Cricket: ವರ್ಲ್ಡ್‌ಕಪ್‌ಗಾಗಿ ಬಲವಂತದ ಅಬಾರ್ಷನ್, ಇನ್‌ಫ್ಲುಯೆನ್ಸರ್ ಜೊತೆ 2ನೇ ಮದುವೆ? ಬೀದಿಗೆ ಬಂದ ಸ್ಟಾರ್‌ ಸ್ಟಾರ್ ಕ್ರಿಕೆಟರ್ ಖಾಸಗಿ ಬದುಕು!

Published : Sep 02, 2026, 05:13 PM IST
Cricketer!

ಸಾರಾಂಶ

ಸ್ಟಾರ್ ಕ್ರಿಕೆಟಿಗ ತಮ್ಮ ಇಬ್ಬರು ಪತ್ನಿಯರ ನಡುವಿನ ಕೌಟುಂಬಿಕ ಕಲಹದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೊದಲ ಪತ್ನಿ ಬಲವಂತದ ಗರ್ಭಪಾತ ಮತ್ತು ವಂಚನೆಯ ಗಂಭೀರ ಆರೋಪಗಳನ್ನು ಮಾಡಿದರೆ, ಎರಡನೇ ಪತ್ನಿ ಈ ಆರೋಪಗಳನ್ನು ಅಲ್ಲಗಳೆದು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಆರೋಪ-ಪ್ರತ್ಯಾರೋಪಗಳಿಂದ ಆ ಕ್ರಿಕೆಟರ್‌ ಖಾಸಗಿ ಬದುಕು ಬೀದಿಗೆ ಬಂದಿದೆ.

ಪ್ರೀತಿ, ಮದುವೆ, ಪ್ರೇಮ ಸಂಬಂಧಗಳು ಮತ್ತು ವಿಚ್ಛೇದನಗಳು ಕೇವಲ ಸಿನಿಮಾ ರಂಗಕ್ಕೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಕ್ರೀಡಾಲೋಕದಲ್ಲೂ ಇಂತಹ ಅನೇಕ ಕಥೆಗಳು ಹಾಗೂ ನಾಟಕೀಯ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಇದೀಗ ಸ್ಟಾರ್ ಕ್ರಿಕೆಟರೊಬ್ಬರ ಖಾಸಗಿ ಬದುಕು ಬೀದಿಗೆ ಬಿದ್ದಿದ್ದು, ಕ್ರಿಕೆಟ್ ಜಗತ್ತಿನಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಮೈದಾನದಲ್ಲಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುತ್ತಿದ್ದ ಬೌಲರ್ ಪ್ರಸ್ತುತ ತಮ್ಮ ಇಬ್ಬರು ಪತ್ನಿಯರ ನಡುವಿನ ಕೌಟುಂಬಿಕ ಕಲಹದಿಂದಾಗಿ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವಿಚಾರ ಈಗ ನ್ಯಾಯಾಲಯದ ಮೆಟ್ಟಿಲೇರಿದೆ.

ಮೊದಲ ಪತ್ನಿಯ ಗಂಭೀರ ಆರೋಪಗಳು!

ಅವರು ಬೇರೆ ಯಾರೂ ಅಲ್ಲ ಪಾಕ್‌ ಆಟಗಾರ ಇಮಾದ್ ವಾಸಿಂ. ಅವರ ಮೊದಲ ಪತ್ನಿ ಸಾನಿಯಾ ಅಶ್ಫಾಕ್ ಇತ್ತೀಚೆಗೆ ಪಾಡ್‌ಕ್ಯಾಸ್ಟ್ ಒಂದರಲ್ಲಿ ಪಾಲ್ಗೊಂಡು ತಮ್ಮ ಮಾಜಿ ಪತಿಯ ಖಾಸಗಿ ಜೀವನದ ಹಲವು ಕರಾಳ ಮುಖಗಳನ್ನು ಬಯಲುಗೊಳಿಸಿದ್ದಾರೆ. ಅವುಗಳೆಂದರೆ,

ಬಲವಂತದ ಗರ್ಭಪಾತ; ಟ್ವೆಂಟಿ-20 ವಿಶ್ವಕಪ್ ಸಮಯದಲ್ಲಿ ಇಮಾದ್ ತಮ್ಮ ಮೇಲಿದ್ದ ಒತ್ತಡದ ನೆಪವೊಡ್ಡಿ ಬಲವಂತವಾಗಿ ಗರ್ಭಪಾತ ಮಾಡಿಸಿಕೊಳ್ಳುವಂತೆ ಹಠ ಹಿಡಿದಿದ್ದರು ಎಂದು ಸಾನಿಯಾ ಆರೋಪಿಸಿದ್ದಾರೆ.

ಮೋಸ ಮತ್ತು ಆತುರದ ವಿಚ್ಛೇದನ; ತಾವು ಮೂರನೇ ಬಾರಿಗೆ ಗರ್ಭಿಣಿಯಾದಾಗ ಇಮಾದ್ ತಮಗೆ ವಂಚನೆ ಮಾಡಿದರು. ತಕ್ಷಣವೇ ವಿಚ್ಛೇದನ ನೀಡಿ, ಕೇವಲ ಒಂದು ತಿಂಗಳ ಅಂತರದಲ್ಲಿ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ನೈಲಾ ರಾಜಾ ಅವರನ್ನು ಎರಡನೇ ಮದುವೆಯಾದರು.

ನೈಲಾ ರಾಜಾ ವಿರುದ್ಧ ಆರೋಪ; ನೈಲಾ ಈಗಾಗಲೇ ಎರಡು ಬಾರಿ ವಿಚ್ಛೇದನ ಪಡೆದ ಮಹಿಳೆಯಾಗಿದ್ದು, ಇತರರ ಸುಖಿ ಸಂಸಾರವನ್ನು ಹಾಳುಮಾಡುವುದೇ ಆಕೆಯ ಕೆಲಸ ಎಂದು ಸಾನಿಯಾ ಕಿಡಿಕಾರಿದ್ದಾರೆ.

ಕಾನೂನು ನೋಟಿಸ್ ನೀಡಿದ ಎರಡನೇ ಪತ್ನಿ!

ಸಾನಿಯಾ ಅವರ ಈ ಸಂವೇದನಾಶೀಲ ಹೇಳಿಕೆಗಳ ನಂತರ, ಇಮಾದ್ ಅವರ ಎರಡನೇ ಪತ್ನಿ ನೈಲಾ ರಾಜಾ ಕಠಿಣ ನಿಲುವು ತಳೆದಿದ್ದಾರೆ. ಸಾನಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ ನೋಟಿಸ್ ಜಾರಿ ಮಾಡಿದ್ದು, ಅದರ ಪ್ರತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ.

ನೈಲಾ ಹೇಳಿದ್ದೇನು?

ಸಾನಿಯಾ ಕೇವಲ ಪ್ರಚಾರ ಪಡೆಯಲು ಮತ್ತು ಹಣಕ್ಕಾಗಿ ಇಂತಹ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ನೈಲಾ ಪ್ರತ್ಯುತ್ತರ ನೀಡಿದ್ದಾರೆ. ಮಗುವಿನ ವಿಷಯವನ್ನು ಈ ಕೆಸರೆರಚಾಟಕ್ಕೆ ಎಳೆಯಬೇಡಿ ಎಂದು ಎಚ್ಚರಿಸಿರುವ ನೈಲಾ, ಬಲವಂತದ ಗರ್ಭಪಾತ ಎಂಬುದು ಸುಳ್ಳು. ಅದು ಸಾನಿಯಾ ಅವರ ಸ್ವಂತ ನಿರ್ಧಾರವಾಗಿತ್ತು. ಒಂದು ವೇಳೆ ಇಮಾದ್ ಒತ್ತಡ ಹೇರಿದ್ದರೆ ಆ ಕ್ಷಣವೇ ಪೊಲೀಸರಿಗೆ ದೂರು ಏಕೆ ನೀಡಲಿಲ್ಲ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಇಮಾದ್ ತಮ್ಮ ಮೊದಲ ಮಗುವಿನ ಎಲ್ಲಾ ಖರ್ಚು-ವೆಚ್ಚಗಳನ್ನು ಇಂದಿಗೂ ಸಕ್ರಿಯವಾಗಿ ನೋಡಿಕೊಳ್ಳುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಮತ್ತೆ ಬಿರುಗಾಳಿ ಎಬ್ಬಿಸಿದ ಹೊಸ ಜೀವನ!

ಫೆಬ್ರವರಿ 2026 ರಲ್ಲಿ ಇಮಾದ್ ವಾಸಿಮ್ ಅವರು ನೈಲಾ ರಾಜಾ ಅವರೊಂದಿಗಿನ ತಮ್ಮ ಎರಡನೇ ವಿವಾಹವನ್ನು ಅಧಿಕೃತವಾಗಿ ಜಗತ್ತಿಗೆ ತಿಳಿಸಿದ್ದರು. ಮೊದಲ ಮದುವೆಯ ಕಹಿ ನೆನಪುಗಳನ್ನು ಮರೆತು ಹೊಸ ಬದುಕು ಕಟ್ಟಿಕೊಳ್ಳಲು ಯತ್ನಿಸುತ್ತಿದ್ದ ಇಮಾದ್‌ಗೆ, ಸಾನಿಯಾ ಅವರ ಈ ಬಹಿರಂಗ ಹೇಳಿಕೆಗಳು ನುಂಗಲಾರದ ತಾರಕವಾಗಿ ಪರಿಣಮಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಇಬ್ಬರು ಪತ್ನಿಯರ ನಡುವಿನ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿದ್ದು, ಇಮಾದ್ ವಾಸಿಮ್ ಅವರ ಕ್ರೀಡಾ ವೃತ್ತಿಜೀವನದ ಮೇಲೆ ಇದು ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದುಲೀಪ್ ಟ್ರೋಫಿ ಮೂಲಕ ಬಿಸಿಸಿಐ ಸೆಲೆಕ್ಟರ್ಸ್‌ಗೆ ಮತ್ತೊಂದು ಖಡಕ್ ವಾರ್ನಿಂಗ್ ಕೊಟ್ಟ ಮೊಹಮ್ಮದ್ ಶಮಿ!
CPL: ​ಕೊಹ್ಲಿ ದಾಖಲೆ ಸರಿಗಟ್ಟಿದ ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟರ್! ಟಿ20 ಕ್ರಿಕೆಟ್‌ನಲ್ಲಿ ಈತನ ಆ ದಾಖಲೆ ಏನು?