ರಾಜ್ಯದ ವೃಂದಾ ದಿನೇಶ್‌ ಡಬ್ಲ್ಯುಪಿಎಲ್‌ ಟೂರ್ನಿಯಿಂದಲೇ ಔಟ್‌

Published : Mar 02, 2024, 10:49 AM IST
ರಾಜ್ಯದ ವೃಂದಾ ದಿನೇಶ್‌ ಡಬ್ಲ್ಯುಪಿಎಲ್‌ ಟೂರ್ನಿಯಿಂದಲೇ  ಔಟ್‌

ಸಾರಾಂಶ

ಕರ್ನಾಟಕದ ವೃಂದಾ ದಿನೇಶ್‌, ಭುಜದ ಗಾಯದ ಕಾರಣ 2ನೇ ಆವೃತ್ತಿ ಮಹಿಳಾ ಪ್ರೀಮಿಯರ್‌ ಲೀಗ್‌ನಿಂದ ಹೊರಬಿದ್ದಿದ್ದಾರೆ. ಬುಧವಾರ ಮುಂಬೈ ವಿರುದ್ಧದ ಪಂದ್ಯದಲ್ಲಿ ಫೀಲ್ಡ್‌ ಮಾಡುವಾಗ ವೃಂದಾ ಗಾಯಗೊಂಡಿದ್ದರು.

ಬೆಂಗಳೂರು: ಆಟಗಾರ್ತಿಯರ ಹರಾಜಿನಲ್ಲಿ 1.3 ಕೋಟಿ ರು.ಗೆ ಯು.ಪಿ.ವಾರಿಯರ್ಸ್‌ ತಂಡಕ್ಕೆ ಮಾರಾಟವಾಗಿದ್ದ ಕರ್ನಾಟಕದ ವೃಂದಾ ದಿನೇಶ್‌, ಭುಜದ ಗಾಯದ ಕಾರಣ 2ನೇ ಆವೃತ್ತಿ ಮಹಿಳಾ ಪ್ರೀಮಿಯರ್‌ ಲೀಗ್‌ನಿಂದ ಹೊರಬಿದ್ದಿದ್ದಾರೆ. ಬುಧವಾರ ಮುಂಬೈ ವಿರುದ್ಧದ ಪಂದ್ಯದಲ್ಲಿ ಫೀಲ್ಡ್‌ ಮಾಡುವಾಗ ವೃಂದಾ ಗಾಯಗೊಂಡಿದ್ದರು.

ಗುಜರಾತ್‌ಗೆ ಹ್ಯಾಟ್ರಿಕ್‌ ಸೋಲು!

ಬೆಂಗಳೂರು: 2ನೇ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌)ನಲ್ಲಿ ಗುಜರಾತ್‌ ಜೈಂಟ್ಸ್‌ ಹ್ಯಾಟ್ರಿಕ್‌ ಸೋಲು ಅನುಭವಿಸಿದೆ. ಶುಕ್ರವಾರ ನಡೆದ ಯು.ಪಿ.ವಾರಿಯರ್ಸ್‌ ವಿರುದ್ಧದ ಪಂದ್ಯದಲ್ಲಿ ಗುಜರಾತ್‌ಗೆ 6 ವಿಕೆಟ್‌ ಸೋಲು ಎದುರಾಯಿತು.

ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ 20 ಓವರಲ್ಲಿ 5 ವಿಕೆಟ್‌ ನಷ್ಟಕ್ಕೆ 142 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ನಿಧಾನಗತಿಯ ಆರಂಭ ಪಡೆದಿದ್ದ ತಂಡಕ್ಕೆ ಫೋಬೆ ಲಿಚ್‌ಫೀಲ್ಡ್‌(35) ಹಾಗೂ ಆಶ್ಲೆ ಗಾರ್ಡ್ನರ್‌(30) ಆಸರೆಯಾದರು. ಸ್ಪಿನ್ನರ್‌ ಸೋಫಿ ಎಕ್ಲೆಸ್ಟೋನ್‌ಗೆ 3 ವಿಕೆಟ್‌ ದೊರೆಯಿತು.

Pro Kabaddi League ಪುಣೇರಿ ಪಲ್ಟಾನ್ ಮಡಿಲಿಗೆ ಚೊಚ್ಚಲ ಪ್ರೊ ಕಬಡ್ಡಿ ಕಿರೀಟ

ಸಾಧಾರಣ ಗುರಿ ಬೆನ್ನತ್ತಿದ ವಾರಿಯರ್ಸ್‌ಗೆ ನಾಯಕಿ ಅಲೀಸಾ ಹೀಲಿ (33) ಉತ್ತಮ ಆರಂಭ ಒದಗಿಸಿದರು. ಬಳಿಕ 33 ಎಸೆತದಲ್ಲಿ 9 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 60 ರನ್‌ ಸಿಡಿಸಿದ ಗ್ರೇಸ್‌ ಹ್ಯಾರಿಸ್‌ ತಂಡವನ್ನು ಇನ್ನೂ 4.2 ಓವರ್‌ ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿಸಿದರು.

ಡಬ್ಲ್ಯುಪಿಎಲ್‌ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಶ್ರೀಲಂಕಾದ ಚಾಮರಿ ಅಟಾಪಟ್ಟು, ಭಾರತದ ತಾರಾ ಆಲ್ರೌಂಡರ್‌ ದೀಪ್ತಿ ಶರ್ಮಾ ತಲಾ 17 ರನ್‌ ಗಳಿಸಿ ಗೆಲುವಿಗೆ ಕೊಡುಗೆ ನೀಡಿದರು.

ಸ್ಕೋರ್‌:

ಗುಜರಾತ್‌ 20 ಓವರಲ್ಲಿ 142/5 (ಲಿಚ್‌ಫೀಲ್ಡ್‌ 35, ಗಾರ್ಡ್ನರ್‌ 30, ಸೋಫಿ 3-20),

ವಾರಿಯರ್ಸ್‌ 15.4 ಓವರಲ್ಲಿ 143/4 (ಗ್ರೇಸ್‌ 60*, ಅಲೀಸಾ 33, ತನುಜಾ 2-23)

ಟೆಸ್ಟ್‌ ಆಡದ ಹಾರ್ದಿಕ್‌ಗೆ ‘ಎ’ ದರ್ಜೆ ಗುತ್ತಿಗೆ ನೀಡಿದ್ದಕ್ಕೆ ಇರ್ಫಾನ್‌ ಪಠಾಣ್‌ ಆಕ್ಷೇಪ

ನವದೆಹಲಿ: 2018ರಿಂದ ಟೆಸ್ಟ್‌ ಕ್ರಿಕೆಟ್‌ ಆಡದ ಹಾರ್ದಿಕ್‌ ಪಾಂಡ್ಯಗೆ ಬಿಸಿಸಿಐ ‘ಎ’ ದರ್ಜೆ ಗುತ್ತಿಗೆ ನೀಡಿದ್ದಕ್ಕೆ ಮಾಜಿ ಕ್ರಿಕೆಟಿಗ ಇರ್ಫಾನ್‌ ಪಠಾಣ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಟೆಸ್ಟ್‌ ಸೇರಿದಂತೆ ಪ್ರಥಮ ದರ್ಜೆ, ದೇಸಿ ಕ್ರಿಕೆಟ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಬಿಸಿಸಿಐ ಸೂಚಿಸಿದೆ. ಆದರೆ ಹಾರ್ದಿಕ್‌ ಟೆಸ್ಟ್‌ ಹಾಗೂ ದೇಸಿ ಪಂದ್ಯಗಳಲ್ಲಿ ಆಡದೆ ಬಹಳ ಸಮಯ ಆಗಿದೆ. ಆದರೂ ಅವರಿಗೆ ಮನ್ನಣೆ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. 

ಅಯ್ಯರ್, ಕಿಶನ್ ಮಾತ್ರವಲ್ಲ; ಬಿಸಿಸಿಐ ಕೇಂದ್ರ ಗುತ್ತಿಗೆಯಿಂದ ಹೊರಬಿದ್ದ ಸ್ಟಾರ್ ಕ್ರಿಕೆಟಿಗರಿವರು..!

ಅಲ್ಲದೇ, ಎಲ್ಲರಿಗೂ ಒಂದೇ ನಿಯಮ ಅಳವಡಿಕೆಯಾಗದಿದ್ದರೆ ಬಿಸಿಸಿಐಗೆ ತನ್ನ ಉದ್ದೇಶಿತ ಫಲಿತಾಂಶ ಸಿಗುವುದಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ. ಇನ್ನು ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್‌ ಸಹ ಬಿಸಿಸಿಐ ಗುತ್ತಿಗೆ ಬಗ್ಗೆ ಪ್ರತಿಕ್ರಿಯಿಸಿದ್ದು, ‘ರೋಹಿತ್‌, ಕೊಹ್ಲಿ ಕೂಡ ಬಿಡುವಿನ ಸಮಯದಲ್ಲಿ ದೇಸಿ ಕ್ರಿಕೆಟ್‌ ಆಡಬೇಕು’ ಎಂದು ಒತ್ತಾಯಿಸಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಪಿಎಲ್ ಹರಾಜು ಇತಿಹಾಸದಲ್ಲೇ ಟಾಪ್ 6 ದುಬಾರಿ ಆಟಗಾರರಿವರು!
ಶುಭ್‌ಮನ್ ಗಿಲ್‌ಗೆ ಇನ್ನೂ 2 ಮ್ಯಾಚ್‌ನಲ್ಲಿ ಅವಕಾಶ ಕೊಡಿ: ಅಶ್ವಿನ್ ಅಚ್ಚರಿಯ ಹೇಳಿಕೆ