ಟೀಂ ಇಂಡಿಯಾ ಕ್ರಿಕೆಟಿಗರಿಗೆ ಕೋಟಿ ಕೋಟಿ ಸಂಭಾವನೆ ಇದೆ. ಎ ಗ್ರೇಡ್ ಆಟಗಾರರಿಗೆ ವರ್ಷಕ್ಕೆ 7 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಆದರೆ ಮಹಿಳಾ ಕ್ರಿಕೆಟಿಗರ ಸಂಭಾವನೆ ಲಕ್ಷ ರೂಪಾಯಿ. ಇದೀಗ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ವೇತನ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮುಂಬೈ(ಜ.23): ಭಾರತೀಯ ಮಹಿಳಾ ಕ್ರಿಕೆಟ್ ಆದಾಯ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಆದಾಯ ಹರಿದು ಬರುವುದೇ ಪುರುಷರ ಕ್ರಿಕೆಟ್‌ನಿಂದ, ಹೀಗಿರುವಾಗ ಅವರಷ್ಟೇ ಸಂಭಾವನೆಯನ್ನು ನಿರೀಕ್ಷಿಸುವುದು ತಪ್ಪಾಗುತ್ತದೆ ಎಂದು ಭಾರತ ವನಿತೆಯರ ತಂಡದ ತಾರಾ ಆಟಗಾರ್ತಿ ಸ್ಮೃತಿ ಮಂಧನಾ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಬ್ಯಾಟ್ ಕೆಳಗಿಟ್ಟು ಸೌಟು ಹಿಡಿದ ಸ್ಮೃತಿ ಮಂಧನಾ
undefined
ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಭಾರತದಲ್ಲಿ ಕ್ರಿಕೆಟ್‌ನಿಂದ ಆದಾಯ ಸಾಧ್ಯವಾಗುವುದೇ ಪುರುಷರ ಕ್ರಿಕೆಟ್‌ನಿಂದ. ಈ ವಾಸ್ತವಾಂಶವನ್ನು ನಾವು ಅರಿಯಬೇಕಿದೆ. ಮಹಿಳಾ ಕ್ರಿಕೆಟ್‌ಗೂ ಮುಂದಿನ ದಿನಗಳಲ್ಲಿ ಇದೇ ರೀತಿ ಆದಾಯ ಹರಿದು ಬಂದಾಗ ಹೆಚ್ಚಿನ ಸಂಭಾವನೆಯನ್ನು ನಿರೀಕ್ಷಿಸಬಹುದಾಗಿದೆ. ಆ ದಿನಗಳಿಗಾಗಿ ನಾನೂ ಕೂಡ ಕಾಯುತ್ತಿದ್ದೇನೆ’ ಎಂದರು.
ಇದನ್ನೂ ಓದಿ: ಐಸಿಸಿ ವರ್ಷದ ತಂಡ: ಸ್ಮೃತಿ ಮಂಧನಾಗೆ ಸ್ಥಾನ
ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿ ಅತ್ಯುನ್ನತ ದರ್ಜೆಯಲ್ಲಿ ಸ್ಥಾನ ಪಡೆಯುವ ಪುರುಷ ಆಟಗಾರರಿಗೆ ವರ್ಷಕ್ಕೆ .7 ಕೋಟಿ ಸಂಭಾವನೆ ಸಿಗಲಿದೆ. ‘ಎ’ ದರ್ಜೆಯಲ್ಲಿರುವ ಮಹಿಳಾ ಕ್ರಿಕೆಟರ್‌ಗಳಿಗೆ ವರ್ಷಕ್ಕೆ .50 ಲಕ್ಷ ಸಂಭಾವನೆ ದೊರೆಯಲಿದೆ.