ನಯಾಪೈಸೆ ಕಿಮ್ಮತ್ತಿಲ್ಲದೆ ಐಪಿಎಲ್‌ನಿಂದ ರಿಜೆಕ್ಟ್‌ ಆದ ಪ್ಲೇಯರ್‌ ಈಗ ಪಾಕಿಸ್ತಾನ ಸೂಪರ್‌ ಲೀಗ್‌ನ ಅತ್ಯಂತ ದುಬಾರಿ ಆಟಗಾರ!

Published : Oct 23, 2026, 07:20 PM IST
Pakistan Super League

ಸಾರಾಂಶ

ಐಪಿಎಲ್ ಹರಾಜಿನಲ್ಲಿ ಬಿಕರಿಯಾಗದ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಇದೀಗ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಸಿಯಾಲ್ಕೋಟ್ ಸ್ಟಾಲಿಯನ್ಸ್ ತಂಡವು ಅವರನ್ನು 4.53 ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ಆದರೆ, ಐಪಿಎಲ್ ಹರಾಜಿನ ಮೊತ್ತಕ್ಕೆ ಹೋಲಿಸಿದರೆ ಇದು ತೀರಾ ಕಡಿಮೆಯಾಗಿದ್ದು, ನೆಟ್ಟಿಗರು ಪಿಎಸ್‌ಎಲ್ ಅನ್ನು ಟ್ರೋಲ್ ಮಾಡುತ್ತಿದ್ದಾರೆ.

ಇಸ್ಲಾಮಾಬಾದ್: ಒಂದು ಕಡೆ 20ನೇ ಸೀಸನ್‌ ಐಪಿಎಲ್ ಮಿನಿ ಹರಾಜಿಗೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಇದೀಗ ಪಾಕಿಸ್ತಾನ ಸೂಪರ್ ಲೀಗ್ ಆಯೋಜಿಸಲು ರೆಡಿಯಾಗಿದೆ. ವಿಪರ್ಯಾಸವೆಂದರೆ ಐಪಿಎಲ್‌ನಲ್ಲಿ ನಯಾಪೈಸೆ ಕಿಮ್ಮತ್ತಿಲ್ಲದೇ ಅನ್‌ಸೋಲ್ಡ ಆದ ಆಟಗಾರ ಇದೀಗ ಮುಂಬರುವ ಪಾಕಿಸ್ತಾನ ಸೂಪರ್ ಲೀಗ್‌ನ ಅತ್ಯಂತ ದುಬಾರಿ ಆಟಗಾರರಾಗಿ ಹೊರಹೊಮ್ಮಿದ್ದಾರೆ.

ಸ್ಟೀವ್ ಸ್ಮಿತ್‌ ಪಿಎಸ್‌ಎಲ್‌ನ ದುಬಾರಿ ಆಟಗಾರ!

ಹೌದು, ಆಸ್ಟ್ರೇಲಿಯಾದ ಬ್ಯಾಟಿಂಗ್ ದಿಗ್ಗಜ ಸ್ಟೀವ್ ಸ್ಮಿತ್, ಇದೀಗ ಪಾಕಿಸ್ತಾನ ಸೂಪರ್ ಲೀಗ್‌ನ ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮಿದ್ದಾರೆ. 36 ವರ್ಷದ ಸ್ಟೀವ್ ಸ್ಮಿತ್ ಅವರನ್ನು ಪಿಎಸ್‌ಎಲ್‌ಗೆ ಹೊಸದಾಗಿ ಸೇರ್ಪಡೆಯಾಗಿರುವ ಸಿಯಾಲ್ಕೋಟ್ ಸ್ಟಾಲಿಯನ್ಸ್ ಫ್ರಾಂಚೈಸಿಯು $5,00,000 ಡಾಲರ್‌ಗೆ ಖರೀದಿಸಿದೆ. ಅಂದರೆ ಭಾರತೀಯ ರುಪಾಯಿ ಲೆಕ್ಕಾಚಾರದಲ್ಲಿ ಕೇವಲ 4.53 ಕೋಟಿ ರುಪಾಯಿಗಳಾಗಿದೆ. ಈ ಒಪ್ಪಂದಕ್ಕೆ ಸಹಿ ಹಾಕಿರುವುದು ಪಾಕಿಸ್ತಾನ ಮೂಲದ ಟಿ20 ಲೀಗ್‌ಗೆ ಒಂದು ಪ್ರಮುಖ ಆರ್ಥಿಕ ಮೈಲಿಗಲ್ಲಾಗಿದೆ. ಈ ಲೀಗ್ ಮೊದಲ ಬಾರಿಗೆ ಆಟಗಾರರ ಹರಾಜು ವ್ಯವಸ್ಥೆಯನ್ನು ಪರಿಚಯಿಸಿದೆ.

'ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್' ಮತ್ತು 'ಇಂಡಿಯಾ ಟುಡೇ' ವರದಿಗಳ ಪ್ರಕಾರ, ಈ ಒಪ್ಪಂದದೊಂದಿಗೆ ಸ್ಮಿತ್ ಪಿಎಸ್‌ಎಲ್ (PSL) ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರಾಗಿದ್ದಾರೆ. ಈ ಮೂಲಕ ಅವರು ಹಲವು ಪ್ರಮುಖ ಅಂತರರಾಷ್ಟ್ರೀಯ ಹಾಗೂ ಪಾಕಿಸ್ತಾನಿ ಕ್ರಿಕೆಟಿಗರನ್ನು ಹಿಂದಿಕ್ಕಿದ್ದಾರೆ. ಸ್ಮಿತ್ ಅವರ ಸೇರ್ಪಡೆಯು ಪಿಎಸ್‌ಎಲ್ (PSL) ಪಾಲಿಗೆ ಒಂದು ಮಹತ್ವದ ಘಟ್ಟದಲ್ಲಿ ನಡೆದಿದೆ. ಏಕೆಂದರೆ, ತನ್ನ 11ನೇ ಆವೃತ್ತಿಗಾಗಿ ಪಿಎಸ್‌ಎಲ್ ತನ್ನ ಸಾಂಪ್ರದಾಯಿಕ 'ಪ್ಲೇಯರ್ ಡ್ರಾಫ್ಟ್' (ಆಟಗಾರರ ಆಯ್ಕೆ) ವ್ಯವಸ್ಥೆಯನ್ನು ಕೈಬಿಟ್ಟು, ಹರಾಜು ಪದ್ಧತಿಯನ್ನು ಅಳವಡಿಸಿಕೊಂಡಿದೆ. ಈ ಬದಲಾವಣೆಯು ಫ್ರಾಂಚೈಸಿಗಳಿಗೆ ಆಟಗಾರರನ್ನು ಪಡೆಯಲು ಹಾಗೂ ತಮ್ಮ ತಂಡಗಳನ್ನು ರೂಪಿಸಿಕೊಳ್ಳಲು ಒಂದು ಹೊಸ ವ್ಯವಸ್ಥೆಯನ್ನು ಒದಗಿಸಿಕೊಟ್ಟಿದೆ.

'ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್' ವರದಿಯ ಪ್ರಕಾರ, ಸಿಯಾಲ್ಕೋಟ್ ಸ್ಟಾಲಿಯನ್ಸ್ ತಂಡವು ಸ್ಮಿತ್ ಅವರೊಂದಿಗೆ 5,00,000 ಡಾಲರ್‌ಗಿಂತಲೂ ಹೆಚ್ಚಿನ ಮೊತ್ತಕ್ಕೆ ಒಪ್ಪಂದವನ್ನು ಅಂತಿಮಗೊಳಿಸಿದೆ. ಈ ಆಸ್ಟ್ರೇಲಿಯನ್ ಬ್ಯಾಟರ್‌ರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಇನ್ನೊಂದು ತಂಡವೂ ಆಸಕ್ತಿ ತೋರಿದ್ದರಿಂದ, ಸಿಯಾಲ್ಕೋಟ್ ಸ್ಟಾಲಿಯನ್ಸ್ ಅವರಿಗೆ ಪೈಪೋಟಿಯನ್ನು ಎದುರಿಸಬೇಕಾಯಿತು ಎಂದು ವರದಿಯಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಅಧಿಕೃತವಾಗಿ ಪ್ರಕಟಿಸಿದ ಪಿಎಸ್‌ಎಲ್ (PSL) ತಂಡದ ಪಟ್ಟಿಯಲ್ಲಿ, ಸ್ಮಿತ್ ಅವರನ್ನು 14 ಕೋಟಿ ಪಾಕಿಸ್ತಾನಿ ರೂಪಾಯಿಗಳಿಗೆ (PKR) 'ಸಿಯಾಲ್ಕೋಟ್ ಸ್ಟಾಲಿಯನ್ಸ್' ತಂಡವು ನೇರವಾಗಿ ಆಯ್ಕೆ ಮಾಡಿಕೊಂಡಿದೆ ಎಂದು ನಮೂದಿಸಿದೆ.

'ಬಿಸಿನೆಸ್ ರೆಕಾರ್ಡರ್' ವರದಿಯ ಪ್ರಕಾರ, ಈ ಒಪ್ಪಂದದೊಂದಿಗೆ ಸ್ಮಿತ್ ಅವರು 'ಹೈದರಾಬಾದ್ ಹೂಸ್ಟನ್ ಕಿಂಗ್ಸ್‌ಮೆನ್' ತಂಡದಲ್ಲಿ 12.6 ಕೋಟಿ ಪಾಕಿಸ್ತಾನಿ ರೂಪಾಯಿಗಳಿಗೆ (PKR) ಉಳಿಸಿಕೊಳ್ಳಲ್ಪಟ್ಟ ಸೈಮ್ ಅಯೂಬ್ ಅವರಿಗಿಂತ ಮುಂದಿದ್ದಾರೆ. ಇದೇ ವೇಳೆ, ಹರಾಜಿನಲ್ಲಿ ವೇಗದ ಬೌಲರ್ ನಸೀಮ್ ಶಾ 8.65 ಕೋಟಿ ಪಾಕಿಸ್ತಾನಿ ರೂಪಾಯಿಗಳನ್ನು (PKR) ಪಡೆದಿದ್ದು, ಹರಾಜು ಪ್ರಕ್ರಿಯೆಯ ಮೂಲಕ ಆಯ್ಕೆಯಾದ ಅತ್ಯಂತ ದುಬಾರಿ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

ಐಪಿಎಲ್‌ ಹಾಗೂ ಪಿಎಸ್‌ಎಲ್ ಹೋಲಿಕೆ

ಪಾಕಿಸ್ತಾನ ಸೂಪರ್ ಲೀಗ್ ಹರಾಜು ಮುಕ್ತಾಯವಾದ ಬೆನ್ನಲ್ಲೇ ಪಿಎಸ್‌ಎಲ್ ಹಾಗೂ ಐಪಿಎಲ್ ನಡುವಿನ ಹೋಲಿಕೆ ಮಾಡಿ ನೆಟ್ಟಿಗರು ಟ್ರೋಲ್ ಮಾಡಲಾರಂಭಿಸಿದ್ದಾರೆ. ಪಿಎಸ್‌ಎಲ್ ಇತಿಹಾಸದ ಅತ್ಯಂತ ದುಬಾರಿ ಆಟಗಾರನಿಗೆ ಸಿಕ್ಕಿದ್ದು ಕೇವಲ 4.53 ಕೋಟಿ ರುಪಾಯಿಗಳು ಮಾತ್ರ. ಆದರೆ 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಬರೋಬ್ಬರಿ 27 ಕೋಟಿ ರುಪಾಯಿ ನೀಡಿ ರಿಷಭ್ ಪಂತ್ ಅವರನ್ನು ಖರೀದಿಸಿತ್ತು. ಅಲ್ಲಿಗೆ ಸ್ಮಿತ್‌ಗಿಂತ ಆರು ಪಟ್ಟು ಹೆಚ್ಚು ಮೊತ್ತವನ್ನು ಪಂತ್ ಐಪಿಎಲ್‌ ಹರಾಜಿನಲ್ಲಿ ಪಡೆದುಕೊಂಡಿದ್ದರು. ಇನ್ನು ಕಳೆದ ಸೀಸನ್ ಐಪಿಎಲ್ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಕ್ಯಾಮರೋನ್ ಗ್ರೀನ್ ಅವರನ್ನು ಕೆಕೆಆರ್ ಫ್ರಾಂಚೈಸಿಯು 25.20 ಕೋಟಿ ರುಪಾಯಿ ನೀಡಿ ಖರೀದಿಸಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL 2027 ಮಿನಿ ಹರಾಜಿಗೂ ಮುನ್ನ ಈ 3 ಆಟಗಾರರಿಗೆ ಆರ್‌ಸಿಬಿ ಗೇಟ್‌ಪಾಸ್..? ಈ ಮ್ಯಾಚ್‌ ವಿನ್ನರ್‌ನ ಕೈಬಿಡುತ್ತಾ ಬೆಂಗಳೂರು ಫ್ರಾಂಚೈಸಿ?
ಭಾರತದ ಪರ ಆಡಿದ್ದು ಕೇವಲ 2 ಟಿ20 ಪಂದ್ಯ, ಈಗ ಜ್ಯೂನಿಯರ್ ತಂಡದ ಚೀಫ್ ಸೆಲೆಕ್ಟರ್! ಕನ್ನಡಿಗನಿಗೆ ಸಿಗಲಿಲ್ಲ ಚಾನ್ಸ್