ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡಕ್ಕೆ ಹಿನ್ನಡೆಯಾಗಿದೆ. ಆಸೀಸ್‌ನ ಮೊದಲ ಇನ್ನಿಂಗ್ಸ್ ಮೊತ್ತ 469 ರನ್‌ಗೆ ಉತ್ತರವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 2ನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್‌ಗೆ 151 ರನ್ ಬಾರಿಸಿದೆ.
ಲಂಡನ್ (ಜೂ.8): ಆಸ್ಟ್ರೇಲಿಯಾ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಿಗಿ ಮಾಡಿದೆ. ಟ್ರಾವಿಸ್ ಹೆಡ್ ಹಾಗೂ ಸ್ಟೀವನ್ ಸ್ಮಿತ್ ನಡುವಿನ 285 ರನ್‌ಗಳ ನಾಲ್ಕನೇ ವಿಕೆಟ್ ಜೊತೆಯಾಟದ ಬಳಿಕ ಆಸ್ಟ್ರೇಲಿಯಾ ತಂಡದ ವೇಗಿಗಳು ಭಾರತದ ಬ್ಯಾಟಿಂಗ್ ವಿಭಾಗವನ್ನು ಧ್ವಂಸ ಮಾಡಿದ್ದಾರೆ. ಒಂದೆಡೆ ದೊಡ್ಡ ಮೊತ್ತದ ಹಾದಿಯಲ್ಲಿದ್ದ ಆಸ್ಟ್ರೇಲಿಯಾ ತಂಡದ ಕೊನೆಯ ಏಳು ವಿಕೆಟ್‌ಗಳನ್ನು 108 ರನ್‌ಗೆ ಉರುಳಿಸಿತಾದರೂ, ಆಸೀಸ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 469 ರನ್ ಬಾರಿಸಲು ಯಶಸ್ವಿಯಾಗಿತ್ತು. ಆದರೆ, ಭಾರತ ತಂಡಕ್ಕೆ ಟ್ರಾವಿಸ್ ಹೆಡ್ ಹಾಗೂ ಸ್ಟೀವನ್ ಸ್ಮಿತ್ ಆಡಿದಂಥ ದೊಡ್ಡ ಜೊತೆಯಾಟ ಸಿಗಲಿಲ್ಲ. ಇದರಿಂದಾಗಿ ರೋಹಿತ್ ಶರ್ಮ ನೇತೃತ್ವದ ಟೀಮ್ ಇಂಡಿಯಾ 2ನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್‌ಗೆ 151 ರನ್ ಬಾರಿಸಿದ್ದು, ಇನ್ನೂ 318 ರನ್‌ಗಳ ಮೊದಲ ಇನ್ನಿಂಗ್ಸ್ ಹಿನ್ನಡೆಯಲ್ಲಿದೆ.
ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಆಲೌಟ್ ಮಾಡಿದ ಬಳಿಕ ಬ್ಯಾಟಿಂಗ್ ಆರಂಭಿಸಿದ ಭಾರತ ವಿಶ್ವಾಸದಿಂದ ಕೆಲವು ಎಸೆತಗಳನ್ನು ಎದುರಿಸಿರು. ನಾಯಕ ರೋಹಿತ್ ಶರ್ಮ ಹಾಗೂ ಶುಭ್‌ಮನ್ ಗಿಲ್ ನಿಗದಿತ ಸಮಯದಲ್ಲಿ ಬೌಂಡರಿಗಳನ್ನು ಬಾರಿಸುವ ಮೂಲಕ ಸ್ಕೋರ್‌ಬೋರ್ಡ್ ಪ್ರಗತಿಯಲ್ಲಿರಿಸಿದ್ದರು. ಆದರೆ, ಒಮ್ಮೆ ಈ ಆರಂಭಿಕರನ್ನು ಪೆವಿಲಿಯನ್‌ಗಟ್ಟಲು ಯಶಸ್ವಿಯಾದ ಬಳಿಕ ಆಸೀಸ್ ಬೌಲರ್‌ಗಳು ಭಾರತದ ಮೇಲೆ ಪಾರಮ್ಯ ಸಾಧಿಸಲು ಯಶಸ್ವಿಯಾದರು. ರೋಹಿತ್ ಶರ್ಮ, ಪ್ಯಾಟ್ ಕಮ್ಮಿನ್ಸ್‌ಗೆ ಎಲ್‌ಬಿಯಾಗಿ ನಿರ್ಗಮಿಸಿದರೆ, ಶುಭ್‌ಮನ್ ಗಿಲ್, ಸ್ಕಾಟ್ ಬೋಲಾಂಡ್ ಎಸೆತದಲ್ಲಿ ಬೌಲ್ಡ್ ಆಗಿ ಹೊರನಡೆದರು. ಆ ಬಳಿಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ ಬೌಲರ್‌ಗಳ ಕೆಲವು ಅಪಾಯಕಾರಿ ಎಸೆತಗಳನ್ನು ಎದುರಿಸಿದ್ದರು. ಇದರಿಂದಾಗಿ ಚಹಾ ವಿರಾಮದವರೆಗೆ ಭಾರತ ಮತ್ತೆ ಯಾವುದೇ ಅಪಾಯ ಎದುರಿಸಿರಲಿಲ್ಲ.
ಅಂತಿಮ ಅವಧಿಯ ಆಟದಲ್ಲಿ ಪೂಜಾರ, ಆಸೀಸ್‌ನ ಬೌಲರ್‌ಗಳನ್ನು ಎಚ್ಚರಿಕೆಯಿಂದ ಎದುರಿಸಿ ರನ್‌ಗಳನ್ನು ಬಾರಿಸಿದರು. ಸ್ಕಾಟ್ ಬೋಲಾಂಡ್ ಹಾಗೂ ಕ್ಯಾಮರೂನ್ ಗ್ರೀನ್ ಎಸೆತಗಳನ್ನು ಎಚ್ಚರಿಕೆಯಿಂದ ಆಟವಾಡಿದರು. ಆದರೆ, ಶುಭ್‌ಮನ್ ಗಿಲ್ ರೀತಿಯಲ್ಲಿ ಗ್ರೀನ್ ಎಸೆತವನ್ನು ಕೆಟ್ಟದಾಗಿ ಅಂದಾಜು ಮಾಡಿದ ಪೂಜಾರ, ಬೌಲ್ಡ್ ಆಗಿ ನಿರ್ಗಮಿಸಿದರು. ಇದರ ಬೆನ್ನಲ್ಲಿಯೇ 32 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ 14 ರನ್ ಬಾರಿಸಿದ್ದ ವಿರಾಟ್ ಕೊಹ್ಲಿ, ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಇದರಿಂದಾಗಿ ಟೀಮ್ ಇಂಡಿಯಾ 71 ರನ್‌ಗಳಿಗೆ 4 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ನಡುವೆ ಅಜಿಂಕ್ಯ ರಹಾನೆ, ಪ್ಯಾಟ್ ಕಮ್ಮಿನಬ್ಸ್ ಎಸೆತದಲ್ಲಿ ಕ್ಲಿಯರ್ ಎಲ್‌ಬಿಯಿಂದ ಬಚಾವ್ ಆಗಿದ್ದರು.
WTC FINAL: ಸ್ಟೀವನ್ ಸ್ಮಿತ್ ಶತಕ, ಮೊದಲ ಇನ್ನಿಂಗ್ಸ್‌ನಲ್ಲಿ ಆಸೀಸ್ ಭರ್ಜರಿ ಮೊತ್ತ!
ಆದರೆ, ಕಮ್ಮಿನ್ಸ್ ಎಸೆತದಲ್ಲಿ ಕೈಬೆರಳಿಗೆ ಗಾಯ ಮಾಡಿಕೊಂಡಿದ್ದ ಅಜಿಂಕ್ಯ ರಹಾನೆ ಪಾಡುವ ಸಮಯದಲ್ಲಿ ಹಲವು ಬಾರಿ ಫಿಸಿಯೋರಿಂದ ಚಿಕಿತ್ಸೆ ಪಡೆದುಕೊಂಡಿದ್ದರು. ಇದರ ನಡುವೆ ಗ್ರೀನ್ ಎಸೆತವನ್ನು ಹುಕ್ ಮಾಡುವ ಯತ್ನದಲ್ಲಿ ಚೆಂಡು ಅವರ ಹೆಲ್ಮೆಟ್‌ಗೆ ತಾಗಿತ್ತು. ರಹಾನೆ ಜೊತೆ ಉತ್ತಮವಾಗಿ ಬ್ಯಾಟಿಂಗ್ ಮಾಡಿದ ರವೀಂದ್ರ ಜಡೇಜಾ ನಿಗದಿತ ಅವಧಿಯಲ್ಲಿ ಬೌಂಡರಿಗಳನ್ನು ಬಾರಿಸುತ್ತಾ ಮೊತ್ತವನ್ನು 100ರ ಗಡಿ ದಾಟಿಸಿದ್ದರು. ಐದನೇ ವಿಕೆಟ್‌ಗೆ ರಹಾನೆ ಹಾಗೂ ರವೀಂದ್ರ ಜಡೇಜಾ (48ರನ್, 51 ಎಸೆತ, 7 ಬೌಂಡರಿ, 1 ಸಿಕ್ಸರ್ ) ಅಮೂಲ್ಯ 71 ರನ್ ಜೊತೆಯಾಟವಾಡಿದರು. ಅರ್ಧಶತಕಕ್ಕಿಂತ ಎರಡು ರನ್ ದೂರವಿದ್ದಾಗ ನಥಾನ್ ಲ್ಯಾನ್ ಎಸೆತದಲ್ಲಿ ಸ್ಲಿಪ್‌ನಲ್ಲಿ ಕ್ಯಾಚ್ ನೀಡಿ ಜಡೇಜಾ ನಿರ್ಗಮಿಸಿದರು. 71 ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 29 ರನ್ ಬಾರಿಸಿರುವ ಅಜಿಂಕ್ಯ ರಹಾನೆ ಹಾಗೂ 14 ಎಸೆತಗಳಲ್ಲಿ 5 ರನ್ ಬಾರಿಸಿರುವ ಕೆಎಸ್ ಭರತ್ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
WTC Final: ಎರಡನೇ ದಿನ ಆಸೀಸ್ ಎದುರು ಟೀಂ ಇಂ