ಆಫ್ಘಾನ್ ಸರಣಿಯಿಂದ ರಾಹುಲ್ ಔಟ್: ಟಿ20 ತಂಡಕ್ಕೆ ವಾಪಾಸ್ ಆಗಲು ಏನು ಮಾಡಬೇಕು?

By Naveen Kodase  |  First Published Jan 9, 2024, 2:47 PM IST

ಜೂನ್‌ನಲ್ಲಿ ನಡೆಯೋ ಟಿ20 ವರ್ಲ್ಡ್‌ಕಪ್‌ಗೆ ಟೀಂ ಇಂಡಿಯಾದ ಬ್ಲೂ ಪ್ರಿಂಟ್ ರೆಡಿಯಾಗಿದೆ. ಅಫ್ಘಾನಿಸ್ತಾನ ಟಿ20 ಸಿರೀಸ್‌ಗೆ ಸೆಲೆಕ್ಟ್ ಆಗಿರೋ ಬಹುತೇಕ ಆಟಗಾರರ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯೋ ಟಿ20 ವಿಶ್ವಕಪ್ ಆಡಲಿದ್ದಾರೆ. ಇಂಜುರಿಯಿಂದ ಕೆಲವರು ಆಯ್ಕೆಯಾಗಿಲ್ಲ. ಅವರು ಐಪಿಎಲ್ ಆಡಿ ತಂಡಕ್ಕೆ ರಿಟರ್ನ್ ಆಗಲಿದ್ದಾರೆ.


ಬೆಂಗಳೂರು(ಜ.09):ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟಿ20 ಟೀಮ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಆದ್ರೆ ಕನ್ನಡಿಗ ಕೆಎಲ್ ರಾಹುಲ್ ಮಾತ್ರ ಆಯ್ಕೆಯಾಗಿಲ್ಲ. ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ಸಿಗ್ತಿಲ್ಲ. ರಾಹುಲ್ ಆಡಿಸೋಕೆ ಪ್ಲೇಸ್ ಇಲ್ಲ ಅಂತಿದೆ ಬಿಸಿಸಿಐ. ಹಾಗಾದ್ರೆ ರಾಹುಲ್ ಟಿ20 ತಂಡಕ್ಕೆ ವಾಪಾಸ್ ಆಗಲು ಏನು ಮಾಡಬೇಕು ಅನ್ನೋದು ಇಲ್ಲಿದೆ ನೋಡಿ.

ಐಪಿಎಲ್‌ನಲ್ಲಿ ಡಿಸೈಡ್ ಆಗುತ್ತಾ ರಾಹುಲ್ ಟಿ20 ಭವಿಷ್ಯ..?

Tap to resize

Latest Videos

ಜೂನ್‌ನಲ್ಲಿ ನಡೆಯೋ ಟಿ20 ವರ್ಲ್ಡ್‌ಕಪ್‌ಗೆ ಟೀಂ ಇಂಡಿಯಾದ ಬ್ಲೂ ಪ್ರಿಂಟ್ ರೆಡಿಯಾಗಿದೆ. ಅಫ್ಘಾನಿಸ್ತಾನ ಟಿ20 ಸಿರೀಸ್‌ಗೆ ಸೆಲೆಕ್ಟ್ ಆಗಿರೋ ಬಹುತೇಕ ಆಟಗಾರರ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯೋ ಟಿ20 ವಿಶ್ವಕಪ್ ಆಡಲಿದ್ದಾರೆ. ಇಂಜುರಿಯಿಂದ ಕೆಲವರು ಆಯ್ಕೆಯಾಗಿಲ್ಲ. ಅವರು ಐಪಿಎಲ್ ಆಡಿ ತಂಡಕ್ಕೆ ರಿಟರ್ನ್ ಆಗಲಿದ್ದಾರೆ. 2022ರ ಟಿ20 ವರ್ಲ್ಡಕಪ್‌ ಸೆಮಿಫೈನಲ್ ಸೋತ ಬಳಿಕ ಟಿ20ಯಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ, ಕಮ್‌ಬ್ಯಾಕ್ ಮಾಡಿದ್ದಾರೆ. ಆದ್ರೆ ಫಿಟ್ನೆಸ್ ಇದ್ದರೂ ಕೆ ಎಲ್ ರಾಹುಲ್ ಮಾತ್ರ  ಟಿ20 ತಂಡಕ್ಕೆ ಆಯ್ಕೆಯಾಗಿಲ್ಲ.

ಟಿ20 ವಿಶ್ವಕಪ್ ರೇಸ್‌ನಲ್ಲಿ ಉಳಿಯಲು ಅಬ್ಬರಿಸಲೇಬೇಕು..! ಈ ಇಬ್ಬರಲ್ಲಿ ಯಾರಿಗೆ ಬೆಸ್ಟ್ ಚಾನ್ಸ್?

ಆರಂಭಿಕನಾಗಿ ರನ್ ಗಳಿಸಲು ಪರದಾಡಿದ್ದೇ ರಾಹುಲ್‌ಗೆ ಶಾಪ..!

ಯೆಸ್, ರಾಹುಲ್ ಟಿ20 ಟೀಮ್‌ಗೆ ಸೆಲೆಕ್ಟ್ ಆಗದೇ ಇರಲು ಕಾರಣನೇ ಅವರು ಓಪನರ್ ಆಗಿ ರನ್ ಗಳಿಸಲು ಪರದಾಡಿದ್ದು. 2022ರ ಟಿ20 ವಿಶ್ವಕಪ್ ಮತ್ತು ಐಪಿಎಲ್ನಲ್ಲಿ ಆರಂಭಿಕನಾಗಿ ಆಡಿದ ಪಂದ್ಯಗಳಲ್ಲಿ ಒಂದೊಂದು ರನ್ ಗಳಿಸಲು ಒದ್ದಾಡಿದ್ರು. ಇದು ಸಹ ತಂಡಗಳ ಸೋಲಿಗೆ ಕಾರಣವಾಗಿತ್ತು. ಮುಂಚೆಯೆಲ್ಲಾ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಕನ್ನಡಿಗ, ಇತ್ತೀಚೆಗೆ ಓಪನರ್ ಆಗಿ ಯಾಕೋ ರನ್ ಗಳಿಸಲು ಪರದಾಡುತ್ತಿದ್ದಾರೆ. ಈಗ ಇದೇ ಅವರನ್ನ ಟಿ20 ತಂಡದಿಂದ ಕಿಕೌಟ್ ಮಾಡಿಸಿದೆ.

ಟಿ20ಯಲ್ಲಿ ಲೋ ಆರ್ಡರ್‌ನಲ್ಲಿ ಆಡಿದ ಅನುಭವಿಲ್ಲ..!  

ರೋಹಿತ್ ಶರ್ಮಾ, ಶುಭ್‌ಮನ್ ಗಿಲ್, ಯಶಸ್ವಿ ಜೈಸ್ವಾಲ್ ಮತ್ತು ಋತುರಾಜ್ ಗಾಯಕ್ವಾಡ್ ಓಪನರ್ ಆಗಿ ಸಕ್ಸಸ್ ಆಗಿದ್ದಾರೆ. ಇನ್ನು ಮೂರನೇ ಕ್ರಮಾಂಕಕ್ಕೆ ವಿರಾಟ್ ಕೊಹ್ಲಿ, ನಂಬರ್ 4ರಲ್ಲಿ ಸೂರ್ಯಕುಮಾರ್ ಆಡಲಿದ್ದಾರೆ. ಹಾಗಾಗಿ ಓಪನರ್ ಮತ್ತು ಮಿಡಲ್ ಆರ್ಡರ್ನಲ್ಲಿ ರಾಹುಲ್‌ಗೆ ಜಾಗವಿಲ್ಲ. ಇನ್ನು ಲೋ ಆರ್ಡರ್ನಲ್ಲಿ ಆಡಿಸೋಣ ಅಂದ್ರೆ ಅವರಿಗೆ ಆ ಪ್ಲೇಸ್ನಲ್ಲಿ ಟಿ20 ಕ್ರಿಕೆಟ್ ಆಡಿ ಅನುಭವಿಲ್ಲ. ಹಾಗಾಗಿ ಅಫ್ಘನ್ ಸರಣಿಯಿಂದ ಕೈಬಿಡಲಾಗಿದೆ.

ಆಸೀಸ್ ಎದುರಿನ ಸೋಲಿಗೆ ಶ್ರೇಯಾಂಕ ಪಾಟೀಲ್‌ರನ್ನು ಹೊಣೆಯಾಗಿಸಿದ ಹರ್ಮನ್‌ಪ್ರೀತ್ ಕೌರ್!

ಟಿ20 ತಂಡಕ್ಕೆ ಕಮ್‌ಬ್ಯಾಕ್ ಮಾಡಲು ರಾಹುಲ್‌ಗೆ ಒಂದೇ ದಾರಿ

ಹೌದು, ಟಿ20 ಟೀಮ್‌ಗೆ ಕಮ್‌ಬ್ಯಾಕ್ ಮಾಡಲು ರಾಹುಲ್ ಮುಂದಿರುವುದು ಒಂದೇ ದಾರಿ. ಟೆಸ್ಟ್ ಮತ್ತು ಒನ್ಡೇಯಂತೆ ಟಿ20ಯಲ್ಲೂ ಲೋ ಆರ್ಡರ್ನಲ್ಲಿ ಆಡುವುದು. ಈ ಸೀಸನ್ ಐಪಿಎಲ್‌ನಲ್ಲಿ ಅವರು ಲಕ್ನೋ ಸೂಪರ್ ಜೈಂಟ್ಸ್ ತಂಡದ ಫಿನಿಶರ್ ಆಗಬೇಕಿದೆ. ಮ್ಯಾಚ್ ಫಿನಿಶರ್ ಮಾಡಿದ್ರೆ, ಆಗ ಅವರು ಲೋ ಆರ್ಡರ್ಗೆ ಫಿಕ್ಸ್ ಆಗ್ತಾರೆ. ಹೇಗಿದ್ದರೂ ಐಪಿಎಲ್ ಬಳಿಕ ಟಿ20 ವಿಶ್ವಕಪ್ ನಡೆಯೋದು. ಐಪಿಎಲ್ ಫರ್ಪಾಮೆನ್ಸ್ ನೋಡಿಯೇ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಆಯ್ಕೆ ಮಾಡೋದು. 

ವಿಕೆಟ್ ಕೀಪರ್ ಸ್ಥಾನಕ್ಕೆ ಬಿಗ್ ಫೈಟ್

ವಿಕೆಟ್ ಕೀಪರ್‌ಗಳ ಆಯ್ಕೆ ವಿಚಾರಕ್ಕೆ ಬಂದರೆ ಜಿತೇಶ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ರೇಸ್ನಲ್ಲಿದ್ದಾರೆ. ಕಿಶನ್ ವಿಶ್ರಾಂತಿಗೆ ಜಾರಿದ್ದು, ಅಫ್ಘನ್ ಸರಣಿಗೆ ಆಯ್ಕೆಯಾಗಿಲ್ಲ. ಜಿತೇಶ್-ಸಂಜು ಇಬ್ಬರೂ ಅಫ್ಘನ್ ಸರಣಿಗೆ ಆಯ್ಕೆಯಾಗಿದ್ದಾರೆ. ಐಪಿಎಲ್‌ನಲ್ಲಿ ವಿಕೆಟ್ ಕೀಪಿಂಗ್ ಜೊತೆ ಫಿನಿಶರ್ ಆಗಿ  ರಾಹುಲ್‌ ಹೇಗೆ ಆಡ್ತಾರೆ ಅನ್ನೋದನ್ನ ಸೆಲೆಕ್ಟರ್ಸ್ ಗಮನಿಸಲಿದ್ದಾರೆ. ಜೊತೆಗೆ ಇತರೆ ಕೀಪರ್ಸ್ ಪರ್ಫಾಮೆನ್ಸ್ ನೋಡಲಿದ್ದಾರೆ. ಆನಂತರವಷ್ಟೇ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಸೆಲೆಕ್ಟ್ ಮಾಡೋದು. ಒಟ್ನಲ್ಲಿ ಐಪಿಎಲ್ ಪರ್ಫಾಮೆನ್ಸ್ ರಾಹುಲ್ ಅವರ ಟಿ20 ಕ್ರಿಕೆಟ್ ಭವಿಷ್ಯ ನಿರ್ಧರಿಸಲಿದೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

click me!