ಯಜುವೇಂದ್ರ ಚಹಲ್ ಮತ್ತು ಧನಶ್ರೀ ಮಧ್ಯೆ ಬಂದವರು ಕೋರಿಯೋಗ್ರಫರ್ ಪ್ರತೀಕ್ ಉಟೇಕರ್ ಎಂಬ ಮಾತಿದೆ. ಅವರಿಬ್ಬರ ಫೋಟೋ ಫುಲ್ ವೈರಲ್ ಆಗ್ತಿದೆ. ಈಗ ಟ್ರೋಲರ್ ಗೆ ಪ್ರತೀಕ್ ಉತ್ತರ ನೀಡಿದ್ದಾರೆ.
ಕ್ರಿಕೆಟಿಗ ಯಜುವೇಂದ್ರ ಚಹಲ್ (Cricketer Yuzvendra Chahal) ಮತ್ತು ಪತ್ನಿ ಧನಶ್ರೀ ವರ್ಮಾ (Dhanashree Verma) ವೈಯಕ್ತಿಕ ವಿಚಾರಕ್ಕೆ ಹೆಚ್ಚು ಚರ್ಚೆಯಾಗ್ತಿದ್ದಾರೆ. 2025ರ ಆರಂಭದಿಂದಲೇ ಧನಶ್ರೀ ವರ್ಮಾ ಹಾಗೂ ಚಹಲ್ ವಿಚ್ಛೇದನದ ಬಗ್ಗೆ ಬಿಸಿಬಿಸಿ ಚರ್ಚೆಯಾಗ್ತಿದೆ. ಅದಕ್ಕೆ ಏನ್ ಕಾರಣ ಎಂಬ ಹುಡುಕಾಟ ಮುಂದುವರೆದಿದೆ. ಚಹಲ್ ಹಾಗೂ ಧನಶ್ರೀ ಮಧ್ಯೆ ಬಂದಿದ್ದು ಕೋರಿಯೋಗ್ರಫರ್ ಪ್ರತೀಕ್ ಉಟೇಕರ್ (Pratik utekar) ಎನ್ನಲಾಗ್ತಿದೆ. ಧನಶ್ರೀ ಹಾಗೂ ಪ್ರತೀಕ್ ಜೊತೆಗಿರುವ ಫೋಟೋ ಒಂದು ವೈರಲ್ ಆಗಿದೆ. ಈ ಫೋಟೋ ನೋಡಿದ ಟ್ರೋಲರ್, ಕಮೆಂಟ್ ಸುರಿಮಳೆಗೈದಿದ್ದಾರೆ. ಚಹಲ್ ಮತ್ತು ಧನಶ್ರೀ ವರ್ಮಾ, ಡಿವೋರ್ಸ್ (Divorce) ಬಗ್ಗೆ ಈವರೆಗೂ ಮೌನ ಮುರಿದಿಲ್ಲ. ಆದ್ರೆ ಪ್ರತೀಕ್, ಸೋಶಿಯಲ್ ಮೀಡಿಯಾ ಮೂಲಕ ಟ್ರೋಲರ್ ಬಾಯಿ ಮುಚ್ಚಿಸುವ ಪ್ರಯತ್ನ ನಡೆಸಿದ್ದಾರೆ.
ಪ್ರತೀಕ್, ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿಯೊಂದನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ ನಲ್ಲಿ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಧನಶ್ರೀ ಹೆಸರನ್ನೂ ಪ್ರತೀಕ್ ಬರೆದಿಲ್ಲ. ಆದ್ರೆ ವೈರಲ್ ಆಗಿರುವ ಒಂದು ಫೋಟೋ ಬಗ್ಗೆ ಅವರು ಸ್ಟೋರಿ ಹಾಕಿದ್ದಾರೆ ಎಂಬುದು ಸ್ಪಷ್ಟ. ಕೇವಲ ಒಂದು ಫೋಟೋ ನೋಡಿ, ಮನಸ್ಸಿಗೆ ಬಂದ ಕಥೆ ಬರೆಯಲು ಹಾಗೂ ಕಮೆಂಟ್ ಮಾಡಲು ವಿಶ್ವ ಖಾಲಿ ಇದೆ, ಜನರು ಫ್ರೀ ಇದ್ದಾರೆ ಎಂದು ಪ್ರತೀಕ್ ಸ್ಟೋರಿ ಹಾಕಿದ್ದಾರೆ. ಆದ್ರೆ ಈ ವಿಷ್ಯಕ್ಕೂ ಪ್ರತೀಕ್ ಟ್ರೋಲ್ ಆಗಿದ್ದಾರೆ. ಇಷ್ಟೊಂದು ಸುದ್ದಿ ಹರಡುವವರೆಗೂ ಪ್ರತೀಕ್ ಏಕೆ ಸುಮ್ಮನಿದ್ರು ಅಂತ ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಪ್ರತೀಕ್ ನಾಟಕವಾಡ್ತಿದ್ದಾರೆಂದು ಕಮೆಂಟ್ ಮಾಡಿದ್ದಾರೆ.
ಧನಶ್ರೀ ಬಳಿ ಡ್ಯಾನ್ಸ್ ಕಲಿಯಲು ಹೋಗಿ ಜಾರಿಬಿದ್ದ ಚಹಲ್! ಡ್ಯಾನ್ಸ್‌ನಿಂದ ಆರಂಭ ಡಿವೋರ್ಸ್‌ನಲ್ಲಿ ಅಂತ್ಯ?
ಫೋಟೋದಲ್ಲಿ ಏನಿದೆ? : ಪ್ರತೀಕ್ ಹಾಗೂ ಧನಶ್ರೀ ಅತೀ ಹತ್ತಿರದಲ್ಲಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಫೋಟೋದಲ್ಲಿ ಇಬ್ಬರು ಕಪ್ಪು ಬಟ್ಟೆಯಲ್ಲಿ ಟ್ಯೂನಿಂಗ್ ಮಾಡಿದ್ದಾರೆ. ಇಬ್ಬರು ಬಹಳ ಹತ್ತಿರದಿಂದ ಫೋಟೋಕ್ಕೆ ಪೋಸ್ ನೀಡಿದ್ದಾರೆ. ಇದು ಹಳೆಯ ಫೋಟೋ. ಹಿಂದಿನ ವರ್ಷವೇ ಈ ಫೋಟೋ ವೈರಲ್ ಆಗಿತ್ತು. ಆ ಸಮಯದಲ್ಲಿ ಪ್ರತೀಕ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆಗ ಧನಶ್ರೀ ಮಾತನಾಡಿದ್ದರು. ಒಂದು ಫೋಟೋ ನನ್ನ ಕುಟುಂಬ ಹಾಗೂ ಆಪ್ತ ಮೇಲೆ ಗಮನಾರ್ಹ ಪರಿಣಾಮ ಬೀರುತ್ತಿದೆ. ನಾನು ಇದಕ್ಕೆ ಹೆದರುವುದಿಲ್ಲ. ಎದ್ದು ನಿಲ್ಲುತ್ತೇನೆ ಎಂದಿದ್ದರು. ಆದ್ರೀಗ ಮತ್ತೆ ಹಳೇ ಫೋಟೋ ಚರ್ಚೆಗೆ ಬಂದಿದೆ. ಅವರಿಬ್ಬರ ಮಧ್ಯೆ ಇರುವ ಬಾಂಡಿಂಗ್ ನೋಡಿದ ಟ್ರೋಲರ್, ಧನಶ್ರೀ ಹೆಸರಿಗೆ ಪ್ರತೀಕ್ ಹೆಸರನ್ನು ಥಳುಕು ಹಾಕಿದ್ದಾರೆ.
ಪ್ರತೀಕ್ ಪ್ರಸಿದ್ಧ ಕೋರಿಯೋಗ್ರಫರ್. ಅವರು ಟಿವಿ ಶೋಗಳಿಗಾಗಿ ಸಾಕಷ್ಟು ಡಾನ್ಸ್ ಕೋರಿಯೋಗ್ರಫಿ ಮಾಡಿದ್ದಾರೆ. 17ನೇ ವಯಸ್ಸಿನಲ್ಲಿಯೇ ಪ್ರತೀಕ್, ಕೋರಿಯೋಗ್ರಫಿ ಶುರು ಮಾಡಿದ್ದರು. ಡಾನ್ಸ್ ಗುರು ಮಾತ್ರವಲ್ಲ ಒಳ್ಳೆ ಮೆಂಟರ್ ಎಂಬ ಹೆಸರನ್ನು ಪ್ರತೀಕ್ ಪಡೆದಿದ್ದಾರೆ.
ಚಹಲ್ ವಿಚ್ಛೇದನ ವದಂತಿಗಳ ನಡುವೆ ಧನಶ್ರೀ ವರ್ಮಾ ಕಣ್ಣೀರು ಹಾಕುವ ವಿಡಿಯೋ ವೈರಲ್!
ಧನಶ್ರೀ ಮತ್ತು ಯಜುವೇಂದ್ರ ಚಹಲ್, ಡಿಸೆಂಬರ್ 22, 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದ್ರೆ ಕಳೆದ ವರ್ಷದ ಆರಂಭದಿಂದಲೂ ಚಹಲ್ ಮತ್ತು ಧನಶ್ರೀ ಮಧ್ಯೆ ಬಿರುಕು ಕಾಣಿಸಿಕೊಂಡಿದೆ ಎಂಬ ಸುದ್ದಿ ಕೇಳ್ತಾನೆ ಇತ್ತು. ಆದ್ರೆ 2025ರ ವರ್ಷಾರಂಭದಲ್ಲಿಯೇ ಚಹಲ್ ಹಾಗೂ ಧನಶ್ರೀ ಈ ಬಗ್ಗೆ ಅಧಿಕೃತ ನಿರ್ಧಾರ ಕೈಗೊಂಡಂತಿದೆ. ಇಬ್ಬರೂ ಪರಸ್ಪರ ಸೋಶಿಯಲ್ ಮೀಡಿಯಾದಲ್ಲಿ ಅನ್ ಫಾಲೋ ಮಾಡಿಕೊಂಡಿದ್ದಾರೆ. ಖಾತೆಯಲ್ಲಿ ಒಂದು ಫೋಟೋ ಬಿಟ್ಟು ಉಳಿದ ಎಲ್ಲ ಒಟ್ಟಿಗೆ ಇರುವ ಫೋಟೋಗಳು ಡಿಲಿಟ್ ಆಗಿವೆ. ಇದನ್ನು ನೋಡಿದ ಫ್ಯಾನ್ಸ್, ಇಬ್ಬರು ಬೇರೆಯಾಗಿದ್ದಾರೆ ಎಂಬುದನ್ನು ಸಂಪೂರ್ಣ ನಂಬಿದ್ದಾರೆ.