Ranji Trophy ಅಂದು ಬೇಡವಾಗಿದ್ದ ವೃದ್ದಿಮಾನ್ ಸಾಹ ಇಂದು ಬೆಂಗಾಲ್‌ಗೆ ಬೇಕಾಗಿದ್ದೇಕೆ..?

Published : May 30, 2022, 03:09 PM IST
Ranji Trophy  ಅಂದು ಬೇಡವಾಗಿದ್ದ ವೃದ್ದಿಮಾನ್ ಸಾಹ ಇಂದು ಬೆಂಗಾಲ್‌ಗೆ ಬೇಕಾಗಿದ್ದೇಕೆ..?

ಸಾರಾಂಶ

* ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದ ವೃದ್ದಿಮಾನ್ ಸಾಹ * ಬೆಂಗಾಲ್ ಕ್ರಿಕೆಟ್ ಸಂಸ್ಥೆಯ ಮೇಲೆ ತಮ್ಮ ಅಸಮಾಧಾನ ಹೊರಹಾಕಿದ ವಿಕೆಟ್ ಕೀಪರ್ ಸಾಹ * ತಮಗೆ ಎದುರಾದ ಅವಮಾನಕ್ಕೆ ತಿರುಗೇಟು ನೀಡಲು ಸಾಹ ರೆಡಿ

ಕೋಲ್ಕತಾ(ಮೇ.30): ವೃದ್ಧಿಮಾನ್ ಸಾಹ (Wriddhiman Saha). ವಯಸ್ಸು 37. ಜೂನಿಯರ್ಸ್​ಗೆ ಚಾನ್ಸ್ ಕೊಡುವ ದೃಷ್ಟಿಯಿಂದ ಭಾರತ ಟೆಸ್ಟ್ ತಂಡದಿಂದ ಕೈ ಬಿಡಲಾಯ್ತು. ಸಾಹ ಜೊತೆ ಮಾತನಾಡಿಯೇ ಕೋಚ್ ದ್ರಾವಿಡ್, ಈ ನಿರ್ಧಾರ ಕೈಗೊಂಡಿದ್ದರು. ಟೀಂ ಇಂಡಿಯಾದಿಂದ ಡ್ರಾಪ್ ಆದ ಬೆನ್ನಲ್ಲೇ ಬೆಂಗಾಳ್ ರಣಜಿ ಟೀಮ್​ನಿಂದ (Bengal Ranji Team) ಏಕಾಏಕಿ ಕಿಕೌಟ್ ಮಾಡಲಾಯ್ತು. ಅಟ್ ಲಿಸ್ಟ್​ ಒಂದುವರೆ ದಶಕದಿಂದ ಬೆಂಗಾಳ್ ಪರ ಆಡ್ತಿದ್ದಾರೆ ಅನ್ನೋ ಒಂದು ಕನ್ಸರ್ನ್​​​​ಗಾಗಿಯಾದ್ರೂ ಡ್ರಾಪ್ ಮಾಡೋಕು ಮುನ್ನ ಸಾಹ ಅವರೊಂದಿಗೆ ಮಾತನಾಡಲಿಲ್ಲ ಬೆಂಗಾಳ್ ಕ್ರಿಕೆಟ್ ಸಂಸ್ಥೆ.

ಕೀಪರ್ ಕಮ್ ಓಪನರ್​.. ಐಪಿಎಲ್​ನಲ್ಲಿ ಧೂಳೆಬ್ಬಿಸಿದ ಸಾಹ..:

ಎರಡು ಟೀಮ್​ನಿಂದ ಡ್ರಾಪ್ ಆದ ಬೇಸರದಲ್ಲಿದ್ದ ವೃದ್ದಿಮಾನ್ ಸಾಹ ಅವರನ್ನ 1.9 ಕೋಟಿಗೆ ಹೊಸ ತಂಡ ಗುಜರಾತ್ ಟೈಟನ್ಸ್ (Gujarat Titans) ಖರೀದಿಸ್ತು. ಆದರೆ ಆರಂಭದಲ್ಲಿ ನಾಲ್ಕೈದು ಪಂದ್ಯಗಳಲ್ಲಿ ಬೆಂಚ್ ಕಾದ್ರು. ಬಳಿಕ ಆಡಲು ಚಾನ್ಸ್ ಸಿಕ್ಕಿದ್ದೇ ತಡ, ಆರ್ಭಟಿಸಲು ಶುರು ಮಾಡಿದ್ರು. ಶುಬ್​ಮನ್ ಗಿಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಸಾಹ, ಲೀಗ್​ನಲ್ಲಿ 10 ಪಂದ್ಯಗಳಲ್ಲಿ 123ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟಿಂಗ್ ಮಾಡಿ ಮೂರು ಹಾಫ್ ಸೆಂಚುರಿ ಸಹಿತ 312 ರನ್ ಬಾರಿಸಿದ್ರು. ಈ ಮೂಲ್ಕ ತನ್ನ ಮೇಲೆ ನಂಬಿಕೆಯಿಟ್ಟು ಕೋಟಿ ಸುರಿದ ಫ್ರಾಂಚೈಸಿಗಳ ನಂಬಿಕೆಯನ್ನ ಉಳಿಸಿಕೊಂಡರು. ಚೊಚ್ಚಲ ಆವೃತ್ತಿಯಲ್ಲೇ ಗುಜರಾತ್, ಐಪಿಎಲ್​ನಲ್ಲಿ ಮಿಂಚಲು ಕಾರಣರಾದ್ರು.

ರಣಜಿ ಲೀಗ್​ನಿಂದ ಡ್ರಾಪ್ ಮಾಡಿ ನಾಕೌಟ್​ಗೆ ಸೆಲೆಕ್ಟ್ ಮಾಡಿದ್ದೇಕೆ:

ಭಾರತ ಟೆಸ್ಟ್​ ತಂಡದಿಂದ (Indian Test Cricket Team) ಡ್ರಾಪ್ ಆದ ಬೆನ್ನಲ್ಲೇ ರಣಜಿ ತಂಡದಿಂದ ಸಾಹ ಅವರನ್ನ ಕೈ ಬಿಟ್ಟು ಅವಮಾನ ಮಾಡಿತ್ತು ಬೆಂಗಾಳ್ ಕ್ರಿಕೆಟ್ ಸಂಸ್ಥೆ. ಆದರೆ IPL​ನಲ್ಲಿ ವಿಕೆಟ್​ ಹಿಂದೆ-ಮುಂದೆ ಉತ್ತಮ ಪ್ರದರ್ಶನ ನೀಡುತ್ತಿದಂತೆ ಸಾಹ ಮೇಲೆ ಬೆಂಗಾಳ್ ಕ್ರಿಕೆಟ್ ಸಂಸ್ಥೆಗೆ ಪ್ರೀತಿ ಹೆಚ್ಚಾಗಿದೆ. ಜೂನ್ 6ರಿಂದ ಆರಂಭವಾಗುವ ರಣಜಿ ನಾಕೌಟ್ ಪಂದ್ಯಗಳಿಗೆ ಸಾಹ ಅವರನ್ನ ಬೆಂಗಾಳ್ ಟೀಮ್​ಗೆ ಸೆಲೆಕ್ಟ್ ಮಾಡಿದೆ. ಅಂದು ಅವಮಾನ ಮಾಡಿ, ಇಂದು ಅವಕಾಶ ನೀಡಿರೋ ಸಂಸ್ಥೆ ವಿರುದ್ಧ ಸಾಹ ಗರಂ ಆಗಿದ್ದಾರೆ. ನನ್ನನ್ನ ಕೇಳದೆಯೇ ತಂಡಕ್ಕೆ ಆಯ್ಕೆ ಮಾಡಿದ್ದೇಗೆ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಅಂದು ನನಗೆ ಅವಮಾನ ಮಾಡಿದಕ್ಕೆ ಕ್ಷಮೆಯಾಚಿಸಿ, ಇಲ್ಲದಿದ್ದರೆ ಬೇರೆ ತಂಡದ ಪರ ಆಡಲು ಎನ್​ಒಸಿ ಕೊಡಿ ಎಂದು ಖಡಕ್ಕಾಗಿ ಹೇಳಿದ್ದಾರೆ.

IPL Awards 2022: ಉಮ್ರಾನ್ ಮಲಿಕ್ ಉದಯೋನ್ಮುಖ ಆಟಗಾರ, ಮತ್ಯಾರಿಗೆ ಸಿಕ್ತು ಯಾವೆಲ್ಲಾ ಅವಾರ್ಡ್?

ಯಾವ್ದೇ ಒಬ್ಬ ಆಟಗಾರ ಅವಮಾನವನ್ನ ಸಹಿಸಿಕೊಳ್ಳಲ್ಲ. ಸಾಹ ಏನು ಕಳಪೆ ಆಟಗಾರ ಅಲ್ಲ. ಅವರ ಟ್ರ್ಯಾಕ್ ರೆಕಾರ್ಡ್​ ಅದ್ಭುತವಾಗಿದೆ. ಭಾರತದ ಪರ ಟೆಸ್ಟ್ ಮತ್ತು ಒನ್​ಡೇ ಆಡಿದ್ದಾರೆ. ಆರಂಭದಿಂದಲೂ ಐಪಿಎಲ್ ಆಡುತ್ತಿರುವ ಬೆಂಗಾಳಿ ಪ್ಲೇಯರ್​, ಬೆಂಗಳೂರಿನಲ್ಲಿ ನಡೆದ 2014ರ ಫೈನಲ್ ಪಂದ್ಯದಲ್ಲಿ ಪಂಜಾಬ್ ಪರ ಸೆಂಚುರಿ ಸಹ ಬಾರಿಸಿದ್ದರು. ಆದ್ರೆ ಕೆಕೆಆರ್​​ ಆ ಪಂದ್ಯವನ್ನ ಗೆದ್ದು, ಐಪಿಎಲ್ ಟ್ರೋಫಿ ಗೆದ್ದುಕೊಂಡಿತು. ಅಂದು ಸಾಹ ಬ್ಯಾಟಿಂಗ್​​ಗೆ ದಿಗ್ಗಜರೆಲ್ಲಾ ಫಿದಾ ಆಗಿದ್ದರು.

ಬೆಂಗಾಳ್ ಸಂಸ್ಥೆ ಕ್ಷಮೆಯಾಚಿಸಲ್ಲ, ವೃದ್ಧಿಮಾನ್ ಸಾಹ ಆಡಲ್ಲ ಅನ್ನೋ ಸ್ಥಿತಿ ನಿರ್ಮಾಣವಾಗಿದೆ. ಎನ್​ಒಸಿ ತೆಗೆದುಕೊಂಡರೂ 37ನೇ ವಯಸ್ಸಿನಲ್ಲಿ ಸಾಹ ಅವರನ್ನ ಯಾವ ರಾಜ್ಯ ತಂಡವೂ ಸೇರಿಸಿಕೊಳ್ಳಲ್ಲ. ಅಲ್ಲಿಗೆ ಐಪಿಎಲ್ ಆಡಿಕೊಂಡು ನಿವೃತ್ತಿಯಾಗಬೇಕಾಗುತ್ತೆ ಅಷ್ಟೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ