Ind Vs WI: ಭುವಿಗೆ ಚಿನ್ನಸ್ವಾನಿ ವರವಾಗಿದ್ದು ಹೇಗೆ? ಅಂದು ಯುವ ವೇಗಿ ಇಂದು ಅನುಭವಿ!

Published : Oct 16, 2026, 08:27 PM IST
Bhuvaneswar kumar

ಸಾರಾಂಶ

ಟಿ-20 ಕ್ರಿಕೆಟ್‌ಗೆ ಭುವನೇಶ್ವರ್ ಕುಮಾರ್ ಅಧಿಕೃತವಾಗಿ ಕಂಬ್ಯಾಕ್ ಮಾಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಕ್ಕೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಗಲಿದ್ದು, ಈ ಮೈದಾನ ಭುವಿ ಪಾಲಿಗೆ ಅತ್ಯಂತ ವಿಶೇಷವಾಗಿದೆ. ಅಭಿಮಾನಿಗಳಲ್ಲಿ ಈ ಪಂದ್ಯ ತೀವ್ರ ಕುತೂಹಲ ಮೂಡಿಸಿದೆ.

ಕ್ರಿಕೆಟ್‌ನಲ್ಲಿ ಕಂಬ್ಯಾಕ್‌ ಮಾಡವುದು ಸುಲಭದ ಮಾತಲ್ಲ, ಆ ಕಂಬ್ಯಾಕ್‌ ಮಾಡಿದರೂ, ಅವರ ಆಯ್ಕೆಗೆ ಮೀನಾಮೇಷ ಏನಿಸುತ್ತಾರೆ. ಆ ಸಾಲಿನಲ್ಲಿ ಶಮಿ, ಸಿರಾಜ್‌, ಭುವನೇಶ್ವರ ಕುಮಾರ್‍‌ರಂತಹ ಪ್ರತಿಭೆಗಳು ಬರುತ್ತವೆ. ಆದರೆ ಇಂದು ಭಾರತ-ವಿಂಡೀಸ್‌ ಟಿ-20 ಮ್ಯಾಚ್‌ಗೆ ಭುವಿ ಎಂಟ್ರಿ ಆಗಿದೆ. ಅಧಿಕೃತ ಸ್ಥಾನ ಪಡೆದಿದ್ದಾರೆ. ಇವರ ಬದುಕಿನಲ್ಲಿ ಚಿನ್ನಸ್ವಾಮಿ ಬಂಗಾರವಾಗಿದ್ದು ಹೇಗೆ? ಇಲ್ಲಿದೆ ಕಂಪ್ಲೀಟ್‌ ಸ್ಟೋರಿ.

ಭುವಿ ಕಂಬ್ಯಾಕ್‌!

4 ವರ್ಷಗಳ ನಂತರ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಕ್ಕಾಗಿ ಭಾರತ ತಂಡವು ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮರಳುತ್ತಿದ್ದು, ಭುವನೇಶ್ವರ್ ಕುಮಾರ್ ಕೂಡ ಇಲ್ಲಿಗೆ ವಾಪಸಾಗುತ್ತಿದ್ದಾರೆ. ಅಷ್ಟೇ ಅಲ್ಲ, ಭುವನೇಶ್ವರ್ ಕುಮಾರ್ ಅವರು 25 ಡಿಸೆಂಬರ್ 2012 ರಂದು ಇದೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ವಿರುದ್ಧ ಆಡುವ ಮೂಲಕ ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಟಿ20 (T20I) ಪಂದ್ಯವನ್ನು ಆಡಿದ್ದರು.ಇಲ್ಲಿಂದಲೇ ಅಂತಾರಾಷ್ಟ್ರೀಯ ಜರ್ನಿ ಪ್ರಾರಂಭಿಸಿದ್ದ ಭುವಿಗೆ ಇಂದು ಮತ್ತೊಂದು ಬಾರಿ ಕೈ ಮಾಡಿ ಕರೆದಿದ್ದು ಅದೇ ಚಿನ್ನಸ್ವಾಮಿ ಸ್ಟೇಡಿಯಂ. ಇದಲ್ಲದೇ ಇನ್ನು ಹಲವು ನೆನೆಪುಗಳನ್ನು ಇಲ್ಲಿ ಮೆಲುಕು ಹಾಕಬಹುದಾಗಿದೆ.

ಐಪಿಎಲ್‌ಗೂ ಚಿನ್ನಸ್ವಾಮಿ ಕನೆಕ್ಷನ್‌!

ಭುವನೇಶ್ವರ ಇಂಡಿಯನ್ ಪ್ರೀಮಿಯರ್ ಲೀಗ್‌ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಇದೇ ಕ್ರೀಡಾಂಗಣದಲ್ಲಿ ಪ್ರತಿನಿಧಿಸಿದ್ದು, ಅವರ ಕೆರಿಯರ್‍‌ ಇತಿಹಾಸವನ್ನು ಹೇಳುತ್ತದೆ. ಆರಂಭಿಕ ಅಂತರರಾಷ್ಟ್ರೀಯ ದಿನಗಳಿಂದ ಹಿಡಿದು ವೃತ್ತಿಜೀವನದ ಮತ್ತೊಂದು ಪ್ರಮುಖ ಘಟ್ಟದವರೆಗೆ, ಚಿನ್ನಸ್ವಾಮಿ ಕ್ರೀಡಾಂಗಣವು ಭುವನೇಶ್ವರ್ ಕುಮಾರ್ ಅವರ ಕ್ರಿಕೆಟ್ ಜರ್ನಿಯಲ್ಲಿ ಅತ್ಯಂತ ವಿಶೇಷವಾದ ಮೈದಾನವಾಗಿದೆ.

ಭುವಿ ಮೇಲೆ ಎಲ್ಲಿಲ್ಲದ ಕ್ರೇಜ್‌!

ಅವರ ಹಿಸ್ಟಾರಿಕಲ್‌ ಜರ್ನಿ ಪೋಸ್ಟ್‌ ಜಾಲತಾಣದಲ್ಲಿ ಹಂಚಿಕೊಂಡ ಕ್ಷಣದಿಂದಲೇ ವೈರಲ್‌ ಆದ ಈ ಪೋಸ್ಟ್‌ ಅಭಿಮಾನಿಗಳಲ್ಲಿ ಹುರುಪು ನೀಡಿದೆ . ಅದರ ಜತೆಗೆ ಅಭಿಮಾನಿಗಳಲ್ಲಿ ಭುವಿ ಮೇಲಿರುವ ಕ್ರೇಜ್ ಅನ್ನು ತೋರಿಸುತ್ತದೆ. ಈ ಪೋಸ್ಟ್‌ನ ಕೊನೆಯಲ್ಲಿ ಭುವನೇಶ್ವರ್ ಕುಮಾರ್ ಅವರ ಚಿನ್ನಸ್ವಾಮಿ ಕ್ರೀಡಾಂಗಣದ ಪುನರಾಗಮನವು ಕೇವಲ ಹಳೆಯ ನೆನಪೇ ಅಥವಾ ಹೊಸ ಆರಂಭವೇ? ಎಂಬ ಪ್ರಶ್ನೆ ಹುಟ್ಟುಹಾಕುವ ಮೂಲಕ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ನಾಳೆ ಚಿನ್ನಸ್ವಾಮಿಯಲ್ಲಿ ಭುವಿಗೆ!

ಚಿನ್ನಸ್ವಾಮಿ ಎಂದರೆ ಭುವಿಗೆ ಲಕ್ಕಿ. ಅದರಲ್ಲಿ ಎರಡೂ ಮಾತಿಲ್ಲ, ಅದರಂತೆ ವಿಂಡೀಸ್‌ ಬ್ಯಾಟ್ಸ್‌ಮನ್‌ಗಳಿಗೆ ನೀರು ಕುಡಿಸುವುದಂತು ಪಕ್ಕಾ. ಏಕೆಂದರೆ ಚಿನ್ನಸ್ವಾಮಿಯಲ್ಲಿನ ಪ್ರತಿ ಮ್ಯಾಚ್‌ನಲ್ಲೂ ತನ್ನ ಸಾಮರ್ಥ್ಯ ತೋರಿರುವ ಭುವಿ ನಾಳಿನ ಮ್ಯಾಚ್‌ನಲ್ಲೂ ವಿಂಡೀಸ್‌ ದೂಳೀಪಟ ಮಾಡಲಿದ್ದಾರೆ ಎನ್ನುವ ಕೂತುಹಲ ಅಭಿಮಾನಗಳಲ್ಲಿ ಮೂಡಿದೆ ಎನ್ನಲಾಗಿದೆ. ಹಾಗಾಗಿ ನಾಳಿನ ಮ್ಯಾಚ್‌ ಎಲ್ಲರಲ್ಲೂ ಕೌತುಕ ಸೃಷ್ಟಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IND vs WI: ಬಿಸಿಸಿಐಗೆ ₹250 ಕೋಟಿ ಜಾಕ್‌ಪಾಟ್, ವೆಸ್ಟ್ ಇಂಡೀಸ್‌ಗೆ ಸಿಗೋದು 'ಸೊನ್ನೆ'! ಸಿಡಿದೆದ್ದ ವಿಂಡೀಸ್
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗಿಲ್ಲ ಸ್ಥಾನ; ರಹಾನೆ ಘೋಷಿಸಿದ ಟಾಪ್-5 ಬ್ಯಾಟರ್‌ಗಳ ಪಟ್ಟಿ ಇಲ್ಲಿದೆ!