WI vs IND ವಿಂಡೀಸ್ ವಿರುದ್ದದ 5ನೇ ಟಿ20ಯಲ್ಲಿ ಟಾಸ್ ಗೆದ್ದ ಭಾರತ, ನಾಯಕ ಸೇರಿ 4 ಬದಲಾವಣೆ!

By Suvarna NewsFirst Published Aug 7, 2022, 7:39 PM IST
Highlights

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯನ್ನು ಈಗಾಗಲೇ ಕೈವಶ ಮಾಡಿರುವ ಟೀಂ ಇಂಡಿಯಾ ಅಂತಿಮ ಪಂದ್ಯದ ಮೇಲೆ ಕಣ್ಣಿಟ್ಟಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. 
 

ಫ್ಲೋರಿಡಾ(ಆ.07): ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಅಂತಿಮ ಹಂತಕ್ಕೆ ತಲುಪಿದೆ. 5ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.  ತಂಡದಲ್ಲಿ ನಾಯಕ ಸೇರಿ 4 ಮಹತ್ವದ ಬದಲಾವಣೆ ಮಾಡಲಾಗಿದೆ. ರೋಹಿತ್ ಶರ್ಮಾ ಬದಲು ಅಂತಿಮ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ತಂಡ ಮುನ್ನಡೆಸುತ್ತಿದ್ದಾರೆ.  ವೆಸ್ಟ್ ಇಂಡೀಸ್ ತಂಡದಲ್ಲೂ 4 ಬದಲಾವಣೆ ಮಾಡಲಾಗಿದೆ. 

ಟೀಂ ಇಂಡಿಯಾ ಪ್ಲೇಯಿಂಗ್ 11
ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಹೂಡ, ದೀನೇಶ್ ಕಾರ್ತಿಕ್, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಅವೇಶ್ ಖಾನ್, ರವಿ ಬಿಶ್ನೋಯ್ ಅರ್ಶದೀಪ್ ಸಿಂಗ್

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11
ಶಮ್ರ ಬ್ರೂಕ್ಸ್, ಶಿಮ್ರೋನ್ ಹೆಟ್ಮೆಯರ್, ನಿಕೋಲಸ್ ಪೂರನ್(ನಾಯಕ), ಡೆವೋನ್ ಥೋಮಸ್, ಜೇಸನ್ ಹೋಲ್ಡರ್, ಒಡೆನ್ ಸ್ಮಿತ್, ಕೀಮ್ ಪೌಲ್, ಡೋಮ್ನಿಕ್ ಡ್ರಾಕ್ಸ್, ಒಬೆಡ್ ಮೆಕೆಯ್, ಹೈಡನ್ ವಾಲ್ಶ್, ರೊವ್ಮನ್ ಪೊವೆಲ್

WI vs Ind: ವಿಂಡೀಸ್‌ ವಿರುದ್ಧದ 4ನೇ ಟಿ-ಟ್ವೆಂಟಿ ಪಂದ್ಯದಲ್ಲಿ ಭಾರತಕ್ಕೆ ಜಯ, ಸರಣಿ ಕೈವಶ

ವಿಂಡೀಸ್ ವಿರುದ್ದದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಈಗಾಗಲೇ 3 ಪಂದ್ಯಗಳನ್ನು ಗೆದ್ದುಕೊಂಡು ಸರಣಿ ಕೈವಶ ಮಾಡಿದೆ. ಇದೀಗ ಅಂತಿಮ ಪಂದ್ಯ ಗೆದ್ದು ಗೆಲೆುವಿನ ಅಂತರ ಹಚ್ಚಿಸಿಕೊಳ್ಳಲು ನಿರ್ಧರಿಸಿದೆ. ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ, ಚುಟುಕು ಕ್ರಿಕೆಟ್ ಸರಣಿ 5-0 ಅಂತರದಲ್ಲಿ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ 2ನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ 5 ವಿಕೆಟ್ ಗೆಲುವು ದಾಖಲಿಸಿತ್ತು. ಭಾರತದ ವಿರುದ್ಧದ ಸರಣಿಯಲ್ಲಿ ವಿಂಡೀಸ್ ದಾಖಲಿಸಿದ ಏಕೈಕ ಗೆಲುವು ಇದಾಗಿದೆ. 

3 ಏಕದಿನ ಪಂದ್ಯ ಹಾಗೂ ಆರಂಭಿಕ 3 ಟಿ20 ಪಂದ್ಯದಳು ವೆಸ್ಟ್ಇಂಡೀಸ್‌ನಲ್ಲಿ ಆಯೋಜಿಸಲಾಗಿತ್ತು. 4ನೇ ಟಿ20 ಪಂದ್ಯ ಹಾಗೂ 5ನೇ ಟಿ20 ಪಂದ್ಯವನ್ನು ಅಮೆರಿಕಾದ ಫ್ಲೋರಿಡಾದಲ್ಲಿ ಆಯೋಜಿಸಲಾಗಿದೆ. ಫ್ಲೋರಿಡಾದಲ್ಲಿ ನಡೆದ ಕಳೆದ ಟಿ20 ಪಂದ್ಯದಲ್ಲಿ ಭಾರತ 59 ರನ್‌ಗಳ ಗೆಲುವು ದಾಖಲಿಸಿತ್ತು. ಈ ಮೂಲಕ ಟಿ20 ಸರಣಿ ವಶಪಡಿಸಿಕೊಂಡಿತ್ತು.  ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಭಾರತ, ವೆಸ್ಟ್‌ಇಂಡೀಸ್‌ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ 59 ರನ್‌ ಗೆಲುವು ಸಾಧಿಸಿತ್ತು. 

Commonwealth Games 2022: ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ಕ್ರಿಕೆಟ್‌ ತಂಡ!

ಮೊದಲು ಬ್ಯಾಟ್‌ ಮಾಡಿದ ರೋಹಿತ್‌ ಶರ್ಮಾ ಪಡೆ 5 ವಿಕೆಟ್‌ ಕಳೆದುಕೊಂಡು 191 ರನ್‌ ಕಲೆ ಹಾಕಿತು. ರಿಷಭ್‌ ಪಂತ್‌ 44 ರನ್‌ ಗಳಿಸಿದರೆ, ರೋಹಿತ್‌ ಶರ್ಮಾ 33, ಸಂಜು ಸ್ಯಾಮ್ಸನ್‌ ಔಟಾಗದೆ 30, ಸೂರ್ಯಕುಮಾರ್‌ 24 ರನ್‌ ಕೊಡುಗೆ ನೀಡಿದರು. ಕಠಿಣ ಗುರಿ ಬೆನ್ನತ್ತಿದ ವಿಂಡೀಸ್‌ * ಓವರಲ್ಲಿ * ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು. ನಿಕೋಲಸ್‌ ಪೂರನ್‌ 24(8 ಎಸೆತ), ರೋವ್ಮನ್‌ ಪೋವೆಲ್‌ 24 ರನ್‌ ಗಳಿಸಿದರು. ಆವೇಶ್‌ ಖಾನ್‌, ಅರ್ಶದೀಪ್‌ ಸಿಂಗ್‌, ಅಕ್ಷರ್‌ ಪಟೇಲ್‌ ಹಾಗೂ ರವಿ ಬಿಷ್ಟೋಯಿ ತಲಾ 2 ವಿಕೆಟ್‌ ಪಡೆದಿದ್ದರು. 
 

click me!