Virat Kohli: ಸೋಷಿಯಲ್‌ ಮೀಡಿಯಾದ ಕಿಂಗ್‌, ಟ್ವಿಟರ್‌ನಲ್ಲಿ 50 ಮಿಲಿಯನ್‌ ಫಾಲೋವರ್ಸ್ ಸಂಪಾದಿಸಿದ ಮೊದಲ ಕ್ರಿಕೆಟಿಗ!

Published : Sep 13, 2022, 04:22 PM ISTUpdated : Sep 13, 2022, 05:59 PM IST
Virat Kohli: ಸೋಷಿಯಲ್‌ ಮೀಡಿಯಾದ ಕಿಂಗ್‌, ಟ್ವಿಟರ್‌ನಲ್ಲಿ 50 ಮಿಲಿಯನ್‌ ಫಾಲೋವರ್ಸ್ ಸಂಪಾದಿಸಿದ ಮೊದಲ ಕ್ರಿಕೆಟಿಗ!

ಸಾರಾಂಶ

ಮೈದಾನದಲ್ಲಿ ದಾಖಲೆಗಳನ್ನು ಮುರಿಯುವುದರ ಜೊತೆಗೆ, ಸೋಷಿಯಲ್‌ ಮೀಡಿಯಾದಲ್ಲೂ ವಿರಾಟ್ ಕೊಹ್ಲಿ ತಮ್ಮ ಪಾರುಪತ್ಯ ಮುಂದುವರಿಸಿದ್ದಾರೆ. ಇತ್ತೀಚೆಗೆ 50 ಮಿಲಿಯನ್ ಟ್ವಿಟರ್ ಫಾಲೋವರ್ಸ್‌ಅನ್ನು ಹೊಂದಿರುವ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

ಬೆಂಗಳೂರು (ಸೆ. 13): ಟೀಮ್‌ ಇಂಡಿಯಾದ ಬ್ಯಾಟ್ಸ್‌ಮನ್‌ ಕಿಂಗ್‌ ಕೊಹ್ಲಿ ಪಾಲಿಗೆ ಕಳೆದ ಮೂರು ವರ್ಷಗಳು ಅಷ್ಟಾಗಿ ಉತ್ತಮವಾಗಿರಲಿಲ್ಲ. ನಾಯಕತ್ವ ಕುರಿತಾದ ವಿಚಾರಗಳೊಂದಿಗೆ ಸುದ್ದಿಯಲ್ಲಿದ್ದ ಕಿಂಗ್‌ ಕೊಹ್ಲಿ ಕ್ರಿಕೆಟ್‌ ಮೈದಾನದಲ್ಲಿ ನಿರೀಕ್ಷಿತ ಮಟ್ಟದ ನಿರ್ವಹಣೆ ತೋರಿರಲಿಲ್ಲ. ಕಳಪೆ ಫಾರ್ಮ್‌ನಿಂದಾಗಿ ಕಷ್ಟಗಳನ್ನು ಎದುರಿಸಿದ್ದ ಕೊಹ್ಲಿ, ಅಂದಾಜು 1020 ದಿನಗಳ ಬಳಿಕ ಏಷ್ಯಾಕಪ್‌ ಟೂರ್ನಿಯಲ್ಲಿ ತಮ್ಮ 71ನೇ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದಾರೆ. ಕ್ರಿಕೆಟ್‌ ವಿಚಾರವಾಗಿ ಏನೆ ಇದ್ದರೂ, ಸೋಷಿಯಲ್‌ ಮೀಡಿಯಾದಲ್ಲಿ ಮಾತ್ರ ಕೊಹ್ಲಿ ಸೂಪರ್‌ಸ್ಟಾರ್‌ ಆಗಿ ಮುಂದುವರಿದಿದ್ದಾರೆ. ಟ್ವಿಟರ್‌ನಲ್ಲಿ 50 ಮಿಲಿಯನ್‌ ಫಾಲೋವರ್ಸ್‌ಗಳನ್ನು ಗಳಿಸಿದ ವಿಶ್ವದ ಮೊಟ್ಟಮೊದಲ ಕ್ರಿಕೆಟಿಗ ಎನ್ನುವ ದಾಖಲೆ ಅವರದಾಗಿದೆ. 33 ವರ್ಷದ ಕ್ರಿಕೆಟ್‌ ಆಟಗಾರ, ಕ್ರಿಕೆಟ್‌ ಜಗತ್ತಿನಲ್ಲಿ ಗರಿಷ್ಠ ಮಂದಿ ಫಾಲೋವರ್ಸ್‌ಗಳನ್ನು ಹೊಂದಿರುವ ಅಟಗಾರ ಎನಿಸಿದ್ದಾರೆ. ಇನ್ನು ಇನ್ಸ್‌ಟಾಗ್ರಾಮ್‌ನಲ್ಲಿ 3ನೇ ಪ್ರಖ್ಯಾತ ಅಥ್ಲೀಟ್‌ ಎನಿಸಿದ್ದಾರೆ. ಇನ್ಸ್‌ಟಾಗ್ರಾಮ್‌ನಲ್ಲಿ 211 ಮಿಲಿಯನ್‌ ಫಾಲೋವರ್ಸ್‌ಗಳನ್ನು ಕೊಹ್ಲಿ ಹೊಂದಿದ್ದರೆ, ಕ್ರಿಶ್ವಿಯಾನೋ ರೊನಾಲ್ಡೋ 476 ಮಿಲಿಯನ್‌ ಹಾಗೂ ಲಿಯೋನೆಲ್‌ ಮೆಸ್ಸಿ 356 ಮಿಲಿಯನ್‌ ಫಾಲೋವರ್‌ಗಳನ್ನು ಹೊಂದುವ ಮೂಲಕ ಮೊದಲ ಎರಡು ಸ್ಥಾನದಲ್ಲಿದ್ದಾರೆ.

ಇದರೊಂದಿಗೆ ಕೊಹ್ಲಿ ಫೇಸ್‌ಬುಕ್‌ನಲ್ಲಿ 49 ಮಿಲಿಯನ್‌ಗೂ ಅಧಿಕ ಫಾಲೋವರ್‌ಗಳನ್ನು ಹೊಂದಿದ್ದಾರೆ. ಅದರೊಂದಿಗೆ ಸೋಷಿಯಲ್‌ ಮೀಡಿಯಾದಲ್ಲಿ ಅವರನ್ನು ಅನುಸರಿಸುವ ಒಟ್ಟು ಜನರ ಸಂಖ್ಯೆಯನ್ನು 310 ಮಿಲಿಯನ್‌ಗಿಂತಲೂ ಹೆಚ್ಚಾಗಿದೆ. ಇತ್ತೀಚೆಗೆ ಮುಗಿದ ಏಷ್ಯಾಕಪ್‌ನಲ್ಲಿ ಎರಡು ಅರ್ಧಶತಕ ಹಾಗೂ ಒಂದು ಶತಕ ಸಿಡಿಸುವ ಮೂಲಕ ವಿರಾಟ್‌ ಕೊಹ್ಲಿ ಭರ್ಜರಿಯಾಗಿ ಫಾರ್ಮ್‌ಗೆ ಮರಳಿದ್ದಾರೆ. ಅದರೊಂದಿಗೆ ಟೂರ್ನಿಯಲ್ಲಿ ಭಾರತದ ಗರಿಷ್ಠ ರನ್‌ ಸ್ಕೋರರ್‌ ಎನಿಸಿಕೊಂಡರೆ, ಟೂರ್ನಿಯಲ್ಲಿ 2ನೇ ಗರಿಷ್ಠ ಸ್ಕೋರರ್‌ ಆಗಿದ್ದಾರೆ.



ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ವಿರಾಟ್‌ ಕೊಹ್ಲಿ ಟಿ20ಯಲ್ಲಿ ತಮ್ಮ ಮೊದಲ ಶತಕ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 71ನೇ ಶತಕದ ದಾಖಲೆ ಮಾಡಿದರು. 2019ರ ನವೆಂಬರ್‌ನಲ್ಲಿ ವಿರಾಟ್‌ ಕೊಹ್ಲಿ ಕೊನೆಯ ಬಾರಿಗೆ ಶತಕ ಬಾರಿಸಿದ್ದರು. ಅಂದು ವಿರಾಟ್‌ ಕೊಹ್ಲಿ ಬಾಂಗ್ಲಾದೇಶದ ವಿರುದ್ಧ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದರು. ಏಷ್ಯಾಕಪ್‌ಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕೊಹ್ಲಿ, ಏಷ್ಯಾಕಪ್‌ಗೂ ಮುನ್ನ ಒಂದು ತಿಂಗಳ ಕಾಲ ತಾವು ಬ್ಯಾಟ್‌ ಮುಟ್ಟಿರಲಿಲ್ಲ ಎಂದಿದ್ದರು.

'ಭಾರತೀಯರು ಖುಷಿ ಆಗಿರಬಹುದು' ಪಾಕ್‌ ಸೋಲಿನ ಬಳಿಕ ಪಿಸಿಬಿ ಚೇರ್ಮನ್‌ ರಮೀಜ್‌ ರಾಜಾ ಕಿಡಿ!

ಟಿ20 ವಿಶ್ವಕಪ್‌ಗೂ ಮುನ್ನ ಮೊದಲ ಟಿ20 ಶತಕ ಬಾರಿಸಿ ಫಾರ್ಮ್‌ಗೆ ಮರಳಿರುವುದಕ್ಕೆ ತಮಗೆ ಸಂತಸವಾಗಿದೆ. ಆಸ್ಟ್ರೇಲಿಯಾದ  (Australia) ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಅನ್ನು (T20 World Cup) ತಾವು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ವಿರಾಟ್‌ ಕೊಹ್ಲಿ ಸೆ. 20ರಿಂದ ಮತ್ತೆ ಮೈದಾನಕ್ಕೆ ಇಳಿಯಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಸೆ. 20 ರಂದು ನಡೆಯಲಿದೆ.ಪಿಚ್‌ನಲ್ಲಿ ಕೊಹ್ಲಿ ತಮ್ಮ ಅಸಾಧಾರಣ ಆಕ್ರಮಣಶೀಲತೆ ಮತ್ತು ಶಕ್ತಿಗೆ ಹೆಸರುವಾಸಿಯಾಗಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ ಸತತವಾಗಿ ಅತ್ಯಂತ ಆಕ್ರಮಣಕಾರಿ ತಂಡಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

Asia Cup 2022: ನನ್ನ ಜೊತೆ ರೋಹಿತ್‌ ಇಷ್ಟು ಶುದ್ಧ ಹಿಂದಿ ಮಾತಾಡ್ತಿರೋದು ಇದೇ ಮೊದಲು: ವಿರಾಟ್‌ ಕೊಹ್ಲಿ!

ಅಫ್ಘಾನಿಸ್ತಾನ (Asia Cup) ವಿರುದ್ಧದ ಶತಕದ ನಂತರ, ಕೊಹ್ಲಿಯನ್ನು ಭಾರತೀಯ ನಾಯಕ (team India Captain) ರೋಹಿತ್ ಶರ್ಮಾ (Rohit Sharma) ಸಂದರ್ಶನ ಮಾಡಿದ್ದರು. ಕೊಹ್ಲಿ ಶತಕದ (Virat Kohli) ಬರವನ್ನು ಕೊನೆಗೊಳಿಸಿದ್ದಕ್ಕಾಗಿ ಕೊಹ್ಲಿಯನ್ನು ಅಭಿನಂದಿಸಿದರು ಮತ್ತು ತಂಡದ ದೃಷ್ಟಿಕೋನದಿಂದ ಅವರ ಫಾರ್ಮ್ ಹೇಗೆ ನಿರ್ಣಾಯಕವಾಗಿದೆ ಮತ್ತು ಡ್ರೆಸ್ಸಿಂಗ್ ರೂಮ್‌ನಲ್ಲಿ ಅವರ ಉಪಸ್ಥಿತಿಯು ಆಟಗಾರರಿಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಮಾತನಾಡಿದರು. ತನಗೆ ಬೇಕಾದ ರೀತಿಯಲ್ಲಿ ಆಡಲು ಅವಕಾಶ ನೀಡಿದ ರೋಹಿತ್ ಮತ್ತು ತಂಡದ ಮ್ಯಾನೇಜ್‌ಮೆಂಟ್‌ಗೆ ಕೊಹ್ಲಿ ಧನ್ಯವಾದ ಹೇಳಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

14 ವರ್ಷದ ವೈಭವ್ ಸೂರ್ಯವಂಶಿ 95 ಎಸೆತಕ್ಕೆ 171; ಯುವ ಭಾರತಕ್ಕೆ 234 ರನ್ ಜಯ!
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!