
ಕ್ರಿಕೆಟಿಗ ಯಜುವೇಂದ್ರ ಚಹಲ್ (Cricketer Yuzvendra Chahal) ಮತ್ತು ಧನಶ್ರೀ ವರ್ಮಾ (Dhanashree Verma) ವಿಚ್ಛೇದನ ವದಂತಿ ಮಧ್ಯೆಯೇ ಮಿಸ್ಟ್ರಿ ಗರ್ಲ್ (Mystery Girl) ಪತ್ತೆ ಕಾರ್ಯ ಯಶಸ್ವಿಯಾದಂತಿದೆ. ಯಜುವೇಂದ್ರ ಚಹಲ್ ಜೊತೆ ಹೊಟೇಲ್ ಹೊರಗೆ ಕಾಣಿಸಿಕೊಂಡಿದ್ದ ಹುಡುಗಿಯನ್ನು ನೆಟ್ಟಿಗರು ಗುರುತಿಸಿದ್ದಾರೆ. ರೆಡ್ಡಿಟ್ ನಲ್ಲಿ ಆ ಹುಡುಗಿ ಯಾರು ಎಂಬ ಬಗ್ಗೆ ವಿವರವಾದ ಮಾಹಿತಿ ನೀಡಲಾಗಿದೆ. ಅಲ್ಲದೆ ಅವರಿಂದಲೇ ಚಹಲ್ ಮತ್ತು ಧನಶ್ರೀ ಮದುವೆ ಮುರಿದು ಬಿದ್ದಿದೆ ಎಂಬ ಮಾತುಗಳೂ ಕೇಳಿ ಬರ್ತಿವೆ.
ಡಿಸೆಂಬರ್ 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯಜುವೇಂದ್ರ ಚಹಲ್ ಮತ್ತು ಕೋರಿಗ್ರಫರ್ ಧನಶ್ರೀ ವರ್ಮಾ ಈಗ ಬೇರೆಯಾಗಿದ್ದಾರೆ ಎಂಬ ಮಾತಿದೆ. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರೂ ಅನ್ ಫಾಲೋ ಮಾಡ್ಕೊಂಡಿದ್ದಾರೆ. ಜೊತೆಗೆ ಎಲ್ಲ ಫೋಟೋ ಡಿಲೀಟ್ ಮಾಡಿದ್ದಾರೆ. ಆದ್ರೆ ಎಲ್ಲಿಯೂ ತಾವು ಡಿವೋರ್ಸ್ ಪಡೆಯುತ್ತಿದ್ದೇವೆ ಎಂಬ ಹೇಳಿಕೆಯನ್ನು ನೀಡಿಲ್ಲ. ಅವರಿಬ್ಬರು ಅನ್ ಫಾಲೋ ಮಾಡ್ತಿದ್ದಂತೆ ಅಭಿಮಾನಿಗಳ ಊಹೆ ಎಲ್ಲೆ ಮೀರಿದೆ. ಧನಶ್ರೀ ಹಾಗೂ ಕೋರಿಯೋಗ್ರಫರ್ ಪ್ರತೀಕ್ ಮಧ್ಯೆ ಅಫೇರ್ ಇದೆ ಎಂಬ ಸುದ್ದಿ ಒಂದ್ಕಡೆ ಚರ್ಚೆಯಲ್ಲಿದೆ. ಇನ್ನೊಂದು ಕಡೆ, ಚಹಲ್ ಮತ್ತು ಮಿಸ್ಟ್ರಿ ಗರ್ಲ್ ರಿಲೇಶನ್ಶಿಪ್ ಸದ್ದು ಮಾಡ್ತಿದೆ.
ಡಿವೋರ್ಸ್ ಆದ್ರೆ ಪತ್ನಿ ಧನಶ್ರೀಗೆ ಚಹಲ್ ಎಷ್ಟು ಜೀವನಾಂಶ ನೀಡಬೇಕು?
ಚಹಲ್ ಜೊತೆಗಿರುವ ಹುಡುಗಿ ಯಾರು? : ಪತ್ರಿಕೆಯೊಂದರ ವರದಿ ಪ್ರಕಾರ, ಯಜುವೇಂದ್ರ ಚಹಲ್, ಮುಂಬೈನ ಹೋಟೆಲ್ ಒಂದರಲ್ಲಿ ಯುವತಿ ಜೊತೆ ಕಾಣಿಸಿಕೊಂಡಿದ್ದರು. ಪಾಪರಾಜಿಗಳನ್ನು ನೋಡ್ತಿದ್ದಂತೆ ಚಹಲ್ ತಮ್ಮ ಮುಖವನ್ನು ಮುಚ್ಚಿಕೊಂಡಿದ್ದರು. ಚಹಲ್ ಬಿಳಿ ಟಿ ಶರ್ಟ್ ಮತ್ತು ಬ್ಯಾಗಿ ಜೀನ್ಸ್ ಧರಿಸಿದ್ರೆ, ಹುಡುಗಿ ಸ್ವೆಟ್‌ಶರ್ಟ್ ಮತ್ತು ಕಪ್ಪು ಜೀನ್ಸ್ ಧರಿಸಿದ್ದು, ಪಾರಾಜಿಗಳನ್ನು ನೋಡ್ತಿದ್ದಂತೆ ಭಯಗೊಂಡಿದ್ದರು.
ಈ ಫೋಟೋ ವೈರಲ್ ಆಗಿದ್ದಲ್ಲದೆ ಹುಡುಗಿ ಯಾರು ಎನ್ನುವ ಪ್ರಶ್ನೆ ಎದ್ದಿತ್ತು. ಈಗ ರೆಡ್ಡಿಟ್ ಫೋಸ್ಟ್ ಒಂದರಲ್ಲಿ ಅದಕ್ಕೆ ಉತ್ತರ ಹುಡುಕಲಾಗಿದೆ. r/InstaCelebsGossip ಹೆಸರಿನ ರೆಡ್ಡಿಟ್ ಖಾತೆಯಲ್ಲಿ, ಚಹಲ್ ಜೊತೆಗಿರುವ ಹುಡುಗಿ ಆರ್ ಜೆ ಮಹ್ವಾಶ್ (RJ Mahwash) ಎನ್ನಲಾಗ್ತಿದೆ. ಚಹಲ್ ಮತ್ತು ಮಹ್ವಾಶ್ ರಿಲೇಶನ್ಶಿಪ್ ನಲ್ಲಿ ಇದ್ದಾರಾ ಎಂದು ಶೀರ್ಷಿಕೆ ಹಾಕಲಾಗಿದ್ದು, ಯಜುವೇಂದ್ರ ಚಹಲ್ ಮತ್ತು ಮಹ್ವಾಶ್ ಕ್ರಿಸ್‌ಮಸ್ ಡಿನ್ನರ್ ಸ್ನೇಹಿತರ ಜೊತೆ ಎಂಜಾಯ್ ಮಾಡಿದ್ದರು. ಅದನ್ನು ಆರ್‌ಜೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮುಂಬೈ ಹೊಟೇಲ್ ಹೊರಗೆ ಚಹಲ್ ಜೊತೆ ಕಾಣಿಸಿಕೊಂಡವರು ಕೂಡ ಮಹ್ವಾಶ್ ಎಂದು ಬರೆಯಲಾಗಿದೆ. ಆರ್ ಜೆ ಮಹ್ವಾಶ್, ಒಬ್ಬ ನಟಿ ಮತ್ತು ನಿರ್ಮಾಪಕಿ. ನವಾಜುದ್ದೀನ್ ಸಿದ್ದಿಕಿ ಅಭಿನಯದ ಸೆಕ್ಷನ್ 108 ಚಿತ್ರದ ನಿರ್ಮಾಪಕಿ. ಇಂಟರ್ನೆಟ್ ಸೆನ್ಸೇಷನ್, ಇನ್‌ಸ್ಟಾಗ್ರಾಮ್‌ನಲ್ಲಿ ಸಾಕಷ್ಟು ಜನಪ್ರಿಯರಾಗಿದ್ದು, ಅಪ್ಲಿಕೇಶನ್‌ನಲ್ಲಿ 1.4 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ಚಹಲ್ ಪತ್ನಿ ಧನಶ್ರೀ ಜೊತೆ ಡೇಟಿಂಗ್ ವದಂತಿ, ಟ್ರೋಲ್‌ಗೆ ಉತ್ತರ ನೀಡಿದ ಪ್ರತೀಕ್
ವಿಚ್ಛೇದನದ ಬಗ್ಗೆ ಧನಶ್ರೀ ಹೇಳಿದ್ದೇನು? : ಇನ್ನೊಂದು ಕಡೆ ಟ್ರೋಲರ್ ಗಳಿಗೆ ಧನಶ್ರೀ ಉತ್ತರ ನೀಡುವ ಪ್ರಯತ್ನ ನಡೆಸಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಹೆಸರು ಮತ್ತು ವೃತ್ತಿಜೀವನ ಕಟ್ಟಿಕೊಳ್ಳಲು ನಾನು ವರ್ಷಗಳ ಕಾಲ ಶ್ರಮಿಸಿದೆ. ಕಳೆದ ಕೆಲವು ದಿನಗಳು ನನಗೆ ಮತ್ತು ನನ್ನ ಕುಟುಂಬಕ್ಕೆ ತುಂಬಾ ಕಷ್ಟಕರವಾಗಿದ್ದವು. ಅತ್ಯಂತ ತೊಂದರೆಯ ವಿಷಯವೆಂದರೆ ಜನರು ಸತ್ಯವನ್ನು ತಿಳಿಯದೆ ಮತ್ತು ಸತ್ಯವನ್ನು ಪರಿಶೀಲಿಸದೆ ಬರೆಯಲು ಪ್ರಾರಂಭಿಸಿದರು. ಇಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಲ್ಲಿಯೂ ನನ್ನ ಮೇಲೆ ತೀವ್ರ ಟ್ರೋಲ್ ಆಗುತ್ತಿದೆ. ನನ್ನ ಮೌನ ನನ್ನ ದೌರ್ಬಲ್ಯವಲ್ಲ. ಆದರೆ ಅದು ನನ್ನ ಶಕ್ತಿಯನ್ನು ತೋರಿಸುತ್ತದೆ. ಆನ್‌ಲೈನ್ ಟ್ರೋಲಿಂಗ್ ಸುಲಭವಾಗಿ ಮಾಡಬಹುದು. ಯಾರನ್ನಾದರೂ ಮೇಲಕ್ಕೆತ್ತಲು ಧೈರ್ಯ ಬೇಕು. ನಾನು ಯಾವಾಗಲೂ ನನ್ನ ಆದರ್ಶಗಳು ಮತ್ತು ಸತ್ಯದೊಂದಿಗೆ ಮುಂದುವರಿಯುತ್ತೇನೆ. ಏಕೆಂದರೆ ಸತ್ಯಕ್ಕೆ ಯಾವುದೇ ಪುರಾವೆ ಅಗತ್ಯವಿಲ್ಲ ಎಂದು ಧನಶ್ರೀ ಬರೆದಿದ್ದಾರೆ. ಇದು ಜನರಲ್ಲಿ ಮತ್ತಷ್ಟು ಗೊಂದಲ ಮೂಡಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.