ಚಾಂಪಿಯನ್ಸ್‌ ಟ್ರೋಫಿ ಗೆದ್ದ ಬಳಿಕ ಮೊಹಮದ್ ಶಮಿ ತಾಯಿಯ ಕಾಲು ಮುಟ್ಟಿ ನಮಸ್ಕರಿಸಿದ ವಿರಾಟ್‌ ಕೊಹ್ಲಿ!

Published : Mar 11, 2025, 12:43 PM ISTUpdated : Mar 11, 2025, 12:47 PM IST
ಚಾಂಪಿಯನ್ಸ್‌ ಟ್ರೋಫಿ ಗೆದ್ದ ಬಳಿಕ ಮೊಹಮದ್ ಶಮಿ ತಾಯಿಯ ಕಾಲು ಮುಟ್ಟಿ ನಮಸ್ಕರಿಸಿದ ವಿರಾಟ್‌ ಕೊಹ್ಲಿ!

ಸಾರಾಂಶ

Viral Virat Kohli Videos in Pakistan: ಭಾರತ 12 ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ. ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾದ ಗೆಲುವಿಗೆ ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಫೈನಲ್ ನಂತರ ಹಲವು ಅದ್ಭುತ ಕ್ಷಣಗಳು ವೈರಲ್ ಆಗಿವೆ.

ರೋಹಿತ್ ಶರ್ಮಾ ನೇತೃತ್ವದ ಟೀಮ್‌ ಇಂಡಿಯಾ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಚಾಂಪಿಯನ್‌ ಆಗಿದೆ. 2017ರಲ್ಲಿ ಪಾಕಿಸ್ತಾನದ ವಿರುದ್ಧ ಫೈನಲ್‌ನಲ್ಲಿ ಸೋತಿದ್ದಕ್ಕೆ ಟೀಮ್ ಇಂಡಿಯಾ ಪಾಕಿಸ್ತಾನದ ಅತಿಥ್ಯದ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪ್ರಶಸ್ತಿ ಜಯಿಸುವ ಮೂಲಕ ಸೇಡು ತೀರಿಸಿಕೊಂಡಿದೆ. ಅದಲ್ಲದೆ, 12 ವರ್ಷಗಳ ನಂತರ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಟೀಮ್ ಇಂಡಿಯಾದ ಈ ಗೆಲುವಿಗೆ ಎಲ್ಲೆಡೆ ಸಂತಸದ ವಾತಾವರಣ ನಿರ್ಮಾಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಟೀಮ್‌ ಇಂಡಿಯಾ ಗೆಲುವಿನ ಬಗ್ಗೆಯೇ ಚರ್ಚೆಗಳು ನಡೆಯುತ್ತಿವೆ. ಬುಮ್ರಾ ಅನುಪಸ್ಥಿತಿಯಲ್ಲೂ ಟೀಮ್‌ ಇಂಡಿಯಾದ ಎಲ್ಲಾ ಆಟಗಾರರು ತೋರಿದ ಪ್ರದರ್ಶನವನ್ನು ಮೆಚ್ಚಿ ಮಾತನಾಡುತ್ತಿದ್ದಾರೆ.

ಪಂದ್ಯ ಮುಗಿದ ನಂತರ ಆಟಗಾರರ ಕುಟುಂಬದೊಂದಿಗೆ ಕಳೆದ ಸುಂದರ ಕ್ಷಣಗಳು ವೈರಲ್ ಆಗಿವೆ. ಇದರಲ್ಲಿ ವಿರಟ್‌ ಕೊಹ್ಲಿಯ ಅದ್ಭುತ ಕ್ಷಣ ವೈರಲ್‌ ಆಇದೆ. ಗೆಲುವಿನ ನಂತರ ಟೀಮ್‌ ಇಂಡಿಯಾ ಆಟಗಾರರು ಸಂಭ್ರಮ ಮಾಡುತ್ತಿದ್ದರು. ಈ ಸಮಯದಲ್ಲಿ ಮೊಹಮದ್‌ ಶಮಿ, ವಿರಾಟ್‌ ಕೊಹ್ಲಿಗೆ ತಮ್ಮ ತಾಯಿಯನ್ನು ಪರಿಚಯಿಸಿದ್ದಾರೆ.

ಈ ಹಂತದಲ್ಲಿ ಕೊಹ್ಲಿ, ಶಮಿ ಅವರ ತಾಯಿಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಶಮಿ ಅವರ ತಾಯಿಯನ್ನು ಭೇಟಿಯಾದ ಬಳಿಕ ಸಂತೋಷದಲ್ಲಿದ್ದ ವಿರಾಟ್‌ ಕೊಹ್ಲಿ ಅವರೊಂದಿಗೆ ಫೋಟೋ ತೆಗೆದುಕೊಂಡರು. ಈ ಕ್ಷಣ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವಿರಾಟ್ ಶಮಿ ತಾಯಿಯ ಕಾಲು ಮುಟ್ಟಿದ್ದು ಪಾಕಿಸ್ತಾನದಲ್ಲಿ ಚರ್ಚೆ ಭಾರತೀಯ ಆಟಗಾರ ವಿರಾಟ್ ಕೊಹ್ಲಿಯ ಈ ನಡವಳಿಕೆ ಭಾರತದಲ್ಲಿ ಮಾತ್ರವಲ್ಲ, ಪಾಕಿಸ್ತಾನದಲ್ಲಿಯೂ ತಲುಪಿ ಜನರ ಮನ ಗೆದ್ದಿದೆ. ಪಾಕಿಸ್ತಾನದಲ್ಲಿ ವಿರಾಟ್ ಅಭಿಮಾನಿಗಳು ಬಹಳಷ್ಟಿದ್ದಾರೆ. ಹೀಗಿರುವಾಗ ವಿರಾಟ್ ಶಮಿ ತಾಯಿಯ ಕಾಲಿಗೆ ನಮಸ್ಕರಿಸುವುದನ್ನು ನೋಡಿದ ನಂತರ ಎಲ್ಲೆಡೆ ಅವರ ಗೌರವದ ಬಗ್ಗೆ ಮಾತುಗಳು ಬಂದಿರುವುದಲ್ಲದೆ, ವಿರಾಟ್‌ ವರ್ತನೆಯನ್ನು ಶ್ಲಾಘನೆ ಮಾಡಿದ್ದಾರೆ.

ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿರುವುದಕ್ಕೆ ಇದೇ ಕಾರಣ: ವಿರಾಟ್ ಕೊಹ್ಲಿಯ ಈ ನಡೆಗೆ ಪಾಕಿಸ್ತಾನದ "ಎಪೆಕ್ಸ್ ಸ್ಪೋರ್ಟ್ಸ್" ಎಂಬ ಫೇಸ್‌ಬುಕ್ ಪುಟದಲ್ಲಿ ಬಹಳಷ್ಟು ಪ್ರಶಂಸೆ ವ್ಯಕ್ತವಾಗಿದೆ. ವಿರಾಟ್ ಅವರನ್ನು ಶ್ರೇಷ್ಠ ಬ್ಯಾಟ್ಸ್‌ಮನ್ ಎಂದೂ ಹೇಳಲಾಗಿದೆ. ಅವರು ಜಗತ್ತಿನ ಅತ್ಯುತ್ತಮ ಬ್ಯಾಟ್ಸ್‌ಮನ್, ಆದರೆ ತಾಯಿಯ ಮುಂದೆ ಅವರು ತಲೆ ಬಾಗಿದ್ದಾರೆ. ಹೀಗೆ ಮಾಡುತ್ತಿರುವುದನ್ನು ಹಲವು ಬಾರಿ ನೋಡಿದ್ದೇವೆ ಮತ್ತು ಇದೇ ವಿಷಯ ಆಟಗಾರನನ್ನು ಶ್ರೇಷ್ಠನನ್ನಾಗಿ ಮಾಡುತ್ತದೆ ಎಂದು ಬರೆದಿದ್ದಾರೆ. ಪಾಕಿಸ್ತಾನ ತಂಡ ಭಾರತೀಯ ಆಟಗಾರರಿಂದ ಕಲಿಯಬೇಕು ಇದರ ಜೊತೆಗೆ ಪಾಕಿಸ್ತಾನ ತಂಡದ ಬಗ್ಗೆಯೂ ಫೇಸ್‌ಬುಕ್ ಪುಟದಲ್ಲಿ ಉಲ್ಲೇಖಿಸಲಾಗಿದೆ. ಪಾಕ್ ತಂಡ ವಿರಾಟ್ ಕೊಹ್ಲಿಯಿಂದ ಕೆಲವು ಒಳ್ಳೆಯ ವಿಷಯಗಳನ್ನು ಕಲಿಯಬೇಕು. ಟೀಮ್ ಇಂಡಿಯಾದಲ್ಲಿ ಹೇಗೆ ಎಲ್ಲರೂ ಒಟ್ಟಾಗಿ ಕ್ರಿಕೆಟ್ ಆಡುತ್ತಾರೆ ಎಂಬುದನ್ನು ಕಲಿಯಬೇಕು. ಅಲ್ಲಿ ಯಾವುದೇ ಧರ್ಮ, ಜಾತಿ ಇಲ್ಲ, ಆಡುವಾಗ ಎಲ್ಲರೂ ಒಂದಾಗುತ್ತಾರೆ ಎಂದು ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!