ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಸ್ಯಾಮ್ ಕೊನ್‌ಸ್ಟಾಸ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ಘಟನೆಗೆ ಕೊಹ್ಲಿ ಮೇಲೆ ಐಸಿಸಿ ಕ್ರಮ ಕೈಗೊಳ್ಳಬೇಕೆಂದು ರಿಕಿ ಪಾಂಟಿಂಗ್ ಮತ್ತು ಮೈಕೆಲ್ ವಾನ್ ಆಗ್ರಹಿಸಿದ್ದಾರೆ. ಕೊಹ್ಲಿ ಲೆವೆಲ್ 2 ತಪ್ಪು ಮಾಡಿದ್ದಾರೆ ಎಂದು ತೀರ್ಪು ಬಂದರೆ ಒಂದು ಟೆಸ್ಟ್ ಪಂದ್ಯದಿಂದ ನಿಷೇಧಕ್ಕೊಳಗಾಗಬಹುದು.
ಮೆಲ್ಬರ್ನ್: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾದ ಯುವ ಬ್ಯಾಟರ್ ಸ್ಯಾಮ್ ಕೊನ್‌ಸ್ಟಾಸ್ ಅವರ ನಡುವಿನ ಮಾತಿನ ಚಕಮಕಿಗೆ ಮೆಲ್ಬರ್ನ್ ಕ್ರಿಕೆಟ್ ಮೈದಾನ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಆಸೀಸ್ ಯುವ ಆಟಗಾರರನ್ನು ಕೆಣಕಿದ ವಿರಾಟ್ ಕೊಹ್ಲಿ ವಿವಾದ ಮೈಮೇಲೆ ಎಳೆದುಕೊಂಡರಾ ಎನ್ನುವ ಅನುಮಾನ ಶುರುವಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ತಂಡಕ್ಕೆ ಸ್ಯಾಮ್ ಕೊನ್‌ಸ್ಟಾಸ್ ಹಾಗೂ ಉಸ್ಮಾನ್ ಖವಾಜ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಅದರಲ್ಲೂ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಸ್ಯಾಮ್ ಕೊನ್‌ಸ್ಟಾಸ್ ಟೀಂ ಇಂಡಿಯ ವೇಗಿ ಜಸ್ಪ್ರೀತ್ ಬುಮ್ರಾ ಎದುರು ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಉದ್ದೇಶಪೂರ್ವಕವಾಗಿ ಸ್ಯಾಮ್ ಕೊನ್‌ಸ್ಟಾಸ್ ಅವರ ಭುಜಕ್ಕೆ ಡಿಕ್ಕಿ ಹೊಡೆದು ವಾಗ್ವಾದ ನಡೆಸಿದರು. ಈ ಘಟನೆಯ ಕುರಿತಂತೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹಾಗೂ ಇಂಗ್ಲೆಂಡ್ ಮಾಜಿ ನಾಯಕ ಮೈಕೆಲ್ ವಾನ್ ಆಕ್ರೋಶ ವ್ಯಕ್ತಪಡಿಸಿದ್ದು, ಈ ಘಟನೆಯ ಸಂಬಂಧ ಕೊಹ್ಲಿ ಮೇಲೆ ಐಸಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Kohli and Konstas come together and make contact 👀 pic.twitter.com/adb09clEqd
— 7Cricket (@7Cricket)undefined
ಅಂಪೈರ್ ಹಾಗೂ ಮ್ಯಾಚ್ ರೆಫ್ರಿ ಈ ಘಟನೆಯನ್ನು ಕೂಲಂಕುಶವಾಗಿ ಗಮನಿಸಿ, ಕೊಹ್ಲಿಯ ಈ ಅತಿರೇಕದ ವರ್ತನೆಗೆ ತಕ್ಕ ಶಿಕ್ಷೆ ನೀಡಬೇಕು ಎಂದು ರಿಕಿ ಪಾಂಟಿಂಗ್ ಆಗ್ರಹಿಸಿದ್ದಾರೆ. ಇನ್ನು ಮೈಕೆಲ್ ವಾನ್ ಕೂಡಾ, ಈ ಘಟನೆಯನ್ನು ಮ್ಯಾಚ್ ರೆಫ್ರಿ ಹಾಗೂ ಅಂಪೈರ್ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 'ದುಬಾರಿ' ದಾಖಲೆ ಬರೆದ ಬುಮ್ರಾ; ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತೀಯ ವೇಗಿಗೆ ಬಿಗ್ ಶಾಕ್!
ಐಸಿಸಿ ರೂಲ್ಸ್ ಏನು ಹೇಳುತ್ತೆ?
ಈ ಘಟನೆಯು ಲಾ 2.12ರ ಅಡಿಯಲ್ಲಿ ಬರುತ್ತದೆ. ಇದರ ಪ್ರಕಾರ, 'ಆಟಗಾರನೊಬ್ಬ ಎದುರಾಳಿ ತಂಡದ ಆಟಗಾರ, ಸಹಾಯಕ ಸಿಬ್ಬಂದಿ, ಅಂಪೈರ್, ಮ್ಯಾಚ್ ರೆಫ್ರಿ ಅಥವಾ ಇನ್ಯಾರೇ ವ್ಯಕ್ತಿ(ಪ್ರೇಕ್ಷಕ ಸೇರಿದಂತೆ)ಯನ್ನು ಅನುಚಿತವಾಗಿ ದೈಹಿಕವಾಗಿ ಕಾಂಟ್ಯಾಕ್ಟ್ ಮಾಡುವುದಾಗಿದೆ.
ಈ ರೀತಿಯ ವರ್ತನೆ ಮಾಡುವುದನ್ನು ಕ್ರಿಕೆಟ್‌ನಲ್ಲಿ ನಿಷೇಧಿಸಲಾಗಿದೆ. ತನ್ನ ಇತಿಮಿತಿಯನ್ನು ಮೀರಿ ಉದ್ದೇಶಪೂರ್ವಕವಾಗಿ ಆಟಗಾರ/ಅಂಪೈರ್ ಅಥವಾ ಬೇರೆ ಯಾರ ಮೇಲಾದರೂ ದೈಹಿಕವಾಗಿ ಅಡ್ಡಿಪಡಿಸಿದರೆ ಆತನ ಮೇಲೆ ಕ್ರಮ ಕೈಗೊಳ್ಳಲು ಐಸಿಸಿ ಮ್ಯಾಚ್ ರೆಫ್ರಿಗೆ ಅವಕಾಶವಿದೆ.
ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಕೊಹ್ಲಿ ಭುಜಕ್ಕೆ ಭುಜ ತಾಗಿಸಿದ 19ರ ಪೋರ ಸ್ಯಾಮ್ ಕೊನ್‌ಸ್ಟಾಸ್! ವಿಡಿಯೋ ವೈರಲ್
ಒಂದು ವೇಳೆ ಈ ಪಂದ್ಯದ ಮ್ಯಾಚ್ ರೆಫ್ರಿ ಆಗಿರುವ ಆಂಡಿ ಪೈಕ್ರಾಫ್ಟ್ ಪ್ರಕಾರ ವಿರಾಟ್ ಕೊಹ್ಲಿ ಲೆವೆಲ್ 2 ಹಂತದ ತಪ್ಪು ಮಾಡಿದ್ದಾರೆ ಎಂದು ತೀರ್ಪು ನೀಡಿದರೆ, 3-4 ಡಿಮೆರಿಟ್ ಅಂಕದ ಜತೆಗೆ ವಿರಾಟ್ ಕೊಹ್ಲಿ ಮುಂದಿನ ಒಂದು ಟೆಸ್ಟ್ ಪಂದ್ಯದಿಂದ ಬ್ಯಾನ್ ಆಗುತ್ತಾರೆ. ಒಂದು ವೇಳೆ ಮ್ಯಾಚ್ ರೆಫ್ರಿ ಈ ಘಟನೆಯನ್ನು ಲೆವೆಲ್ 01 ಹಂತದ ತಪ್ಪು ಎಂದು ತೀರ್ಪು ನೀಡಿದರೆ, ಕೊಹ್ಲಿ ನಿಷೇಧ ಶಿಕ್ಷೆಯಿಂದ ಪಾರಾಗಲಿದ್ದು, ಕೇವಲ ದಂಡ ಮಾತ್ರ ಕಟ್ಟಬೇಕಾಗುತ್ತದೆ.