T20 World Cup 2022: ಮಾಜಿ ಭಾರತದ ಓಪನರ್ ವಾಸಿಂ ಜಾಫರ್ ಪಾಕಿಸ್ತಾನದ ಮಾಜಿ ಆಟಗಾರ ಇಮ್ರಾನ್ ನಾಜಿರ್‌ರನ್ನು ಟ್ವಟ್ಟರ್‌ನಲ್ಲಿ ಟ್ರೋಲ್ ಮಾಡಿದ್ಧಾರೆ. ಫೈನಲ್ ತಲುಪಿದ ಖುಷಿಯಲ್ಲಿ ಕಾಲೆಳೆಯಲು ಬಂದು ಕಾಲೆಳೆಸಿಕೊಂಡು ಹೋಗಿದ್ದಾರೆ.
ನವದೆಹಲಿ: ವಾಸಿಂ ಜಾಫರ್ ಸ್ಟ್ರೈಕ್ ರೇಟ್ ಕ್ರಿಕೆಟ್‌ನಲ್ಲಿ ಎಷ್ಟೇ ಕಡಿಮೆ ಇದ್ದರೂ ಟ್ವಿಟ್ಟರ್‌ನಲ್ಲಿ ಭಯಂಕರ ವೇಗದಲ್ಲಿ ಟ್ರೋಲ್ ಮಾಡುತ್ತಾರೆ. ಟ್ವಿಟ್ಟರ್‌ನಲ್ಲಿ ಅತಿ ಹೆಚ್ಚು ಖ್ಯಾತಿ ಗಳಿಸಿರುವ ಕ್ರಿಕೆಟ್ ಆಟಗಾರರಲ್ಲಿ ವಾಸಿಂ ಜಾಫರ್ ಅಗ್ರ ಸ್ಥಾನ ಗಳಿಸಿದ್ದಾರೆ. ಅವರ ಹಾಸ್ಯ, ವ್ಯಂಗ್ಯ, ಟ್ರೋಲ್ ಮಾಡಲು ಬಳಸುವ ಮೀಮ್‌ಗಳು ಅಭಿಮಾನಿಗಳಲ್ಲಿ ನಗು ತರಿಸುತ್ತದೆ. ಭಾರತ ಮತ್ತು ಇಂಗ್ಲೆಂಡ್ ಸೆಮಿಫೈನಲ್‌ನಲ್ಲಿ ಎದುರಾಗುತ್ತಿದ್ದು, ಕ್ರೀಡಾಂಗಣದ ಆಚೆ ವಾಸಿಂ ಜಾಫರ್ ಮತ್ತು ಮೈಕಲ್ ವಾನ್ ಅವರ ನಡುವಿನ ಟ್ವಿಟ್ಟರ್ ಪಂದ್ಯಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಇಬ್ಬರ ನಡುವೆ ವಾರಕ್ಕೊಮ್ಮೆಯಾದರೂ ಟ್ವಿಟ್ಟರ್ ಟ್ರೋಲ್ ಪಂದ್ಯ ನಡೆಯುತ್ತದೆ. ಆದರೆ ಪ್ರತಿ ಬಾರಿ ಗೆಲುವು ಮಾತ್ರ ವಾಸಿಂ ಜಾಫರ್‌ಗೇ ಒಲಿಯುತ್ತದೆ. ಈಗ ಇಮ್ರಾನ್ ನಾಜಿರ್ ಮತ್ತು ವಾಸಿಂ ಜಾಫರ್ ನಡುವೆ ಟ್ವಟ್ಟರ್‌ನಲ್ಲಿ ಜಟಾಪಟಿಯಾಗಿದೆ.
ಪಾಕಿಸ್ತಾನದ ಮಾಜಿ ಆಟಗಾರ ಇಮ್ರಾನ್ ನಾಜಿರ್ ಪಾಕಿಸ್ತಾನ ಫೈನಲ್ ತಲುಪಿದ ಖುಷಿಯಲ್ಲಿ ವಾಸಿಂ ಜಾಫರ್ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಅಮಿತಾಬ್ ಬಚ್ಚನ್ ವಿಮಾನದಿಂದ ಇಳಿಯುತ್ತಿರುವ ಚಿತ್ರವನ್ನು ಹಾಕಿರುವ ನಾಜಿರ್ ನಾನು ಎಲ್ಲಿದ್ದೇನೆ ಗುರುತಿಸಿ ಎಂದು ಹೇಳಿದ್ಧಾರೆ. ಅದಕ್ಕೆ ಕೇವಲ ಒಂದು ವರ್ಡ್ ಪ್ರತಿಕ್ರಿಯೆ ನೀಡಿರುವ ವಾಸಿಂ ಜಾಫರ್ "ಲಾಹೋರ್?" ಎಂದು ಟ್ವೀಟ್ ಮಾಡಿದ್ದಾರೆ. ನಿಜಾಗಲೂ ಇಮ್ರಾನ್ ನಾಜಿರ್ ಲಾಹೋರ್‌ನಲ್ಲೇ ಇದ್ದಾರೆ. ಮತ್ತು ಅವರ ಟ್ವಿಟ್ಟರ್ ಲೊಕೇಷನ್ ಕೂಡ ಅದನ್ನೇ ತೋರಿಸುತ್ತಿದೆ. ಜತೆಗೆ ಭಾರತ ವಿಶ್ವಕಪ್ ಫೈನಲ್‌ಗೆ ಬಂದರೆ ಪಾಕಿಸ್ತಾನ ಲಾಹೋರ್‌ಗೆ ಹೋಗುತ್ತದೆ ಎಂಬ ರೀತಿಯೂ ಅರ್ಥವಾಗುತ್ತದೆ. ಯಾವಾಗಲೂ ದ್ವಂದ್ವಾರ್ಥವಿರುವ ಪ್ರತಿಕ್ರಿಯೆಯನ್ನೇ ವಾಸಿಂ ಜಾಫರ್ ನೀಡುತ್ತಾರೆ.
Lahore? https://t.co/fSkO9oyK7H
— Wasim Jaffer (@WasimJaffer14)undefined
ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ:
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಅಡಿಲೇಡ್ ಓವಲ್ ಮೈದಾನ ಆತಿಥ್ಯವನ್ನು ವಹಿಸಿದೆ.
ಇನ್ನು ನಿರೀಕ್ಷೆಯಂತೆಯೇ ಇಂಗ್ಲೆಂಡ್ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಫಿಲ್ ಸಾಲ್ಟ್ ಹಾಗೂ ಕ್ರಿಸ್ ಜೋರ್ಡನ್ ತಂಡ ಕೂಡಿಕೊಂಡಿದ್ದಾರೆ
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಸೂಪರ್ 12 ಹಂತದಲ್ಲಿ 4 ಗೆಲುವು ಸಾಧಿಸುವ ಮೂಲಕ ಗ್ರೂಪ್ 2 ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಮೂಲಕ ಆತ್ಮವಿಶ್ವಾಸದಿಂದ ಬೀಗುತ್ತಿದ್ದು, ಇದೀಗ ಅದೇ ಲಯವನ್ನು ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದೆ.
ಇದನ್ನೂ ಓದಿ: T20 WORLD CUP: ಸೆಮೀಸ್‌ನಲ್ಲಿ ಭಾರತ ಎದುರು ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ
ಅಡಿಲೇಡ್‌ನಲ್ಲಿ ಮತ್ತೆ ವಿರಾಟ್ ಕೊಹ್ಲಿ ಶೋ?:
ಅಡಿಲೇಡ್ ಭಾರತದಾಚೆ ವಿರಾಟ್ ಕೊಹ್ಲಿಯ ನೆಚ್ಚಿನ ಕ್ರೀಡಾಂಗಣ. ಇಲ್ಲಿ ಅವರು 14 ಅಂ.ರಾ. ಇನ್ನಿಂಗ್ಸಲ್ಲಿ 900ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಬಾಂಗ್ಲಾ ವಿರುದ್ಧದ ಮಹತ್ವದ ಪಂದ್ಯದಲ್ಲಿ ಕೊಹ್ಲಿ ಅರ್ಧಶತಕ ಸಿಡಿಸಿದ್ದು. ಅಡಿಲೇಡ್ ಓವಲ್‌ನಲ್ಲಿ ಕೊಹ್ಲಿಯಿಂದ ಭಾರತ ಮತ್ತೊಂದು ಆಕರ್ಷಕ ಇನ್ನಿಂಗ್ಸ್ ನಿರೀಕ್ಷೆ ಮಾಡುತ್ತಿದೆ.
ತಂಡಗಳು ಹೀಗಿವೆ ನೋಡಿ:
ಭಾರತ: ರೋಹಿತ್ ಶರ್ಮಾ(ನಾಯಕ), ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್/ ರಿಷಭ್ ಪಂತ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಆರ್ಶದೀಪ್ ಸಿಂಗ್.
ಇದನ್ನೂ ಓದಿ: "ಫೈನಲ್‌ಗೆ ಬನ್ನಿ ನಾವು ಕಾಯ್ತಿದ್ದೇವೆ, ಇನ್ನೊಂದು ಮ್ಯಾಚ್ ಆಗಿಬಿಡಲಿ": ಶೋಯೆಬ್ ಅಖ್ತರ್
ಇಂಗ್ಲೆಂಡ್: ಜೋಸ್ ಬಟ್ಲರ್(ನಾಯಕ), ಅಲೆಕ್ಸ್ ಹೇಲ್ಸ್, ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಮೋಯಿನ್ ಅಲಿ, ಸ್ಯಾಮ್ ಕರ್ರನ್, ಕ್ರಿಸ್ ವೋಕ್ಸ್, ಕ್ರಿಸ್ ಜೋರ್ಡನ್, ಆದಿಲ್ ರಶೀದ್.