
ಬೆಂಗಳೂರು(ಜ.23): ಜ.27ರಿಂದ ದೆಹಲಿಯಲ್ಲಿ ನಡೆಯಲಿರುವ ಸರ್ವೀಸಸ್ ವಿರುದ್ಧದ ರಣಜಿ ಟ್ರೋಫಿ ಪಂದ್ಯಕ್ಕೆ ಬುಧವಾರ ಕರ್ನಾಟಕ ತಂಡವನ್ನು ಪ್ರಕಟಿಸಲಾಯಿತು. ಮದುವೆ ಕಾರಣದಿಂದ ಕಳೆದ ಪಂದ್ಯದಿಂದ ಹೊರಗುಳಿದಿದ್ದ ನಾಯಕ ಕರುಣ್ ನಾಯರ್ ಇದೀಗ ಮತ್ತೆ ತಂಡ ಸೇರಿಕೊಂಡಿದ್ದಾರೆ. ಈ ಮೂಲಕ ಸರ್ವೀಸಸ್ ವಿರುದ್ದದ ಪಂದ್ಯದಲ್ಲಿ ಬಲಿಷ್ಠ ತಂಡವನ್ನು ಪ್ರಕಟಿಸಲಾಗಿದೆ.
ಇದನ್ನೂ ಓದಿ: ರಣಜಿ ಟ್ರೋಫಿ: ಸಮರ್ಥ ಹೋರಾಟಕ್ಕೆ ಒಲಿದ ಡ್ರಾ!...
ಸರ್ವೀಸಸ್ ವಿರುದ್ಧದ ಪಂದ್ಯದಲ್ಲಿ ರಾಜ್ಯ ತಂಡವನ್ನು ಕರುಣ್ ನಾಯರ್ ಮುನ್ನಡೆಸಲಿದ್ದಾರೆ. ಆಲ್ರೌಂಡರ್ ಕೆ.ಗೌತಮ್ ಪಂದ್ಯದ ವೇಳೆಗೆ ಫಿಟ್ ಆದರೆ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಇಲ್ಲವಾದಲ್ಲಿ ಜೆ.ಸುಚಿತ್ ತಂಡದೊಂದಿಗೆ ತೆರಳಲಿದ್ದಾರೆ ಎಂದು ಕೆಎಸ್‌ಸಿಎ ತಿಳಿಸಿದೆ. ಕರ್ನಾಟಕ ತಂಡ ಈ ಕೆಳಗಿನಂತಿದೆ.
ಕರ್ನಾಟಕ ತಂಡ:
ಕರುಣ್ ನಾಯರ್ (ನಾಯಕ), ಶ್ರೇಯಸ್ ಗೋಪಾಲ್, ದೇವದತ್ ಪಡಿಕ್ಕಲ್, ಪವನ್ ದೇಶಪಾಂಡೆ, ರೋಹನ್ ಕದಂ, ಕೆ.ವಿ.ಸಿದ್ಧಾಥ್‌ರ್, ಆರ್.ಸಮಥ್‌ರ್, ಅಭಿಮನ್ಯು ಮಿಥುನ್, ಶರತ್ ಬಿ.ಆರ್, ಶರತ್ ಶ್ರೀನಿವಾಸ್, ಪ್ರವೀಣ್ ದುಬೆ, ಪ್ರತೀಕ್ ಜೈನ್, ವಿ.ಕೌಶಿಕ್, ರೋನಿತ್ ಮೋರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.