ಬರೋಬ್ಬರಿ 14 ತಿಂಗಳ ನಂತರ ರೋಹಿತ್ & ವಿರಾಟ್ ಚುಟುಕು ಕ್ರಿಕೆಟ್ಗೆ ವಾಪಸ್ಸಾಗಿದ್ದಾರೆ. ಇದ್ರಿಂದ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಇನ್ನು ಮುಂಬರೋ T20 ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡೇ ಈ ತಂಡವನ್ನ ಅಯ್ಕೆ ಮಾಡಲಾಗಿದೆ. ಹೀಗಾಗಿ ಮೆಗಾ ಟೂರ್ನಿಯಲ್ಲಿ ರೋಹಿತ್ ವಿರಾಟ್ ಆಡೋದು ಫಿಕ್ಸ್.
ಬೆಂಗಳೂರು(ಜ.09): ಕೆಲ ತಿಂಗಳುಗಳ ಹಿಂದೆ ರೋಹಿತ್ ಮತ್ತು ಕೊಹ್ಲಿ ಟೀಮ್ ಇಂಡಿಯಾ ಪರ ಮತ್ತೆ T20 ಕ್ರಿಕೆಟ್ ಆಡಲ್ಲ. ಅವರ ಕರಿಯರ್ ಮುಗಿದಂತೆ ಲೆಕ್ಕಾ ಅನ್ನೋ ಮಾತಗಳು ಕೇಳಿ ಬಂದಿದ್ವು. ಆದ್ರೀಗ, ಎಲ್ಲಾದಕ್ಕೂ ತೆರೆ ಬಿದ್ದಿದೆ. ಆದ್ರೆ, ಇವರಿಬ್ಬರಿಗೆ ಬಿಸಿಸಿಐ ಮತ್ತೆ ಮಣೆಹಾಕಿದ್ಯಾಕೆ..? T20 ಕ್ರಿಕೆಟ್ಗೆ ಕರೆತಂದಿದ್ದೇಕೆ ಗೊತ್ತಾ? ನಾವೇಳ್ತೀವಿ ಈ ಸ್ಟೋರಿ ನೋಡಿ...!
ಸೀನಿಯರ್ ಸ್ಟಾರ್ಸ್‌ಗಳಿಗೆ BCCI ಮತ್ತೆ ಮಣೆ ಹಾಕಿದ್ಯಾಕೆ..?
ಅಪ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ T20 ಸರಣಿಗೆ ಟೀಮ್ ಇಂಡಿಯಾವನ್ನ ಆಯ್ಕೆ ಮಾಡಲಾಗಿದೆ. T20 ವಿಶ್ವಕಪ್ ನಂತರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಆದ್ರೆ, ಇವರಿಬ್ಬರ T20 ಕರಿಯರ್ ಮುಗಿದು ಹೋಯ್ತು ಅನ್ನೋವಾಗ, ಮತ್ತೆ ಕಮ್ಬ್ಯಾಕ್ ಮಾಡಿದ್ದೇಗೆ..? ಅನ್ನೋ ಪ್ರಶ್ನೆ ಮೂಡಿದೆ.
ಯೆಸ್, ಬರೋಬ್ಬರಿ 14 ತಿಂಗಳ ನಂತರ ರೋಹಿತ್ & ವಿರಾಟ್ ಚುಟುಕು ಕ್ರಿಕೆಟ್ಗೆ ವಾಪಸ್ಸಾಗಿದ್ದಾರೆ. ಇದ್ರಿಂದ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಇನ್ನು ಮುಂಬರೋ T20 ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡೇ ಈ ತಂಡವನ್ನ ಅಯ್ಕೆ ಮಾಡಲಾಗಿದೆ. ಹೀಗಾಗಿ ಮೆಗಾ ಟೂರ್ನಿಯಲ್ಲಿ ರೋಹಿತ್ ವಿರಾಟ್ ಆಡೋದು ಫಿಕ್ಸ್.
ಆಫ್ಘಾನ್ ಸರಣಿಯಿಂದ ರಾಹುಲ್ ಔಟ್: ಟಿ20 ತಂಡಕ್ಕೆ ವಾಪಾಸ್ ಆಗಲು ಏನು ಮಾಡಬೇಕು?
2007ರ ನಂತರ ಭಾರತ ಈವರೆಗು T20 ವಿಶ್ವಕಪ್ ಗೆದ್ದಿಲ್ಲ. ಅಲ್ಲದೇ ಕಳೆದೆರೆಡು T20 ವಿಶ್ವಕಪ್ ಟೂರ್ನಿಗಳಲ್ಲಿ ತಂಡ ಹೀನಾಯ ಪ್ರದರ್ಶನ ನೀಡಿದೆ. ಈ ಎಲ್ಲಾ ಕಾರಣಗಳಿಂದಾಗಿ ಮುಂದಿನ ವರ್ಷ ಟಿ20 ಕಪ್ ಗೆಲ್ಲಲೇಬೇಕು ಅನ್ನೋದು BCCI ಪ್ಲಾನ್ ಆಗಿತ್ತು. ಏಕದಿನ ವಿಶ್ವಕಪ್ ನಂತರ BCCI ಬಾಸ್ಗಳ ಪ್ಲಾನ್ ಬದಲಾಗಿದೆ. ಕೇವಲ ಯುವಕರನ್ನೇ ನಂಬಿಕೊಂಡು ಕುಂತ್ರೆ ಆಗಲ್ಲ ಅನ್ನೋದು ಗೊತ್ತಾಗಿದೆ. ಹೀಗಾಗಿಯೇ ಸೀನಿಯರ್ಗಳಿಗೆ ಮತ್ತೆ ಮಣೆ ಹಾಕಿದೆ.
ಟೀಂ ಇಂಡಿಯಾಗೆ ಬೇಕೇ ಬೇಕು ರೋಹಿತ್ ಕ್ಯಾಪ್ಟನ್ಸಿ..!
ಯೆಸ್, T20 ವಿಶ್ವಕಪ್ ಸಮರದಲ್ಲಿ ರೋಹಿತ್ ನಾಯಕತ್ವ ತಂಡಕ್ಕೆ ಬೇಕೇ ಬೇಕು. ಯಾಕಂದ್ರೆ, ಸದ್ಯ ಎಲ್ಲಾ ಆಟಗಾರರನ್ನ ವಿಶ್ವಾಸಕ್ಕೆ ತೆಗೆದುಕೊಂಡೋ ಹೋಗೋ ಸಾಮರ್ಥ್ಯ ಇರೋದು ರೋಹಿತ್ಗೆ ಮಾತ್ರ. ಇದ್ರಿಂದ ರೋಹಿತ್ ನಾಯಕತ್ವದಲ್ಲಿ ಆಡೋಕೆ ಆಟಗಾರರು ಇಷ್ಟಪಡ್ತಾರೆ. IPLನಲ್ಲಿ ಹಿಟ್‌ಮ್ಯಾನ್ ತಮ್ಮ ಕ್ಯಾಪ್ಟನ್ಸಿಯಲ್ಲಿ ಮುಂಬೈ ಇಂಡಿಯನ್ಸ್ಗೆ 5 ಬಾರಿ ಕಪ್ ಗೆದ್ದುಕೊಟ್ಟಿದ್ದಾರೆ. ಆ ಮೂಲಕ ಟೀಂ ಇಂಡಿಯಾ ನಾಯಕನಾಗಿಯೂ ತಮ್ಮ ಸಾಮರ್ಥ್ಯವನ್ನ ಪ್ರೂವ್ ಮಾಡಿದ್ದಾರೆ.
ಟಿ20 ವಿಶ್ವಕಪ್ ರೇಸ್‌ನಲ್ಲಿ ಉಳಿಯಲು ಅಬ್ಬರಿಸಲೇಬೇಕು..! ಈ ಇಬ್ಬರಲ್ಲಿ ಯಾರಿಗೆ ಬೆಸ್ಟ್ ಚಾನ್ಸ್?
ಈ ಹಿಂದಿನ T20 ವಿಶ್ವಕಪ್, ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಕ್ಯಾಪ್ಟನ್ಸಿಯಲ್ಲಿ ಕಮಾಲ್ ಮಾಡಿದ್ರು. ಆದ್ರೆ, ಸೆಮಿಫೈನಲ್ನಲ್ಲಿ ತಂಡ ಸೋತಿತ್ತು. ಇನ್ನು ಬ್ಯಾಟಿಂಗ್ನಲ್ಲೂ ರೋಹಿತ್ ಪ್ರೆಸೆನ್ಸ್ ತಂಡಕ್ಕೆ ಅಗತ್ಯವಿದೆ. ರೋಹಿತ್ ಆರ್ಭಟಿಸಲು ಶುರು ಮಾಡಿದ್ರೆ, ಕಟ್ಟಿಹಾಕೋಕೆ ಸಾಧ್ಯವಿಲ್ಲ. ಮೈದಾನದಲ್ಲಿ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಯೇ ಆಗುತ್ತೆ. ರನ್ ಪ್ರವಾಹವೇ ಹರಿಯತ್ತೆ.
T20ಯಲ್ಲಿ ತಂಡದ ಅಸಲಿ ಮ್ಯಾಚ್ ವಿನ್ನರ್ ಕೊಹ್ಲಿ..!
ರನ್ ಮಷಿನ್ ವಿರಾಟ್ ಕೊಹ್ಲಿ T20ಯಲ್ಲಿ ಟೀಮ್ ಇಂಡಿಯಾದ ರಿಯಲ್ ಮ್ಯಾಚ್ ವಿನ್ನರ್. ಕಳೆದ T20 ವಿಶ್ವಕಪ್, ಏಕದಿನ ವಿಶ್ವಕಪ್ ಸಮರದಲ್ಲಿ ಕೊಹ್ಲಿಯ ಆಟವೇ ಇದಕ್ಕೆ ಸಾಕ್ಷಿ. ಇನ್ನು ಬಿಗ್ಸ್ಟೇಜ್, ಬಿಗ್ ಮ್ಯಾಚ್, ಹೈ ಪ್ರೆಶರ್ ಗೇಮ್‌ಗಳಲ್ಲಿ ಕೊಹ್ಲಿ ತಮ್ಮ ತಾಕತ್ತು ನಿರೂಪಿಸಿದ್ದಾರೆ. ತಂಡಕ್ಕೆ ಸಂಕಷ್ಟ ಎದುರಾದಾಗಲೆಲ್ಲಾ ಒಂಟಿ ಸಲಗದಂತೆ ನಿಂತು ಹೋರಾಡಿದ್ದಾರೆ.
ಒಟ್ಟಿನಲ್ಲಿ ರೋಹಿತ್ ಶರ್ಮಾ & ವಿರಾಟ್ ಕೊಹ್ಲಿಯ ಮಹತ್ವ ಬಿಸಿಸಿಐ & ಆಯ್ಕೆ ಸಮಿತಿಗೆ ಅರಿವಾಗಿದೆ. ಇದ್ರಿಂದ T20 ಕ್ರಿಕೆಟ್‌ಗೆ ಅವರನ್ನ ವಾಪಸ್ ಕರೆತಂದಿದೆ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್