RCB ಮಾಜಿ ಪ್ಲೇಯರ್ ಕೈ ತಪ್ಪಿದ ಟೀಂ ಇಂಡಿಯಾ ಆಯ್ಕೆ ಸಮಿತಿ ಪಟ್ಟ; ಓಜಾಗೆ ಅಧ್ಯಕ್ಷ ಪಟ್ಟ!

Published : Oct 19, 2026, 05:00 PM IST
Oja And Pawar

ಸಾರಾಂಶ

ಭಾರತೀಯ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ನೂತನ ಸದಸ್ಯರಾಗಿ ರಮೇಶ್ ಪವಾರ್ ನೇಮಕಗೊಂಡಿದ್ದಾರೆ. ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ ಹಿರಿತನದ ಆಧಾರದ ಮೇಲೆ ಪ್ರಗ್ಯಾನ್ ಓಜಾ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಅಜಿತ್ ಅಗರ್ಕರ್ ಅವರ ಅಧಿಕಾರಾವಧಿ ಅಂತ್ಯಗೊಂಡಿದೆ.

ಭಾರತೀಯ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ನೂತನ ಸದಸ್ಯರಾಗಿ ರಮೇಶ್ ಪವಾರ್ ಅವರನ್ನು ನೇಮಕ ಮಾಡಲಾಗಿದೆ.ಅದರಂತೆ ಹಿರಿತನದ (ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿರುವ) ಆಧಾರದ ಮೇಲೆ, ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ಅವರು ಈ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅದರಂತೆ ಈ ಹಿಂದೆ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ಅಜಿತ್ ಅಗರ್ಕರ್ ಅವರ ಅಧಿಕಾರಾವಧಿ ಮುಕ್ತಾಯಗೊಂಡಿದ್ದು, ಅವರ ಬದ್ಧತೆ, ದೃಢತೆ ಮತ್ತು ನೀಡಿದ ಕೊಡುಗೆಗಳಿಗಾಗಿ ಬಿಸಿಸಿಐ ಧನ್ಯವಾದ ಅರ್ಪಿಸಿದೆ.

ಬಿಸಿಸಿಐ ಅಧಿಕೃತ ಪ್ರಕಟಣೆ!

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳ ಮೂಲಕ ಪುರುಷರ ಆಯ್ಕೆ ಸಮಿತಿಯಲ್ಲಿ ಆಗಿರುವ ಈ ಪ್ರಮುಖ ಬದಲಾವಣೆಗಳನ್ನು ಅಧಿಕೃತವಾಗಿ ಪ್ರಕಟಿಸಿದೆ. ಬಿಸಿಸಿಐ ನಿಯಮಗಳ ಪ್ರಕಾರ, ಆಯ್ಕೆ ಸಮಿತಿಯ ಸದಸ್ಯರಲ್ಲಿ ಯಾರು ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿರುತ್ತಾರೋ ಅವರಿಗೆ ಅಧ್ಯಕ್ಷ ಸ್ಥಾನ ನೀಡಲಾಗುತ್ತದೆ. ಆ ಕಾರಣಕ್ಕಾಗಿಯೇ ಪ್ರಗ್ಯಾನ್ ಓಜಾ ಅವರಿಗೆ ಈ ಜವಾಬ್ದಾರಿ ಸಿಕ್ಕಿದೆ. ಮಾಜಿ ವೇಗಿ ಅಜಿತ್ ಅಗರ್ಕರ್ ಅವರ ಯಶಸ್ವಿ ಅಧಿಕಾರಾವಧಿಯು ಈ ನೇಮಕಾತಿಯೊಂದಿಗೆ ಅಂತ್ಯಗೊಂಡಿದೆ. ಭಾರತ ತಂಡ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಇವರ ಸಮಿತಿಯ ಆಯ್ಕೆ ಪ್ರಮುಖವಾಗಿತ್ತು. ಹೊಸ ಅಧ್ಯಕ್ಷರಾಗಿ ಪ್ರಗ್ಯಾನ್ ಓಜಾ ಮತ್ತು ಹೊಸ ಸದಸ್ಯರಾಗಿ ರಮೇಶ್ ಪವಾರ್ ಮುಂಬರುವ ಪ್ರಮುಖ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಳಿಗೆ ಭಾರತ ತಂಡವನ್ನು ಆಯ್ಕೆ ಮಾಡುವ ಜವಾಬ್ದಾರಿ ಹೊರಲಿದ್ದಾರೆ.

ರಮೇಶ್ ಪವಾರ್ ಅವರ ಕೋಚಿಂಗ್ ಅನುಭವ!

ನೂತನ ಸದಸ್ಯರಾಗಿ ಆಯ್ಕೆಯಾಗಿರುವ ರಮೇಶ್ ಪವಾರ್ ಈ ಹಿಂದೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು. ಅವರ ಮಾರ್ಗದರ್ಶನದಲ್ಲಿ ಮಹಿಳಾ ತಂಡವು ಏಷ್ಯಾ ಕಪ್ ಪ್ರಶಸ್ತಿ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿತ್ತು. ಸಿಎಸಿ ಮೂಲಕ ಸಂದರ್ಶನ: ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿಯ ಸದಸ್ಯರಾದ ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರು ಮುಂಬೈನ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ಅಭ್ಯರ್ಥಿಗಳನ್ನು ಸಂದರ್ಶಿಸಿ, ರಮೇಶ್ ಪವಾರ್ ಅವರ ಹೆಸರನ್ನು ಸರ್ವಾನುಮತದಿಂದ ಶಿಫಾರಸು ಮಾಡಿದ್ದರು.

5 ಸದಸ್ಯರ ಪೂರ್ಣ ಪ್ರಮಾಣದ ಸಮಿತಿ!

ಪ್ರಗ್ಯಾನ್ ಓಜಾ ಅವರ ನೇತೃತ್ವದ ಈ ಪುರುಷರ ಆಯ್ಕೆ ಸಮಿತಿಯು ಈಗ ಒಟ್ಟು ಐದು ಸದಸ್ಯರನ್ನು ಒಳಗೊಂಡಿದೆ. ಅವರುಗಳೆಂದರೆ: ಪ್ರಗ್ಯಾನ್ ಓಜಾ (ಅಧ್ಯಕ್ಷರು), ಶಿವ ಸುಂದರ್ ದಾಸ್, ಆರ್. ಪಿ. ಸಿಂಗ್, ಅಜಯ್ ರಾತ್ರಾ ಮತ್ತು ರಮೇಶ್ ಪವಾರ್ ಅವರನ್ನು ಈ ಸಮಿತಿ ಒಳಗೊಂಡಿದೆ. ಇಲ್ಲಿ ಆರ್ಸಿಬಿ ಮಾಜಿ ಪ್ಲೇಯರ್ ಪಾರ್ಥಿವ್‌ ಪಟೇಲ್, ಆರ್‍‌. ಅಶ್ವಿನ್ ಹೆಸರು ಮುನ್ನೆಲೆಗೆ ಇತ್ತು. ಆದರೆ ಕೊನೆ ಕ್ಷಣೆದಲ್ಲಿ ಪ್ರಗ್ಯಾನ್ ಓಜಾಗೆ ಈಗ ಆಯ್ಕೆ ಸಮತಿ ಅಧ್ಯಕ್ಷ ಸ್ಥಾನ ಒಲಿದಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Anirudh-Kaviya Marraige: ಅನಿರುದ್ಧ್ ಫಸ್ಟ್‌ ಗರ್ಲ್‌ಫ್ರೆಂಡ್‌ ಗೊತ್ತಲ್ವಾ? 6 ವರ್ಷ ದೊಡ್ಡವಳು.. ಬೇರೆ ಯಾರೆಲ್ಲಾ ಇದಾರೆ 'ಲವ್‌ ಲಿಸ್ಟ್‌'ನಲ್ಲಿ..?
ದಿಗ್ಗಜನಾದರೂ ಸಿಂಪಲ್, ಪ್ರಯಾಣಿಕರ ಮನವಿಗೆ ಸ್ಪಂದಿಸಿದ ರಾಹುಲ್ ದ್ರಾವಿಡ್ ಸರಳತೆಗೆ ಜನ ಫಿದಾ