
ನವದೆಹಲಿ(ಮಾ.25): ಕೊರೋನಾ ವೈರಸ್ ಹರಡುವುದನ್ನು ತಡೆಯಲು ಇಡೀ ವಿಶ್ವವೇ ಸಮರ ಸಾರಿದೆ. ಭಾರತ ಕೂಡ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 25 ರಿಂದ 21 ದಿನಗಳ ಕಾಲ ಸಂಪೂರ್ಣ ಭಾರತ ಲಾಕ್ ಡೌನ್ ಮಾಡಿದ್ದಾರೆ. ಮನೆಯಿಂದ ಯಾರೂ ಹೊರಗೆ ಬರದಂತೆ ಮನವಿ ಮಾಡಿದ್ದಾರೆ. ಕೊರೋನಾ ವೈರಸ್ ಹರಡುವಿಕೆ ತಡೆಯಲು ದೇಶದ ಪ್ರತಿಯೊಬ್ಬ ಪ್ರಜೆ ಇದನ್ನು ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಹೆಚ್ಚಿದ ಕೊರೋನಾ ವೈರಸ್; ಈ ವರ್ಷ ಐಪಿಎಲ್ ಟೂರ್ನಿ ರದ್ದು?
ಪ್ರಧಾನಿ ನಿರ್ಧಾರವನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕೋಚ್ ರವಿ ಶಾಸ್ತ್ರಿ ಸ್ವಾಗತಿಸಿದ್ದಾರೆ. ಮೋದಿ ಮನವಿ ಬೆನ್ನಲ್ಲೇ ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ, ಜನತೆಯಲ್ಲಿ ನನ್ನ ಮನವಿ ಕೂಡ ಇದೇ ಆಗಿದೆ. ಎಲ್ಲರೂ ಮನೆಯೊಳಗೆ ಇರೀ. ಅಂತರ ಕಾಯ್ದುಕೊಳ್ಳವುದೊಂದೇ ಕೋವಿಡ್-19 ತಡೆಯಲು ಇರುವ ಮದ್ದು ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.
ರವಿ ಶಾಸ್ತ್ರಿ ಕೂಡ ಟ್ವೀಟ್ ಮೂಲಕ ಭಾರತೀಯರಲ್ಲಿ ಮನವಿ ಮಾಡಿದ್ದಾರೆ. ದೂಸ್ರಾ ಮಾತೇ ಇಲ್ಲ. ಈ ಸಂದರ್ಭಕ್ಕೆ ಇದು ಅವಶ್ಯಕ. ಅತ್ಯುತ್ತಮ ನಾಯಕನನ್ನು ಹೊಂದಿದ್ದೇವೆ. ಪ್ರಧಾನಿ ಮನವಿಯನ್ನು ಪಾಲಿಸಿ ಎಂದು ಶಾಸ್ತ್ರಿ ಟ್ವೀಟ್ ಮಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.