಮತ್ತು ನಾಲ್ಕನೇ ಸ್ಥಾನದಲ್ಲಿರುವ ಯುಪಿ ವಾರಿಯರ್ಸ್ ಹಾಗೂ ಗುಜರಾಂಟ್ ಜೈಂಟ್ಸ್ ವಿರುದ್ಧ ಇನ್ನುಳಿದ ಎಲ್ಲಾ ಪಂದ್ಯದಲ್ಲಿ ಗೆಲುವು ಸಾಧಿಸಿಬೇಕು. ಇಷ್ಟಾದರೂ ಪ್ಲೇ ಆಫ್ ಕನಸು ಈಡೇರಲ್ಲ. 4ನೇ ಸ್ಥಾನದಲ್ಲಿರುವ ಗುಜರಾಜ್ ಜೈಂಟ್ಸ್, 3ನೇ ಸ್ಥಾನದಲ್ಲಿರುವ ಯುಪಿ ವಾರಿಯರ್ಸ್ ವಿರುದ್ದ ಗೆಲುವು ದಾಖಲಿಸಬೇಕು. ಹೀಗಾದರೆ ಆರ್‌ಸಿಬಿ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದು ಪ್ಲೇ ಆಫ್ ಹಂತ ಪ್ರವೇಶಿಸಲಿದೆ.

ಆದರೆ ಸದ್ಯ ಆರ್‌ಸಿಬಿ ಪ್ರದರ್ಶನ ನೋಡಿದರೆ ಪ್ಲೇ ಆಫ್ ಸಾಧ್ಯತೆ ತೀರಾ ಕಡಿಮೆ ಇದೆ. ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಯುಪಿ ವಾರಿಯರ್ಸ್ ಪ್ಲೇ ಆಫ್ ಪ್ರವೇಶ ಪಡೆಯುವ ಸಾಧ್ಯತೆ ಗೋಜರಿಸುತ್ತದೆ. ಇದರಲ್ಲೇ ನೇರವಾಗಿ ಫೈನಲ್ ಪ್ರವೇಶಿಸುವ ತಂಡ ಯಾವುದು ಅನ್ನೋ ಕುತೂಹಲ ಇದೀಗ ಮನೆ ಮಾಡಿದೆ.

'ಏಕ್‌ ತೇರಾ, ಏಕ್‌ ಮೇರಾ..' ಅಕ್ಷಯ್‌ ಕುಮಾರ್‌ ಚಿತ್ರದ ಹಾಸ್ಯ ದೃಶ್ಯ ಮರುಸೃಷ್ಟಿಸಿದ ಅಶ್ವಿನ್‌-ಜಡೇಜಾ!

ನಿನ್ನೆ ನಡೆದ ಪಂದ್ಯದಲ್ಲೂ ಆರ್‌ಸಿಬಿ ಮುಗ್ಗರಿಸುವ ಮೂಲಕ ಈ ಪರಿಸ್ಥಿತಿಗೆ ತಲುಪಿದೆ.  ಚೊಚ್ಚಲ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ನಲ್ಲಿ ಆರ್‌ಸಿಬಿ ಸತತ 5ನೇ ಸೋಲು ಅನುಭವಿಸಿ, ಪ್ಲೇ-ಆಫ್‌ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ. ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ 6 ವಿಕೆಟ್‌ ಸೋಲು ಅನುಭವಿಸಿತು. 4ನೇ ಜಯೊಂದಿಗೆ ಡೆಲ್ಲಿ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಕಾಯ್ದುಕೊಂಡಿದ್ದು, ಪ್ಲೇ-ಆಫ್‌ಗೇರುವುದು ಬಹುತೇಕ ಖಚಿತ ಎನಿಸಿದೆ.

ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ಎಲೈಸಿ ಪೆರ್ರಿ(67) ಹಾಗೂ ರಿಚಾ ಘೋಷ್‌(37)ರ ಹೋರಾಟದ ನೆರವಿನಿಂದ 20 ಓವರಲ್ಲಿ 4 ವಿಕೆಟ್‌ಗೆ 150 ರನ್‌ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಡೆಲ್ಲಿ 2 ಎಸೆತ ಬಾಕಿ ಇರುವಂತೆ ಜಯಿಸಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ