ಯುಜುವೇಂದ್ರ ಚಹಲ್ ಮತ್ತು ಧನಶ್ರೀ ಡಿವೋರ್ಸ್ ಪಡೆಯುತ್ತಿರುವ ಬಗ್ಗೆ ವರದಿಗಳು ಹರಿದಾಡುತ್ತಿವೆ. ಡಿವೋರ್ಸ್ ಆದರೆ ಚಹಲ್ ಧನಶ್ರೀಗೆ ಎಷ್ಟು ಜೀವನಾಂಶ ನೀಡಬೇಕು ಎಂಬ ಚರ್ಚೆಗಳು ನಡೆಯುತ್ತಿವೆ.
ನವದೆಹಲಿ: ಟೀಂ ಇಂಡಿಯಾದ ಲೆಗ್ ಸ್ಪಿನ್ನರ್, ಕ್ರಿಕೆಟಿಗ ಯುಜುವೇಂದ್ರ ಚಹಲ್ ಸಾಂಸರಿಕ ಜೀವನದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಬಹಿರಂಗಗೊಂಡಿದೆ. ಚಹಲ್ ಮತ್ತು ಧನಶ್ರೀ ಡಿವೋರ್ಸ್ ಪಡೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿಗಳ ಬೆನ್ನಲ್ಲೇ ಕ್ರಿಕೆಟಿಗ ಮಾಡಿದ ಸೋಶಿಯಲ್ ಮೀಡಿಯಾ ಪೋಸ್ಟ್ ಎಲ್ಲವೂ ನಿಜ ಎಂಬಂತೆ ಹೇಳುವಂತಿತ್ತು. ಕಠಿಣ ಪರಿಶ್ರಮವು ಜನರ ವ್ಯಕ್ತಿತ್ವವನ್ನು ತೋರಿಸುತ್ತದೆ. ನಿಮ್ಮ ಪ್ರಯಾಣ ನಿಮಗೆ ಗೊತ್ತಿರುತ್ತದೆ. ನಿಮ್ಮ ನೋವು ನಿಮಗೆ ಗೊತ್ತಿರುತ್ತದೆ. ಈ ಹಂತಕ್ಕೇರಲು ನೀವು ಏನೆಲ್ಲಾ ಮಾಡಿದ್ದೀರ ಎನ್ನುವುದು ನಿಮಗೆ ಹಾಗೂ ಜಗತ್ತಿಗೆ ಗೊತ್ತಿದೆ. ನೀವು ನಿಮ್ಮ ತಂದೆ-ತಾಯಿ ಹೆಮ್ಮೆಪಡುವಂತೆ ಮಾಡಲು ಸಾಕಷ್ಟು ಬೆವರು ಹರಿಸಿರುತ್ತೀರ. ಯಾವಾಗಲೂ ಹೆಮ್ಮೆಯ ಮಗನಾಗಿಲು ಬಯಸುತ್ತೇನೆ ಎಂದು ಚಹಲ್ ಬರೆದುಕೊಂಡಿದ್ದರು.
2023ರಲ್ಲಿ ಧನಶ್ರೀ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿನ ಚಹಲ್ ಹೆಸರು ತೆಗೆದಿದ್ದರು. ಇದಾದ ಬೆನ್ನಲ್ಲೇ ಚಹಲ್ ನ್ಯೂ ಲೈಫ್ ಲೋಡಿಂಗ್ ಅಂತ ಬರೆದುಕೊಂಡಿದ್ದರು. ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿದ್ದ ಪತಿ ಚಹಲ್ ಜೊತೆಗಿನ ಎಲ್ಲಾ ಫೋಟೋಗಳನ್ನು ಧನಶ್ರೀ ಡಿಲೀಟ್ ಮಾಡಿಕೊಂಡಿದ್ದರು. ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಯುಜುವೇಂದ್ರ ಚಹಲ್ ಮತ್ತು ಧನಶ್ರೀ ಡಿವೋರ್ಸ್ ಪಡೆಯುತ್ತಿರೋದು ಖಚಿತ. ಆದರೆ ಇಬ್ಬರ ಯಾವ ಕಾರಣಕ್ಕೆ ಈ ನಿರ್ಧಾರ ಎಂಬುದನ್ನು ಈ ದೃಢಪಡಿಸಿಲ್ಲ. ಡಿವೋರ್ಸ್ ಕಾನೂನು ಪ್ರಕ್ರಿಯೆ ಪೂರ್ಣವಾದ ಬಳಿಕ ಚಹಲ್ ಮತ್ತು ಧನಶ್ರೀ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಗಳಿವೆ.
ಎಷ್ಟು ಜೀವನಾಂಶ?
ವರದಿಗಳ ಪ್ರಕಾರ, ಡಿವೋರ್ಸ್ ಪಡೆದುಕೊಂಡ್ರೆ ಪತ್ನಿ ಧನಶ್ರೀಗೆ ಯುಜುವೇಂದ್ರ ಚಹಲ್ ಎಷ್ಟು ಜೀವನಾಂಶ ನೀಡಬೇಕು ಎಂಬುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಕಾನೂನಿನ ಪ್ರಕಾರ, ಜೀವನಾಂಶ ಪಡೆಯುವ ಮತ್ತು ನೀಡುವ ಪ್ರಮಾಣ ಪ್ರಕರಣದಿಂದ ಪ್ರಕರಣಕ್ಕೆ ಬೇರೆಯಾಗಿರುತ್ತದೆ. ಈ ಪ್ರಕರಣದಲಲ್ಲಿ ಚಹಲ್ ಮತ್ತು ಧನಶ್ರೀ ಇಬ್ಬರು ಆರ್ಥಿಕವಾಗಿ ಸದೃಢರಾಗಿರುವಂತಿದೆ.
ಇದನ್ನೂ ಓದಿ: ಮುರಿದುಬಿತ್ತಾ ಚಹಲ್-ಧನಶ್ರೀ ದಾಂಪತ್ಯ ಬದುಕು? ಫೋಟೋ ಡಿಲೀಟ್ ಮಾಡಿದ ಸೆಲಿಬ್ರಿಟಿ ಜೋಡಿ!
ಮದುವೆಯಾಗಿ ಎಷ್ಟು ವರ್ಷ ಕಳೆದಿದೆ ಎಂಬ ಅಂಶ ಸಹ ಜೀವನಾಂಶದ ಪ್ರಮಾಣವನ್ನು ನಿರ್ಧರಿಸುತ್ತದೆ. ಚಹಲ್ ಮತ್ತು ಧನಶ್ರೀ ವರ್ಮಾ ಮದುವೆಯಾಗಿ ನಾಲ್ಕು ವರ್ಷಗಳಾಗಿದ್ದು, ಜೀವನಾಂಶ ಪ್ರಮಾಣ ಕಡಿಮೆ ಇರಲಿದೆ ಎಂದು ಊಹಿಸಲಾಗಿದೆ. ಧನಶ್ರೀ ವರ್ಮಾ ಯಾವುದೇ ಜೀವನಾಂಶವನ್ನು ಕೇಳದಿರಬಹುದು. ಟಾಲಿವುಡ್ ನಟಿ ಸಮಂತಾ ರುಥ್ ಪ್ರಭು, ಡಿವೋರ್ಸ್ ಸಂದರ್ಭದಲ್ಲಿ ಯಾವುದೇ ಜೀವನಾಂಶ ಪಡೆದುಕೊಂಡಿರಲಿಲ್ಲ. ಅಕ್ಕಿನೇನಿ ಕುಟುಂಬ ಜೀವನಾಂಶ ನೀಡಲು ಸಿದ್ಧರಿದ್ರೂ ಸಮಂತಾ ಒಪ್ಪಿರಲಿಲ್ಲ.
ಧನಶ್ರೀ ವರ್ಮಾ ಹಾಗೂ ಯುಜುವೇಂದ್ರ ಚಹಲ್ 2020ರ ಡಿಸೆಂಬರ್ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕೊರೋನಾ ಕಾಲದ ಲಾಕ್‌ಡೌನ್ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಧನಶ್ರೀ ವರ್ಮಾ ಬಳಿ ಡ್ಯಾನ್ಸ್ ಕಲಿಯಲು ಚಹಲ್ ತೆರಳಿದ್ದಾಗ ಇಬ್ಬರ ನಡುವ ಪ್ರೇಮಾಂಕುರವಾಗಿತ್ತು.
ಇದನ್ನೂ ಓದಿ: ಡಿವೋರ್ಸ್ ವದಂತಿ ಬೆನ್ನಲ್ಲೇ ಗುಪ್ತ ಪೋಸ್ಟ್ ಹಂಚಿಕೊಂಡ ಚಹಲ್; ಇದೇ ಕಾರಣಕ್ಕಾ ವಿಚ್ಛೇದನಾ?