
ಬೆಂಗಳೂರು: ಭಾರತೀಯ ಕ್ರಿಕೆಟ್‌ಗೆ ಮುಜುಗರ ತರುವಂತಹ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಐಪಿಎಲ್ ಪಂದ್ಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತು ಸನ್‌ರೈಸರ್ಸ್ ಹೈದರಾಬಾದ್‌ನ ಆಸ್ಟ್ರೇಲಿಯಾದ ಆಟಗಾರ ಟ್ರಾವಿಸ್ ಹೆಡ್ ನಡುವೆ ನಡೆದ ಜಗಳದ ನಂತರ, ಹೆಡ್ ಅವರ ಪತ್ನಿ ಜೆಸ್ಸಿಕಾ ಹೆಡ್ ಮೇಲೆ ಭಾರತೀಯ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ನಿಂದನೆ ಮಾಡಿದ್ದಾರೆ. ಕೊಹ್ಲಿ ಅಭಿಮಾನಿಗಳು ಜೆಸ್ಸಿಕಾ ಅವರ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದು, ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದುದ್ದಕ್ಕೂ ವಿರಾಟ್ ಕೊಹ್ಲಿ, ಟ್ರಾವಿಸ್ ಹೆಡ್ ಅವರನ್ನು ಗುರಿಯಾಗಿಸಿ ಸ್ಲೆಡ್ಜಿಂಗ್ ಮಾಡುತ್ತಿದ್ದರು. ನಾನ್-ಸ್ಟ್ರೈಕರ್ ಎಂಡ್‌ನಲ್ಲಿದ್ದ ಹೆಡ್‌ಗೆ ಬೌಲಿಂಗ್ ಮಾಡುವಂತೆ ಕೊಹ್ಲಿ ಸವಾಲು ಹಾಕಿದ್ದರು. ಒಂದು ಹಂತದಲ್ಲಿ, ಹೆಡ್‌ಗೆ ಅಲ್ಲಿಂದ ಜಾಗ ಖಾಲಿ ಮಾಡುವಂತೆ ಸನ್ನೆ ಕೂಡ ಮಾಡಿದರು. ಕೊನೆಗೆ, ಪಂದ್ಯದ 18ನೇ ಓವರ್ ಬೌಲ್ ಮಾಡಲು ಬಂದ ಹೆಡ್, ತಮ್ಮ ಎರಡನೇ ಎಸೆತದಲ್ಲೇ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಅವರನ್ನು ಔಟ್ ಮಾಡಿ ತಿರುಗೇಟು ನೀಡಿದರು. ಫೀಲ್ಡಿಂಗ್ ಪೊಸಿಷನ್ ಬದಲಿಸುವಾಗಲೂ ಇಬ್ಬರೂ ಮುಖಾಮುಖಿಯಾಗಿದ್ದು, ಕೊಹ್ಲಿ ಹೆಡ್‌ಗೆ ಏನನ್ನೋ ಹೇಳಿದ್ದರು. ಆದರೆ, ಈ ನಾಟಕೀಯ ಘಟನೆಗಳು ಪಂದ್ಯದ ನಂತರವೂ ಮುಂದುವರಿದವು. ಪಂದ್ಯ ಮುಗಿದ ಬಳಿಕ ಕೊಹ್ಲಿ, ಹೆಡ್‌ಗೆ ಶೇಕ್‌ಹ್ಯಾಂಡ್ ಕೊಡದೆ ಮುಂದೆ ಹೋದ ವಿಡಿಯೋ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಯಿತು.
ಆರ್‌ಸಿಬಿ-ಸನ್‌ರೈಸರ್ಸ್ ಪಂದ್ಯದ ನಂತರ ವಿರಾಟ್ ಕೊಹ್ಲಿ, ಟ್ರಾವಿಸ್ ಹೆಡ್‌ಗೆ ಶೇಕ್‌ಹ್ಯಾಂಡ್ ನೀಡದಿರುವುದು ದೊಡ್ಡ ಸುದ್ದಿಯಾಗಿತ್ತು. ಕೊಹ್ಲಿಯಂತಹ ಹಿರಿಯ ಆಟಗಾರನಿಂದ ಇಂತಹ ಕೆಟ್ಟ ವರ್ತನೆ ಬಂದಿದ್ದಕ್ಕೆ ಸಾಕಷ್ಟು ಟೀಕೆಗಳು ಕೇಳಿಬಂದವು. ಇದರ ಬೆನ್ನಲ್ಲೇ, ಟ್ರಾವಿಸ್ ಹೆಡ್ ಅವರ ಪತ್ನಿ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಸೈಬರ್ ದಾಳಿ ನಡೆಯಿತು.
ಜೆಸ್ಸಿಕಾ ಹೆಡ್ ಭಾರತೀಯ ಅಭಿಮಾನಿಗಳಿಂದ ಸೈಬರ್ ದಾಳಿಗೆ ಒಳಗಾಗುತ್ತಿರುವುದು ಇದೇ ಮೊದಲೇನಲ್ಲ. 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ರೋಹಿತ್ ಶರ್ಮಾ ಅವರ ಕ್ಯಾಚ್ ಅನ್ನು ಟ್ರಾವಿಸ್ ಹೆಡ್ ಹಿಡಿದಾಗಲೂ, ಜೆಸ್ಸಿಕಾ ಇದೇ ರೀತಿಯ ಸೈಬರ್ ದಾಳಿಯನ್ನು ಎದುರಿಸಿದ್ದರು. ವಿಶ್ವಕಪ್ ನಂತರ ನಡೆದ ಸೈಬರ್ ದಾಳಿಯ ಪುನರಾವರ್ತನೆಯಂತೆ ಈಗಿನ ಘಟನೆ ಅನಿಸುತ್ತಿದೆ ಎಂದು ಜೆಸ್ಸಿಕಾ ಪ್ರತಿಕ್ರಿಯಿಸಿದ್ದಾರೆ.
19ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಇದೀಗ ಲೀಗ್ ಹಂತ ಮುಕ್ತಾಯವಾಗಿದ್ದು, ಪ್ಲೇ ಆಫ್ ಪಂದ್ಯಗಳಿಗೆ ಕ್ಷಣಗಣನೆ ಶುರುವಾಗಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಪ್ಲೇ ಆಫ್‌ಗೆ ಎಂಟ್ರಿಕೊಟ್ಟಿವೆ. ಮೇ 26ರಂದು ನಡೆಯಲಿರುವ ಕ್ವಾಲಿಫೈಯರ್-1 ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇನ್ನು ಮೇ 27ರಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಕಾದಾಡಲಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.