ಶ್ರೇಯಸ್​ರನ್ನು ಕೊಂದು, ಅಭಿಷೇಕ್​ರನ್ನು ಮದ್ವೆಯಾಗಿ, ಶುಭಮನ್ ಜೊತೆ ಹುಕ್ಅಪ್: ಅನಯಾ ಬಂಗಾರ್ ಹೇಳಿದ್ದೇನು

Published : Oct 18, 2026, 07:27 PM IST
Anaya Bangar

ಸಾರಾಂಶ

ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್ ಟೀಂ ಇಂಡಿಯಾ ಆಟಗಾರರ ಬಗ್ಗೆ ನೀಡಿರುವ ಸ್ಫೋಟಕ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದೆ. ಲಿಂಗ ಪರಿವರ್ತನೆ ಮಾಡಿಕೊಂಡಿರುವ ಇವರಿಗೆ ಇದೀಗ ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಆಡಲು ಅವಕಾಶ ಸಿಕ್ಕಿದೆ. 2027ರ ಮಹಿಳಾ ಬಿಗ್ ಬ್ಯಾಷ್ ಲೀಗ್ ಆಡುವ ವಿಶ್ವಾಸದಲ್ಲಿದ್ದಾರೆ.

ದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್ ಅವರು ಟೀಂ ಇಂಡಿಯಾ ಆಟಗಾರರ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದು, ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗುತ್ತಿದೆ. ಅಷ್ಟಕ್ಕೂ, ಅನಯಾ ಅವರು ಲಿಂಗ ಪರಿವರ್ತನೆಯಿಂದ ಹಲ್​ಚಲ್​ ಸೃಷ್ಟಿಸಿದವರು. ಒಂದು ಕಾಲದಲ್ಲಿ ಆರ್ಯನ್ ಬಾಂಗರ್ ಆಗಿ ಗುರುತಿಸಿಕೊಂಡಿದ್ದ ಇವರು, ಮುಂಬೈ ಪರ ವಯೋಮಿತಿ ಕ್ರಿಕೆಟ್‌ನಲ್ಲಿ ಸರ್ಫರಾಜ್ ಖಾನ್ ಮತ್ತು ಮುಶೀರ್ ಖಾನ್ ಅವರಂತಹ ದಿಗ್ಗಜರ ಜೊತೆ ಮೈದಾನ ಹಂಚಿಕೊಂಡವರು. ಆದರೆ, ತಮ್ಮ ಅಂತರಾತ್ಮದ ಕರೆಗೆ ಓಗೊಟ್ಟು ಈ ವರ್ಷದ ಮಾರ್ಚ್‌ನಲ್ಲಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾದರು.

ಇದೀಗ ಅವರು, ಕೃಷ್ಣಾಂಕ್ ಅಟ್ರೆ ಅವರ ಯುಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ, ಭಾರತೀಯ ಕ್ರಿಕೆಟಿಗರಾದ ಶುಭಮನ್ ಗಿಲ್, ಅಭಿಷೇಕ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಅವರೊಂದಿಗೆ 'ಕಿಲ್, ಮ್ಯಾರಿ, ಹುಕ್ಅಪ್' ಆಡುವಂತೆ ಹೇಳಲಾಗಿತ್ತು. ಇದಕ್ಕೆ ಅನಯಾ ಅವರು "ಶ್ರೇಯಸ್ ಅಯ್ಯರ್ ಅವರನ್ನು ಕೊಂದು, ಅಭಿಷೇಕ್ ಶರ್ಮಾ ಅವರನ್ನು ಮದುವೆಯಾಗಿ, ಶುಭಮನ್ ಗಿಲ್ ಅವರೊಂದಿಗೆ ಹುಕ್ಅಪ್ ಮಾಡಿ" ಎಂದು ಹೇಳಿದ್ದಾರೆ. ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಲಿಂಗ ಪರಿವರ್ತನೆಯಿಂದ ಸುದ್ದಿ

ಮುಂಬೈನಲ್ಲಿ ವಯೋಧಾರಿತ ಕ್ರಿಕೆಟ್ ಆಡಿದ್ದ ಅನಯಾ, ತಮ್ಮ ಲಿಂಗ ಪರಿವರ್ತನೆಯ ನಂತರ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗಿ ಬಂದಿತ್ತು. ನಾನು ಮಹಿಳಾ ಕ್ರಿಕೆಟ್ ಗೆ ಅರ್ಹಳು ಎಂದು ಬಿಸಿಸಿಐಗೆ ಮನವಿ ಮಾಡಿಕೊಂಡಿದ್ದರೂ ಅವರಿಗೆ ಆಡುವ ಅವಕಾಶ ದೊರೆತಿರಲಿಲ್ಲ. ಇದೀಗ ಆಸ್ಟ್ರೇಲಿಯಾ ಅವರಿಗೆ ಅವಕಾಶ ನೀಡಿದೆ ಎಂದು ಅನಯಾ ಹೇಳಿಕೊಂಡಿದ್ದಾರೆ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

2027ರ ಮಾರ್ಚ್‌ನಿಂದ ಆಸ್ಟ್ರೇಲಿಯಾದ ಮಹಿಳಾ ಬಿಗ್ ಬ್ಯಾಷ್ ಲೀಗ್ (WBBL) ಆಡಲು ನನಗೆ ಅರ್ಹತೆ ಸಿಕ್ಕಿದೆ. ಒಂದು ಹಂತದಲ್ಲಿ ಕ್ರಿಕೆಟ್ ಜೀವನವೇ ಮುಗಿದುಹೋಯಿತು ಎಂದು ಭಾವಿಸಿದ್ದ ನನಗೆ ಇದು ಅತ್ಯಂತ ಭಾವುಕ ವಿಷಯ ಎಂದು ಅನಯಾ ಇತ್ತೀಚಿಗೆ ಹೇಳಿದ್ದರು.

ವೃತ್ತಿ ಜೀವನದಲ್ಲಿ ಮತ್ತೊಂದು ಅವಕಾಶ

ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ, ಕ್ರಿಕೆಟ್​ ವೃತ್ತಿ ಜೀವನ ಮುಗಿದೇ ಹೋಯ್ತು ಎಂದುಕೊಂಡಿದ್ದರು. ಈ ಕುರಿತು ಈ ಹಿಂದೆ ಸಂದರ್ಶನವೊಂದರಲ್ಲಿ ತಮ್ಮ ನೋವನ್ನು ಹಂಚಿಕೊಂಡಿದ್ದ ಅನಯಾ, ನಾನು ಮತ್ತೆ ಕ್ರಿಕೆಟ್ ಆಡುತ್ತೇನೆ ಎಂಬ ನಂಬಿಕೆಯೇ ಇರಲಿಲ್ಲ. ಆಟಕ್ಕೆ ವಿದಾಯ ಹೇಳುವ ಹಂತ ತಲುಪಿದ್ದೆ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ನನಗೆ ಮತ್ತೊಂದು ಅವಕಾಶ ನೀಡಿದೆ. ಇದು ನನ್ನ ಪಾಲಿಗೆ ಅತ್ಯಂತ ಸಂತಸದ ದಿನ ಎಂದು ಭಾವುಕರಾಗಿ ಹೇಳಿದ್ದರು. ಆಸ್ಟ್ರೇಲಿಯಾದಲ್ಲಿ 'ಕಮ್ಯುನಿಟಿ ಕ್ರಿಕೆಟ್' (ಸ್ಥಳೀಯ ಕ್ರಿಕೆಟ್) ಆಡಲು ಅನಯಾ ಅವರಿಗೆ ಈಗ ಅಧಿಕೃತ ಅನುಮತಿ ಸಿಕ್ಕಿದೆ.

ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಟ್ರಾನ್ಸ್‌ಜೆಂಡರ್ ಆಟಗಾರರ ಮೇಲೆ ಕೆಲವು ನಿರ್ಬಂಧಗಳನ್ನು ಹೇರಿದ್ದರೂ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಅನಯಾ ಅವರ ಕನಸಿಗೆ ಬೆಂಬಲವಾಗಿ ನಿಂತಿದೆ. ಉನ್ನತ ಮಟ್ಟದ 'ಎಲೈಟ್ ಕ್ರಿಕೆಟ್' (ಬಿಗ್ ಬ್ಯಾಷ್ ಲೀಗ್ ನಂತಹ ಪಂದ್ಯಾವಳಿ) ಆಡಬೇಕೆಂದರೆ ಅವರು ಕೆಲವು ನಿಯಮಗಳನ್ನು ಪಾಲಿಸಬೇಕಿದೆ. 2027ರ ಹೊತ್ತಿಗೆ ಅವರ ದೇಹದಲ್ಲಿನ ಟೆಸ್ಟೋಸ್ಟೆರಾನ್ ಮಟ್ಟವು ನಿಗದಿತ ಪ್ರಮಾಣಕ್ಕಿಂತ (10 nmol/L) ಕಡಿಮೆ ಇರಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ.

ತನ್ನ ಅಸ್ಮಿತೆಯನ್ನು ಹುಡುಕುತ್ತಲೇ ಪ್ರೀತಿಯ ಕ್ರಿಕೆಟ್ ಅನ್ನು ಉಳಿಸಿಕೊಳ್ಳಲು ಅನಯಾ ನಡೆಸಿದ ಹೋರಾಟ ನಿಜಕ್ಕೂ ಸ್ಫೂರ್ತಿದಾಯಕ. ಸದ್ಯಕ್ಕೆ ಅವರು ಆಸ್ಟ್ರೇಲಿಯಾದ ಕ್ಲಬ್ ಕ್ರಿಕೆಟ್‌ನಲ್ಲಿ ಮೈದಾನಕ್ಕಿಳಿಯಲಿದ್ದಾರೆ. ಮಗಳ ಪ್ರತಿ ಹೋರಾಟದಲ್ಲೂ ಬೆನ್ನೆಲುಬಾಗಿ ನಿಂತಿರುವ ತಂದೆ ಸಂಜಯ್ ಬಾಂಗರ್ ಅವರ ಬೆಂಬಲವೂ ಇಲ್ಲಿ ಅನನ್ಯವಾಗಿದೆ. ಅನಯಾರ ಈ ಎರಡನೇ ಇನ್ನಿಂಗ್ಸ್ ಯಶಸ್ವಿಯಾಗಲಿ ಎಂಬುದು ಅಭಿಮಾನಿಗಳ ಹಾರೈಕೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

‘ಬಿಕ್ಕಟ್ಟುಗಳ ನಡುವೆಯೂ ಹೋರಾಡುತ್ತಿದ್ದೇವೆ’; ವೆಸ್ಟ್ ಇಂಡೀಸ್ ಕ್ರಿಕೆಟ್‌ಗೆ ಆರ್ಥಿಕ ನೆರವು ಬೇಕೆಂದು ಅಂಗಲಾಚಿದ ಡೇರನ್ ಸಾಮಿ
ಭುವನೇಶ್ವರ್ ಕುಮಾರ್ ಆಯ್ತು ಈಗ ಮತ್ತೊಬ್ಬ ಆಟಗಾರನ ಕಮ್‌ಬ್ಯಾಕ್ ಸರದಿ ಎಂದ ಗವಾಸ್ಕರ್...! ಆದ್ರೆ ಅದು ಶಮಿಯಲ್ಲ