Women's T20 World cup ಇಂಗ್ಲೆಂಡ್ ಅಬ್ಬರಕ್ಕೆ ತಳಮಳ, ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತಕ್ಕೆ 152 ರನ್ ಟಾರ್ಗೆಟ್!

Published : Feb 18, 2023, 08:12 PM ISTUpdated : Feb 18, 2023, 08:24 PM IST
Women's T20 World cup ಇಂಗ್ಲೆಂಡ್ ಅಬ್ಬರಕ್ಕೆ ತಳಮಳ, ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತಕ್ಕೆ 152 ರನ್ ಟಾರ್ಗೆಟ್!

ಸಾರಾಂಶ

ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಕಠಿಣ ಸವಾಲು ಎದುರಾಗಿದೆ. ಇಂಗ್ಲೆಂಡ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಭಾರತಕ್ಕೆ 152 ರನ್ ಟಾರ್ಗೆಟ್ ನೀಡಲಾಗಿದೆ.  

ಜಾರ್ಜ್ ಪಾರ್ಕ್(ಫೆ.18): ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್ ಪ್ರವೇಶ ಖಚಿತಪಡಿಸಲು ಇಂದಿನ ಪಂದ್ಯ ಗೆಲ್ಲಲೇಬೇಕು. ಈ ಮಹತ್ವದ ಪಂದ್ಯದಲ್ಲಿ ಭಾರತಕ್ಕೆ ಕಠಿಣ ಗುರಿ ಎದುರಾಗಿದೆ. ಇಂಗ್ಲೆಂಡ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಭಾರತಕ್ಕೆ 152 ರನ್ ಟಾರ್ಗೆಟ್ ನೀಡಲಾಗಿದೆ. ನ್ಯಾಟ್ ಸ್ಕಿವಿಯರ್ ಬ್ರಂಟ್ ಹಾಗೂ ಆ್ಯಮಿ ಜೋನ್ಸ್ ಅಬ್ಬರದಿಂದ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 151 ರನ್ ಸಿಡಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ತಂಡಕ್ಕೆ ಭಾರತದ ವನಿತೆಯರು ಆರಂಭದಲ್ಲೇ ಶಾಕ್ ನೀಡಿದರು. ರೇಣುಕಾ ಸಿಂಗ್ ದಾಳಿಗೆ ಇಂಗ್ಲೆಂಡ್ ತತ್ತರಿಸಿತು. ಡೆನಿಲ್ಲೇ ವೈಟ್ ಡಕೌಟ್ ಆದರು. ಇಂಗ್ಲೆಂಡ್ 1 ರನ್‌ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ಆಲೈಸ್ ಕ್ಯಾಪ್ಸಿ ಕೇವಲ 3 ರನ್ ಸಿಡಿಸಿ ನಿರ್ಗಮಿಸಿದರು.ಇದರ ಬೆನ್ನಲ್ಲೇ ಸೋಫಿಯಾ ಡಂಕ್ಲಿ 10 ರನ್ ಸಿಡಿಸಿ ಔಟಾದರು. ಈ ಮೂಲಕ ಇಂಗ್ಲೆಂಡ್ 29 ರನ್‌ಗಳಿಗೆ ಪ್ರಮುಖ 3 ವಿಕಟ್ ಕಳೆದುಕೊಂಡಿತು. ಆದರೆ ನ್ಯಾಟ್ ಸ್ಕಿವಿಯರ್ ಬ್ರಂಟ್ ಹಾಗೂ ನಾಯಕಿ ಹೀದರ್ ನೈಟ್ ಜೊತೆಯಾಟ ಪಂದ್ಯದ ಗತಿ ಬದಲಿಸಿತು.

ದಿಲ್ಲಿ ವಾಲಾನ ಚೋಲೆ ಬಟುರೆ ಪ್ರೀತಿ, ಕ್ಯಾಮೆರದಲ್ಲಿ ಸೆರೆಯಾಯ್ತು ಕೊಹ್ಲಿ ರಿಯಾಕ್ಷನ್!

ಹೀದರ್ ನೈಟ್ 28 ರನ್ ಕಾಣಿಕೆ ನೀಡಿದರು. ಆದರೆ ಸ್ಕಿವಿಯರ್ ಬ್ರಂಟ್ ಸ್ಪೋಟಕ ಬ್ಯಾಟಿಂಗ್ ಮೂಲಕ ಹಾಫ್ ಸೆಂಚುರಿ ಸಿಡಿಸಿದರು. ಆ್ಯಮಿ ಜೋನ್ಸ್ ಹೊಡಿಬಡಿ ಆಟ ಭಾತಕ್ಕೆ ಮಾರಕವಾಯಿತು. ಆ್ಯಮಿ ಜೋನ್ಸ್ 40 ರನ್ ಕಾಣಿಕೆ ನೀಡಿದರು. ಇನ್ನು ಕ್ಯಾಥರಿನ್ ಅಬ್ಬರಿಸಿಲಿಲ್ಲ. ಆದರೆ ಸೋಫಿ ಎಕ್ಲೆಸ್ಟೋನ್ ಅಜೇಯ 11 ರನ್ ಸಿಡಿಸಿದರು. ಈ ಮೂಲಕ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 151 ರನ್ ಸಿಡಿಸಿತು.

ಭಾರತದ ಪರ ರೇಣುಕಾ ಸಿಂಗ್ 5 ವಿಕೆಟ್ ಕಬಳಿಸಿ ಮಿಂಚಿದರು. ಆದರೆ ಇಂಗ್ಲೆಂಡ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಲು ಸಾಧ್ಯವಾಗಲಿಲ್ಲ. 152 ರನ್ ಟಾರ್ಗೆಟ್ ಚೇಸಿಂಗ್ ಭಾರತಕ್ಕೆ ಸವಾಲಾಗಿದೆ. ಆದರೆ ಭಾರತ ಮಹಿಳಾ ತಂಡ ಉತ್ತಮ ಬ್ಯಾಟಿಂಗ್ ಬಲ ಹೊಂದಿದೆ. ಹೀಗಾಗಿ ಈ ಪಂದ್ಯ ಮತ್ತಷ್ಟು ರೋಚಕ ಹೋರಾಟಕ್ಕೆ ಸಾಕ್ಷಿಯಾಗಲಿದೆ.

Delhi Test: 100ನೇ ಟೆಸ್ಟ್‌ನಲ್ಲಿ ಶೂನ್ಯ ಸುತ್ತಿದ ಪೂಜಾರ, ಟೀಂ ಇಂಡಿಯಾ 4 ವಿಕೆಟ್‌ ಲಯನ್‌ ಪಾಲು

ಟಿ20 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಆರಂಭಿಕ 2 ಪಂದ್ಯ ಗೆದ್ದುಕೊಂಡಿದೆ. ಮೊದಲ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ 7 ವಿಕೆಟ್ ಗೆಲುವು ದಾಖಲಿಸಿತ್ತು. ಈ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. 2ನೇ ಪಂದ್ಯದಲ್ಲಿ ಭಾರತ ಮಹಿಳಾ ತಂಡ ವೆಸ್ಟ್ ಇಂಡೀಸ್ ವಿರುದ್ಧ ಹೋರಾಟ ನಡೆಸಿತ್ತು. ಈ ಪಂದ್ಯದಲ್ಲಿ ಭಾರತ 6 ವಿಕೆಟ್ ಗೆಲುವು ದಾಖಲಿಸಿತ್ತು. ಎರಡೂ ಪಂದ್ಯಳನ್ನ ಚೇಸಿಂಗ್ ಮೂಲಕವೇ ಗೆದ್ದುಕೊಂಡಿದೆ. ಹೀಗಾಗಿ ಭಾರತ ಇಂದು ಚೇಸಿಂಗ್ ಆಯ್ಕೆ ಮಾಡಿಕೊಂಡಿದೆ. ಇದೀಗ 152 ರನ್ ಟಾರ್ಗೆಟ್ ಚೇಸ್ ಮಾಡುತ್ತಾ ಅನ್ನೋ ಕುತೂಹಲ ಶುರುವಾಗಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೌತ್ ಆಫ್ರಿಕಾ ವಿರುದ್ದ 3ನೇ ಟಿ20 ಗೆದ್ದ ಟೀಂ ಇಂಡಿಯಾ, ಸರಣಿಯಲ್ಲಿ 2-1 ಮುನ್ನಡೆ
U19 ಏಷ್ಯಾಕಪ್, 150 ರನ್‌ಗೆ ಪಾಕಿಸ್ತಾನ ಆಲೌಟ್ ಮಾಡಿದ ಟೀಂ ಇಂಡಿಯಾಗೆ 90 ರನ್ ಗೆಲುವು