130 ರನ್‌ ಗುರಿ ಬೆನ್ನತ್ತಿದ್ದ ಆಸೀಸ್‌, ಶ್ರೇಯಾಂಕ ಎಸೆದ 19ನೇ ಓವರಲ್ಲಿ 17 ರನ್‌ ದೋಚಿ ಪಂದ್ಯ ಗೆದ್ದಿತ್ತು. ಬಳಿಕ ಮಾತನಾಡಿದ ಹರ್ಮನ್‌, ‘19ನೇ ಓವರ್‌ ತನಕ ಪಂದ್ಯ ನಮ್ಮ ಕೈಯಲ್ಲಿತ್ತು. 19ನೇ ಓವರಲ್ಲಿ ಶ್ರೇಯಾಂಕ ರನ್‌ ನಿಯಂತ್ರಿಸಿದ್ದರೆ ಫಲಿತಾಂಶ ಬೇರೆ ಇರುತ್ತಿತ್ತು’ ಎಂದಿದ್ದಾರೆ. 

ನವ ಮುಂಬೈ(ಜ.09): ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20ದಲ್ಲಿ ಭಾರತದ ಸೋಲಿಗೆ ಕರ್ನಾಟಕದ 19ರ ಶ್ರೇಯಾಂಕ ಪಾಟೀಲ್‌ರನ್ನು ಹೊಣೆಯಾಗಿಸುವ ರೀತಿ ಮಾತನಾಡಿದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ವಿರುದ್ಧ ಮಾಜಿ ಕ್ರಿಕೆಟಿಗರು, ಅಭಿಮಾನಿಗಳಿಂದ ಭಾರೀ ಟೀಕೆ ವ್ಯಕ್ತವಾಗಿದೆ.

130 ರನ್‌ ಗುರಿ ಬೆನ್ನತ್ತಿದ್ದ ಆಸೀಸ್‌, ಶ್ರೇಯಾಂಕ ಎಸೆದ 19ನೇ ಓವರಲ್ಲಿ 17 ರನ್‌ ದೋಚಿ ಪಂದ್ಯ ಗೆದ್ದಿತ್ತು. ಬಳಿಕ ಮಾತನಾಡಿದ ಹರ್ಮನ್‌, ‘19ನೇ ಓವರ್‌ ತನಕ ಪಂದ್ಯ ನಮ್ಮ ಕೈಯಲ್ಲಿತ್ತು. 19ನೇ ಓವರಲ್ಲಿ ಶ್ರೇಯಾಂಕ ರನ್‌ ನಿಯಂತ್ರಿಸಿದ್ದರೆ ಫಲಿತಾಂಶ ಬೇರೆ ಇರುತ್ತಿತ್ತು’ ಎಂದಿದ್ದಾರೆ. 

Pro Kabaddi League ಬೆಂಗಳೂರು ಬುಲ್ಸ್‌ ಕಮ್‌ಬ್ಯಾಕ್‌ಗೆ ಬೆಚ್ಚಿದ ಪಾಟ್ನಾ ಪೈರೇಟ್ಸ್‌

ಇದಕ್ಕೆ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್‌ ಸೇರಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹರ್ಮನ್‌ ಸ್ವತಃ ಪಾರ್ಮ್‌ನಲ್ಲಿಲ್ಲ. ಆದರೆ ಸೋಲಿಗೆ19ರ ಶ್ರೇಯಾಂಕರನ್ನು ಗುರಿಯಾಗಿದ್ದಾರೆ. ಹತಾಶೆಯಿಂದ ಈ ರೀತಿ ಮಾತನಾಡುವ ಮೊದಲ ತಮ್ಮ ಕೊಡುಗೆ ಏನೆಂಬುದನ್ನು ಅರಿಯಲಿ. ಯುವ ಆಟಗಾರ್ತಿಯನ್ನು ‘ಹರಕೆಯ ಕುರಿ’ ಮಾಡುವುದು ನಾಯಕತ್ವ ಗುಣವಲ್ಲ’ ಎಂದು ಕುಟುಕಿದ್ದಾರೆ. ಅಂದಹಾಗೆ ಹರ್ಮನ್‌ ಈ ಸರಣಿಯ 5 ಪಂದ್ಯಗಳಲ್ಲಿ ಗಳಿಸಿದ್ದು ಒಟ್ಟು 23 ರನ್‌.

Scroll to load tweet…
Scroll to load tweet…

ಟೆಸ್ಟ್‌ ಕ್ರಿಕೆಟ್‌ಗೆ ಆಫ್ರಿಕಾದ ಹೆನ್ರಿಚ್‌ ಕ್ಲಾಸೆನ್‌ ವಿದಾಯ

ಪ್ರಿಟೋರಿಯಾ (ದಕ್ಷಿಣ ಆಫ್ರಿಕಾ): ಡೀನ್‌ ಎಲ್ಗರ್‌ ನಿವೃತ್ತಿ ಘೋಷಿಸಿದ ಬೆನ್ನಲ್ಲೆ ದಕ್ಷಿಣ ಆಫ್ರಿಕಾದ ಮತ್ತೊಬ್ಬ ಆಟಗಾರ, ವಿಕೆಟ್‌ ಕೀಪರ್‌ ಬ್ಯಾಟರ್‌ ಹೆನ್ರಿಚ್‌ ಕ್ಲಾಸೆನ್‌ ಟೆಸ್ಟ್‌ ಕ್ರಿಕೆಟ್‌ನಿಂದ ದೂರ ಸರಿದಿದ್ದಾರೆ. ಭಾರತದ ವಿರುದ್ಧ ರಾಂಚಿಯಲ್ಲಿ 2009ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಕ್ಲಾಸೆನ್‌ 4 ಟೆಸ್ಟ್‌ಗಳನ್ನಾಡಿ 104 ರನ್‌ ಗಳಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ 35 ರನ್‌ ಗಳಿಸಿದ್ದು, ಇವರ ಗರಿಷ್ಠ ರನ್‌ ಸಾಧನೆ. ಇತ್ತೀಚೆಗೆ ಮುಕ್ತಾಯಗೊಂಡ ಭಾರತದ ವಿರುದ್ಧದ ಟೆಸ್ಟ್‌ ಸರಣಿಗೆ ಕ್ಲಾಸೆನ್‌ ಅವರನ್ನು ಕೈಬಿಡಲಾಗಿತ್ತು.

ಟೀಂ ಇಂಡಿಯಾದ ಈ ಕ್ರಿಕೆಟಿಗರಿಗೆ ವಯಸ್ಸಾದರೂ ಹುಡುಗೀರು ಸಾಯ್ತಾರೆ!

ಕೂಚ್‌ ಬೆಹಾರ್ ಟೂರ್ನಿ: ಕರ್ನಾಟಕ ಫೈನಲ್‌ಗೆ

ಬೆಳಗಾವಿ: ಅಂಡರ್‌-19 ಕೂಚ್‌ ಬಿಹಾರ್‌ ಪ್ರಥಮ ದರ್ಜೆ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ಫೈನಲ್‌ಗೆ ಲಗ್ಗೆ ಇಟ್ಟಿದೆ. ಸೆಮಿಫೈನಲ್‌ನಲ್ಲಿ ರಾಜ್ಯ ತಂಡಕ್ಕೆ ತಮಿಳುನಾಡು ವಿರುದ್ಧ ಸೋಮವಾರ 9 ವಿಕೆಟ್‌ ಗೆಲುವು ಲಭಿಸಿತು. ತಮಿಳುನಾಡನ್ನು ಮೊದಲ ಇನ್ನಿಂಗ್ಸ್‌ನಲ್ಲಿ 128ಕ್ಕೆ ನಿಯಂತ್ರಿಸಿದ ಬಳಿಕ ಕರ್ನಾಟಕ 418 ರನ್‌ ಕಲೆಹಾಕಿತ್ತು. ಬಳಿಕ ತಮಿಳುನಾಡು 302 ರನ್‌ ಗಳಿಸಿ ರಾಜ್ಯಕ್ಕೆ 10 ರನ್‌ ಗುರಿ ನೀಡಿತ್ತು. 2 ಇನ್ನಿಂಗ್ಸ್‌ಗಳಲ್ಲಿ 8 ವಿಕೆಟ್‌ ಕಿತ್ತು ಅಗತ್ಸ್ಯ ರಾಜು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ರಾಜ್ಯ ತಂಡ ಜ.12ರಿಂದ ಫೈನಲ್‌ನಲ್ಲಿ ಮುಂಬೈ ವಿರುದ್ಧ ಸೆಣಸಾಡಲಿದೆ. ಪಂದ್ಯಕ್ಕೆ ಶಿವಮೊಗ್ಗದ ಕೆಎಸ್‌ಸಿಎ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.