IPLನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನೋ ಹೆಸರು ಕೇಳಿದ ತಕ್ಷಣ ಮೊದಲು ನೆನಪಾಗೋದೆ ಧೋನಿ. ಯಾಕಂದ್ರೆ ಧೋನಿ ಅಂದ್ರೆ CSK, CSK ಅಂದ್ರೆ ಧೋನಿ. ನಾಯಕನಾಗಿ ಮಾಹಿ, CSKಗೆ ಐದು IPL ಕಪ್ ಗೆದ್ದುಕೊಟ್ಟಿದ್ದಾರೆ. ಆದ್ರೆ, ಧೋನಿ ನಂತರ ಸೂಪರ್ ಕಿಂಗ್ಸ್ ಸೈನ್ಯವನ್ನ ಯಾರು ಮುನ್ನಡೆಸುತ್ತಾರೆ..? ಧೋನಿ ಉತ್ತರಾಧಿಕಾರಿ ಯಾರಾಗಲಿದ್ದಾರೆ ಅನ್ನೋ ಚರ್ಚೆ ನಡೆಯುತ್ತಿದೆ.
ಬೆಂಗಳೂರು(ನ.28): ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಸದ್ಯ ಧೋನಿ ಮುನ್ನಡೆಸುತ್ತಿದ್ದಾರೆ. ಧೋನಿ ನಂತರ CSK ಕ್ಯಾಪ್ಟನ್ ಯಾರು..? ಅನ್ನೋ ಚರ್ಚೆ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ. ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. CSK ತಂಡದ ಮಾಜಿ ಆಟಗಾರ, ಧೋನಿ ನಂತರ ಯೆಲ್ಲೋ ಆರ್ಮಿಯನ್ನ ಮುನ್ನಡೆಸೋದು ಯಾರು ಅನ್ನೋ ಸುಳಿವು ನೀಡಿದ್ದಾರೆ.
IPLನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನೋ ಹೆಸರು ಕೇಳಿದ ತಕ್ಷಣ ಮೊದಲು ನೆನಪಾಗೋದೆ ಧೋನಿ. ಯಾಕಂದ್ರೆ ಧೋನಿ ಅಂದ್ರೆ CSK, CSK ಅಂದ್ರೆ ಧೋನಿ. ನಾಯಕನಾಗಿ ಮಾಹಿ, CSKಗೆ ಐದು IPL ಕಪ್ ಗೆದ್ದುಕೊಟ್ಟಿದ್ದಾರೆ. ಆದ್ರೆ, ಧೋನಿ ನಂತರ ಸೂಪರ್ ಕಿಂಗ್ಸ್ ಸೈನ್ಯವನ್ನ ಯಾರು ಮುನ್ನಡೆಸುತ್ತಾರೆ..? ಧೋನಿ ಉತ್ತರಾಧಿಕಾರಿ ಯಾರಾಗಲಿದ್ದಾರೆ ಅನ್ನೋ ಚರ್ಚೆ ನಡೆಯುತ್ತಿದೆ. ಈ ಪ್ರಶ್ನೆಗೆ CSK ತಂಡದ ಮಾಜಿ ಆಟಗಾರ ಅಂಬಟಿ ರಾಯುಡು ಉತ್ತರ ನೀಡಿದ್ದಾರೆ. ಋತುರಾಜ್ ಗಾಯಕ್ವಾಡ್‌ಗೆ CSK ಕ್ಯಾಪ್ಟನ್ ಆಗಲಿದ್ದಾರೆ ಅನ್ನೋ ಸುಳಿವು ನೀಡಿದ್ದಾರೆ.
Ind vs Aus 3rd T20I: ಭಾರತದ ಯುವ ಪಡೆಗೆ ಸರಣಿ ಗೆಲ್ಲುವ ಗುರಿ
ಋತುರಾಜ್ ಹೇಳಿ ಕೇಳಿ ಧೋನಿ ಗರಡಿಯಲ್ಲಿ ಪಳಗಿರೋ ಹುಡುಗ. ಧೋನಿಯನ್ನ ಹತ್ತಿರದಿಂದ ನೋಡಿರೋ ಋತು, ಧೋನಿಯ ನಾಯಕತ್ವದ ಪಟ್ಟುಗಳನ್ನ ಚೆನ್ನಾಗಿ ತಿಳಿದುಕೊಂಡಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ಮಹಾರಾಷ್ಟ್ರ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. 2022ರ ವಿಜಯ್ ಹಜಾರೆ ಟೂರ್ನಿಯಲ್ಲಿ ಋತುರಾಜ್ ನಾಯಕತ್ವದಲ್ಲಿ ಮಹಾರಾಷ್ಟ್ರ ಫೈನಲ್ ತಲುಪಿತ್ತು.
ನಾಯಕನಾಗಿ ಋತುರಾಜ್ ಫೀಲ್ಡಲ್ಲಿ ಕೂಲ್ ಆ್ಯಂಡ್ ಕಾಮ್ ಆಗಿ ಇರ್ತಾರೆ. ಇನ್ನು ಬ್ಯಾಟಿಂಗ್ ಮಾಡುವಾಗ್ಲೂ ಶತಕ ಸಿಡಿಸಿದ್ರು, ಶೂನ್ಯ ಸುತ್ತಿದ್ರು ಓವರ್ ಎಕ್ಸೈಟ್ ಆಗಲ್ಲ. ಋತುರಾಜ್ರ ಈ ಗುಣಕ್ಕೆ ಹಲವು ಮಾಜಿ ಆಟಗಾರರು ಫಿದಾ ಆಗಿದ್ದಾರೆ. ವೀರೇಂದ್ರ ಸೆಹ್ವಾಗ್ ಹಿಂದೊಮ್ಮೆ ಧೋನಿ ನಂತರ ಋತುರಾಜ್ CSKನ ಕ್ಯಾಪ್ಟನ್ ಮಾಡೋದಕ್ಕೆ ಬೆಸ್ಟ್ ಅಫ್ಷನ್ ಅಂತ ಹೇಳಿದ್ರು.
ಏಷ್ಯಾಕಪ್ ಬಳಿಕ ಪಾಕ್‌ಗೆ ಮತ್ತೊಂದು ಶಾಕ್, ಐಸಿಸಿ ಚಾಂಪಿಯನ್ಸ್ ಟ್ರೋಫಿ ದುಬೈಗೆ ಶಿಫ್ಟ್ ಸಾಧ್ಯತೆ!
ಇನ್ನು BCCI ಕೂಡ ಋತುರಾಜ್ರಲ್ಲಿ ನಾಯಕತ್ವದ ಗುಣಗಳನ್ನ ಕಂಡಿದೆ. ಇದೇ ಕಾರಣಕ್ಕೆ ಐರ್ಲೆಂಡ್ ವಿರುದ್ಧದ T20 ಸರಣಿ ವೇಳೆ ಋತುಗೆ ಉಪನಾಯಕನ ಪಟ್ಟ ಕಟ್ಟಲಾಗಿತ್ತು. ಇನ್ನು ಏಷ್ಯನ್ ಗೇಮ್ಸ್ನಲ್ಲಿ ನಾಯಕನಾಗಿ ಮಾಡಲಾಗಿತ್ತು. ಸದ್ಯ ನಡೆಯುತ್ತಿರೋ ಆಸೀಸ್ ವಿರುದ್ಧದ ಟಿ20 ಸರಣಿಯಲ್ಲೂ ಈ ಮಹಾರಾಷ್ಟ್ರ ಆಟಗಾರನಿಗೆ ವೈಸ್ ಕ್ಯಾಪ್ಟನ್ ಜವಬ್ದಾರಿ ವಹಿಸಲಾಗಿದೆ.
ಬ್ಯಾಟಿಂಗ್ನಲ್ಲೂ ಅದ್ಭುತ ಪ್ರದರ್ಶನ..!
ಋತುರಾಜ್ ಅದ್ಭುತ ಬ್ಯಾಟ್ಸ್‌ಮನ್, IPLನಲ್ಲಿ ಆರಂಭಿಕರಾಗಿ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. ತಂಡವನ್ನ ಮುಂದೆ ನಿಂತು ಮುನ್ನಡೆಸಬಲ್ಲ ಸಾಮರ್ಥ್ಯ ಋತುಗಿದೆ. ಈ ಎಲ್ಲಾ ಕಾರಣಗಳಿಂದಾಗಿ CSK, ಋತುಗೆ ಭವಿಷ್ಯದಲ್ಲಿ ತಂಡದ ನಾಯಕತ್ವ ನೀಡಿದ್ರು ಅಚ್ಚರಿ ಇಲ್ಲ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್