
ಟೀಂ ಇಂಡಿಯಾ ಸ್ಟಾರ್ ಸೂರ್ಯಕುಮಾರ್ ಯಾದವ್ ದುಬೈನಲ್ಲಿ ಹೊಸದಾಗಿ ಆಸ್ತಿ ಖರೀದಿಸಿದ್ದಾರೆ. ಖುದ್ದು ಸೂರ್ಯಕುಮಾರ್ ಯಾದವ್ ಹಾಗೂ ಅವರ ಪತ್ನಿ ದೇವಿಶಾ ಶೆಟ್ಟಿ ವೀಡಿಯೋ ಒಂದರಲ್ಲಿ ಹಂಚಿಕೊಂಡಿದ್ದಾರೆ.
ಸೂರ್ಯಕುಮಾರ್ ಯಾದವ್ ದುಬೈನಲ್ಲೇ ಯಾಕೆ ಆಸ್ತಿಯನ್ನು ಏಕೆ ಖರೀದಿಸಿದರು ಎಂಬುವುದುರ ಬಗ್ಗೆ ವಿಡಿಯೋದಲ್ಲಿ ವಿವರಣೆ ನೀಡಿದ್ದಾರೆ. ಟೀಂ ಇಂಡಿಯಾದಲ್ಲಿ ಸ್ಥಾನಕ್ಕಾಗಿ ಕಾಯುತ್ತಿರುವ ಸೂರ್ಯಕುಮಾರ್ ಯಾದವ್ ಸದ್ಯ ಹೌಸಿಂಗ್ ಪ್ರಾಜೆಕ್ಟ್ನತ್ತ ಹೆಚ್ಚು ಗಮನ ಹರಿಸಿದ್ದಾರೆ. ದುಬೈನ ಜೀವನ ಶೈಲಿ, ಭದ್ರತೆ ಆರೋಗ್ಯ ಸೌಲಭ್ಯಗಳಿಗೆ ಮಾರು ಹೋಗಿರುವ ಸೂರ್ಯಕುಮಾರ್ ಯಾದವ್ ಇದೀಗ ಅಲ್ಲ ಆಸ್ತಿ ಖರಿದಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಸೂರ್ಯಕುಮಾರ್ 2014 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಗಾಗಿ ದುಬೈಗೆ ಹೋಗಿದ್ದರು. ದುಬೈನಲ್ಲಿನ ತಮ್ಮ ಮೊದಲ ಭೇಟಿಯನ್ನು ಅವರು ನೆನಪಿಸಿಕೊಂಡಿದ್ದಾರೆ. ಅದಾದ ನಂತರ 2020ರಲ್ಲಿ ಮತ್ತೆ ದುಬೈಗೆ ಬಂದಾಗ ಅಲ್ಲಿನ ನಗರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತಿಯರು ಇರೋದು ಗೊತ್ತಾಗಿದೆ. ಭಾರತಿಯರು ದುಬೈ ಕಡೆ ಮುಖಮಾಡುತ್ತಿರೋದನ್ನು ಗಮನಿಸಿದ್ದಾರೆ.
ಎಲ್ಲರಿಗೂ ಸುರಕ್ಷತೆ ಮುಖ್ಯ. ನಾನು ವಾಸಿಸುವ ಮುಂಬೈಲ್ಲಿ ತುಂಬಾ ಸುರಕ್ಷಿತವಾಗಿರುತ್ತೇನೆ. ಆದರೆ ನನಗೆ ದುಬೈ ಸಂತೋಷವಾಗಿರುವ ವಿಶ್ರಾಂತಿ ಸ್ಥಳ. ನನಗೆ ಸಂತೋಷ ಅಂತಾ ಬಂದರೆ ದುಬೈ ಅತ್ಯಂತ ಆಪ್ತ ಎನಿಸಿತು. ಇಲ್ಲಿನ ಐಷಾರಾಮಿ ವ್ಯವಸ್ಥೆ ಮತ್ತು ಜೀವನ ಗುಣಮಟ್ಟವೇ ಬೇರೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
ಇನ್ನು ತಾವು ಖರೀದಿಸಿರುವ ಅಪಾರ್ಟ್ಮೆಂಟ್ ಬಗ್ಗೆ ಮಾತನ್ನಾಡಿರುವ ಸೂರ್ಯ, ಈ ಮನೆಗೆ ಶಾರುಖ್ಸ್ ರೆಸಿಡೆನ್ಸಸ್ ಎಂದು ನಾಮಕರಣ ಮಾಡಲಾಗಿದೆ. ಬಾಲಿವುಡನ್ ಶಾರುಖ್ ಖಾನ್ಗೆ ಹೆಸರಿನೊಂದಿಗೆ ಸಂಬಂಧಿಸಿ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳದ ತಕ್ಷಣವೇ ನನಗೆ ಇದರಲ್ಲಿ ಹೆಚ್ಚು ಆಸಕ್ತಿ ಮೂಡಿತು ಎಂದು ಸೂರ್ಯ ಹೇಳಿದ್ದಾರೆ.
ಸೂರ್ಯಕುಮಾರ್ ಯಾದವ್ ಮುಂಬೈನಲ್ಲಿ ಹೂಡಿಕೆ ಮಾಡಿದ್ದಾರೆ. ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ನಂತರ ಇದೀಗ ದುಬೈಲ್ಲಿ ಆಸ್ತಿ ಖರೀದಿ ಮಾಡಿದ್ದಾರೆ. ಮನಿ ಕಂಟ್ರೋಲ್ ಅವರದಿ ಪ್ರಕಾರ, ಸೂರ್ಯಕುಮಾರ್ ಪತ್ನಿ ದೇವಿಶಾ ಚೆಂಬೂರ್ ಪ್ರದೇಶದಲ್ಲಿ 7.18 ಕೋಟಿ ರೂ.ಗೆ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ. 1,516.20 ಚದರ ಅಡಿ ವಿಸ್ತೀರ್ಣದ ಆಸ್ತಿ ಗೋದ್ರೇಜ್ ಸ್ಕೈ ಟೆರೇಸಸ್ನಲ್ಲಿದೆ ಎಂದು ವರದಿ ಹೇಳಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.