ಮುಂಬರೋ T20 ವಿಶ್ವಕಪ್ ದೃಷ್ಟಿಯಿಂದ ಆಪ್ಘಾನಿಸ್ತಾನ ವಿರುದ್ಧದ T20 ಸರಣಿ ಟೀಂ ಇಂಡಿಯಾಗೆ ಮಹತ್ವದ್ದಾಗಿದೆ. ಯಾಕಂದ್ರೆ, ಈ ಸರಣಿ ನಂತರ ರೋಹಿತ್ ಶರ್ಮಾ ಪಡೆ ಯಾವುದೇ T20 ಪಂದ್ಯಗಳನ್ನಾಡಲ್ಲ. IPL ನಂತರ ಡೈರೆಕ್ಟ್ ವರ್ಲ್ಡ್‌ಕಪ್ ಅಖಾಡಕ್ಕೆ ಧುಮುಕಲಿದೆ. ವಿಶ್ವಕಪ್ ರೇಸ್‌ನಲ್ಲಿ ಉಳಿಯಬೇಕಾದ್ರೆ, ಕೆಲ ಅಟಗಾರರು ಅಪ್ಘಾನ್ ವಿರುದ್ಧ ಮಿಂಚಲೇಬೇಕಿದೆ.
ಬೆಂಗಳೂರು(ಜ.09) ಆಪ್ಘಾನಿಸ್ತಾನ ವಿರುದ್ಧದ T20 ಸರಣಿ ಟೀಂ ಇಂಡಿಯಾದ ಕೆಲ ಆಟಗಾರರಿಗೆ ತುಂಬಾನೇ ಮುಖ್ಯ. ಅದರಲ್ಲೂ ಈ ಇಬ್ಬರು ಆಟಗಾರರಿಗೆ ಮಾಡು ಇಲ್ಲವೇ ಮಡಿ ಸಮರವಾಗಿದೆ. ಈ ಸರಣಿಯಲ್ಲಿ ಅಬ್ಬರಿಸಿದ್ರೆ ತಂಡದಲ್ಲಿ ಸ್ಥಾನ ಉಳಿಯಲಿದೆ.ಇಲ್ಲದಿದ್ದರೆ ತಂಡದಿಂದ ಗೇಟ್‌ಪಾಸ್ ಸಿಗಲಿದೆ. ಯಾರು ಆ ಆಟಗಾರರು ಅಂತೀರಾ..? ಇಲ್ಲಿದೆ ನೋಡಿ ಡಿಟೇಲ್ಸ್.
ಆಪ್ಘಾನ್ T20 ಸರಣಿಯಲ್ಲಿ ಮಿಂಚೋದ್ಯಾರು..?
ಮುಂಬರೋ T20 ವಿಶ್ವಕಪ್ ದೃಷ್ಟಿಯಿಂದ ಆಪ್ಘಾನಿಸ್ತಾನ ವಿರುದ್ಧದ T20 ಸರಣಿ ಟೀಂ ಇಂಡಿಯಾಗೆ ಮಹತ್ವದ್ದಾಗಿದೆ. ಯಾಕಂದ್ರೆ, ಈ ಸರಣಿ ನಂತರ ರೋಹಿತ್ ಶರ್ಮಾ ಪಡೆ ಯಾವುದೇ T20 ಪಂದ್ಯಗಳನ್ನಾಡಲ್ಲ. IPL ನಂತರ ಡೈರೆಕ್ಟ್ ವರ್ಲ್ಡ್‌ಕಪ್ ಅಖಾಡಕ್ಕೆ ಧುಮುಕಲಿದೆ. ವಿಶ್ವಕಪ್ ರೇಸ್‌ನಲ್ಲಿ ಉಳಿಯಬೇಕಾದ್ರೆ, ಕೆಲ ಅಟಗಾರರು ಅಪ್ಘಾನ್ ವಿರುದ್ಧ ಮಿಂಚಲೇಬೇಕಿದೆ. ಅದರಲ್ಲೂ ಸಂಜು ಸ್ಯಾಮ್ಸನ್ ಮತ್ತು ಜಿತೇಶ್ ಶರ್ಮಾ ಅಬ್ಬರಿಸಲೇಬೇಕಿದೆ.
ಯೆಸ್, ಇಶಾನ್ ಕಿಶಾನ್ ತಂಡದಿಂದ ಔಟ್ ಆಗಿದ್ದಾರೆ. ಕೆ. ಎಲ್ ರಾಹುಲ್ಗೆ ರೆಸ್ಟ್ ನೀಡಲಾಗಿದೆ. ಇವರ ಸ್ಥಾನದಲ್ಲಿ ಸಂಜು ಮತ್ತು ಜಿತೇಶ್‌ಗೆ ಚಾನ್ಸ್ ಸಿಕ್ಕಿದೆ. ಇದ್ರಿಂದ ಇವರಿಬ್ಬರ ಮಧ್ಯೆ ಫೈಟ್ ಶುರುವಾಗಿದೆ. ತಮ್ಮ ಸಾಮರ್ಥ್ಯ ಪ್ರೂವ್ ಮಾಡಲು ಇವರಿಬ್ಬರಿಗೆ ಈ ಸರಣಿ ಬೆಸ್ಟ್ ಚಾನ್ಸ್ ಆಗಿದೆ. ಮುಖ್ಯವಾಗಿ ಸಂಜು ಲಾಂಗ್‌ಗ್ಯಾಪ್‌ನ ನಂತರ ತಂಡಕ್ಕೆ ಮರಳಿದ್ದಾರೆ. ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಬೇಕಾದ್ರೆ ತಮ್ಮ ತಾಕತ್ತು ನಿರೂಪಿಸಲೇಬೇಕಿದೆ.
ರಾಷ್ಟ್ರಪತಿಗಳಿಂದ ಅರ್ಜುನ ಅವಾರ್ಡ್ ಸ್ವೀಕರಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ: ವಿಡಿಯೋ ವೈರಲ್
ಆಸ್ಟ್ರೇಲಿಯಾ ವಿರುದ್ಧ ಮಿಂಚಿದ್ದ ಜಿತೇಶ್ ಶರ್ಮಾ..!
ಏಕದಿನ ವಿಶ್ವಕಪ್ ನಂತರ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಜಿತೇಶ್ ಅದ್ಭುತ ಪ್ರದರ್ಶನ ನೀಡಿದ್ರು. ಅಬ್ಬರದ ಬ್ಯಾಟಿಂಗ್, ಅದ್ಭುತ ಕೀಪಿಂಗ್ ಮೂಲಕ ಸೈ ಎನಿಸಿಕೊಂಡಿದ್ರು. ಈಗ ಆಪ್ಘಾನ್ ವಿರುದ್ಧವೂ ಅದೇ ಪರ್ಫಾಮೆನ್ಸ್ ರಿಪೀಟ್ ಮಾಡಬೇಕಿದೆ. ಆದ್ರೆ, ಪ್ಲೇಯಿಂಗ್ ಇಲೆವೆನ್ನಲ್ಲಿ ಜಿತೇಶ್‌ಗೆ ಚಾನ್ಸ್ ಸಿಗುತ್ತಾ...? ಅನ್ನೋದೆ ಪ್ರಶ್ನೆಯಾಗಿದೆ.
T20ಯಲ್ಲಿ ಸಂಜು ಸ್ಯಾಮ್ಸನ್ ಫ್ಲಾಪ್ ಶೋ...!
ಒನ್‌ಡೇ ಕ್ರಿಕೆಟ್‌ನಲ್ಲಿ ಸಂಜು ಸ್ಯಾಮ್ಸನ್ ಟೀಂ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದ್ರೆ, T20 ಫಾರ್ಮೆಟ್ನಲ್ಲಿ ಮಾತ್ರ ಮಕಾಡೆ ಮಲಗಿದ್ದಾರೆ. T20ಯಲ್ಲಿ ಈವರೆಗೂ 18 ಇನ್ನಿಂಗ್ಸ್ಗಳಲ್ಲಿ ಸಂಜು ಬ್ಯಾಟ್ ಬೀಸಿದ್ದು, ಕೇವಲ 18.82ರ ಸರಾಸರಿಯಲ್ಲಿ 320 ರನ್ ಕಲೆಹಾಕಿದ್ದಾರೆ. ಒಂದು ಅರ್ಧಶತಕವಿದೆ. ಅದು 2022ರಲ್ಲಿ ದುರ್ಬಲ ಐರ್ಲೆಂಡ್ ವಿರುದ್ಧ ಬಂದಿದ್ದು.
ಆಸೀಸ್ ಎದುರಿನ ಸೋಲಿಗೆ ಶ್ರೇಯಾಂಕ ಪಾಟೀಲ್‌ರನ್ನು ಹೊಣೆಯಾಗಿಸಿದ ಹರ್ಮನ್‌ಪ್ರೀತ್ ಕೌರ್!
ಸಂಜು T20ಯಲ್ಲಿ ಮಿಂಚದೇ ಇರೋದಕ್ಕೆ ಅವ್ರ ಬ್ಯಾಟಿಂಗ್ ಕ್ರಮಾಂಕವೂ ಕಾರಣ ಎನ್ನಲಾಗ್ತಿದೆ. ಯಾಕಂದ್ರೆ, ಸಂಜುಗೆ T20ಯಲ್ಲಿ ನಿರ್ದಿಷ್ಟ ಕ್ರಮಾಂಕವನ್ನ ನಿಗದಿಯಾಗಿಲ್ಲ. 18 ಇನ್ನಿಂಗ್ಸ್ಗಳಲ್ಲಿ ಆರಂಭಿಕ ಸ್ಥಾನದಿಂದ ಹಿಡಿದು, 7ನೇ ಕ್ರಮಾಂಕದವರೆಗು ಆಡಿದ್ದಾರೆ. IPLನಲ್ಲಿ ರಾಜಸ್ಥಾನ ರಾಯಲ್ಸ್ ಪರ ಸಂಜು 3ನೇ ಕ್ರಮಾಂಕದಲ್ಲಿ ಮಿಂಚಿದ್ದಾರೆ. ಆದ್ರೆ, ಟೀಂ ಇಂಡಿಯಾ ಪರ ಮಾತ್ರ ಸಂಜುಗೆ ಫಿಕ್ಸಡ್ ಸ್ಲಾಟ್ ಇಲ್ಲ.
ಸಂಜುಗೆ ಯಾವುದೇ ಸ್ಲಾಟ್ ಫಿಕ್ಸ್ ಆಗಿಲ್ಲ ಅನ್ನೊದೇನೋ ನಿಜ. ಆದ್ರೆ, ಹೀಗಿರೋ ಪರಿಸ್ಥಿತಿಯಲ್ಲಿ ಇದೇ ಸ್ಲಾಟ್ ಬೇಕು ಅಂದ್ರೆ ಅಗಲ್ಲ. ಯಾವುದೇ ಸ್ಲಾಟ್ ಸಿಕ್ಕರೂ ಅಬ್ಬರಿಸಲೇಬೇಕು. ಇಲ್ಲ ಅಂದ್ರೆ, ತಂಡದಿಂದ ಜಾಗ ಖಾಲಿ ಮಾಡದೇ ಬೇರೆ ದಾರಿ ಇರಲ್ಲ. ಅದೇನೆ ಇರಲಿ, ಅಪ್ಘಾನ್ ವಿರುದ್ಧದ ಸರಣಿಯಲ್ಲಿ ಈ ಇಬ್ಬರಲ್ಲಿ ಯಾರು ಮಿಂಚ್ತಾರೆ. ಆ ಮೂಲಕ ಟಿ20 ವಿಶ್ವಕಪ್ ರೇಸ್ನಲ್ಲಿ ಉಳಿಯುತ್ತಾರೆ ಅಂತ ಕಾದು ನೋಡಬೇಕಿದೆ.
- ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್