ಒಂದೇ ಒಂದು ರನ್ ನೀಡಿದೇ 3 ವಿಕೆಟ್; ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಮತ್ತೊಂದು ಅಪರೂಪದ ವಿಶ್ವದಾಖಲೆ ಬರೆದ ದೀಪ್ತಿ ಶರ್ಮಾ..!

Published : Aug 31, 2026, 11:55 AM IST
Deepti Sharma

ಸಾರಾಂಶ

ಭಾರತದ ಆಲ್ರೌಂಡರ್ ದೀಪ್ತಿ ಶರ್ಮಾ, ಮಹಿಳಾ T20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಮಹಿಳಾ ಏಷ್ಯಾ ಕಪ್‌ನಲ್ಲಿ ಥಾಯ್ಲೆಂಡ್ ವಿರುದ್ಧ 3 ವಿಕೆಟ್ ಪಡೆಯುವ ಮೂಲಕ, ಅವರು ಥಾಯ್ಲೆಂಡ್‌ನ ಥಿಪಾಚಾ ಪುತಾವೋಂಗ್ ಅವರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ.

ದುಬೈ: ಭಾರತದ ಆಲ್ರೌಂಡರ್ ದೀಪ್ತಿ ಶರ್ಮಾ ಈಗ ಮಹಿಳಾ T20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಅನ್ನೋ ವಿಶ್ವದಾಖಲೆ ಬರೆದಿದ್ದಾರೆ. ಮಹಿಳಾ ಏಷ್ಯಾ ಕಪ್‌ನ 'ಎ' ಗುಂಪಿನ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ 3 ವಿಕೆಟ್ ಪಡೆದು ದೀಪ್ತಿ ಈ ಸಾಧನೆ ಮಾಡಿದ್ದಾರೆ. ತಮ್ಮ 150ನೇ T20 ಪಂದ್ಯದಲ್ಲಿ ಒಟ್ಟು 171 ವಿಕೆಟ್‌ಗಳೊಂದಿಗೆ ಅವರು ಈ ಮೈಲಿಗಲ್ಲು ತಲುಪಿದ್ದಾರೆ. ಈ ಮೂಲಕ, 109 ಪಂದ್ಯಗಳಲ್ಲಿ 170 ವಿಕೆಟ್ ಪಡೆದಿದ್ದ ಥಾಯ್ಲೆಂಡ್ ಸ್ಪಿನ್ನರ್ ಥಿಪಾಚಾ ಪುತಾವೋಂಗ್ ಅವರನ್ನು ದೀಪ್ತಿ ಹಿಂದಿಕ್ಕಿದ್ದಾರೆ.

ಭಾರತದ ಜೆರ್ಸಿಯಲ್ಲಿ ತಮ್ಮ 150ನೇ T20 ಪಂದ್ಯವನ್ನಾಡಿದ ದೀಪ್ತಿ, ಥಾಯ್ಲೆಂಡ್ ವಿರುದ್ಧ ಕೇವಲ 1.1 ಓವರ್‌ಗಳಲ್ಲಿ ಒಂದೇ ಒಂದು ರನ್ ನೀಡದೆ ಮೂರು ವಿಕೆಟ್ ಕಿತ್ತರು. ದೀಪ್ತಿ ಅವರ ಅದ್ಭುತ ಬೌಲಿಂಗ್ ದಾಳಿಗೆ ತತ್ತರಿಸಿದ ಥಾಯ್ಲೆಂಡ್ ತಂಡವನ್ನು ಭಾರತ 94 ರನ್‌ಗಳಿಂದ ಮಣಿಸಿ ಭರ್ಜರಿ ಜಯ ಸಾಧಿಸಿತು.

ಥಾಯ್ಲೆಂಡ್ ಎದುರು ದೀಪ್ತಿ ಮಿಂಚಿನ ದಾಳಿ:

160 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಥಾಯ್ಲೆಂಡ್ ಇನ್ನಿಂಗ್ಸ್‌ನ 9ನೇ ಓವರ್‌ನಲ್ಲಿ ದೀಪ್ತಿ ತಮ್ಮ ವಿಕೆಟ್ ಬೇಟೆ ಆರಂಭಿಸಿದರು. ಓವರ್‌ನ ಮೊದಲ ಎಸೆತದಲ್ಲೇ ನವೋಮಿ ಹ್ಯಾಮಿಲ್ಟನ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ಅದೇ ಓವರ್‌ನ ಮೂರನೇ ಎಸೆತದಲ್ಲಿ ನನ್ನಾಪತ್ ಚಾಯ್‌ಹಾನ್ ಅವರನ್ನು ನಂದನಿ ಶರ್ಮಾ ಹಿಡಿದ ಕ್ಯಾಚ್‌ಗೆ ಪೆವಿಲಿಯನ್‌ಗೆ ಕಳುಹಿಸಿದರು. ನಂತರ, 17ನೇ ಓವರ್‌ನ ಮೊದಲ ಎಸೆತದಲ್ಲಿ, ಥಾಯ್ಲೆಂಡ್ ಪರ ಗರಿಷ್ಠ ಸ್ಕೋರರ್ ಆಗಿದ್ದ ನನ್ನಾಪತ್ ಕೊಂಚಾರೊಯೆಂಕಾಯ್ (41) ಅವರನ್ನು ರಿಚಾ ಘೋಷ್ ಹಿಡಿದ ಕ್ಯಾಚ್ ಮೂಲಕ ಔಟ್ ಮಾಡಿ ದೀಪ್ತಿ ವಿಶ್ವದಾಖಲೆ ಪೂರ್ತಿಗೊಳಿಸಿದರು. ಇದೇ ಪಂದ್ಯದಲ್ಲಿ ಪುತಾವೋಂಗ್ 37 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು.

ಇನ್ನು ಮುಂಬರುವ ಪಂದ್ಯಗಳಲ್ಲಿ 2 ವಿಕೆಟ್ ಪಡೆದರೆ, ಪುತಾವೋಂಗ್ ಮತ್ತೆ ಅಗ್ರಸ್ಥಾನಕ್ಕೇರಲಿದ್ದಾರೆ. ಥಾಯ್ಲೆಂಡ್ ತನ್ನ ಮುಂದಿನ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಭಾರತವು ಸೆಪ್ಟೆಂಬರ್ 3 ರಂದು ಹಾಂಗ್ ಕಾಂಗ್ ವಿರುದ್ಧ ಮತ್ತು ಸೆಪ್ಟೆಂಬರ್ 5 ರಂದು ಪಾಕಿಸ್ತಾನದ ವಿರುದ್ಧ ತನ್ನ ಮುಂದಿನ ಗ್ರೂಪ್ ಪಂದ್ಯಗಳನ್ನು ಆಡಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶ್ರೀಲಂಕಾದ ಬದಲು ಭಾರತದಲ್ಲಿ ಚೊಚ್ಚಲ ಮಹಿಳಾ ಚಾಂಪಿಯನ್ಸ್‌ ಟ್ರೋಫಿ! ಕೊನೆ ಕ್ಷಣದಲ್ಲಿ ಬದಲಾವಣೆ?
ದುಲೀಪ್ ಟ್ರೋಫಿಯಲ್ಲಿ ಕನ್ನಡಿಗನ ಕಮಾಲ್; 4 ವಿಕೆಟ್ ಪಡೆದು ಉತ್ತರ ವಲಯಕ್ಕೆ ಶಾಕ್!