Women's Cricket T20: ಆಸೀಸ್‌ ಎದುರಿನ ಗೆಲುವಿನ ತವಕದಲ್ಲಿ ಭಾರತ ಮಹಿಳಾ ತಂಡ

By Suvarna NewsFirst Published Oct 9, 2021, 9:57 AM IST
Highlights

* ಆಸೀಸ್ ಎದುರು ಎರಡನೇ ಟಿ20 ಪಂದ್ಯಕ್ಕೆ ಸಜ್ಜಾದ ಹರ್ಮನ್‌ಪ್ರೀತ್ ಪಡೆ

* ಮೊದಲ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು

* 3 ಪಂದ್ಯಗಳ ಟಿ20 ಸರಣಿಯಲ್ಲಿ ಶುಭಾರಂಭ ನೀಡುವ ನಿರೀಕ್ಷೆಯಲ್ಲಿ ಭಾರತ

ಗೋಲ್ಡ್‌ಕೋಸ್ಟ್(ಅ.09)‌: ಭಾರತ ಮತ್ತು ಆಸ್ಪ್ರೇಲಿಯಾ ವನಿತೆಯರ ನಡುವಿನ 2ನೇ ಟಿ20 (T20 Cricket) ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದ್ದು, ಹರ್ಮನ್‌ಪ್ರೀತ್‌ ಕೌರ್‌ (Harmanpreet Kaur) ನೇತೃತ್ವದ ಭಾರತ ಗೆಲುವಿನೊಂದಿಗೆ ಸರಣಿ ಆರಂಭಿಸುವ ತವಕದಲ್ಲಿದೆ. ಗುರುವಾರ ನಡೆದ 3 ಪಂದ್ಯಗಳ ಸರಣಿಯ ಮೊದಲ ಪಂದ್ಯ ಮಳೆಗೆ ಬಲಿಯಾಗಿತ್ತು. ಇದೀಗ ಶನಿವಾರ ನಡೆಯಲಿರುವ 2ನೇ ಪಂದ್ಯದಲ್ಲಿ ಭಾರತ ಗೆಲುವಿನ ಲೆಕ್ಕಾಚಾರದಲ್ಲಿದೆ.

ಏಕದಿನ ಸರಣಿಯಲ್ಲಿ ಆಸ್ಪ್ರೇಲಿಯಾ ವಿರುದ್ಧ ಸೋಲುಂಡಿದ್ದ ಭಾರತದ ವನಿತೆಯರು, ಏಕೈಕ ಹಗಲು-ರಾತ್ರಿ ಟೆಸ್ಟ್‌ (Day and Night Test) ಪಂದ್ಯದಲ್ಲಿ ಗಮನಾರ್ಹ ಸಾಧನೆ ನೀಡಿದ್ದರು. ಅದೇ ವಿಶ್ವಾಸದೊಂದಿಗೆ ಮೊದಲ ಟಿ20 ಪಂದ್ಯದಲ್ಲೂ ಕಣಕ್ಕೆ ಇಳಿದಿದ್ದರು. ಟಾಸ್‌ ಸೋತು ಬ್ಯಾಟಿಂಗ್‌ ಇಳಿಸಲ್ಪಟ್ಟ ಭಾರತ 15.2 ಓವರಲ್ಲಿ 4 ವಿಕೆಟ್‌ ನಷ್ಟಕ್ಕೆ 131 ರನ್‌ ಗಳಿಸಿತ್ತು ಈ ವೇಳೆ ಆರಂಭವಾದ ಮಳೆ ನಿಲ್ಲದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಗಿತ್ತು. ಜೇಮಿಮಾ ರೋಡಿಗ್ರಸ್‌ (Jemimah Rodrigues) ಅಜೇಯ 49 ರನ್‌ ಗಳಿಸಿ ಉತ್ತಮ ಫಾರ್ಮ್‌ ಕಾಯ್ದುಕೊಂಡಿದ್ದರು. ಇದೀಗ 2ನೇ ಪಂದ್ಯದಲ್ಲೂ ಭಾರತದ ವನಿತೆಯರು ಅದೇ ವಿಶ್ವಾಸದಲ್ಲಿದ್ದು, ಆಸ್ಪ್ರೇಲಿಯಾ (Australia Cricket) ಗೆ ತಿರುಗೇಟು ನೀಡುವ ಲೆಕ್ಕಾಚಾರದಲ್ಲಿದ್ದಾರೆ.

T20 World Cup: ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಅಗ್ನಿ ಪರೀಕ್ಷೆ

ಭಾರತ ತಂಡದ ಪರ ಬ್ಯಾಟಿಂಗ್‌ನಲ್ಲಿ ಸ್ಮೃತಿ ಮಂಧನಾ (Smriti Mandhana), ಶೆಫಾಲಿ ವರ್ಮಾ (Shafali Verma), ಜೆಮಿಮಾ ರೋಡಿಗ್ರಸ್‌ ಉತ್ತಮ ಫಾರ್ಮ್‌ನಲ್ಲಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚುವಂತೆ ಮಾಡಿದೆ. ಯುವ ಆಟಗಾರ್ತಿಯರಾದ ಯಶ್ತಿಕಾ ಭಾಟಿಯಾ ಹಾಗೂ ರಿಚಾ ಘೋಷ್ ಮಧ್ಯಮ ಕ್ರಮಾಂಕದಲ್ಲಿ ಮಿಂಚಲು ಉತ್ತಮ ಅವಕಾಶ ಬಂದೊದಗಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಶಿಖಾ ಪಾಂಡೆ, ಮೆಘಾನ ಸಿಂಗ್, ಪೂಜಾ ವಸ್ತ್ರಾಕರ್‌, ರಾಜೇಶ್ವರಿ ಗಾಯಕ್ವಾಡ್ (Rajeshwari Gayakwad) ಹಾಗೂ ದೀಪ್ತಿ ಶರ್ಮಾ (Deepti Sharma) ಕೂಡಾ ಮಿಂಚಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಇನ್ನು ಆತಿಥೇಯ ಆಸ್ಟ್ರೇಲಿಯಾ ತಂಡವು ಮೇಲ್ನೋಟಕ್ಕೆ ಬಲಿಷ್ಠವಾಗಿ ಕಂಡ ಬರುತ್ತಿದ್ದು, ಪ್ರವಾಸಿ ಭಾರತ ತಂಡಕ್ಕೆ ಶಾಕ್‌ ನೀಡಲು ಎದುರು ನೋಡುತ್ತಿದೆ. ಎಲಿಸಾ ಪೆರ್ರಿ, ಅಲೀಸಾ ಹೀಲಿ, ಮೆಗ್‌ ಲ್ಯಾನಿಂಗ್‌, ಗಾರ್ಡರ್ ಹಾಗೂ ಬೆಥ್‌ ಮೂನಿ ಭಾರತೀಯರಿಗೆ ಆಘಾತ ನೀಡಲು ಎದುರು ನೋಡುತ್ತಿದ್ದಾರೆ.

ಬಿಗ್‌ ಬ್ಯಾಶ್‌: ಬ್ರಿಸ್ಬೆನ್‌ ತಂಡಕ್ಕೆ ಪೂನಂ ಸೇರ್ಪಡೆ

ಮೆಲ್ಬರ್ನ್‌: ಮುಂದಿನ ತಿಂಗಳು ಆರಂಭವಾಗಲಿರುವ 7ನೇ ಆವೃತ್ತಿಯ ಮಹಿಳೆಯರ ಬಿಗ್‌ ಬ್ಯಾಶ್‌ (Big Bash League) ಟಿ20 ಲೀಗ್‌ನಲ್ಲಿ ಬ್ರಿಸ್ಬೆನ್‌ ಹೀಟ್‌ ತಂಡದ ಪರವಾಗಿ ಪೂನಂ ಯಾದವ್‌ (Poonam Yadav) ಕಣಕ್ಕೆ ಇಳಿಯಲಿದ್ದಾರೆ. ಇದರೊಂದಿಗೆ ಮುಂದಿನ ಬಿಗ್‌ ಬ್ಯಾಶ್‌ನಲ್ಲಿ ಆಡಲಿರುವ 8ನೇ ಭಾರತದ ಆಟಗಾರ್ತಿ ಪೂನಂ ಆಗಿದ್ದಾರೆ. ನ್ಯೂಜಿಲೆಂಡ್‌ನ ತಾರಾ ಆಟಗಾರ್ತಿ ಅಮೆಲಿಯಾ ಕೆರ್ರ್ ಪಂದ್ಯಾವಳಿಗೆ ಅಲಭ್ಯರಾದ ಕಾರಣ ಪೂನಂ ಬ್ರಿಸ್ಬೆನ್‌ ತಂಡವನ್ನು ಕೂಡಿಕೊಂಡಿದ್ದಾರೆ.

IPL 2021: ಪ್ಲೇ ಆಫ್‌ಗೂ ಮುನ್ನ KKR ತಂಡಕ್ಕೆ ಸಿಕ್ತು ಗುಡ್‌ ನ್ಯೂಸ್‌..!

ಪ್ರಸ್ತುತ ಆಸ್ಪ್ರೇಲಿಯಾ ಪ್ರವಾಸದಲ್ಲಿರುವ ಪೂನಂ 2 ಏಕದಿನ ಪಂದ್ಯದಲ್ಲಿ ಸ್ಥಾನ ಪಡೆದಿದ್ದರು. ಆದರೆ, ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಸ್ಥಾನ ಲಭಿಸಿರಲಿಲ್ಲ. ಈಗಾಗಲೇ ಶಫಾಲಿ ವರ್ಮಾ, ರಾಧಾ ಯಾದವ್‌, ಸ್ಮೃತಿ ಮಂಧನಾ, ದೀಪ್ತಿ ಶರ್ಮಾ, ರಿಚಾ ಘೋಷ್‌, ಜೆಮಿಮಾ ರೋಡಿಗ್ರಸ್‌, ಹರ್ಮನ್‌ಪ್ರೀತ್‌ ಕೌರ್‌ ಬಿಗ್‌ ಬ್ಯಾಶ್‌ನಲ್ಲಿ ಆಡಲು ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.

click me!