
ಭಾರತ ಮತ್ತು ಪಾಕಿಸ್ತಾನದ ನಡುವಿನ ಹೈವೋಲ್ಟೇಜ್ ಪಂದ್ಯ ಒಂದರ ಹಳೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗ್ತಿದೆ. ಇದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೆ ಮತ್ತೆ ಖುಷಿ ನೀಡುವಂತಹ ವಿಡಿಯೋ ಅದಾಗಿದೆ.
ನಿಮಗೆ 2022ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿತು. ಇಂಡಿಯಾ ಅಭಿಮಾನಿಗಳಲ್ಲಿ ಸದಾ ಕಾಲ ನೆನಪಲ್ಲಿ ಉಳಿಯುವ ಪಂದ್ಯವಾಗಿತ್ತು. ಈ ಐತಿಹಾಸಿಕ ಪಂದ್ಯದ ಹಳೆಯ ವಿಡಿಯೋ ಮತ್ತೆ ವೈರಲ್ ಆಗಿದೆ. ಇನ್ನು ವಿಡಿಯೋದಲ್ಲಿ ಏನಿದೆ ಎಂದು ನೋಡೋದಾದರೆ.. ಒಂದು ಸಾರ್ವಜನಿಕ ಸ್ಥಳ. ಬಿಗ್ ಸ್ಕ್ರೀನ್ ಹಾಕಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ವೀಕ್ಷಣೆ ಮಾಡಲಾಗುತ್ತಿದೆ. ಪಂದ್ಯವು ರೋಚಕಘಟ್ಟ ತಲುಪಿರುತ್ತದೆ. ಪಾಕಿಸ್ತಾನ ಗೆಲ್ಲುವ ಹಂತದಲ್ಲಿದ್ದಾಗ.. ಅವರ ಅಭಿಮಾನಿಗಳು ಜೋರಾಗಿ ‘ದಿಲ್ ದಿಲ್ ಪಾಕಿಸ್ತಾನ್’ ಎಂದು ಹಾಡುತ್ತ ಜೋರಾಗಿ ಸಂಭ್ರಮಿಸಿದ್ದಾರೆ.
ಆದರೆ ಕ್ರೀಸ್‌ನಲ್ಲಿದ್ದ ವಿರಾಟ್ ಕೊಹ್ಲಿ.. ಪಾಕಿಸ್ತಾನದ ವೇಗದ ಬೌಲರ್ ಹಾರಿಸ್ ರೌಫ್ ಎಸೆತಕ್ಕೆ ಸಿಕ್ಸರ್ ಬಾರಿಸುತ್ತಾರೆ. ಕೊಹ್ಲಿ ಬಾರಿಸಿದ ಆ ಸಿಕ್ಸರ್, ಇಡೀ ಕ್ರೀಡಾಂಗಣ ಹಾಗೂ ವೀಕ್ಷಕರ ವಾತಾವರಣವನ್ನೇ ಬದಲಾಯಿಸಿಬಿಡುತ್ತದೆ.. ಇತ್ತ ಸಿಕ್ಸರ್ ಸಿಡಿಯುತ್ತಿದ್ದಂತೆ ಪಾಕಿಸ್ತಾನಿ ಅಭಿಮಾನಿಗಳು ಬಾಲಮುಚ್ಚಿಕೊಂಡರು. ಟೀಂ ಇಂಡಿಯಾ ಅಭಿಮಾನಿಗಳು ಸಂಭ್ರಮದಿಂದ ಎದ್ದುನಿಂತು ಚಕ್ ದೇ ಇಂಡಿಯಾ ಎಂದು ಕೂಗುತ್ತ ಕುಪ್ಪಳಿಸಿದರು. ಇನ್ನು ವೈರಲ್ ಆಗ್ತಿರುವ ವಿಡಿಯೋದಲ್ಲಿ ಪಾಕಿಸ್ತಾನ ಅಭಿಮಾನಿಗಳು ‘ದಿಲ್ ದಿಲ್ ಪಾಕಿಸ್ತಾನ್’ ಎಂದು ಹಾಡುತ್ತಿರುವಾಗ ಕೊಹ್ಲಿ ಸಿಕ್ಸರ್ ಬಾರಿಸುತ್ತಾರೆ.. ಆಗ ಪಾಕ್ ಅಭಿಮಾನಿಗಳು ಸುಮ್ಮನಾಗುತ್ತಾರೆ. ಆದರೆ ಇತ್ತ ಚಕ್ ದೇ ಇಂಡಿಯಾ ಎಂದು ಭಾರತದ ಅಭಿಮಾನಿಗಳು ಕೂಗಿದ್ದಾರೆ.. ಆಗ ಚಕ್ ದೇ ಇಂಡಿಯಾ ಹಾಡು ಪ್ಲೇ ಮಾಡಲಾಗುತ್ತದೆ..
ಇನ್ನು ಪಂದ್ಯ ನಡೆದಿದ್ದು 2022, ಅಕ್ಟೋಬರ್ 23. ಅಂದರೆ ಇದೇ ದಿನ. ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಪಂದ್ಯ ಆಯೋಜನೆಗೊಂಡಿತ್ತು. ಸೋಲಿನ ಸುಳಿಯಲ್ಲಿದ್ದ ಟೀಂ ಇಂಡಿಯಾವನ್ನು ವಿರಾಟ್ ಕೊಹ್ಲಿ ಗೆಲುವಿನ ದಡ ಮುಟ್ಟಿಸಿದ್ದರು. ಪಾಕಿಸ್ತಾನ 20 ಓವರ್‍ನಲ್ಲಿ 159/8 ಗಳಿಸಿತ್ತು. ಶಾನ್ ಮಸೂದ್ 42 ಎಸೆತಗಳಲ್ಲಿ ಅಜೇಯ 52 ರನ್ ಗಳಿಸಿದರೆ, ಇಫ್ತಿಕರ್ ಅಹ್ಮದ್ 34 ಎಸೆತಗಳಲ್ಲಿ 51 ರನ್ ಗಳಿಸಿದ್ದರು. ಭಾರತದ ಪರ ಅರ್ಶ್ದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಮೂರು ವಿಕೆಟ್ ಪಡೆದು ಮಿಂಚಿದ್ದರು.
160 ರನ್‌ಗಳ ಗುರಿ ಬೆನ್ನು ಹತ್ತಿದ್ದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಕೇವಲ 31 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಕಲ್ಲುಬಂಡೆಯಂತೆ ನಿಂತು 113 ರನ್‌ಗಳ ಪಾಲುದಾರಿಕೆ ನೀಡಿದರು. ಹಾರ್ದಿಕ್ ಪಾಂಡ್ಯ 37 ಬಾಲ್‌ನಲ್ಲಿ 40 ರನ್‌ಗಳಿಸಿ ಕೊನೆಯ ಓವರ್‍ನಲ್ಲಿ ಔಟ್ ಆದರು.
ಟೀಂ ಇಂಡಿಯಾ ಅಕ್ಷರಶಃ ಒತ್ತಡದಲ್ಲಿತ್ತು. 19 ನೇ ಓವರ್‌ನಲ್ಲಿ ರೌಫ್ ಬೌಲಿಂಗ್‌ನಲ್ಲಿ ಕೊಹ್ಲಿ ಎರಡು ನಿರ್ಣಾಯಕ ಸಿಕ್ಸರ್‌ಗಳನ್ನು ಬಾರಿಸಿದರು. ಅದು ಟೀಂ ಇಂಡಿಯಾ ಗೆಲುವಿಗೆ ಬುನಾದಿ ಹಾಕಿತು. ಕೊನೆಯ ಓವರ್‍ನಲ್ಲಿ ಟೀಂ ಇಂಡಿಯಾಗೆ ಗೆಲ್ಲಲು 16 ರನ್‌ಗಳ ಅಗತ್ಯ ಇತ್ತು. ಪಾಕಿಸ್ತಾನದ ಮೊಹಮ್ಮದ್ ನವಾಜ್ ಬೌಲಿಂಗ್‌ಗೆ ಬಂದಿದ್ದರು. ಆ ಓವರ್‌ನಲ್ಲಿ ನೋ-ಬಾಲ್, ಒಂದು ಸಿಕ್ಸ್, ಒಂದು ವೈಡ್ ಮತ್ತು ಫ್ರೀ ಹಿಟ್ ಸಿಕ್ಕಿತು. ಕೊನೆಯ ಎಸೆತದಲ್ಲಿ ರವಿಚಂದ್ರನ್ ಅಶ್ವಿನ್ ಗೆಲುವಿನ ರನ್ ಗಳಿಸಿದರು. ಈ ಪಂದ್ಯದಲ್ಲಿ ಕೊಹ್ಲಿ 53 ಎಸೆತಗಳಲ್ಲಿ ಆರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ 82 ರನ್ ಗಳಿಸಿ ಅಜೇಯರಾಗುಳಿದರು. ಭಾರತವು 160 ರನ್‌ಗಳ ಗುರಿಯನ್ನು ನಾಲ್ಕು ವಿಕೆಟ್‌ಗಳಿಂದ ಗೆದ್ದುಕೊಂಡಿತು. ಇವತ್ತು ಅಕ್ಟೋಬರ್ 23. ಹೀಗಾಗಿ ಅಂದಿನ ವಿಡಿಯೋ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಸೃಷ್ಟಿಸಿದೆ.
#OnThisDay 4 years ago...
From "Dil Dil Pakistan to "Chak De India" 🇮🇳
@imVkohli #INDvPAK #ViratKohli𓃵 #ViratKohli #CricketTwitter https://t.co/OQI7tCGuky
— Faiz Fazel (@theFaizFazel) October 23, 2026
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.