ವಿಶ್ವ ಚೆಸ್ ಚಾಂಪಿಯನ್‌ಶಿಪ್: ಡಿ ಗುಕೇಶ್‌ಗೆ ಸೋಲಿನ ಆರಂಭ!

By Naveen Kodase  |  First Published Nov 26, 2024, 11:10 AM IST

ವಿಶ್ವ ಚೆಸ್ ಚಾಂಪಿಯನ್ ಶಿಪ್ ಟೂರ್ನಿಯಲ್ಲಿ ಭಾರತದ ಡಿ.ಗುಕೇಶ್ ಭಾರತ ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿದ್ದಾರೆ. ಈ ಕುರಿತಾದ ರಿಪೋರ್ಟ್‌


ಸಿಂಗಾಪುರ: ಹಾಲಿ ವಿಶ್ವ ಚಾಂಪಿಯನ್, ಚೀನಾದ ಡಿಂಗ್ ಲಿರೆನ್ ವಿರುದ್ಧದ ವಿಶ್ವ ಚೆಸ್ ಚಾಂಪಿಯನ್ ಶಿಪ್ ಫೈನಲ್ ಟೂರ್ನಿಯ ಮೊದಲ ಸುತ್ತಿನಲ್ಲಿ ಭಾರತದ ಡಿ.ಗುಕೇಶ್ ಸೋಲನುಭವಿಸಿದ್ದಾರೆ. ಇದರೊಂದಿಗೆ 14 ಸುತ್ತುಗಳ ಟೂರ್ನಿಯಲ್ಲಿ ಲಿರೆನ್ 1 ಅಂಕದ ಮುನ್ನಡೆ ಸಾಧಿಸಿದ್ದಾರೆ.

ಕ್ಲಾಸಿಕಲ್ ಚೆಸ್‌ನಲ್ಲಿ ಒಟ್ಟು 40 ಮೂವ್‌ಗಳಿಗೆ 120 ನಿಮಿಷ ನೀಡಲಾಗುತ್ತದೆ. ಮೊದಲ ಗೇಮ್‌ನಲ್ಲಿ ಬಿಳಿ ಕಾಯಿಗಳೊಂದಿಗೆ ಆಡಿದ 18 ವರ್ಷದ ಗುಕೇಶ್, 12ನೇ ಕಾಯಿ ಚಲಾಯಿಸುವಾಗ ಅರ್ಧ ಗಂಟೆ ಮುನ್ನಡೆಯಲ್ಲಿದ್ದರು. ಆದರೆ ಬಳಿಕ ಲಿರೆನ್ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.

Latest Videos

undefined

ಕೊನೆಯಲ್ಲಿ ಸಮಯದ ಅಭಾವ ಎದುರಿಸಿದ ಗುಕೇಶ್, ಪಂದ್ಯವನ್ನು ಲಿರೆನ್‌ಗೆ ಬಿಟ್ಟುಕೊಟ್ಟರು. ಇಬ್ಬರ ನಡುವೆ ಇನ್ನೂ 13 ಸುತ್ತಿನ ಗೇಮ್‌ಗಳು ನಡೆಯಬೇಕಿದೆ. 2ನೇ ಗೇಮ್ ಮಂಗಳವಾರ ನಡೆಯಲಿದೆ

ಕೇವಲ 13 ವರ್ಷದ ವೈಭವ್‌ಗೆ 1.1 ಕೋಟಿ ನೀಡಿ ಖರೀದಿಸಿದ ರಾಯಲ್ಸ್‌: ಅಷ್ಟಕ್ಕೂ ಯಾರೀತ?

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ 12ನೇ ಸೋಲು

ನೋಯ್ಡಾ: 11ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಮಾಜಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ನ ಸೋಲಿನ ಸರಣಿ ಮುಂದುವರಿದಿದೆ. ಸೋಮವಾರ ಬುಲ್ಸ್‌ ತಂಡಕ್ಕೆ ಯು ಮುಂಬಾ ವಿರುದ್ಧ 32-34 ಅಂಕಗಳ ಅಂತರದಲ್ಲಿ ಸೋಲು ಎದುರಾಯಿಯು. ತಂಡಕ್ಕಿದು ಟೂರ್ನಿಯಲ್ಲಿ 14 ಪಂದ್ಯಗಳಲ್ಲಿ 12ನೇ ಸೋಲು. ಮುಂಬಾ 13 ಪಂದ್ಯಗಳಲ್ಲಿ 8ನೇ ಗೆಲುವು ಸಾಧಿಸಿ, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು.

ಮೊದಲಾರ್ಧದಲ್ಲಿ ಬುಲ್ಸ್‌ 10-18ರಿಂದ ಹಿನ್ನಡೆಯಲ್ಲಿದ್ದ ಬುಲ್ಸ್‌ ಬಳಿಕ ಪುಟಿದೆದ್ದರೂ ತಂಡಕ್ಕೆ ಗೆಲುವು ಸಿಗಲಿಲ್ಲ. ಬುಲ್ಸ್‌ಗೆ ಈ ಪಂದ್ಯದಲ್ಲೂ ತಾರಾ ಆಟಗಾರರು ಕೈ ಕೊಟ್ಟರು. ಪ್ರದೀಪ್‌ ನರ್ವಾಲ್‌ ಕೇವಲ 6 ಅಂಕ ಗಳಿಸಿದರು. ಮುಂಬಾ ಪರ ಮಂಜೀತ್‌ 8, ಅಜಿತ್‌ 7 ಅಂಕ ಗಳಿಸಿದರು.

ದಿನದ ಮತ್ತೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಪುಣೇರಿ ಪಲ್ಟನ್‌ ವಿರುದ್ಧ ಜೈಪುರ ಪಿಂಕ್‌ ಪ್ಯಾಂಥರ್ಸ್‌ 37-23 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು.

ಆರ್‌ಸಿಬಿ ಗುರಿ ಐಪಿಎಲ್ ಕಪ್ ಗೆಲ್ಲೋದಲ್ಲ, ಹಣ ಗಳಿಸೋದು: ಕನ್ನಡಿಗರ ಭಾವನೆಗಳ ಜೊತೆ ಆಡ್ತಾ ಇದ್ಯಾ ಫ್ರಾಂಚೈಸಿ?

ಇಂದಿನ ಪಂದ್ಯಗಳು

ಯುಪಿ ಯೋಧಾಸ್‌-ತಮಿಳ್‌ ತಲೈವಾಸ್‌, ರಾತ್ರಿ 8ಕ್ಕೆ

ದಬಾಂಗ್‌ ಡೆಲ್ಲಿ-ಪಾಟ್ನಾ ಪೈರೇಟ್ಸ್‌, ರಾತ್ರಿ 9ಕ್ಕೆ

ವಿಶ್ವ ಅಥ್ಲೆಟಿಕ್ಸ್ ಮುಖ್ಯಸ್ಥ ಕೋ ಭಾರತಕ್ಕೆ

ನವದೆಹಲಿ: ವಿಶ್ವ ಅಥ್ಲೆಟಿಕ್ಸ್ ಅಧ್ಯಕ್ಷ ಸೆಬಾಸ್ಟಿಯನ್ ಕೋ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ರೀಡಾ ಸಚಿವ ಮನೂಖ್ ಮಾಂಡವೀಯ ಅವರ ಜೊತೆ ಅನೌಪಚಾರಿಕ ಚರ್ಚೆಗಾಗಿ ಭಾರತಕ್ಕೆ ಆಗಮಿಸಿದ್ದಾರೆ.

ದೆಹಲಿಗೆ ಬಂದಿಳಿದ ಸೆಬಾಸ್ಟಿಯನ್ ಅವರನ್ನು ಭಾರತ ಅಥ್ಲೆಟಿಕ್ಸ್‌ ಫೆಡರೇಶನ್ ಮುಖ್ಯಸ್ಥ ಅಡಿಲ್ಲೆ ಸುಮರಿವಾಲಾ ಸ್ವಾಗತಿಸಿದರು. ಸೆಬಾಸ್ಟಿಯನ್ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಕೋ ಮುಂದಿನ ಅಧ್ಯಕ್ಷರಾಗುವ ರೇಸ್‌ನಲ್ಲಿದ್ದು, ಅದರ ಭಾಗವಾಗಿಯೇ ಭಾರತಕ್ಕೆ ಭೇಟಿ ನೀಡಿರುವ ಸಾಧ್ಯತೆಯಿದೆ. 

ಈ ಭೇಟಿ ವೇಳೆ 2036ರಲ್ಲಿ ಭಾರತದಲ್ಲಿ ಒಲಿಂಪಿಕ್ಸ್‌ ಆಯೋಜನೆ ಕುರಿತು ಮಾತುಕತೆ ನಡೆಯುವ ಸಾಧ್ಯತೆಯಿದೆ. ಸೆಬಾಸ್ಟಿಯನ್ ಕೋ ಭೇಟಿಯ ಬಗ್ಗೆ ಮಾನ್ಸೂಖ್ ಮಾಂಡವೀಯ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದು 2036ರ ವೇಳೆಗೆ ಭಾರತದಲ್ಲಿ ಒಲಿಂಪಿಕ್ಸ್‌ ಮತ್ತು ಪ್ಯಾರಾಲಿಂಪಿಕ್ಸ್ ಆಯೋಜನೆ ಬಗ್ಗೆ ಚರ್ಚಿಸಲಾಗಿದೆ' ಎಂದಿದ್ದಾರೆ.

click me!