IPL 2026 Point Table: ಲೀಗ್ ಹಂತದ ಎಲ್ಲಾ 70 ಪಂದ್ಯಗಳು ಮುಕ್ತಾಯದ ಬಳಿಕ ಯಾರಿಗೆ ಯಾವ ಸ್ಥಾನ? ಪ್ಲೇ-ಆಫ್‌ ವೇಳಾಪಟ್ಟಿ ಹೀಗಿದೆ

Published : May 25, 2026, 12:31 PM IST
IPL Playoffs

ಸಾರಾಂಶ

19ನೇ ಆವೃತ್ತಿಯ ಐಪಿಎಲ್ ಲೀಗ್ ಹಂತದ ಪಂದ್ಯಗಳು ಮುಗಿದಿದ್ದು, ಹಾಲಿ ಚಾಂಪಿಯನ್ ಆರ್‌ಸಿಬಿ ಅಗ್ರಸ್ಥಾನಕ್ಕೇರಿದೆ. ಗುಜರಾತ್, ಹೈದರಾಬಾದ್, ಮತ್ತು ರಾಜಸ್ಥಾನ ತಂಡಗಳು ಪ್ಲೇ ಆಫ್‌ಗೆ ಅರ್ಹತೆ ಪಡೆದರೆ, ಕೆಕೆಆರ್ ಸೇರಿದಂತೆ ಆರು ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ.

ಬೆಂಗಳೂರು: ಕ್ರಿಕೆಟ್ ಅಭಿಮಾನಿಗಳನ್ನು ಅನೇಕ ಸಲ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ 19ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಅಧಿಕೃತವಾಗಿ ಮುಕ್ತಾಯವಾಗಿವೆ. ಕುಲ್ದೀಪ್ ಯಾದವ್ ಮಿಂಚಿನ ಬೌಲಿಂಗ್ ಹಾಗೂ ಕೆ ಎಲ್ ರಾಹುಲ್ ಆಕರ್ಷಕ ಅರ್ಧಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೋಲ್ಕತಾ ನೈಟ್ ರೈಡರ್ಸ್ ಎದುರು 40 ರನ್‌ಗಳ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ 2026ರ ಐಪಿಎಲ್ ಲೀಗ್ ಹಂತದ ಪಂದ್ಯಗಳಿಗೆ ತೆರೆ ಬಿದ್ದಿದೆ. ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು 14 ಪಂದ್ಯಗಳನ್ನಾಡಿ ಏಳು ಗೆಲುವು ಹಾಗೂ ಏಳು ಸೋಲು ಸಹಿತ 14 ಅಂಕಗಳೊಂದಿಗೆ ತನ್ನ ಅಭಿಯಾನ ಮುಗಿಸಿತು. ಇನ್ನು ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ 13 ಅಂಕಗಳಿಸಿ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿತು.

ಹಾಲಿ ಚಾಂಪಿಯನ್ ಆರ್‌ಸಿಬಿಗೆ ಅಗ್ರಸ್ಥಾನ:

19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲೀಗ್ ಹಂತ ಮುಕ್ತಾಯದ ಬಳಿಕ ನಂ.1 ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಆಡಿದ 14 ಪಂದ್ಯಗಳ ಪೈಕಿ 9 ಗೆಲುವು ಹಾಗೂ 5 ಸೋಲು ಸಹಿತ 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯಿತು. ಇನ್ನು ಗುಜರಾತ್ ಟೈಟಾನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕೂಡಾ 18 ಅಂಕ ಗಳಿಸಿದ್ದವಾದರೂ ನೆಟ್‌ ರನ್‌ರೇಟ್ ಆಧಾರದಲ್ಲಿ ಆರ್‌ಸಿಬಿ ನಂ.1 ಸ್ಥಾನ ಪಡೆದರೆ, ಗುಜರಾತ್ ಟೈಟಾನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದವು. ಇನ್ನು ರಾಜಸ್ಥಾನ ರಾಯಲ್ಸ್ ತಂಡವು ತನ್ನ ಪಾಲಿನ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್‌ಗೆ ನಾಲ್ಕನೇ ತಂಡವಾಗಿ ಲಗ್ಗೆಯಿಟ್ಟಿದೆ. ರಾಜಸ್ಥಾನ ರಾಯಲ್ಸ್ ತಂಡವು 14 ಪಂದ್ಯಗಳನ್ನಾಡಿ 8 ಗೆಲುವು ಹಾಗೂ ಆರು ಸೋಲು ಸಹಿತ 16 ಅಂಕ ಗಳಿಸಿತು.

ಪ್ಲೇ ಆಫ್‌ ರೇಸ್‌ನಿಂದ ಆರು ತಂಡಗಳು ಔಟ್:

ಇನ್ನು ಟೂರ್ನಿಯ ಆರಂಭದಲ್ಲಿ ಮೊದಲ ಏಳು ಪಂದ್ಯಗಳ ಪೈಕಿ ಆರು ಪಂದ್ಯಗಳಲ್ಲಿ ಗೆದ್ದು ಬೀಗಿದ್ದ ಪಂಜಾಬ್ ಕಿಂಗ್ಸ್ ಆ ಬಳಿಕ ನಿರಂತರ ಸೋಲು ಅನುಭವಿಸಿತು. ಟೂರ್ನಿಯಲ್ಲಿ ಸತತ ಆರು ಸೋಲು ಕಂಡಿದ್ದು ಪಂಜಾಬ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಇದೀಗ ಪಂಜಾಬ್ 14 ಪಂದ್ಯಗಳಲ್ಲಿ 7 ಗೆಲುವು, ಆರು ಸೋಲು ಹಾಗೂ ಒಂದು ರದ್ದಾದ ಪಂದ್ಯ ಸೇರಿದಂತೆ 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನ ಪಡೆಯಿತು

ಇನ್ನುಳಿದಂತೆ ಡೆಲ್ಲಿ ಕ್ಯಾಪಿಟಲ್ಸ್ 14 ಅಂಕಗಳೊಂದಿಗೆ ಆರನೇ ಸ್ಥಾನ ಪಡೆದರೆ, ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನ ಪಡೆಯಿತು. ಇನ್ನು ಕಳೆದ ಮೂರು ಸೀಸನ್‌ನಿಂದಲೂ ಲೀಗ್ ಹಂತದಲ್ಲೇ ಹೊರಬಿದ್ದ ಚೆನ್ನೈ ಸೂಪರ್ ಕಿಂಗ್ಸ್ 12 ಅಂಕಗಳೊಂದಿಗೆ ಎಂಟನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇನ್ನು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್‌ ಟೂರ್ನಿಯಲ್ಲಿ ಕೇವಲ 4 ಗೆಲುವು ಹಾಗೂ 10 ಸೋಲುಗಳೊಂದಿಗೆ ಕ್ರಮವಾಗಿ ಒಂಬತ್ತು ಹಾಗೂ 10ನೇ ಸ್ಥಾನ ಪಡೆದವು.

ಪ್ಲೇ ಆಫ್‌ ವೇಳಾಪಟ್ಟಿ ಹೀಗಿದೆ:

ದಿನಾಂಕ ಪಂದ್ಯ ತಂಡ ಸ್ಥಳ

ಮೇ 26 ಕ್ವಾಲಿಫೈಯರ್‌-1 ಆರ್‌ಸಿಬಿ-ಗುಜರಾತ್‌ ಟೈಟಾನ್ಸ್: ಧರ್ಮಶಾಲಾ

ಮೇ 27 ಎಲಿಮಿನೇಟರ್‌ ಸನ್‌ರೈಸರ್ಸ್‌ ಹೈದರಾಬಾದ್- ರಾಜಸ್ಥಾನ ರಾಯಲ್ಸ್‌: ಚಂಡೀಗಢ

ಮೇ 29 ಕ್ವಾಲಿಫೈಯರ್‌-2 ಕ್ವಾಲಿಫೈಯರ್-1 ಸೋತ ತಂಡ-ಎಲಿಮಿನೇಟರ್‌ ಗೆದ್ದ ತಂಡ: ಚಂಡೀಗಢ

ಮೇ 31 ಫೈನಲ್‌ ಕ್ವಾ-1 ಗೆದ್ದ ತಂಡ vs ಕ್ವಾ-2 ಗೆದ್ದ ತಂಡ ಅಹಮದಾಬಾದ್‌

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿರಾಟ್ ಕೊಹ್ಲಿ ಕ್ರಿಕೆಟ್ ರಿಜಿಸ್ಟ್ರೇಷನ್ ಶೀಟ್ ವೈರಲ್..! ಕೋಚ್ ರಾಜ್‌ಕುಮಾರ್ ಶರ್ಮಾ ವಿರಾಟ್‌ಗೆ ಕೊಟ್ಟ ರೇಟಿಂಗ್ ಎಷ್ಟು ಗೊತ್ತಾ?
'ನನ್ನನ್ನು ಅವರು ಅನ್‌ಬ್ಲಾಕ್ ಮಾಡೋದೇ ಇಲ್ಲ': ಸನ್‌ರೈಸರ್ಸ್ ಹೈದರಾಬಾದ್ ಜೊತೆಗಿನ ಸಿಟ್ಟು ಬಿಚ್ಚಿಟ್ಟ ಡೇವಿಡ್ ವಾರ್ನರ್