ಧೋನಿಗಾಗಿ ಐಪಿಎಲ್‌ ರೂಲ್ಸ್ ಅನ್ನೇ ಬದಲಿಸಲು ಮುಂದಾಯ್ತಾ ಬಿಸಿಸಿಐ..? ಇಲ್ಲಿದೆ ಹೊಸ ಅಪ್‌ಡೇಟ್ಸ್

By Naveen Kodase  |  First Published Aug 18, 2024, 6:34 PM IST

ಕ್ರಿಕೆಟ್ ಲೆಜೆಂಡ್ ಮಹೇಂದ್ರ ಸಿಂಗ್ ಧೋನಿಗಾಗಿ ಬಿಸಿಸಿಐ ಮತ್ತೆ ಹೊಸದಾಗಿ ರೂಲ್ಸ್ ಜಾರಿಗೆ ತರಲು ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಬೆಂಗಳೂರು: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಈಗಾಗಲೇ ಸಿದ್ದತೆಗಳು ಶುರುವಾಗಿವೆ. ಇನ್ನು ಕ್ರಿಕೆಟ್ ಲೆಜೆಂಡ್ ಮಹೇಂದ್ರ ಸಿಂಗ್ ಧೋನಿ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆಟಗಾರನಾಗಿ ಕಣಕ್ಕಿಳಿಯುತ್ತಾರೆಯೇ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಹೀಗಿರುವಾಗಲೇ, ಎಂ ಎಸ್ ಧೋನಿಯನ್ನು ಕಣಕ್ಕಿಳಿಸಲು ಬಿಸಿಸಿಐ, ಐಪಿಎಲ್‌ ರೂಲ್ಸ್‌ ಅನ್ನೇ ಪುನಃ ಪರಿಷ್ಕರಿಸಲು ಮುಂದಾಗಿದೆ ಎನ್ನುವ ಚರ್ಚೆಗಳು ಆರಂಭವಾಗಿವೆ.

ಮುಂಬರುವ 18ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಮೆಗಾ ಹರಾಜು ನಡೆಯಲಿದೆ. ಮೆಗಾ ಹರಾಜಿಗೂ ಎಲ್ಲಾ ಫ್ರಾಂಚೈಸಿಗಳು ತಮಗೆ ಬೇಕಾದ ನಿಗದಿತ ಸಂಖ್ಯೆಯ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಫ್ರಾಂಚೈಸಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಹಾಗಂತ ಮುಂಬರುವ ಮೆಗಾ ಹರಾಜಿಗೂ ಮುನ್ನ ಎಷ್ಟು ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡುತ್ತದೆ ಎನ್ನುವುದರ ಬಗ್ಗೆ ಬಿಸಿಸಿಐ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ. ಹೀಗಿರುವಾಗಲೇ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿಯು ದಿಗ್ಗಜ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ರೀಟೈನ್ ಮಾಡಿಕೊಳ್ಳಲು ಈ ಹಿಂದೆ ಚಾಲ್ತಿಯಲ್ಲಿದ್ದ ರೂಲ್ಸ್‌ ಅನ್ನು ಮತ್ತೆ ಜಾರಿಗೆ ತರಲು ಬಿಸಿಸಿಐ ಬಳಿ ಮನವಿ ಮಾಡಿಕೊಂಡಿದೆ ಎಂದು ವರದಿಯಾಗಿದೆ. 

Tap to resize

Latest Videos

undefined

6 ವರ್ಷ ಜೂನಿಯರ್ ಮೇಲೆ ಲವ್, ಕದ್ದುಮುಚ್ಚಿ ನಂಬರ್ ಪಡೆದು ಮಾಡ್ರಿದ್ರು ಕಾಲ್‌! ಕ್ರಿಕೆಟಿಗನ ರೊಮ್ಯಾಂಟಿಕ್ ಲವ್‌ ಸ್ಟೋರಿ

ಹೌದು, ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿ 5 ವರ್ಷ ಕಳೆದ ಆಟಗಾರರನ್ನು ಅನ್‌ಕ್ಯಾಪ್ಡ್‌ ಆಟಗಾರರ ಕೆಟಗೆರೆಗೆ ಸೇರಿಸುವ ರೂಲ್ಸ್ ಈ ಹಿಂದೆಯೇ ಚಾಲ್ತಿಯಲ್ಲಿತ್ತು. ಇದು ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹಿಡಿದು 2021ರ ಐಪಿಎಲ್ ಟೂರ್ನಿಯವರೆಗೂ ಜಾರಿಯಲ್ಲಿತ್ತು.  ಆದರೆ ಈ ರೂಲ್ಸ್‌ ಅನ್ನು ಅಲ್ಲಿಯವರೆಗೆ ಯಾವುದೇ ಫ್ರಾಂಚೈಸಿಯು ಬಳಕೆ ಮಾಡದ ಹಿನ್ನೆಲೆಯಲ್ಲಿ ಬಿಸಿಸಿಐ ಈ ರೂಲ್ಸ್ ತೆಗೆದುಹಾಕಿತ್ತು. ಆದರೆ ಕಳೆದ ಜುಲೈ 31ರಂದು ಬಿಸಿಸಿಐ ಹಾಗೂ ಫ್ರಾಂಚೈಸಿಗಳ ನಡುವಿನ  ಮಾತುಕತೆ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಆ ಹಳೆಯ ರೂಲ್ಸ್‌ ಅನ್ನು ಮತ್ತೆ ಜಾರಿಗೆ ತರುವಂತೆ ಮನವಿ ಮಾಡಿಕೊಂಡಿದೆ ಎಂದು ನ್ಯೂಸ್ 18 ವೆಬ್‌ಸೈಟ್ ವರದಿ ಮಾಡಿದೆ.

ಆದರೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಮನವಿಗೆ ಸಹ ಫ್ರಾಂಚೈಸಿಗಳಿಂದ ಸೂಕ್ತ ಸಹಕಾರ ವ್ಯಕ್ತವಾಗಿಲ್ಲ ಎಂದು ವರದಿಯಾಗಿದೆ. ಹೀಗಿದ್ದೂ ಬಿಸಿಸಿಐ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ 5 ವರ್ಷದ ಬಳಿಕ ಆ ಆಟಗಾರರನ್ನು ಅನ್‌ಕ್ಯಾಪ್ಡ್‌ ಆಟಗಾರರ ಪಟ್ಟಿಗೆ ಸೇರಿಸಲು ಒಲವು ಹೊಂದಿದೆ ಎನ್ನಲಾಗುತ್ತಿದೆ. 

ಮಹೇಂದ್ರ ಸಿಂಗ್ ಧೋನಿ 2020ರ ಆಗಸ್ಟ್ 15ರಂದು ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಸದ್ಯ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು 12 ಕೋಟಿ ರುಪಾಯಿ ನೀಡಿ ಧೋನಿಯನ್ನು ರೀಟೈನ್ ಮಾಡಿಕೊಂಡಿತ್ತು. ಇನ್ನು ಟೂರ್ನಿ ಆರಂಭಕ್ಕೂ ಮುನ್ನವೇ ಧೋನಿ ತಾವು ಸ್ವಯಂಪ್ರೇರಿತವಾಗಿ ನಾಯಕತ್ವದಿಂದ ಕೆಳಗಿಳಿದಿದ್ದರು. ಹೀಗಾಗಿ ಋತುರಾಜ್ ಗಾಯಕ್ವಾಡ್‌ಗೆ ಚೆನ್ನೈ ತಂಡದ ನಾಯಕರಾಗಿ ನೇಮಕವಾಗಿದ್ದರು.

ಆರ್‌ಸಿಬಿಗೆ ದೊಡ್ಡ ಶಾಕ್ ಕೊಟ್ಟ ಸ್ಟಾರ್ ಕ್ರಿಕೆಟಿಗ..! ಬೆಂಗಳೂರು ತಂಡ ತೊರೆಯೋದು ಗ್ಯಾರಂಟಿ..?

ಧೋನಿ ಅನ್‌ಕ್ಯಾಪ್ಡ್‌ ಆಟಗಾರನಾದ್ರೆ ಚೆನ್ನೈಗೆ ಏನು ಲಾಭ?

ಈ ಕುತೂಹಲ ನಿಮಗೂ ಕಾಡಿರಬಹುದು ಅಲ್ಲವೇ?  ಹೌದು, ಅಂತಾರಾಷ್ಟ್ರೀಯ ಕ್ರಿಕೆಟಿಗರನ್ನು ಫ್ರಾಂಚೈಸಿಯು ರೀಟೈನ್ ಮಾಡಿಕೊಂಡರೆ, ಗರಿಷ್ಠ 16 ಕೋಟಿ ಹಾಗೂ ಕನಿಷ್ಠ 8 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಅನ್‌ಕ್ಯಾಪ್ಡ್‌(ಅಂತಾರಾಷ್ಟ್ರೀಯ ಪಂದ್ಯವನ್ನಾಡ ಆಟಗಾರ) ಪ್ಲೇಯರ್‌ ಅನ್ನು ರೀಟೈನ್‌ 4 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಳ್ಳಲು ಅವಕಾಶವಿದೆ. ಈ ಕಾರಣಕ್ಕಾಗಿಯೇ ಧೋನಿಯ ಬ್ರ್ಯಾಂಡ್‌ ವ್ಯಾಲ್ಯೂ ಉಳಿಸಿಕೊಳ್ಳುವುದರ ಜತೆಗೆ ಹರಾಜಿಗೆ ಪರ್ಸ್‌ನಲ್ಲಿಯೂ ಹಣವನ್ನು ಉಳಿಸಿಕೊಳ್ಳುವ ಲೆಕ್ಕಾಚಾರ ಚೆನ್ನೈ ಫ್ರಾಂಚೈಸಿಯದ್ದು. ಚೆನ್ನೈ ಫ್ರಾಂಚೈಸಿಯ ಮನವಿಗೆ ಬಿಸಿಸಿಐ ಸೊಪ್ಪು ಹಾಕುತ್ತಾ ಅಥವಾ ಇಲ್ಲವೇ ಎನ್ನುವುದನ್ನು ಕಾದು ನೋಡಬೇಕಿದೆ.
 

click me!