
ವಡೋದರಾ(ಮಾ.24): ಮದ್ದಿಲ್ಲದ ಮಹಾಮಾರಿ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಜನರಿಗೆ ಟೀಂ ಇಂಡಿಯಾದ ಪಠಾಣ್ ಸಹೋದರರು ನೆರವಿನ ಹಸ್ತ ಚಾಚಿದ್ದಾರೆ.
ಹೌದು, ದೇಶದಲ್ಲಿ ಈಗಾಗಲೇ ಹಲವು ಕಡೆ ಸ್ಯಾನಿಟೈಸರ್ ಹಾಗೂ ಮಾಸ್ಕ್‌ಗಳ ಕೊರತೆ ಉಂಟಾಗಿರುವುದನ್ನು ಕೇಳಿದ್ದೇವೆ. ಇಂತಹ ಸಂದರ್ಭದಲ್ಲಿ ಇರ್ಫಾನ್ ಪಠಾಣ್ ಹಾಗೂ ಯೂಸೂಫ್ ಪಠಾಣ್ ಬರೋಡದಲ್ಲಿ 4 ಸಾವಿರ ಉಚಿತ ಮಾಸ್ಕ್‌ಗಳನ್ನು ಹಂಚುವ ಮೂಲಕ ಸಾಮಾಜಿಕ ಬದ್ಧತೆ ಮೆರೆದಿದ್ದಾರೆ.
ಗಂಭೀರ ಸಮಸ್ಯೆ - ಗೃಹಬಂಧನ ಅಥವಾ ಜೈಲು, ನಿಮಗೆ ಯಾವುದೋ ಬೇಕು ಅದು !
ತಮ್ಮ ತಂದೆಯ ಹೆಸರಿನಲ್ಲಿ ಮೊಹಮ್ಮದ್ ಖಾನ್ ಪಠಾಣ್ ಚಾರಿಟೇಬಲ್ ಟ್ರಸ್ಟ್ ಮೂಲಕ ಈ ಸಾಮಾಜಿಕ ಕಾರ್ಯವನ್ನು ಪಠಾಣ್ ಸಹೋದರರು ಮಾಡಿದ್ದಾರೆ. ಈ ವೇಳೆ ಕೊರೋನಾ ಸೋಂಕು ಹೆಮ್ಮಾರಿಯಂತೆ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ತಡೆಯುವ ನಿಟ್ಟಿ ಜನತೆಯಲ್ಲಿ ಸ್ವಚ್ಛತೆ ಹಾಗೂ ಶುಚಿತ್ವವನ್ನು ಕಾಪಾಡಬೇಕು. ಇದರ ಜತೆಗೆ ಇಂತಹ ಸಂದರ್ಭಗಳಲ್ಲಿ ನಾವು ನೆರೆಹೊರೆಯವರಿಗೆ ಸಹಾಯ ಮಾಡಬೇಕು, ನಮ್ಮ ಕೈಲಾಗಿದ್ದನ್ನು ಮಾಡಿದ್ದೇವೆ ಎಂದು ಪಠಾಣ್ ಸಹೋದರರು ಹೇಳಿದ್ದಾರೆ.
ಕನ್ನಿಕಾ ಕಪೂರ್ ಇದ್ದ ಹೋಟೆಲ್‌ನಲ್ಲೇ ಉಳಿದುಕೊಂಡಿದ್ದರು ಆಫ್ರಿಕಾ ಕ್ರಿಕೆಟಿಗರು..!
ಇಂತಹ ಕಠಿಣ ಸಂದರ್ಭದಲ್ಲಿ ನಾವು ಒಬ್ಬರಿಗೊಬ್ಬರು ನೆರವಾಗುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕಿದೆ. ಬನ್ನಿ ಅಗತ್ಯವಿರುವವರಿಗೆ ನಮ್ಮ ಕೈಲಾದ ಸಹಾಯವನ್ನು ಮಾಡೋಣ ಎಂದು ದೇಶದ ಜನತೆಗೆ ಇರ್ಫಾನ್ ಪಠಾಣ್ ಮನವಿ ಮಾಡಿದ್ದಾರೆ,
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.