IPL 2026: ನಿನ್ನೆ ನಡೆದ ಡೆಲ್ಲಿ ಕ್ಯಾಪಿಟಲ್ಸ್ - ಸನ್‌ರೈಸರ್ಸ್ ಹೈದರಾಬಾದ್‌ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

Kannadaprabha News   | Kannada Prabha
Published : Apr 22, 2026, 07:37 AM IST
SRH vs DC

ಸಾರಾಂಶ

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ 47 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್‌, ಅಭಿಷೇಕ್ ಶರ್ಮಾ ಅವರ ಸ್ಫೋಟಕ ಶತಕದ (135*) ನೆರವಿನಿಂದ 242 ರನ್ ಗಳಿಸಿತು. ಈ ಗುರಿ ಬೆನ್ನತ್ತಿದ ಡೆಲ್ಲಿ ತಂಡ 195 ರನ್‌ಗಳಿಗೆ ತನ್ನ ಹೋರಾಟವನ್ನು ಸೀಮಿತಗೊಳಿಸಿತು.

ಹೈದರಾಬಾದ್‌: ರನ್‌ ಮಳೆಯೇ ಸುರಿದ ಮಂಗಳವಾರದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ 47 ರನ್‌ ಗೆಲುವು ಸಾಧಿಸಿದೆ. ಟೂರ್ನಿಯಲ್ಲಿ 4ನೇ ಜಯ ಕಂಡ ಸನ್‌ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದರೆ, ಡೆಲ್ಲಿ 3ನೇ ಸೋಲುಂಡಿತು.

ಮೊದಲು ಬ್ಯಾಟ್‌ ಮಾಡಿದ ಸನ್‌ರೈಸರ್ಸ್‌, ಅಭಿಷೇಕ್‌ ಶರ್ಮಾ ಸ್ಫೋಟಕ ಶತಕದ ನೆರವಿನಿಂದ 2 ವಿಕೆಟ್‌ಗೆ 242 ರನ್‌ ಕಲೆಹಾಕಿತು. ಡೆಲ್ಲಿ ಹೋರಾಟದ ಹೊರತಾಗಿಯೂ 9 ವಿಕೆಟ್‌ಗೆ 195 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಸನ್‌ರೈಸರ್ಸ್‌ ಆರ್ಭಟ:

ಆರಂಭದಲ್ಲಿ ಸನ್‌ರೈಸರ್ಸ್‌ ಅಕ್ಷರಶಃ ಅಬ್ಬರಿಸಿತು. ಅಭಿಷೇಕ್‌ ಇತರ ಮೂವರ ಜೊತೆಗೆ ತಲಾ 65+ ರನ್‌ ಜೊತೆಯಾಟವಾಡಿದರು. ಮೊದಲ ವಿಕೆಟ್‌ಗೆ ಟ್ರ್ಯಾವಿಡ್‌ ಹೆಡ್‌(35) ಜೊತೆ 97, 2ನೇ ವಿಕೆಟ್‌ಗೆ ಇಶಾನ್‌ (25) ಜೊತೆ 79 ಹಾಗೂ ಮುರಿಯದ 3ನೇ ವಿಕೆಟ್‌ಗೆ ಕ್ಲಾಸೆನ್‌(ಔಟಾಗದೆ 37) ಜೊತೆ 66 ರನ್‌ ಸೇರಿಸಿದರು. ಅಭಿಷೇಕ್‌ 68 ಎಸೆತಗಳಲ್ಲಿ 10 ಬೌಂಡರಿ, 10 ಸಿಕ್ಸರ್‌ನೊಂದಿಗೆ ಔಟಾಗದೆ 135 ರನ್‌ ಬಾರಿಸಿದರು.ಅಬ್ಬರಿಸಿ 

ಕುಸಿದ ಡೆಲ್ಲಿ:

ಬೃಹತ್‌ ಮೊತ್ತ ಬೆನ್ನತ್ತಲು ಇಳಿದ ಡೆಲ್ಲಿ ಉತ್ತಮ ಆರಂಭ ಪಡೆದು, 9 ಓವರ್‌ಗಳಲ್ಲಿ 1 ವಿಕೆಟ್‌ಗೆ 98 ರನ್‌ ಸೇರಿಸಿತು. ಆದರೆ ರಾಹುಲ್‌(37), ನಿತೀಶ್ ರಾಣಾ(57) ಔಟಾದ ಬಳಿಕ ತಂಡ ದಿಢೀರ್‌ ಕುಸಿಯಿತು. ಸಮೀರ್ ರಿಜ್ವಿ(41 ) ಕೆಲ ಹೊತ್ತು ಹೋರಾಡಿದರೂ ತಂಡಕ್ಕೆ ಗೆಲುವು ಸಿಗಲಿಲ್ಲ.

ಸ್ಕೋರ್: ಸನ್‌ರೈಸರ್ಸ್‌ 242/2 (ಅಭಿಷೇಕ್‌ ಔಟಾಗದೆ 135, ಕ್ಲಾಸೆನ್‌ ಔಟಾಗದೆ 37, ಅಕ್ಷರ್‌ 1-23), ಡೆಲ್ಲಿ 195/9 (ನಿತೀಶ್‌ 57, ಸಮೀರ್‌ 41, ಮಾಲಿಂಗಾ 32/2)

07ನೇ ಬಾರಿ

ಸನ್‌ರೈಸರ್ಸ್‌ ಈ ಬಾರಿ ಐಪಿಎಲ್‌ನ 7 ಪಂದ್ಯಗಳಲ್ಲೂ ಮೊದಲು ಬ್ಯಾಟ್‌ ಮಾಡಿದರೆ, ಡೆಲ್ಲಿಗೆ 7 ಪಂದ್ಯಗಳಲ್ಲೂ ಚೇಸಿಂಗ್‌ ಸಿಕ್ಕಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

India Latest News Live: IPL 2026 - ನಿನ್ನೆ ನಡೆದ ಡೆಲ್ಲಿ ಕ್ಯಾಪಿಟಲ್ಸ್ - ಸನ್‌ರೈಸರ್ಸ್ ಹೈದರಾಬಾದ್‌ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?
ನನಗೆ ವಿರಾಟ್‌ ಕೊಹ್ಲಿಯಂಥ ಹುಡುಗನೇ ಬೇಕು; ಯಜುವೇಂದ್ರ ಚಾಹಲ್‌ ಬೇಡ; ಮುಖಕ್ಕೆ ಹೊಡೆದಂತೆ ಹೇಳಿದ Bigg Boss ಸ್ಪರ್ಧಿ