ಸ್ಯಾರಿ ಉಟ್ಟು ಕ್ರಿಕೆಟ್ ಆಡಿದ ಮಿಥಾಲಿ, ಮಹಿಳಾ ದಿನಾಚರಣೆಗೆ ವಿಶೇಷ ಸಂದೇಶ!

By Suvarna NewsFirst Published Mar 7, 2020, 7:06 PM IST
Highlights

ಮಹಿಳಾ ದಿನಾಚರಣೆಯಂದೆ ಭಾರತ ಮಹಿಳಾ ತಂಡ ಐಸಿಸಿ ಮಹಿಳಾ ವಿಶ್ವಕಪ್ ಟಿ20 ಫೈನಲ್ ಆಡಲಿದೆ. ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಪ್ರಶಸ್ತಿಗಾಗಿ ಹೋರಾಟ ನಡೆಸಿದೆ. ಇದೀಗ ಭಾರತ ಮಹಿಳಾ ತಂಡಕ್ಕೆ ಮಾಜಿ ನಾಯಕ ಮಿಥಾಲಿ ರಾಯ್ ವಿಶೇಷವಾಗಿ ಶುಭಹಾರೈಸಿದ್ದಾರೆ.

ಮುಂಬೈ(ಮಾ.07): ಹೆಣ್ಣಿಗಿಂತ ಸ್ಯಾರಿ ಹೆಚ್ಚು ಮಾತನಾಡುತ್ತೆ. ನಾವು ದಿಟ್ಟತನದಿಂದ ಎದುರಿಸಬೇಕು, ಎದ್ದುನಿಲ್ಲಬೇಕು. ಈ ಮಹಿಳಾ ದಿನಾಚರಣೆಗೆ ನಾವು ಸಾಧಿಸಿ ತೋರಿಸಬೇಕಿದೆ. ನಮಗೂ ಸಾಧ್ಯವಿದೆ ಅನ್ನೋದನ್ನು ಈ ವಿಶ್ವಕ್ಕೆ ತೋರಿಸಬೇಕಿದೆ ಎಂದು ಮಿಥಾಲಿ ರಾಜ್ ತಮ್ಮ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಇದು ಕೇವಲ ಹೇಳಿಕೆ ಮಾತ್ರವಲ್ಲ, ಸ್ಯಾರಿ ಉಟ್ಟು ಕ್ರಿಕೆಟ್ ಆಡೋ ಮೂಲಕ ಮಹಿಳಾ ದಿನಾಚರಣೆಯಂದು ಫೈನಲ್ ಪಂದ್ಯ ಆಡುತ್ತಿರುವ ಭಾರತ ಮಹಿಳಾ ತಂಡಕ್ಕೆ ವಿಶೇಷ ಸಂದೇಶವನ್ನೂ ರವಾನಿಸಿದ್ದಾರೆ.

ಇದನ್ನೂ ಓದಿ: ಮಿಥಾಲಿ ಸಿನಿಮಾದ ಮೊದಲ ಪೋಸ್ಟರ್‌ ಬಿಡುಗಡೆ

ಭಾರತ ಮಹಿಳಾ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್, ಸೀರೆ ಉಟ್ಟು ಕ್ರಿಕೆಟ್ ಆಡಿದ್ದಾರೆ. ಈ ಮೂಲಕ ಸೀರೆ ಉಟ್ಟ ಮಹಿಳೆಯರು ಸಾಧಿಸಿ ತೋರಿಸುತ್ತಾರೆ ಅನ್ನೋ ಸಂದೇಶವನ್ನು ರವಾನಿಸಿದ್ದಾರೆ. ಮಹಿಳಾ ದಿನಾಚರಣೆಗೆ ಮಿಥಾಲಿ ಭಾರತೀಯ ವನಿತೆಯರಿಗೆ ಈ ಸಂದೇಶ ರವಾನಿಸಿದ್ದಾರೆ.

 

ಇದನ್ನೂ ಓದಿ: ಟ್ರೋಲಿಗನ ಬಾಯಿ ಮುಚ್ಚಿಸಿದ ಮಿಥಾಲಿ ರಾಜ್..!.

ಮಾ.8ರಂದು ಭಾರತ ಮಹಿಳಾ ತಂಡ ಐಸಿಸಿ ವಿಶ್ವಕಪ್ ಟಿ20 ಪಂದ್ಯ ಫೈನಲ್ ಆಡಲಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಈ ಮಹತ್ವದ ಪಂದ್ಯಕ್ಕೂ ಮುನ್ನವೇ ಮಿಥಾಲಿ ರಾಜ್ ಸ್ಯಾರಿ ಸಂದೇಶ ರವಾನಿಸಿದ್ದು, ಮಹಿಳಾ ತಂಡದ ಆತ್ಮವಿಶ್ವಾಸ ಹೆಚ್ಚಾಗಿದೆ. 

click me!