ಟೀಂ ಇಂಡಿಯಾ ಆಯ್ಕೆ ಸಮಿತಿಯ ಹೊಸ ಅಧ್ಯಕ್ಷ ಪ್ರಗ್ಯಾನ್ ಓಜಾ ಸಂಬಳ ಎಷ್ಟು?

Published : Oct 19, 2026, 08:27 PM IST
PRAGYAN OJHA - NEW CHIEF SELECTOR OF TEAM INDIA

ಸಾರಾಂಶ

ಅಜಿತ್ ಅಗರ್ಕರ್ ಅವರ ಯಶಸ್ವಿ ಅಧಿಕಾರಾವಧಿಯ ನಂತರ ಟೀಂ ಇಂಡಿಯಾದ ನೂತನ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಮಾಜಿ ಆಟಗಾರ ಪ್ರಗ್ಯಾನ್ ಓಜಾ ನೇಮಕಗೊಂಡಿದ್ದಾರೆ. ಬಿಸಿಸಿಐ ನಿಯಮಗಳ ಪ್ರಕಾರ ಅತಿ ಹೆಚ್ಚು ಟೆಸ್ಟ್ ಆಡಿದ ಆಧಾರದ ಮೇಲೆ ಓಜಾಗೆ ಈ ಸ್ಥಾನ ಒಲಿದಿದ್ದು, ಇವರು ವಾರ್ಷಿಕ 3 ಕೋಟಿ ರೂ. ವೇತನ ಪಡೆಯಲಿದ್ದಾರೆ.

ಬೆಂಗಳೂರು (ಅಕ್ಟೋಬರ್ 19): ಟೀಂ ಇಂಡಿಯಾಗೆ ಹೊಸ ಆಯ್ಕೆಗಾರ ಸಿಕ್ಕಾಗಿದೆ. ಅಜಿತ್ ಅಗರ್ಕರ್‍‌ ಸ್ಥಾನವನ್ನು ಟೀಂ ಇಂಡಿಯಾದ ಮಾಜಿ ಆಟಗಾರ ಪ್ರಗ್ಯಾನ್ ಓಜಾ ಅಲಂಕರಿಸಿದ್ದಾರೆ.

ಬಿಸಿಸಿಐ ಪ್ರಕಟಣೆ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳ ಮೂಲಕ ಪುರುಷರ ಆಯ್ಕೆ ಸಮಿತಿಯಲ್ಲಿ ಆಗಿರುವ ಈ ಪ್ರಮುಖ ಬದಲಾವಣೆಗಳನ್ನು ಅಧಿಕೃತವಾಗಿ ಪ್ರಕಟಿಸಿದೆ. ಬಿಸಿಸಿಐ ನಿಯಮಗಳ ಪ್ರಕಾರ, ಆಯ್ಕೆ ಸಮಿತಿಯ ಸದಸ್ಯರಲ್ಲಿ ಯಾರು ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿರುತ್ತಾರೋ ಅವರಿಗೆ ಅಧ್ಯಕ್ಷ ಸ್ಥಾನ ನೀಡಲಾಗುತ್ತದೆ. ಆ ಕಾರಣಕ್ಕಾಗಿಯೇ ಪ್ರಗ್ಯಾನ್ ಓಜಾ ಅವರಿಗೆ ಈ ಜವಾಬ್ದಾರಿ ಸಿಕ್ಕಿದೆ. ಮಾಜಿ ವೇಗಿ ಅಜಿತ್ ಅಗರ್ಕರ್ ಅವರ ಯಶಸ್ವಿ ಅಧಿಕಾರಾವಧಿಯು ಈ ನೇಮಕಾತಿಯೊಂದಿಗೆ ಅಂತ್ಯಗೊಂಡಿದೆ. ಭಾರತ ತಂಡ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಇವರ ಸಮಿತಿಯ ಆಯ್ಕೆ ಪ್ರಮುಖವಾಗಿತ್ತು. ಹೊಸ ಅಧ್ಯಕ್ಷರಾಗಿ ಪ್ರಗ್ಯಾನ್ ಓಜಾ ಮತ್ತು ಹೊಸ ಸದಸ್ಯರಾಗಿ ರಮೇಶ್ ಪವಾರ್ ಮುಂಬರುವ ಪ್ರಮುಖ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಳಿಗೆ ಭಾರತ ತಂಡವನ್ನು ಆಯ್ಕೆ ಮಾಡುವ ಜವಾಬ್ದಾರಿ ಹೊರಲಿದ್ದಾರೆ.

5 ಸದಸ್ಯರ ಪೂರ್ಣ ಪ್ರಮಾಣದ ಸಮಿತಿ

ಪ್ರಗ್ಯಾನ್ ಓಜಾ ಅವರ ನೇತೃತ್ವದ ಈ ಪುರುಷರ ಆಯ್ಕೆ ಸಮಿತಿಯು ಈಗ ಒಟ್ಟು ಐದು ಸದಸ್ಯರನ್ನು ಒಳಗೊಂಡಿದೆ. ಅವರುಗಳೆಂದರೆ: ಪ್ರಗ್ಯಾನ್ ಓಜಾ (ಅಧ್ಯಕ್ಷರು), ಶಿವ ಸುಂದರ್ ದಾಸ್, ಆರ್. ಪಿ. ಸಿಂಗ್, ಅಜಯ್ ರಾತ್ರಾ ಮತ್ತು ರಮೇಶ್ ಪವಾರ್ ಅವರನ್ನು ಈ ಸಮಿತಿ ಒಳಗೊಂಡಿದೆ. ಇಲ್ಲಿ ಆರ್ಸಿಬಿ ಮಾಜಿ ಪ್ಲೇಯರ್ ಪಾರ್ಥಿವ್‌ ಪಟೇಲ್, ಆರ್‍‌. ಅಶ್ವಿನ್ ಹೆಸರು ಮುನ್ನೆಲೆಗೆ ಇತ್ತು. ಆದರೆ ಕೊನೆ ಕ್ಷಣೆದಲ್ಲಿ ಪ್ರಗ್ಯಾನ್ ಓಜಾಗೆ ಈಗ ಆಯ್ಕೆ ಸಮತಿ ಅಧ್ಯಕ್ಷ ಸ್ಥಾನ ಒಲಿದಿದೆ.

ಆಯ್ಕೆ ಸಮಿತಿ ನೂತನ ಅಧ್ಯಕ್ಷ ಪ್ರಗ್ಯಾನ್ ಓಜಾ ಅವರ ಸಂಬಳದ ಬಗ್ಗೆ ಭಾರೀ ಚರ್ಚೆ ಆಗ್ತಿದೆ. ಓಜಾ ಅವರು ವಾರ್ಷಿಕವಾಗಿ ₹3 ಕೋಟಿ (30 ಮಿಲಿಯನ್ ರೂಪಾಯಿ) ವೇತನ ಪಡೆಯಲಿದ್ದಾರೆ. ಅಂದರೆ ತಿಂಗಳಿಗೆ ಸರಿಸುಮಾರು ₹25 ಲಕ್ಷ (250,000 ರೂಪಾಯಿ) ಆಗುತ್ತದೆ. ಅಜಿತ್ ಅಗರ್ಕರ್ ಕೂಡ ಅದೇ ವೇತನ ಪಡೆದಿದ್ದಾರೆ.

ಓಜಾ ಕ್ರಿಕೆಟ್ ವೃತ್ತಿಜೀವನದ ಬಗ್ಗೆ ಹೇಳುವುದಾದರೆ.. ಟೆಸ್ಟ್ ಪಂದ್ಯಗಳ ಜೊತೆಗೆ ಭಾರತದ ಪರ 18 ಏಕದಿನ ಮತ್ತು 6 ಟಿ20 ಅಂತರರಾಷ್ಟ್ರೀಯ ಪಂದ್ಯ ಆಡಿದ್ದಾರೆ. 18 ಟೆಸ್ಟ್ ಪಂದ್ಯಗಳಲ್ಲಿ 21 ವಿಕೆಟ್‌ಗಳು ಮತ್ತು 6 ಟಿ20ಐಗಳಲ್ಲಿ 10 ವಿಕೆಟ್‌ ಕಬಳಿಸಿದ್ದಾರೆ. ಐಪಿಎಲ್‌ನಲ್ಲಿ ಎರಡು ತಂಡಗಳ ಪರ ಆಡಿದ್ದಾರೆ. ಮೊದಲ ಆವೃತ್ತಿಯಿಂದ 2011 ರವರೆಗೆ ಅವರು ಡೆಕ್ಕನ್ ಚಾರ್ಜರ್ಸ್ ಪರ ಆಡಿದ್ದರು. 2012 ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೇರಿದರು. 2015ರಲ್ಲಿ ಕೊನೆಯ ಆವೃತ್ತಿಯ ಪಂದ್ಯವನ್ನು ಆಡಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೈದಾನದಲ್ಲಿ ಕ್ಯಾಪ್ಟನ್ ಕೂಲ್, ಪತ್ನಿ ಜೊತೆ ತುಂಟಾಟದ ಕಿಂಗ್; ವೈರಲ್ ಆಯ್ತು ಧೋನಿ-ಸಾಕ್ಷಿ ಕ್ಯೂಟ್ ವಿಡಿಯೋ!
RCB ಮಾಜಿ ಪ್ಲೇಯರ್ ಕೈ ತಪ್ಪಿದ ಟೀಂ ಇಂಡಿಯಾ ಆಯ್ಕೆ ಸಮಿತಿ ಪಟ್ಟ; ಓಜಾಗೆ ಅಧ್ಯಕ್ಷ ಪಟ್ಟ!