ಮಹಿಳಾ ಐಪಿಎಲ್ ಅದ್ಧೂರಿ ವರ್ಣರಂಜಿತ ಕಾರ್ಯಕ್ರಮ, ಕೃತಿ, ಕಿಯಾರ ಮೋಡಿಗೆ ಫ್ಯಾನ್ಸ್ ಫಿದಾ!

Published : Mar 04, 2023, 08:17 PM IST
ಮಹಿಳಾ ಐಪಿಎಲ್ ಅದ್ಧೂರಿ ವರ್ಣರಂಜಿತ ಕಾರ್ಯಕ್ರಮ, ಕೃತಿ, ಕಿಯಾರ ಮೋಡಿಗೆ ಫ್ಯಾನ್ಸ್ ಫಿದಾ!

ಸಾರಾಂಶ

ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿ ಅದ್ಧೂರಿಯಾಗಿ ಆರಂಭಗೊಂಡಿದೆ. ವರ್ಣರಂಜಿತ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಕಿಯಾರ, ಕೃತಿ ಹಾಗೂ ಕೆನಡಾ ಸಿಂಗರ್ ಎಪಿ ದಿಲ್ಲೋನ್ ರಸಂಜೆ ಅಭಿಮಾನಿಗಳಿಗೆ ಮುದ ನೀಡಿತು. ಅದ್ಧೂರಿ ವರ್ಣರಂಜಿತ ಕಾರ್ಯಕ್ರಮದ ವಿಡಿಯೋ ಇಲ್ಲಿದೆ.

ಮಂಬೈ(ಮಾ.04): ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿ ಅದ್ಧೂರಿಯಾಗಿ ಆರಂಭಗೊಂಡಿದೆ. ವರ್ಣರಂಜಿ ಕಾರ್ಯಕ್ರಮ ನೋಡುಗರ ಮನಸೂರೆ ಗೊಂಡಿದೆ. ಬಾಲಿವುಡ್ ನಟಿ ಕೃತಿ ಸನನ್, ಕಿಯಾರ ಅಡ್ವಾಣಿ ಹಾಗೂ ಕೆನಡ ಸಿಂಗರ್ ಎಪಿ ದಿಲ್ಲೋನ್ ಕಾರ್ಯಕ್ರಮಗಳು ಮಹಿಳಾ ಐಪಿಎಲ್ ಟೂರ್ನಿ ಕಳೆ ಹೆಚ್ಚಿಸಿತು.ಕಿಯಾರ ಅಡ್ವಾಣಿ ತಮ್ಮ ಅದ್ಧೂರಿ ಡ್ಯಾನ್ಸ್ ಪರ್ಫಾಮೆನ್ಸ್ ನೊಂದಿಗೆ ಎಲ್ಲರನ್ನು ರಂಜಿಸಿದರು. ಮುಂಬೈನ ಡಿವೈ ಪಾಟೀಲ್  ಕ್ರೀಡಾಂಗಣದಲ್ಲಿ ನಡೆದ ಈ ಅದ್ಧೂರಿ ಸಮಾರಂಭ ಹಲವು ವಿಶೇಷತೆಗಳಿಗೂ ಸಾಕ್ಷಿಯಾಯಿತು.

ವರ್ಣರಂಜಿತ ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಈ ವೇದಿಕೆಯಲ್ಲಿ ಕಿಯಾರ ಹಾಗೂ ಬಳಗದ ಡ್ಯಾನ್ಸ್ ಮಹಿಳಾ ಐಪಿಎಲ್ ಅಭಿಮಾನಿಗಳಲ್ಲಿ ಜೋಶ್ ತುಂಬಿತು. ಕಿಯಾರ ಡ್ಯಾನ್ಸ್ ಬಳಿಕ ಕೃತಿ ಸನನ್ ಹಾಗೂ ಬಳಗ ಮತ್ತೊಂದು ಹೈ ಎನರ್ಜಿಟಿಕ್ ಪರ್ಫಾಮೆನ್ಸ್ ಮೂಲಕ ಎಲ್ಲರನ್ನು ರಂಜಿಸಿದರು. 

 

 

WPL 2023 ಮಹಿಳಾ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್!

ಬಾಲಿವುಡ್ ಡ್ಯಾನ್ಸ್ ಪರ್ಫಾಮೆನ್ಸ್ ಬೆನ್ನಲ್ಲೇ ಎಪಿ ದಿಲ್ಲೋನ್ ಹಾಡು ಅಭಿಮಾನಿಗಳನ್ನು ನಿಂತಲ್ಲೆ ಕುಣಿಸಿತು. ಪಂಜಾಬಿ ಗಾಯನದ ಮೂಲಕ ದಿಲ್ಲೋನ್ ರಂಜಿಸಿದರು. ದಿಲ್ಲೋನ್ ಹಾಡಿಗೆ ಗ್ಯಾಲರಿಯಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿದರು. 

ವರ್ಣರಂಜಿತ ಕಾರ್ಯಕ್ರಮದ ಬಳಿಕ ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿ ಟ್ರೋಫಿ ಅನಾವರಣಗೊಳಿಸಲಾಯಿತು. ಗುಜರಾತ್ ಜೈಂಟ್ಸ್ ತಂಡದ ನಾಯಕಿ ಬೆತ್ ಮೂನಿ, ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮಮನ್‌ಪ್ರೀತ್ ಕೌರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂಧನಾ, ಡೆಲ್ಲಿ ಕ್ಯಾಪಿಲ್ಸ್ ಮಹಿಳಾ ನಾಯಕಿ ಮೆಗ್ ಲ್ಯಾನಿಂಗ್ ಹಾಗೂ ಯುಪಿ ವಾರಿಯರ್ಸ್ ಮಹಿಳಾ ನಾಯಕಿ ಅಲಿಸಾ ಹೀಲೆ  ಮಹಿಳಾ ಟ್ರೋಫಿ ಅನಾವರಣಗೊಳಿಸಿದರು. ಟ್ರೋಫಿ ಅನಾವರಣಗೊಳ್ಳುತ್ತಿದ್ದಂತೆ ಪಟಾಕಿಗಳು ಆಗಸದಲ್ಲಿ ಚಿತ್ತಾರ ಮೂಡಿಸಿತು. 

ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿ ಪುರುಷರ ಐಪಿಎಲ್ ಟೂರ್ನಿಯಂತೆ ಅದ್ಧೂರಿ ಆರಂಭ ಕಂಡಿದೆ. ನಾಲ್ಕು ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ, ಮುಂಬೈ ಇಂಡಿಯನ್ಸ್ ಮಹಿಳಾ ತಂಡ, ಯುಪಿ ವಾರಿಯರ್ಸ್ ಮಹಿಳಾ ತಂಡ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ ಹೋರಾಟ ನಡೆಸಲಿದೆ. 

'ಕೆಟ್ಟ ಟೈಮ್‌ನಲ್ಲೂ ವಿನ್‌ ಆಗ್ತಾರಲ್ಲ, ಅವರೇ ಚಾಂಪಿಯನ್ಸ್‌..' ಆರ್‌ಸಿಬಿಯಲ್ಲಿ ಆರಂಭವಾಯ್ತು ಸಾನಿಯಾ ಸ್ಫೂರ್ತಿ!

ಇಂದಿನಿಂದ ಆರಂಭಗೊಂಡಿರುವ ಮಹಿಳಾ ಟೂರ್ನಿ, ಮಾರ್ಚ್ 26ರ ಫೈನಲ್ ಪಂದ್ಯದ ಮೂಲಕ ಅಂತ್ಯಗೊಳ್ಳಲಿದೆ. 20 ಲೀಗ್ ಪಂದ್ಯಗಳು ನಡೆಯಲಿದೆ. ಎಲ್ಲಾ ಪಂದ್ಯಗಳು ಮುಂಬೈನಲ್ಲೇ ನಡೆಯಲಿದೆ. ಡಿವೈ ಪಾಟೀಲ್ ಹಾಗೂ ಬ್ರೇಬೋರ್ನ್ ಕ್ರೀಡಾಂಗಣದಲ್ಲಿ ಮಹಿಳಾ ಐಪಿಎಲ್ ಟೂರ್ನಿ ಆಯೋಜಿಸಲಾಗಿದೆ. ಡಬಲ್ ಹೆಡ್ಡರ್ ಪಂದ್ಯದ ದಿನ ಮಧ್ಯಾಹ್ನ 3.30ಕ್ಕೆ ಪಂದ್ಯ ಆರಂಭಗೊಳ್ಳಲಿದೆ. ಇನ್ನು ಒಂದೇ ಮ್ಯಾಚ್ ದಿನ 7.30ಕ್ಕೆ ಪಂದ್ಯ ಆರಂಭಗೊಳ್ಳಲಿದೆ.

ಅದ್ಧೂರಿ ವರ್ಣರಂಜಿತ ಸಮಾರಂಭದ ಬಳಿಕ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಇಂಡಿಯನ್ಸ್ ನಡುವಿನ ಮೊದಲ ಪಂದ್ಯ ಆರಂಭಗೊಂಡಿತು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

India vs New Zealand: ಕೊಹ್ಲಿ ಕ್ಲಾಸಿಕ್‌ ಇನ್ನಿಂಗ್ಸ್‌, ನ್ಯೂಜಿಲೆಂಡ್‌ ವಿರುದ್ಧ 4 ವಿಕೆಟ್‌ ಗೆಲುವು ಕಂಡ ಟೀಮ್‌ ಇಂಡಿಯಾ
ಯಶ್‌ ದಯಾಳ್‌ ಬಳಿಕ ಮತ್ತೊಬ್ಬ ಆರ್‌ಸಿಬಿ ಪ್ಲೇಯರ್‌ ಸೋಶಿಯಲ್‌ ಮೀಡಿಯಾ ರಂಗಿನಾಟ ಬಯಲು..!